ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನ್ ಮತ್ತೊಮ್ಮೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಿಂದ ಇಂಧನ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದುಬೈ ವಿಮಾನ ನಿಲ್ದಾಣದ ಸಮೀಪ ಇರಾನ್ ಮತ್ತೆ ಡ್ರೋನ್ ದಾಳಿ

ಅಮೆರಿಕಾ ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಅರಬ್ ರಾಷ್ಟ್ರಗಳು ಅಕ್ಷರಶಃ ಪೀಕಲಾಟಕ್ಕೆ ಸಿಲುಕಿವೆ. ಇರಾನ್‌ ಮೇಲೆ ಅಮೆರಿಕಾ ಇಸ್ರೇಲ್ ಜಂಟಿಯಾಗಿ ದಾಳಿ ಆರಂಭಿಸಿದಾಗಿನಿಂದಲೂ ದುಬೈ ಬಹ್ರೈನ್, ಕತಾರ್ ಸೇರಿದಂತೆ ಅರಬ್‌ನ ಹಲವು ದೇಶಗಳ ಮೇಲೆ ಇರಾನ್ ಪದೇ ಪದೇ ಡ್ರೋನ್ ದಾಳಿ ನಡೆಸುತ್ತಿದ್ದು, ಆ ದೇಶಗಳ ಆರ್ಥಿಕತೆಯನ್ನು ಬುಡಮೇಲು ಮಾಡಿದೆ. ಸೌದಿ ರಾಷ್ಟ್ರಗಳ ಮೇಲೆ ಇರಾನ್ ಮತ್ತೆ ಡ್ರೋನ್ ದಾಳಿ ನಡೆಸಿದ್ದು, ಈ ಹೊಸ ದಾಳಿಯಿಂದ ದುಬೈ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.

Add Asianetnews Kannada as a Preferred SourcegooglePreferred

ದುಬೈ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ:

ಮಧ್ಯಪ್ರಾಚ್ಯ ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ 1,800 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ. ಸೋಮವಾರ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್‌ವೊಂದು ಇಂಧನ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ದುಬೈನ ತುರ್ತು ತಂಡಗಳ ತ್ವರಿತವಾಗಿ ಕಾರ್ಯಾಚರಿಸಿ ಬೆಂಕಿ ನಂದಿಸಿದ್ದು, ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಕಿಯನ್ನು ನಂದಿಸಲು ದುಬೈ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ತಕ್ಷಣವೇ ನಿಯೋಜಿಸಲಾಗಿದೆ ಮತ್ತು ಸುತ್ತಮುತ್ತಲು ಸುರಕ್ಷತಾ ಕ್ರಮಗಳನ್ನು ಸಕ್ರಿಯಗೊಳಿಸಲಾಗಿರುವುದರಿಂದ ಯಾವುದೇ ಗಾಯಗಳಾಗಿಲ್ಲ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (DXB) ಸಮೀಪದಲ್ಲಿ ನಡೆದ ಡ್ರೋನ್ ಸಂಬಂಧಿ ಘಟನೆಯು ಇಂಧನ ಟ್ಯಾಂಕ್‌ಗಳಲ್ಲಿ ಒಂದರ ಮೇಲೆ ಪರಿಣಾಮ ಬೀರಿತು ಎಂದು ದುಬೈ ಮಾಧ್ಯಮ ಕಚೇರಿ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಕಾಫಿ ಕುಡಿಯುತ್ತಾ ತನ್ನ ಸಾವಿನ ವದಂತಿಗೆ ಪ್ರತಿಕ್ರಿಯಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

ದುಬೈ ನಾಗರಿಕ ರಕ್ಷಣಾ ತಂಡಗಳು ತಕ್ಷಣ ಪ್ರತಿಕ್ರಿಯಿಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿವೆ ಎಂದು ಅದು ಹೇಳಿದೆ. ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದುಬೈ ಮಾಧ್ಯಮಕಚೇರಿ ದೃಢಪಡಿಸಿತು, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಇಂಧನ ಟ್ಯಾಂಕ್‌ಗಳಲ್ಲಿ ಒಂದಕ್ಕೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಉಂಟಾದ ಬೆಂಕಿಯನ್ನು ದುಬೈ ನಾಗರಿಕ ರಕ್ಷಣಾ ತಂಡಗಳು ಯಶಸ್ವಿಯಾಗಿ ನಿಯಂತ್ರಿಸಿವೆ. ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ಹೇಳಿದೆ.

ದುಬೈ ಸಿವಿಲ್ ಡಿಫೆನ್ಸ್‌ನ ತುರ್ತು ಪ್ರತಿಕ್ರಿಯೆ ತಂಡಗಳನ್ನು ತಕ್ಷಣವೇ ನಿಯೋಜಿಸಲಾಗಿದೆ ಮತ್ತು ಯಾವುದೇ ಗಾಯಗಳು ದಾಖಲಾಗಿಲ್ಲ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಅಲ್ಲಿನ ನಿವಾಸಿಗಳು, ಕಾರ್ಮಿಕರು ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ರಕ್ಷಿಸಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇರಾನ್ ಯುದ್ದ ಆರಂಭವಾದ ನಂತರ ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ಸಂಬಂಧಿ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ, ಇದು ಈ ಪ್ರದೇಶದ ನಿರ್ಣಾಯಕ ಮೂಲಸೌಕರ್ಯಗಳ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಿಸಿದೆ. ರಕ್ಷಣಾ ತಂಡಗಳು ತಮ್ಮ ಕೆಲಸವನ್ನು ಮುಂದುವರಿಸುತ್ತಿರುವುದರಿಂದ ಈ ಬಗ್ಗೆ ಹೊಸ ಅಪ್‌ಡೇಟ್‌ಗಳನ್ನು ಗಮನಿಸುವಂತೆ ಅವರು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಗನ ಮಾನಗೇಡಿ ಕೆಲಸಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ: ಮನನೊಂದು ನದಿಗೆ ಹಾರಿದ ತಾಯಿ

ಡ್ರೋನ್ ಘಟನೆಯ ನಂತರ ಸುರಕ್ಷತಾ ಕ್ರಮವಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಪ್ರಯಾಣಿಕರು ತಮ್ಮ ವಿಮಾನಗಳ ಕುರಿತು ಇತ್ತೀಚಿನ ಅಪ್‌ಡೇಟ್‌ಗಳಿಗೆ ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ. ಹೆಚ್ಚಿನ ಅಪ್‌ಡೇಟ್‌ಗಳುಉ ಲಭ್ಯವಾದ ತಕ್ಷಣ ಅಧಿಕೃತ ಮಾರ್ಗಗಳ ಮೂಲಕ ಘೋಷಿಸಲಾಗುವುದು ಎಂದು ದುಬೈ ಮಾಧ್ಯಮ ಕಚೇರಿ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೇಳಿದೆ.

Scroll to load tweet…

ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದಾಗಿನಿಂದ ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ 1,800 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದು, ಇರಾನ್ ಯುಎಇಯನ್ನು ಹೆಚ್ಚು ಗುರಿಯಾಗಿಸಿಕೊಂಡಿದೆ. ದೇಶದ ವಾಯು ರಕ್ಷಣಾ ವ್ಯವಸ್ಥೆಗಳು ಹೆಚ್ಚಿನ ಸ್ಪೋಟಗಳನ್ನು ತಡೆದಿದ್ದರೂ, ಈ ದಾಳಿಯು ಗಲ್ಫ್ ಆರ್ಥಕತೆಗೆ ಭಾರಿ ಹಾನಿಯುಂಟು ಮಾಡಿದೆ..

Scroll to load tweet…

ಅಮೆರಿಕ-ಇಸ್ರೇಲಿ ಪಡೆಗಳು ಇರಾನ್ ಮೇಲೆ ದಾಳಿ ಮಾಡಿದ ನಂತರ ಇರಾನ್ ಗಲ್ಫ್‌ನಾದ್ಯಂತ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ತೈಲ ಸೌಲಭ್ಯಗಳು ಸೇರಿದಂತೆ ಅಮೆರಿಕದ ಆಸ್ತಿಗಳು ಮತ್ತು ನಾಗರಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಸಂಘರ್ಷ ಪ್ರಾರಂಭವಾದಾಗಿನಿಂದ ಆರು ಸಾವುಗಳು ಸಂಭವಿಸಿವೆ ಎಂದು ಯುಎಇ ರಕ್ಷಣಾ ಸಚಿವಾಲಯ ವರದಿ ಮಾಡಿದೆ. ಇವರಲ್ಲಿ ನಾಲ್ಕು ನಾಗರಿಕರು ಮತ್ತು ಇಬ್ಬರು ಮಿಲಿಟರಿ ಸಿಬ್ಬಂದಿಯಾಗಿದ್ದಾರೆ.

Scroll to load tweet…