Abu Dhabi Tourism Ad:ತಮ್ಮ ಪತಿ ರಣ್ವೀರ್ ಸಿಂಗ್ ಜೊತೆ ಅಬುಧಾಬಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಭಾಗಿಯಾಗಿರುವ ದೀಪಿಕಾ ಪಡುಕೋಣೆ ಅಲ್ಲಿನ ಸಂಸ್ಖೃತಿಯಂತೆ ಹಿಜಾಬ್ ಧರಿಸಿದ್ದು, ಇದು ಅನೇಕರನ್ನು ಕೆರಳಿಸಿದೆ. ಆದರೆ ದೀಪಿಕಾ ಅಭಿಮಾನಿಗಳು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಅಬುಧಾಬಿ ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಮಾಡುವುದಕ್ಕೆ ಹಿಜಾಬ್ ಧರಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಬಿರುಗಾಳಿ ಸೃಷ್ಟಿಸಿದೆ. ತಮ್ಮ ಪತಿ ರಣ್ವೀರ್ ಸಿಂಗ್ ಜೊತೆ ಅಬುಧಾಬಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಭಾಗಿಯಾಗಿರುವ ದೀಪಿಕಾ ಪಡುಕೋಣೆ ಅಲ್ಲಿನ ಸಂಸ್ಖೃತಿಯಂತೆ ಹಿಜಾಬ್ ಧರಿಸಿದ್ದು, ಇದು ಅನೇಕರನ್ನು ಕೆರಳಿಸಿದೆ. ಆದರೆ ದೀಪಿಕಾ ಅಭಿಮಾನಿಗಳು ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ವಿವಾದಕ್ಕೀಡಾದ ಅಬುಧಾಬಿ ಟೂರಿಸಂ ವೀಡಿಯೋದಲ್ಲಿ ಏನಿದೆ?
ಅಬುದಾಭಿಯನ್ನು ಅನುಭವಿಸಿ ಎಂಬ ಶೀರ್ಷಿಕೆಯಿಂದ ಆರಂಭವಾಗುವ ವೀಡಿಯೋದಲ್ಲಿ ರಣ್ವೀರ್ ಸಿಂಗ್, 90 ಎಡಿ ಬಗ್ಗೆ ಇಷ್ಟೊಂದು ವಿವರವನ್ನು ನೀನು ಕಲ್ಪಿಸಿಕೊಳ್ಳವೆಯಾ? ಕೆಲವೊಮ್ಮೆ ನನಗೆ ಅಚ್ಚರಿ ಆಗುತ್ತದೆ. ಅವರು ನನ್ನ ಪ್ರತಿಮೆ ಮಾಡಿದರೆ ನನ್ನ ಪೋಸ್ ಹೇಗಿರಬಹುದು ಎಂಬ ಬಗ್ಗೆ ಎಂದು ಹೇಳುತ್ತಾರೆ. ಇದಕ್ಕೆ ದೀಪಿಕಾ ಪಡುಕೋಣೆ ತಮಾಷೆಯಾಗಿ ನೀನು ಮ್ಯೂಸಿಯಂನಲ್ಲಿ ಇರಬೇಕಿತ್ತು ಎಂದು ನಗುತ್ತಾರೆ. ನಂತರ ಅಬುಧಾಬಿ ಡೈರೀಸ್ ಎಂಬ ಬರಹ ಕಾಣಿಸುತ್ತದೆ. ನಿನಗೆ ಅಚ್ಚರಿಯಾಗುತ್ತದೆಯೇ ನಾವು ಬೇರೆ ಪ್ರದೇಶದಲ್ಲಿ ಬೆಳೆದರೆ ಹೇಗಿರುತ್ತದೆ ಎಂದು, ಆಸಕ್ತಿಕರವಾಗಿ ಕೆಲವೊಂದು ಸ್ಥಳಗಳು ನಮ್ಮಲ್ಲಿ ಪ್ರಶ್ನೆ ಕೇಳುತ್ತವೆ. ಆ ಪ್ರಶ್ನೆಯನ್ನು ನಾವು ನಮಗೇ ಕೇಳಿರುವುದಿಲ್ಲ, ಹಾಗೆಯೇ ಕೆಲವೊಂದು ಸ್ಥಳಗಳು ನಮ್ಮನ್ನು ಕೇಳಲು ಬಿಡುತ್ತದೆ. ಮೌನವನ್ನು ಹೇಗೆ ಫೀಲ್ ಮಾಡಬಹುದು ಇದೊಂದು ಅದ್ಭುತ, ಯಾರೋ ಹಿಂದೆ ಮಾತಾಡಿದ್ದರು. ಇದು ಕೇವಲ ಅಬುಧಾಬಿ ಇದು ಕೇವಲ ನಿಲ್ಲಿಸುವ ಬಟನ್ ಇದ್ದಂತೆ ಎಂದು ಇಬ್ಬರು ಹೇಳುತ್ತಾರೆ. ವೀಡಿಯೋದ ಕೊನೆಯ ಕೆಲ ಸೆಕೆಂಡ್‌ಗಳ ಕಾಲ ದೀಪಿಕಾ ಕೆಂಪು ಬಣ್ಣದ ಬುರ್ಕಾ ಅಥವಾ ಹಿಜಾಬ್ ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೀಡಿಯೋದಲ್ಲಿ ಈ ಜೋಡಿ ಅಬುಧಾಬಿಯ ಹಲವು ಪ್ರದೇಶಗಳಲ್ಲಿ ಓಡಾಡುವುದನ್ನು ಕಾಣಬಹುದು.
ದೀಪಿಕಾ ಸಮರ್ಥಿಸಿಕೊಂಡ ಅಭಿಮಾನಿಗಳು:
ದೀಪಿಕಾ ಪಡುಕೋಣೆ ಧಿರಿಸು ವಿವಾದಕ್ಕೀಡಾಗುತ್ತಿದ್ದಂತೆ ಅವರ ಅಭಿಮಾನಿಗಳು ತಮ್ಮ ಅನೇಕ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರನ್ನು ಸಮರ್ಥಿಸಿಕೊಂಡು ಬಂದಿದ್ದಾರೆ. ಅನೇಕರು ದೀಪಿಕಾ ಬೇರೆ ಸಂಸ್ಕೃತಿಯ ಬಗ್ಗೆ ಗೌರವ ತೋರಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ಅವರ ನಡವಳಿಕೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಭಾರತೀಯರಾದ ನಾವು ಎಲ್ಲದರ ಬಗ್ಗೆಯೂ ಅಭದ್ರತೆಯನ್ನು ತೋರಿಸಬೇಕಾಗಿಲ್ಲ. ನಮ್ಮ ದೇವಾಲಯಗಳಲ್ಲಿ ವಿದೇಶಿ ಪ್ರವಾಸಿಗರು ಯೋಗ್ಯವಾದ ಬಟ್ಟೆಗಳನ್ನು ಧರಿಸಬೇಕೆಂದು ನಾವು ನಿರೀಕ್ಷಿಸುವಂತೆಯೇ ಅರಬ್‌ನಲ್ಲಿ ದೀಪಿಕಾಅವರು ತಮ್ಮ ತಲೆಯನ್ನು ಮುಚ್ಚಿಕೊಂಡಿದ್ದಾರೆ. ಮತ್ತು ಅದಕ್ಕಿಂತ ಹೆಚ್ಚಾಗಿ ಯುಎಇ ನಮ್ಮ ದೇಶಕ್ಕೆ ಕಾರ್ಯತಂತ್ರದ ಪಾಲುದಾರರಾಗಿದ್ದು, ಸಾಕಷ್ಟು ದ್ವಿಪಕ್ಷೀಯ ವ್ಯಾಪಾರ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಹೊಂದಿದೆ. ದೀಪಿಕಾ ಮತ್ತು ರಣವೀರ್ ರಾಜಮನೆತನವನ್ನು ಹೊಂದಿದ್ದಾರೆ. ಆ ರಾಜತ್ವ ಭಾರತೀಯವಾಗಿದೆ ಎಂದು ಒಬ್ಬರು ಸಮರ್ಥಿಸಿಕೊಂಡಿದ್ದಾರೆ.
ಶೇಖ್ ಜಾಯಾದ್ ಮಸೀದಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಪುರುಷರು ಮತ್ತು ಮಹಿಳೆಯರು ಇಬ್ಬರೂ ಯೋಗ್ಯವಾದ ಬಟ್ಟೆಗಳನ್ನು ಧರಿಸಬೇಕು ಮತ್ತು ಮಹಿಳೆಯರು ತಲೆಯನ್ನು ಮುಚ್ಚಿಕೊಳ್ಳಬೇಕು ಎಂದು ನಾನು ಸ್ಪಷ್ಟಪಡಿಸುತ್ತೇನೆ. ಅನೇಕ ಕ್ರಿಶ್ಚಿಯನ್ ಸೆಲೆಬ್ರಿಟಿಗಳು ಸಹ ತಮ್ಮ ತಲೆಯನ್ನು ಮುಚ್ಚಿಕೊಳ್ಳುತ್ತಾರೆ. ಆದ್ದರಿಂದ ಈ ವಿಚಾರವನ್ನು ದೊಡ್ಡ ಸಮಸ್ಯೆ ಮಾಡುವುದನ್ನು ನಿಲ್ಲಿಸಿ ಎಂದು ಮತ್ತೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ. ಮಸೀದಿಯೂ ದೇವಾಲಯದಂತೆಯೇ ಪೂಜಾ ಸ್ಥಳವಾಗಿದೆ, ಆದ್ದರಿಂದ ಅವರು ಸೂಕ್ತವಾದ ಬಟ್ಟೆಗಳನ್ನು ಧರಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ನೀವೆಲ್ಲರೂ ವಿವಾದ ಸೃಷ್ಟಿಸುವುದಕ್ಕೆ ಹಸಿದು ಕೂತಿದ್ದೀರಿ ಎಂದು ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೀಪಿಕಾ ವಿರುದ್ಧದ ವಿವಾದ ಆಧಾರರಹಿತ, ಅವರ ಬಗ್ಗೆ ನಕಾರಾತ್ಮಕತೆ ಮತ್ತು ದ್ವೇಷ ಹರಡಲು ಜನ ಕಾರಣಗಳನ್ನು ಹುಡುಕುತ್ತಿದ್ದಾರೆ ಎಂದು ಟೀಕಿಸಿದರು. ಇದು ದೀಪಿಕಾ ಪಡುಕೋಣೆ ಅವರು ದೇವಾಲಯಗಳಿಗೆ ಹೋದಾಗಲೂ ಇದೇ ರೀತಿ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಅವರು ಯಾವಾಗಲೂ ಭಾರತದ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಪ್ರವಾಸೋದ್ಯಮ ಜಾಹೀರಾತಿನಲ್ಲಿ ಅವರು ಆ ಸಂಸ್ಕೃತಿಗೆ ಸೂಕ್ತವಾದದ್ದನ್ನು ಧರಿಸಿದ್ದಾರೆ. ಯಾವುದೇ ದೇಶಕ್ಕೆ ಹೋಗಿ ಗೌರವದಿಂದ ವರ್ತಿಸಬಹುದಾದ ವ್ಯಕ್ತಿಯ ಬಗ್ಗೆ ನೀವು ಹೆಮ್ಮೆಪಡಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.
ದೀಪಿಕಾ ಬುರ್ಖಾ ಅಥವಾ ಅಬಯಾ ಧರಿಸಿದ್ದೇಕೆ?
ಸೋಮವಾರ, ಬಾಲಿವುಡ್ ನಟಿ ದೀಪಿಕಾ ಅವರನ್ನು ಅವರ ಪತಿ ರಣವೀರ್ ಜೊತೆಗೆ ಎಕ್ಸ್‌ಪೀರಿಯೆನ್ಸ್ ಅಬುಧಾಬಿಯ(Experience Abu Dhabi)ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಲಾಯಿತು. ಜಾಹೀರಾತಿನ ಬಿಡುಗಡೆಯೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಲಾಗಿದೆ. ಜಾಹೀರಾತಿನಲ್ಲಿ, ದಂಪತಿಗಳು ಅಬುಧಾಬಿಯ ವಿವಿಧ ಸ್ಥಳಗಳ ನೋಟವನ್ನು ಎಲ್ಲರಿಗೂ ನೀಡುತ್ತಿರುವುದನ್ನು ಕಾಣಬಹುದು ಈ ಜಾಹೀರಾತಿಗಾಗಿ ವೀಡಿಯೋದ ಒಂದು ಹಂತದಲ್ಲಿ ದೀಪಿಕಾ ಅಲ್ಲಿ ಅರಬ್ ಸಾಂಪ್ರದಾಯಿಕ ಅಬಯಾ ಧರಿಸಿದ್ದರು.
ಅಬುಧಾಬಿ ಅತ್ಯುತ್ತಮವಾದ ಕುಟುಂಬ ಭೇಟಿಯ ತಾಣವಾಗಿದೆ. ಈಗ ನಾನು ನನ್ನ ಪತ್ನಿ ದೀಪಿಕಾ ಅವರೊಂದಿಗೆ ಈ ಪ್ರಯಾಣವನ್ನು ಅನುಭವಿಸಲು ಅವಕಾಶ ಪಡೆದಿದ್ದೇನೆ. ಅವರು ಬ್ರಾಂಡ್ ರಾಯಭಾರಿಯಾಗಿ ಸೇರಿದ್ದಾರೆ ಎಂದು ರಣವೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ದೀಪಿಕಾ, ನೀವು ಪ್ರೀತಿಸುವ ಜನರೊಂದಿಗೆ ಪ್ರಯಾಣವು ಯಾವಾಗಲೂ ಹೆಚ್ಚು ಅರ್ಥಪೂರ್ಣವಾಗಿರುತ್ತದೆ... ಈ ಸುಂದರ ನಗರವು ನೀಡುವ ಎಲ್ಲವನ್ನೂ ಪ್ರಯಾಣಿಸಲು, ಅನ್ವೇಷಿಸಲು ಮತ್ತು ಅನುಭವಿಸಲು ನಾನು ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೀದಿ ನಾಯಿ ಕಡಿತದ ಬಳಿಕ ರೇಬೀಸ್: 2 ವರ್ಷದ ಮಗು ಸಾವು
ಇದನ್ನೂ ಓದಿ: ಎಮ್ಮೆಗಳಿಗೆ ಸೌಂದರ್ಯ ಸ್ಪರ್ಧೆ ಏರ್ಪಡಿಸಿದ ಥೈಲ್ಯಾಂಡ್: ಇದಕ್ಕೂ ಕರಾವಳಿಯ ಕಂಬಳಕ್ಕೂ ಇದೆ ಸಾಮ್ಯತೆ
