- Home
- Viral News
- ಶಿರಸಿ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಗೆ 'ರೂಮ್ ಮಾಡ್ತೀನಿ ಬಾ' ಎಂದವನ ಪರಿಸ್ಥಿತಿ ಇವಾಗೇನಾಗಿದೆ ನೋಡಿ!
ಶಿರಸಿ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಗೆ 'ರೂಮ್ ಮಾಡ್ತೀನಿ ಬಾ' ಎಂದವನ ಪರಿಸ್ಥಿತಿ ಇವಾಗೇನಾಗಿದೆ ನೋಡಿ!
ಶಿರಸಿ ಬಸ್ ನಿಲ್ದಾಣದಲ್ಲಿ ಮಹಿಳೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಚಪ್ಪಲಿ ಏಟು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯವನ್ನು ಶ್ಲಾಘಿಸಲಾಗುತ್ತಿದೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ನೋಡಿ..

ಉತ್ತರ ಕನ್ನಡ (ಜು.17): ಶಿರಸಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಬಸ್ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿ, ರೂಮ್ ಮಾಡ್ತೀನಿ ಹೋಗೋಣ ಬರ್ತಿಯಾ ಎಂದು ಕೇಳಿದವನಿಗೆ ಚಪ್ಪಲಿ ಏಟು ಕೊಟ್ಟು ಬುದ್ಧಿ ಕಲಿಸಿದ್ದಾಳೆ. ಈ ಘಟನೆ ಮಹಿಳೆಯರ ಧೈರ್ಯವಂತಿಕೆಗೆ ಸಾಕ್ಷಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಭಾರೀ ವೈರಲ್ ಆಗಿದೆ.
ಮದ್ಯದ ನಶೆಯಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ, ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯೊಂದರ ಬಳಿ ಹೋಗಿ ಅನಾಚಾರವಾಗಿ ವರ್ತಿಸಿದ ಘಟನೆ ಸಾರ್ವಜನಿಕ ಅಸಹ್ಯಕ್ಕೆ ಕಾರಣವಾಗಿದೆ. ಯಕ್ಕಂಬಿ ಗ್ರಾಮದ ದೀಪಾ ಎಂಬ ಮಹಿಳೆ, ಬಸ್ ನಿರೀಕ್ಷಿಸುತ್ತಿದ್ದ ವೇಳೆ ಬಂದ ವ್ಯಕ್ತಿ ‘ರೂಮ್ ಮಾಡ್ತೀನಿ ಬಾ’ ಎಂಬ ಕೀಳಮಟ್ಟದ ಶಬ್ದಗಳಿಂದ ಕೆಣಕಿದ್ದು, ಕೂಡಲೇ ಕೋಪಗೊಂಡ ದೀಪಾ ಚಪ್ಪಲಿಯಿಂದ ಆತನನ್ನು ಚಪ್ಪಲಿಯಿಂದ ಥಳಿಸಿದ್ದು, ಕೆನ್ನೆಗೆ ಹೊಡೆದು ನಶೆ ಇಳಿಸಿರುವ ದೃಶ್ಯ ಹರಿದಾಡುತ್ತಿದೆ.
ಇನ್ನು ಬಸ್ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಕೂಡ ಮಹಿಳೆಯ ಬೆಂಬಲಕ್ಕೆ ನಿಂತಿದ್ದು, ಹಗಲು ಹೊತ್ತಿನಲ್ಲಿಯೇ ಸಾರ್ವಜನಿಕವಾಗಿ ಮಹಿಳೆಯೊಬ್ಬರನ್ನು ಕೆಣಕಲು ಯತ್ನಿಸಿದ ವ್ಯಕ್ತಿಯ ನಡೆಗೆ ಎಲ್ಲರೂ ಕೆಂಡಾಮಂಡಲವಾಗಿದ್ದಾರೆ. ಸ್ಥಳೀಯ ಮಾಹಿತಿ ಪ್ರಕಾರ, ಈ ವ್ಯಕ್ತಿ ಹಿಂದೆಯೂ ಇಂತಹ ಅನಾಚಾರಗಳಲ್ಲಿ ತೊಡಗಿದ್ದು, ಹಲವಾರು ಬಾರಿ ಮಹಿಳೆಯರನ್ನು ಕೆಣಕಿದ್ದಾನೆ ಎಂಬ ಆರೋಪಗಳಿವೆ. ಈತನಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಅಲ್ಲಿದ್ದ ಮಹಿಳೆಯರು ಆಗ್ರಹ ಮಾಡಿದ್ದಾರೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 'ಒಬ್ಬಂಟಿ ಮಹಿಳೆಯ ಮೇಲೆ ಈ ರೀತಿಯ ಕೃತ್ಯ ಮಾಡುವುದು ಅಮಾನವೀಯವಾಗಿದೆ' ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದೀಪಾ ಅವರ ಧೈರ್ಯವನ್ನು ಶ್ಲಾಘಿಸಿರುವ ನೆಟ್ಟಿಗರು, ಇನ್ನು ಮುಂದೆ ಯಾವುದೇ ಪುರುಷನಿಗೆ ಮಹಿಳೆಯರನ್ನು ಕಿರುಕುಳ ನೀಡುವ ಧೈರ್ಯವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪೊಲೀಸರುವ ವಶಕ್ಕೆ ಪಡೆದು ಎಚ್ಚರಿಕೆ:
ಈ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಶಿರಸಿ ನಗರದ ಬಸ್ ನಿಲ್ದಾಣದಲ್ಲಿ ಸುರಕ್ಷತೆಯ ಅಭಾವದ ಕುರಿತು ಹಲವರು ಆತಂಕ ವ್ಯಕ್ತಪಡಿಸಿದ್ದು, ಮಹಿಳಾ ಪ್ರಯಾಣಿಕರ ರಕ್ಷಣೆಗಾಗಿ ಹೆಚ್ಚಿನ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.
ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕೆ ನೂರಾರು ಜನರು ಕಾಮೆಂಟ್ ಮಾಡಿ ಮಹಿಳೆಯರನ್ನು ಅನುಭೋಗದ ವಸ್ತುವಂತೆ ಕಾಣುವ ಇಂಥಹ ಕಾಮುಕರಿಗೆ ಸಾರ್ವಜನಿಕವಾಗಿಯೇ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಇಂತಹ ಕಾಮುಕರ ಉಪಟಳ ಹೆಚ್ಚಾಗಿದ್ದರೂ ಭದ್ರತಾ ಸಿಬ್ಬಂದಿ ಅಥವಾ ಪೊಲೀಸರ ಕಾವಲು ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇಂಥವರಿಗೆ ಗಂಭೀರ ಶಿಕ್ಷೆಯನ್ನು ನೀಡಬೇಕು. ಮನೆಯಲ್ಲಿ ಹೆಂಡತಿ ಪಕ್ಕದಲ್ಲಿ ಮಲಗುವಾಗಲೂ ಈತನಿಗೆ ಭಯ ಉಂಟಾಗುವಂತೆ ಮಾಡಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸಮಾಜದಲ್ಲಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಆಲೋಚನೆ ಮಾಡುವುದನ್ನು ಬುಡಸಮೇತ ಕಿತ್ತೆಸೆಲು ಇಂತಹ ಘಟನೆಗಳ ವಿರುದ್ಧ ಮಹಿಳೆಯರು ಪ್ರತಿಭಟಿಸುವಂತಹ ವಿಡಿಯೋಗಳು ವೈರಲ್ ಆಗಬೇಕು ಎಂದು ನೆಟ್ಟಿಗರು ತಿಳಿಸಿದ್ದಾರೆ.