ನಕಲಿ ವೀಸಾ ಮೂಲಕ ಬಂದಿದ್ದವನಿಗೆ ಕೆನಡಾ ಪೌರತ್ವ : ಜಿ-20 ವೇಳೆ ಪ್ರೆಸಿಡೆಂಟ್ ಸೂಟ್ ತಿರಸ್ಕರಿಸಿದ್ದ ಟ್ರಡೋ
ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ವಿಷಯದಲ್ಲಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿರುವ ಕೆನಡಾ ಸರ್ಕಾರ, ಆತನ ವಿರುದ್ಧ ಗಂಭೀರ ಆರೋಪವಿದ್ದರೂ ಆತನಿಗೆ ತನ್ನ ದೇಶದ ಪೌರತ್ವ ನೀಡುವ ಮೂಲಕ ಭಾರತ ವಿರೋಧಿ ನಿಲವು ತಳೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಟೊರಾಂಟೋ: ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ವಿಷಯದಲ್ಲಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿರುವ ಕೆನಡಾ ಸರ್ಕಾರ, ಆತನ ವಿರುದ್ಧ ಗಂಭೀರ ಆರೋಪವಿದ್ದರೂ ಆತನಿಗೆ ತನ್ನ ದೇಶದ ಪೌರತ್ವ ನೀಡುವ ಮೂಲಕ ಭಾರತ ವಿರೋಧಿ ನಿಲವು ತಳೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಭಾರತದಲ್ಲಿ ಹಲವು ದುಷ್ಕೃತ್ಯ ಎಸಗಿ 1997ರಲ್ಲಿ ಕೆನಡಾಕ್ಕೆ ಪರಾರಿಯಾಗಿದ್ದ ನಿಜ್ಜರ್ (Hardeep Singh Nijjar), ಅಲ್ಲಿಂದಲೂ ಭಾರತ ವಿರೋಧಿ ಕೃತ್ಯ ಎಸಗುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ 2014ರಲ್ಲಿ ಭಾರತ ಸರ್ಕಾರದ ಮನವಿ ಮೇರೆಗೆ ಇಂಟರ್‌ಪೋಲ್ ನೋಟಿಸ್ ಜಾರಿ ಮಾಡಿತ್ತು. ಈ ಹಂತದಲ್ಲಿ ಆತನನ್ನು ಬಂಧಿಸಿ ಭಾರತದ ವಶಕ್ಕೆ ನೀಡಬೇಕಿದ್ದ ಕೆನಡಾ ಸರ್ಕಾರ, ರೆಡ್ ನೋಟಿಸ್ ಜಾರಿಯಾದ ಕೆಲವು ತಿಂಗಳಲ್ಲೇ ಆತನಿಗೆ ಪೌರತ್ವ ನೀಡುವ ಮೂಲಕ ಆತನ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿತ್ತು ಎಂದು ವರದಿಗಳು ತಿಳಿಸಿವೆ.
ಇದಾದ ಬಳಿಕ 2016ರಲ್ಲಿ 2ನೇ ಬಾರಿಗೆ ಮತ್ತು 2007ರಲ್ಲಿ 3ನೇ ಬಾರಿ ಇಂಟರ್‌ಪೋಲ್ (Interpol) ನಿಜ್ಜರ್ ವಿರುದ್ಧ ನೋಟಿಸ್ ಜಾರಿ ಮಾಡಿತ್ತು. ಈತನನ್ನು ಕಳೆದ ಜೂನ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಈ ಹತ್ಯೆಯ ಹಿಂದೆ ಭಾರತದ ಏಜೆಂಟ್‌ಗಳ ಕೈವಾಡವಿದೆ ಎಂಬುದು ಇದೀಗ ಕೆನಡಾ ಆರೋಪ.
ವಿಶ್ವದ ಫ್ಯಾಷನ್ ಲೋಕವನ್ನು ಆಳುತ್ತಿರುವ ಪುಟಾಣಿ ಸೂಪರ್ ಮಾಡೆಲ್ಗಳಿ ...
ಜಿ20 ವೇಳೆ ಪ್ರೆಸಿಡೆಂಟ್ ಸೂಟ್ ತಿರಸ್ಕರಿಸಿದ್ದ ಟ್ರುಡೋ
ನವದೆಹಲಿ: ಜಿ20 ಶೃಂಗದ ನಿಮಿತ್ತ ಭಾರತಕ್ಕೆ ಆಗಮಿಸಿದ್ದ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ (Canadian Prime Minister Justin Trudeau) ಹಾಗೂ ಅವರ ನಿಯೋಗ ಅಧ್ಯಕ್ಷರಿಗೆ ಪ್ರತ್ಯೇಕವಾಗಿ ಮೀಸಲಿಟ್ಟಿದ್ದ ಪ್ರೆಸಿಡೆಂಟ್ ಸೂಟ್ (ಐಷಾರಾಮಿ ಕೊಠಡಿ) ಕೊಠಡಿಯ ಬದಲು ಸಾಮಾನ್ಯ ಕೋಣೆಯಲ್ಲಿ ತಂಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಜಿ20 ಸಭೆಗೆ ಆಗಮಿಸುವ ಅತಿಥಿಗಳಿಗೆ ಭಾರತ ಸರ್ಕಾರ ವಿಶೇಷ ಭದ್ರತೆಗಳನ್ನು ಒಳಗೊಂಡ ಕೋಣೆಯನ್ನು ನಿಗದಿಗೊಳಿಸಿತ್ತು. ಆದರೆ ಟ್ರುಡೋ ಹಾಗೂ ಅವರ ನಿಯೋಗ ಲಲಿತ್ ಹೋಟೆಲಿನ ಸಾಮಾನ್ಯ ಕೋಣೆಯಲ್ಲಿ ತಂಗಿದ್ದರು. ಜೊತೆಗೆ ಟ್ರುಡೋ ವಿಮಾನ ಕೆಟ್ಟು ನಿಂತಾಗ ಭಾರತ ಸರ್ಕಾರ ಏರ್ ಇಂಡಿಯಾ (Air India) ಒನ್ ವಿಮಾನವನ್ನು ನೀಡಿತ್ತು, ಆದರೆ ಟ್ರಡೋ ಅದನ್ನು ತಿರಸ್ಕರಿಸಿತ್ತು.
ನಮ್ಮದು ಅತ್ಯಂತ ಸುರಕ್ಷಿತ ದೇಶ: ಕೆನಡಾ
ಟೊರಂಟೋ: ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ (diplomatic crisis) ಹಿನ್ನೆಲೆಯಲ್ಲಿ ಕೆನಡಾದಲ್ಲಿನ ಭಾರತೀಯರು ಎಚ್ಚರಿಕೆಯಿಂದ ಇರಬೇಕು ಎಂಬ ಭಾರತ ಸರ್ಕಾರ ನೀಡಿದ್ದ ಮುನ್ನೆಚ್ಚರಿಕೆಯನ್ನು ಕೆನಡಾ ಸರ್ಕಾರ ತಿರಸ್ಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆನಡಾ ವಲಸೆ ಸಚಿವ ಮಿಲ್ಲರ್ ಮ್ಯಾಕ್ಸ್ ಕೆನಡಾ ವಿಶ್ವದಲ್ಲಿ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಕಳೆದ 2-3 ದಿನಗಳಿಂದ ಆಗುತ್ತಿರುವ ಸೂಕ್ಷ್ಮ ಬೆಳವಣಿಗೆಗಳ ಕುರಿತು ಎಲ್ಲರೂ ಶಾಂತವಾಗಿರುವುದು ಸೂಕ್ತ ಎಂದು ಹೇಳಿದರು. ಜೊತೆಗೆ ಮತ್ತೋರ್ವ ಸಚಿವ ಸಿಯಾನ್ ಫ್ರೇಜರ್ ಮಾತನಾಡಿ, ನಮ್ಮ ದೇಶ ವಲಸೆ ಬಂದಿರುವವರಿಂದ ನಿರ್ಮಾಣವಾಗಿದ್ದು, ನಾವು ಇಲ್ಲಿಗೆ ಬಂದವರನ್ನು ಅವರು ಹಿಂದು, ಮುಸ್ಲಿಂ, ಸಿಖ್ ಎಂದು ಪರಿಗಣಿಸದೇ ಕೆನಡಾ ನಾಗರಿಕರು ಎಂದು ಗೌರವಿಸುತ್ತೇವೆ ಎಂದರು.
ಎಲ್ಲಪ್ಪ ನಿಮ್ ಹೆಂಡ್ರು... ಎಲಾನ್ ಮಸ್ಕ್ ಕೇಳಿದ ಟರ್ಕಿ ಅಧ್ಯಕ್ಷ: ವೀಡಿಯೋ ವೈರಲ್
ಅನಾಮಿಕ ವ್ಯಕ್ತಿಗಳ ಗುಂಡಿಗೆ ಸುಖ್‌ದೂಲ್ ಸಿಂಗ್ ಬಲಿ
ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ಪ್ರಕರಣ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿರುವ ನಡುವೆಯೇ, ಕೆನಡಾದಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ (notorious gangster), ಖಲಿಸ್ತಾನಿ ಬೆಂಬಲಿಗ ಸುಖ್‌ದೋಲ್ ಸಿಂಗ್‌ನನ್ನು ಹತೈಗೈಯಲಾಗಿದೆ. ಕೆನಡಾ ಕಾಲಮಾನ ಬುಧವಾರ ರಾತ್ರಿ ಆಗಂತುಕರ ಗುಂಡಿಗೆ ಸುಖ್‌ದೋಲ್ ಬಲಿಯಾಗಿದ್ದಾನೆ. ಇದು ಎರಡು ಅಂತರ ಗ್ಯಾಂಗ್ ನಡುವಿನ ವೈರತ್ವದ ಫಲ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಗ್ಯಾಂಗ್‌ಸ್ಟರ್ ಗುರ್ಲಾಲ್ ಬ್ರಾರ್, ವಿಕ್ಕಿ ಮಿಡ್ಡಖೇರ್ ಹತ್ಯೆಯಲ್ಲಿ ಸುಖ್‌ದೋಲ್ (Sukhdol Singh) ಪಾತ್ರವಿದ್ದ ಕಾರಣ ಆತನನ್ನು ಹತ್ಯೆ ಮಾಡಿದ್ದೇವೆ ಎಂದು ಜಾಲತಾಣದಲ್ಲಿ ಬಿಷ್ಣೋಯ್ ಗ್ಯಾಂಗ್ ಪೋಸ್ಟ್ ಮಾಡಿದೆ.
ಪಂಜಾಬ್ ಪೊಲೀಸ್ ಇಲಾಖೆಯಲ್ಲಿದ್ದ ಮೋಗಾ
ಕೊಲೆ, ದರೋಡೆ, ಅಪಹರಣ ಸೇರಿದಂತೆ 18 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿ, ಪಂಜಾಬ್‌ನ ಮೋಸ್ಟ್ ವಾಂಟೆಡ್ ಉಗ್ರ ಎನ್ನಿಸಿಕೊಂಡಿದ್ದ ಸುಖ್‌ದೋಲ್‌ನನ್ನು ಕೆನಡಾದ ವಿನ್ನಿಪೆಗ್‌ನಲ್ಲಿ(Winnipeg) ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಪಂಜಾಬ್‌ನ ಮೋಗಾ ಜಿಲ್ಲೆಯವನಾದ ಸುಖ್‌ದೋಲ್ 8 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ವೇಳೆಯೇ ಮಾದಕ ವಸ್ತು ವ್ಯಸನಿಯಾಗಿದ್ದ. ಬಳಿಕ ಹುದ್ದೆ ತೊರೆದು ಪಂಜಾಬ್‌ನಲ್ಲಿ ಹಲವು ದುಷ್ಕೃತ್ಯ ಎಸಗಿ 2017ರಲ್ಲಿ ಕೆನಡಾಕ್ಕೆ ಪರಾರಿಯಾಗಿದ್ದ.
ಅಲ್ಲಿ ಆತ ಗ್ಯಾಂಗ್‌ಸ್ಟರ್ ಮತ್ತು ಉಗ್ರರಾದ ಅರ್ಷ್ ದಲ್ಲಾ(Arsh Dalla), ಲಕ್ಕಿ ಪಟಿಯಾಲ್ (Lucky Patial), ಮಲೇಷ್ಯಾ ಮೂಲಕ ಗ್ಯಾಂಗ್‌ಸ್ಟರ್ ಜಾಕ್‌ಪಾಲ್ ಸಿಂಗ್ (Jakpal Singh) ಮೊದಲಾದ ಕ್ರಿಮಿನಲ್‌ಗಳ ಜೊತೆ ಸೇರಿಕೊಂಡು ಸುಲಿಗೆ, ದರೋಡೆ, ಸುಪಾರಿ ಹತ್ಯೆ ಮುಂತಾದ ಕೃತ್ಯಗಳನ್ನು ನಡೆಸುತ್ತಿದ್ದ. ಪಂಜಾಬ್‌ನಲ್ಲೂ ತನ್ನ ಜಾಲದ ಮೂಲಕ ಈತ ಕಾರ್ಯಾಚರಣೆ ನಡೆಸುತ್ತಿದ್ದ. ಕಳೆದ ಕೆಲ ತಿಂಗಳಿನಿಂದ ಈತನ ಗ್ಯಾಂಗ್‌ನಿಂದ ಬರುತ್ತಿದ್ದ ಸುಲಿಗೆ ಕರೆಗಳ ಸಂಖ್ಯೆ ಭಾರೀ ಏರಿಕೆ ಕಂಡಿತ್ತು.
ಕಳೆದ ಮಾರ್ಚ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಾಲ್ (Sandeep Nangal)ಹತ್ಯೆಯಲ್ಲೂ ಈತನ ಹೆಸರು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಬುಧವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಸುಖ್‌ದೋಲ್ ಸಾವನ್ನಪ್ಪಿದ್ದಾನೆ.