ಭಾರತದ ನಿರ್ಧಾರದಿಂದ ಮಿಲಿಯನ್‌ಗೂ ಹೆಚ್ಚು ಜನರಿಗೆ ತೊಂದರೆಯಾಗಿದೆ: ಕೆನಡಾ ಪ್ರಧಾನಿ
ಕೆನಡಾದ ರಾಜತಾಂತ್ರಿಕರ ಮೇಲೆ ಭಾರತ ಸರ್ಕಾರದ ದಬ್ಬಾಳಿಕೆಯು ಎರಡೂ ದೇಶಗಳಲ್ಲಿನ ಲಕ್ಷಾಂತರ ಜನರ ಸಾಮಾನ್ಯ ಜೀವನವನ್ನು ಕಷ್ಟಗೊಳಿಸಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ಒಟ್ಟವಾ: ಕೆನಡಾದ ರಾಜತಾಂತ್ರಿಕರ ಮೇಲೆ ಭಾರತ ಸರ್ಕಾರದ ದಬ್ಬಾಳಿಕೆಯು ಎರಡೂ ದೇಶಗಳಲ್ಲಿನ ಲಕ್ಷಾಂತರ ಜನರ ಸಾಮಾನ್ಯ ಜೀವನವನ್ನು ಕಷ್ಟಗೊಳಿಸಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. ಅಕ್ಟೋಬರ್ 20ರೊಳಗೆ ದೇಶ ಬಿಟ್ಟು ಹೋಗುವಂತೆ ಇಲ್ಲದಿದ್ದರೆ ಅವರಿಗೆ ಒದಗಿಸಿದ ಎಲ್ಲಾ ರಾಜತಾಂತ್ರಿಕ ವಿನಾಯಿತಿಗಳನ್ನು ರದ್ದುಪಡಿಸುವುದಾಗಿ ಭಾರತ ಸರ್ಕಾರ ಹೇಳಿತ್ತು. ಭಾರತ ಸರ್ಕಾರದ ಏಕಪಕ್ಷೀಯ ನಿರ್ಧಾರದ ನಂತರ ಕೆನಡಾವೂ ಭಾರತದಲ್ಲಿದ್ದ ತನ್ನ 41 ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂಪಡೆದಿದೆ ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ (Foreign Minister Melanie Joly) ಹೇಳಿಕೆ ನೀಡಿದ ಒಂದು ದಿನದ ಬಳಿಕ ಟ್ರುಡೋ ಈ ವಿಚಾರದ ಬಗ್ಗೆ ಮಾತನಾಡಿದೆ.
ಭಾರತ ಸರ್ಕಾರದ (Indian government) ಈ ನಿರ್ಧಾರದಿಂದ ಭಾರತದಲ್ಲಿ ಮತ್ತು ಕೆನಡಾದಲ್ಲಿ (Canada) ವಾಸಿಸುವ ಲಕ್ಷಾಂತರ ಜನರ ಬದುಕು ಎಂದಿನಂತೆ ಸಾಗುವುದು ಕಷ್ಟಕರವಾಗಿದೆ. ಅವರು ರಾಜತಾಂತ್ರಿಕತೆಯ ಮೂಲಭೂತ ತತ್ವವನ್ನು ಉಲ್ಲಂಘಿಸುವ ಮೂಲಕ ಅದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಭಾರತೀಯ ಉಪಖಂಡದಲ್ಲಿ ತಮ್ಮ ಮೂಲವನ್ನು ಗುರುತಿಸುವ ಲಕ್ಷಾಂತರ ಕೆನಡಿಯನ್ನರ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ಇದು ನನಗೆ ತುಂಬಾ ಕಳವಳ ತರುವ ವಿಚಾರವಾಗಿದೆ ಎಂದು ಅವರು ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ದೂರದರ್ಶನದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇಸ್ರೇಲ್ ಯುದ್ಧ ಕಣಕ್ಕಿಳಿದ ಅಮೆರಿಕ: 100ಕ್ಕೂ ಹೆಚ್ಚು ಹಮಾಸ್ ನೆಲೆಗಳ ಮೇಲೆ ಅಟ್ಯಾಕ್
ಸೆಪ್ಟೆಂಬರ್‌ನಲ್ಲಿ ಜಿ-20 ಶೃಂಗಕ್ಕೆ ಭಾರತಕ್ಕೆ ಬಂದಿದ್ದ ಟ್ರುಡೋ, ಸಭೆ ಮುಗಿಸಿ ಕೆನಡಾಗೆ ಮರಳಿದವರೇ ಭಾರತ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಭಾರತ ಸರ್ಕಾರ ತನ್ನ ವಿರೋಧಿಗಳನ್ನು ವಿದೇಶದಲ್ಲಿ ಗೌಪ್ಯವಾಗಿ ಹತ್ಯೆ ಮಾಡುತ್ತಿದೆ. ಖಲಿಸ್ತಾನ್ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ (Sikh separatist leader) ಹತ್ಯೆಯನ್ನು ಭಾರತ ಸರ್ಕಾರವೇ ಮಾಡಿಸಿದೆ ಎಂದು ಆರೋಪಿಸಿದ್ದರು. ಅಲ್ಲದೇ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ವಜಾಗೊಳಿಸಿದ್ದರು. ಇದಕ್ಕೆ ಪ್ರತಿಯಾಗಿ ಭಾರತವೂ ಭಾರತದಲ್ಲಿರುವ ಕೆನಡಾದ ಪ್ರಮುಖ ರಾಜತಾಂತ್ರಿಕ ಅಧಿಕಾರಿಯನ್ನು ದೇಶ ಬಿಟ್ಟು ಹೋಗುವಂತೆ ಹೇಳಿದ್ದಲ್ಲದೇ ಆಕ್ಟೋಬರ್ 10ರೊಳಗೆ ತಮ್ಮೆಲ್ಲಾ ರಾಜತಾಂತ್ರಿಕ ಅಧಿಕಾರಿಗಳನ್ನು ಕರೆಸಿಕೊಳ್ಳುವಂತೆ ಕೆನಡಾಗೆ ಸೂಚಿಸಿತ್ತು.
ಭಾರತ ಎಚ್ಚರಿಕೆಯ ಬಳಿಕ ಸ್ವದೇಶಕ್ಕೆ ತೆರಳಿದ ಕೆನಡಾದ 41 ರಾಯಭಾರಿಗಳು
ಅಲ್ಲದೆ ಕೆನಡಾ ವೀಸಾ ವಿತರಣೆ ಪ್ರಕ್ರಿಯೆಯನ್ನು ಭಾರತ ಸ್ಥಗಿತಗೊಳಿಸಿತ್ತು. ಜೊತೆಗೆ ಕೆನಡಾದಲ್ಲಿ ಭಾರತದ 21 ರಾಯಭಾರ ಸಿಬ್ಬಂದಿ ಇದ್ದು, ಅಷ್ಟೇ ಪ್ರಮಾಣದ ಕೆನಡಾ ಸಿಬ್ಬಂದಿ ಭಾರತದಲ್ಲಿ ಇರಬೇಕು. ಹೆಚ್ಚುವರಿ ಸಿಬ್ಬಂದಿ ಅ.10ರೊಳಗೆ ದೇಶ ತೊರೆಯಬೇಕು ಎಂದು ಸೂಚಿಸಿತ್ತು. ಇದಕ್ಕೂ ಕೆನಡಾ ಬಗ್ಗದ ಹಿನ್ನೆಲೆಯಲ್ಲಿ, ಹೆಚ್ಚುವರಿ ಸಿಬ್ಬಂದಿಗಳು ಶುಕ್ರವಾರದ ಬಳಿಕ ರಾಯಭಾರ ವಿನಾಯ್ತಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ವಿನಾಯತಿ ರದ್ದಾದರೆ, ಯಾವುದೇ ಪ್ರಕರಣದಲ್ಲಿ ಕೆನಡಾ ರಾಯಭಾರ ಸಿಬ್ಬಂದಿಯನ್ನು ಭಾರತ ಬಂಧಿಸಬಹುದಾಗಿರುತ್ತದೆ.
ನಕಲಿ ವೀಸಾ ಮೂಲಕ ಬಂದಿದ್ದವನಿಗೆ ಕೆನಡಾ ಪೌರತ್ವ : ಜಿ-20 ವೇಳೆ ಪ್ರೆಸಿಡೆಂಟ್ ಸೂಟ್ ತಿರಸ್ಕರಿಸಿದ್ದ ಟ್ರಡೋ
ಅಂತಾರಾಷ್ಟ್ರೀಯ ಒಪ್ಪಂದಕ್ಕಿಂತ ಸಮಾನತೆಗೆ ಮೊದಲ ಆದ್ಯತೆ
ಅಂತಾರಾಷ್ಟ್ರೀಯ ಒಪ್ಪಂದಕ್ಕಿಂತ ಸಮಾನತೆಯೇ ನಮಗೆ ಮೊದಲ ಆದ್ಯತೆಯಾಗಿ ಪರಿಗಣನೆಯಾಗಲಿದೆ ಎಂದು ರಾಜತಾಂತ್ರಿಕ ಬಿಕ್ಕಟ್ಟಿನ ಕುರಿತ ಕೆನಡಾ ಟೀಕೆಗೆ ಭಾರತ ತಿರುಗೇಟು ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ ‘ಅಗತ್ಯ ಬಿದ್ದಲ್ಲಿ ದೂತಾವಾಸ ಸಿಬ್ಬಂದಿಯನ್ನು ಮಿತಿಗೊಳಿಸಿಕೊಳ್ಳಲು ವಿಯೆನ್ನಾ ಒಪ್ಪಂದದ 11.1ನೇ ಕಾಯ್ದೆ ತಿಳಿಸುತ್ತದೆ. ಅದರ ಅನುಸಾರ ನಾವು ನಡೆದುಕೊಂಡಿದ್ದು ನಾವು ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿರುವುದಿಲ್ಲ. ಒಂದು ವೇಳೆ ಅಂತಹ ಅಂತಾರಾಷ್ಟ್ರೀಯ ನಿಯಮಗಳು ಇದ್ದರೂ ಸಹ ನಾವು ಸಮಾನತೆಗೇ ಮೊದಲ ಆದ್ಯತೆ ಕೊಡುತ್ತೇವೆಯೇ ಹೊರತು ಒಪ್ಪಂದಕ್ಕಲ್ಲ ಎಂದು ಸ್ಪಷ್ಟಪಡಿಸಿದೆ
ಭಾರತೀಯರಿಗೆ ನವರಾತ್ರಿ ಶುಭಕೋರಿ ಸ್ನೇಹ ಬಯಸಿದ ಕೆನಡಾ ಪ್ರಧಾನಿ