ಚೀನಾ ವ್ಲಾಗರ್ಗಳು ಬಾಂಗ್ಲಾದೇಶದ ಕೊಳಚೆ ಪ್ರದೇಶಗಳನ್ನು ದೆಹಲಿ ಎಂದು ಬಿಂಬಿಸಿ ಭಾರತದ ಹೆಸರು ಕೆಡಿಸುವ ಕುತಂತ್ರ ಮಾಡುತ್ತಿದ್ದಾರೆ. ಢಾಕಾದ ಪ್ರದೇಶಗಳಲ್ಲಿ ವಿಡಿಯೋ ಮಾಡಿ ನವದೆಹಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುತ್ತಿರುವುದನ್ನು ಬಾಂಗ್ಲಾ ಪತ್ರಿಕೆ ಬಯಲು ಮಾಡಿದೆ.
ಢಾಕಾ: ಭಾರತದ ವಿರುದ್ಧ ಚೀನಿ ವ್ಲಾಗರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದು ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಕೊಳಚೆ ಪ್ರದೇಶಗಳನ್ನು ತೋರಿಸಿ ಅದನ್ನು ದೆಹಲಿ ಎಂದು ಬಿಂಬಿಸಲಾಗುತ್ತಿದೆ ಎನ್ನುವುದು ಬಾಂಗ್ಲಾದ ಪತ್ರಿಕೆಯೊಂದರ ತನಿಖಾ ವರದಿಯಿಂದ ಬಯಲಾಗಿದೆ.
150 ಚೀನಾ ಪ್ರಜೆಗಳು
‘ಬಾಂಗ್ಲಾದೇಶದ ಬಡಾವಣೆಗಳ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಭಾರತದ ರಾಜಧಾನಿ ದೆಹಲಿ ಎಂದು ಬಿಂಬಿಸಲಾಗುತ್ತಿದೆ, ಢಾಕಾದ ಟೆಕ್ಪಾರಾ ಮತ್ತು ಉತ್ತಮಾ ಪ್ರದೇಶಗಳಲ್ಲಿ ಕನಿಷ್ಠ 150 ಚೀನಾ ಪ್ರಜೆಗಳು ವಿಡಿಯೋ ಚಿತ್ರೀಕರಿಸಿ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುತ್ತಿದ್ದಾರೆ’ ಎಂದು ಪತ್ರಿಕೆ ವರದಿ ಮಾಡಿದೆ.
ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ವರದಿ
’ಚೀನಾದ ವ್ಲಾಗರ್ಗಳು ಢಾಕಾದಲ್ಲಿದ್ದರೂ, ತಾವು ಭಾರತದ ನವದೆಹಲಿಯಿಂದಲೇ ನೇರ ಪ್ರಸಾರ ಮಾಡುತ್ತಿರುವುದಾಗಿ ವೀಕ್ಷಕರಿಗೆ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಜನರ ಮನೆಗಳಿಗೂ ಪ್ರವೇಶಿಸಿ ವಿಡಿಯೋ ಚಿತ್ರೀಕರಿಸುತ್ತಿದ್ದಾರೆ ಈ ವ್ಲಾಗರ್ಗಳು ತಲಾ ಎರಡು ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದಾರೆ. ಒಂದು ಫೋನ್ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರೆ, ಇನ್ನೊಂದರಲ್ಲಿ ಮಾಹಿತಿಗಳನ್ನು ಓದುವುದಕ್ಕೆ ಬಳಸುತ್ತಿದ್ದಾರೆ’ ಎಂದು ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ‘ಪ್ರಥಮ್ ಆಲೋ’ ತನಿಖಾ ವರದಿ ಪ್ರಕಟಿಸಿದೆ.
ಇದನ್ನೂ ಓದಿ: ಚೀನಾ ಹೂಡಿದ ರಹಸ್ಯ ಜಾಲದಲ್ಲಿ ಅಮೆರಿಕದ AI ತಂತ್ರಜ್ಞಾನ ಲೋಕದ 63ರ ಸಿಇಒ, ಡೇಟಿಂಗ್ ನೆರಳಲ್ಲಿ ಗೂಢಚಾರಿಕೆ!
ಇದನ್ನೂ ಓದಿ: ವಿಜಯ್ ಮಲ್ಯ ಎಣ್ಣೆ ವ್ಯವಹಾರ ತನ್ನೂರಿಗೆ ಬರದಂತೆ ತಡೆದಿದ್ದ ಬಾಲಿವುಡ್ ನಟ, 40 ಕೋಟಿ ಖರ್ಚು ಮಾಡಿ ಹೊಸಕಿ ಹಾಕಿದ್ದ ಖಳನಾಯಕ














