ನೈಸರ್ಗಿಕ ವಿಕೋಪಗಳ ಹೆಚ್ಚಳದ ನಡುವೆ, ಎಲಾನ್ ಮಸ್ಕ್ ಭೂಮಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸುಸ್ಥಿರ ಶಕ್ತಿ ಮಾತ್ರ ಭೂಮಿಯನ್ನು ಉಳಿಸಲು ಸಾಕಾಗುವುದಿಲ್ಲ ಎಂದಿರುವ ಅವರು, ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಬಾಹ್ಯಾಕಾಶ ತಂತ್ರಜ್ಞಾನ ಆಧಾರಿತ ಪರಿಹಾರವನ್ನು ಸೂಚಿಸಿದ್ದಾರೆ. ಕರಾವಳಿ ಪ್ರದೇಶಗಳನ್ನು ಉಳಿಸಲು ಕೇವಲ 50 ವರ್ಷಗಳ ಕಾಲಾವಕಾಶವಿದೆ ಎಂದು ಅವರು ಹೇಳಿದ್ದಾರೆ.
ನೇಪಾಳದಲ್ಲಿನ ಪ್ರವಾಹ ಮತ್ತು ಜಪಾನ್, ವೆನೆಜುವೆಲಾದಲ್ಲಿ ಭೂಕಂಪಗಳಿಂದ ಉಂಟಾದ ವಿನಾಶವು ಎಲ್ಲರನ್ನೂ ಯೋಚಿಸುವಂತೆ ಮಾಡಿದೆ. ಈ ನೈಸರ್ಗಿಕ ವಿಕೋಪವೂ ಸಾರ್ವಜನಿಕ ಕಳವಳವನ್ನು ಹೆಚ್ಚಿಸಿದೆ. ಇದರ ಹಿನ್ನೆಲೆಯಲ್ಲಿ ಟೆಸ್ಲಾ ಮತ್ತ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಭೂಮಿಯ ಮೇಲೆ ಎದುರಾಗಿರುವ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.
ಜಗತ್ತಿನ ಅಂತ್ಯ? ಎಲಾನ್ ಮಸ್ಕ್ ಎಚ್ಚರಿಕೆಯ ಹಿಂದಿನ ರಹಸ್ಯ
ದೀರ್ಘಕಾಲಿನ ಹವಾಮಾನ ಬೆದರಿಕೆಗಳಿಂದ ಭೂಮಿಯನ್ನು ರಕ್ಷಿಸಲು ಕೇವಲ ಸುಸ್ಥಿರ ಶಕ್ತಿಯನ್ನು ಅಳವಡಿಕೊಳ್ಳುವುದು ಸಾಕಾಗುವುದಿಲ್ಲ. ಭೂಮಿಯನ್ನು ಉಳಿಸಲು ನಮಗೆ ಕೇವಲ 50 ವರ್ಷಗಳಿವೆ, ಇಲ್ಲದಿದ್ದರೆ ಎಲ್ಲವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಭೂಮಿ ಉಳಿಸಿವುದು ಹೇಗೆ?
ಪ್ರತಿ 100 ಮಿಲಿಯನ್ ವರ್ಷಗಳಿಗೊಮ್ಮೆ ಅತ್ಯಂತ ತೀವ್ರವಾದ ಅಳಿವಿನ ಘಟನೆಗಳು ಸಂಭವಿಸುತ್ತವೆ. ಅವುಗಳನ್ನು ತಡೆಯಲು ಸುಸ್ಥಿರ ಶಕ್ತಿಯನ್ನು ಅಳವಡಿಕೊಳ್ಳುವುದು ಸಾಕಾಗುವುದಿಲ್ಲ ಎಂದು ಮಸ್ಕ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ತಾಪಮಾನವನ್ನು ನಿಯಂತ್ರಿಸಲು ಬಾಹ್ಯಾಕಾಶ ಉಪಗ್ರಹಗಳು ಮತ್ತು ದೊಡ್ಡ ಪ್ರಮಾಣದ ಭೂ ಎಂಜಿನಿಯರಿಂಗ್ ಅಗತ್ಯವಿರುತ್ತದೆ. ಇಲ್ಲಿದಿದ್ದರೆ ಎಲ್ಲವೂ ನಾಶವಾಗುತ್ತದೆ. ಚಂದ್ರನಿಂದ ಸಾಮೂಜಿಕ ಚಲಕಗಳ ಮೂಲಕ ಭೂಮಿ ಸೂರ್ಯ ಲ್ಯಾಗ್ರೇಂಜ್ ಬಿಂದುಗಳಿಗೆ ಕಳುಹಿಸಲಾದ ಸ್ಮಾರ್ಟ್ ಉಪಗ್ರಹಗಳು ಸುಮಾರು 1 ಶತಕೋಟಿ ವರ್ಷಗಳ ಕಾಲ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಯನ್ನು ಪರಿಸಬಹುದು. ಆದರೆ, ಕರಾವಳಿಯಲ್ಲಿ ಜನರು ವಾಸಿಸಲು ಬಯಸಿದರೆ, ನಾವು ಅದಕ್ಕಿಂತ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ನಮಗೆ ಸುಮಾರು 50 ವರ್ಷಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ಮಸ್ಕ್ ಹೇಳಿದ್ದಾರೆ.
ಅಂದರೆ, ಕರಾವಳಿ ಪ್ರದೇಶಗಳಿಗೆ ಅಂದರೆ ಫ್ಲೋರಿಡಾದ ಕೆಲವು ಭಾಗಗಳು ಸಮುದ್ರ ಮಟ್ಟ ಏರಿಕೆಯಿಂದಾಗಿ ಸುಮಾರು 50 ವರ್ಷಗಳಲ್ಲಿ ಕ್ರಮ ಕೈಗೊಳ್ಳಬೇಕು. ಮಸ್ಕ್ ಅವರ ನಿಲುವು ಈಗ ಹೆಚ್ಚು ತಂತ್ರಜ್ಞಾನ ಆಧಾರಿತ ಮತ್ತು ದೀರ್ಘಾವಧಿ ದೃಷ್ಟಿಕೋನದ್ದಾಗಿದೆ. ಅವರು ಸುಸ್ಥಿರ ಇಂಧನಕ್ಕೆ ಬೆಂಬಲ ನೀಡುತ್ತಿದ್ದು, ಆದರೆ ಇದು ಮಾತ್ರ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಭೂಮಿಯನ್ನು ಉಳಿಸಲು ಚಂದ್ರನಿಂದ ಮಾಸ್ ಡ್ರೈವರ್‌ಗಳ ಮೂಲಕ ಭೂಮಿ ಸೂರ್ಯ ಲ್ಯಾಗ್ರೇಂಜ್ ಪಾಯಿಂಟ್‌ಗಳಿಗೆ ಸೆಂಟಿಯಂಟ್ ನಿಯಂತ್ರಿತ ಉಪಗ್ರಹಗಳನ್ನು ಕಳುಹಿಸಿ, ಸೂರ್ಯನ ಶಕ್ತಿಯನ್ನು ಸ್ವಲ್ಪ ಹೊಂದಾಣಿಕೆ ಮಾಡುವುದು. ಇದು ಸುಮಾರು 100 ಕೋಟಿ ವರ್ಷಗಳವರೆಗೂ ಜಾಗತಿಕ ತಾಪಮಾನವನ್ನು ನಿಯಂತ್ರಿಸಬಹುದು ಎಂದು ಮಸ್ಕ್ ಪರಿಹಾರವನ್ನು ನೀಡಿದ್ದಾರೆ.
ಹವಾಮಾನ ಸಂಶೋಧನೆಗಳಿಗೆ ಹಣಕಾಸಿನ ನೆರವು ನೀಡುವ ಬಗ್ಗೆ ಅಮೆರಿಕದಲ್ಲಿ ಕಳವಳ ವ್ಯಕ್ತವಾಗಿರುವ ಸಂದರ್ಭದಲ್ಲಿ ಮಸ್ಕ್ ನೀಡಿರುವ ಎಚ್ಚರಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಆಗಸ್ಟ್ ಆರಂಭದಲ್ಲಿ ಟ್ರಂಪ್ ಆಡಳಿತ ಆರ್ಕ್ಟಿಕ್‌ನಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚುವ ವಾರ್ಷಿಕ ಮೌಲ್ಯಮಾಪನವಾದ ಆರ್ಕ್ಟಿಕ್ ವರದಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವುದಾಗಿ ಘೋಷಣೆ ಮಾಡಿತ್ತು.


