ಜೂ.1ರಿಂದ 2 ತಿಂಗಳು ಮೀನುಗಾರಿಕೆಗೆ ನಿಷೇಧ; ಮೀನುಗಾರರಿಗೆ ಸರಕಾರ ಆರ್ಥಿಕ ಸಹಾಯ ನೀಡಲು ಆಗ್ರಹಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿದ್ದು, ಮೀನುಗಾರರು ತಮ್ಮ ಬೋಟ್ಗಳಿಗೆ ಲಂಗರು ಹಾಕಿದ್ದಾರೆ. ಮೀನು ಮೊಟ್ಟೆ ಇಡುವ ಸಮಯವಾಗಿರುವುದರಿಂದ ಈ ನಿಷೇಧ ಹೇರಲಾಗಿದ್ದು, ಸಾಂಪ್ರದಾಯಿಕ ಬೋಟ್ಗಳನ್ನು ಹೊರತುಪಡಿಸಿ ಟ್ರಾಲ್ ಮತ್ತು ಪರ್ಸೀನ್ ಬೋಟ್ಗಳಿಗೆ ನಿಷೇಧ ಅನ್ವಯಿಸುತ್ತದೆ.