ಭಾರತೀಯರಿಗೆ ನವರಾತ್ರಿ ಶುಭಕೋರಿ ಸ್ನೇಹ ಬಯಸಿದ ಕೆನಡಾ ಪ್ರಧಾನಿ
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶ ಮತ್ತು ವಿದೇಶಗಳಲ್ಲೂ ಭಾರೀ ಮುಖ ಭಂಗ ಅನುಭವಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಈಗ ಭಾರತೀಯರಿಗೆ ನವರಾತ್ರಿ ಶುಭ ಕೋರಿದ್ದಾರೆ. ಈ ಮೂಲಕ ಸಿಟ್ಟಿಗೆದ್ದಿದ್ದ ಭಾರತ ಕಡೆಗೆ ಮತ್ತೆ ಸ್ನೇಹದ ಹಸ್ತ ಚಾಚುವ ಯತ್ನ ಮಾಡಿದ್ದಾರೆ.
ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿ ಸ್ವದೇಶ ಮತ್ತು ವಿದೇಶಗಳಲ್ಲೂ ಭಾರೀ ಮುಖ ಭಂಗ ಅನುಭವಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಈಗ ಭಾರತೀಯರಿಗೆ ನವರಾತ್ರಿ ಶುಭ ಕೋರಿದ್ದಾರೆ. ಈ ಮೂಲಕ ಸಿಟ್ಟಿಗೆದ್ದಿದ್ದ ಭಾರತ ಕಡೆಗೆ ಮತ್ತೆ ಸ್ನೇಹದ ಹಸ್ತ ಚಾಚುವ ಯತ್ನ ಮಾಡಿದ್ದಾರೆ.
ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಕೈವಾಡವಿದೆ ಎಂದು ಟ್ರುಡೋ ಆರೋಪ ಮಾಡಿದ್ದರು. ಜೊತೆಗೆ ಜಗತ್ತಿನ ಹಲವು ದೇಶಗಳ ಬಳಿ ಭಾರತದ ಬಗ್ಗೆ ದೂರಿ ನಗೆಪಾಟಲಿಗೀಡಾಗಿದ್ದರು. ಆದರೆ ಈ ಬಗ್ಗೆ ಭಾರತ ಎಷ್ಟೇ ಕೇಳಿದರೂ ಸಾಕ್ಷ್ಯ ನೀಡಲು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ, ಕೆನಡಾಕ್ಕೆ ವೀಸಾ ನೀಡಿಕೆ ಸ್ಥಗಿತಗೊಳಿಸಿತ್ತು. ಜೊತೆಗೆ ಭಾರತದಲ್ಲಿನ ಕೆನಡಾ ರಾಯಭಾರ ಸಿಬ್ಬಂದಿ (Canadian Embassy in India) ಕಡಿತಕ್ಕೆ ಸೂಚಿಸಿತ್ತು. ಇನ್ನಷ್ಟು ಕಠಿಣ ರಾಜ ತಾಂತ್ರಿಕ ಕ್ರಮದ ಸುಳಿವು ನೀಡಿತ್ತು.
ನಿಜ್ಜರ್ ಹತ್ಯೆಯ ಸಾಕ್ಷ್ಯ ಭಾರತಕ್ಕೆ ಕೊಡಲ್ಲ ಕೋರ್ಟಿಗೆ ಕೊಡೇವೆ: ಕೆನಡಾ
ಹೀಗಾಗಿ ಈ ವಿಷಯದಲ್ಲಿ ಟ್ರುಡೋ ಸ್ವತಃ ತಮ್ಮ ದೇಶ ಮತ್ತು ವಿದೇಶಗಳ ದೃಷ್ಟಿಯಲ್ಲಿ ಏಕಾಂಗಿಯಾಗಿ ಪೇಚಿಗೀಡಾಗಿದ್ದರು. ಜೊತೆಗೆ ಭಾರತದ ಕ್ರಮಗಳು ಕೆನಡಾ ಅರ್ಥ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರುವ ಸುಳಿವು ಕಂಡು ಬಂದಿತ್ತು. ಅದರ ಬೆನ್ನಲ್ಲೇ ಟ್ರುಡೋ ಭಾರತೀಯರಿಗೆ ಹಬ್ಬದ ಶುಭ ಕೋರಿ ಸ್ನೇಹದ ಹಸ್ತ ಚಾಚಿದ್ದಾರೆ. ಈ ಮೂಲಕ ಭಾರತದ ಜೊತೆಗೆ ಮತ್ತೆ ಸ್ನೇಹ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ಕೆನಡಾದಲ್ಲಿ ಖಲಿಸ್ತಾನ್ ಉಗ್ರ ನಿಜ್ಜರ್ ಹತ್ಯೆಯಾಗಿತ್ತು.
ಕೋಕೇನ್ ಅಮಲಿನಲ್ಲೇ ಇದ್ರಾ ಜಿ20ಗೆ ಬಂದಿದ್ದ ಕೆನಡಾ ಪ್ರಧಾನಿ: ಮಾಜಿ ರಾಯಭಾರ ಸಿಬ್ಬಂದಿ ಹೇಳೋದೇನು?