Asianet Suvarna News Asianet Suvarna News

ಇಸ್ರೇಲ್‌ ಯುದ್ಧ ಕಣಕ್ಕಿಳಿದ ಅಮೆರಿಕ: 100ಕ್ಕೂ ಹೆಚ್ಚು ಹಮಾಸ್‌ ನೆಲೆಗಳ ಮೇಲೆ ಅಟ್ಯಾಕ್

ಹಮಾಸ್‌ ಉಗ್ರರ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿ ತನ್ನ ಯುದ್ಧನೌಕೆಗಳನ್ನು ತಂದು ನಿಲ್ಲಿಸಿದ್ದ ಅಮೆರಿಕ, ಇದೇ ಮೊದಲ ಬಾರಿಗೆ ಯುದ್ಧ ಕಣಕ್ಕೆ ಇಳಿದಿದೆ. ಇಸ್ರೇಲ್‌ ಮೇಲೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಹಾರಿಸಿದ ಕ್ಷಿಪಣಿಗಳನ್ನು ಅಮೆರಿಕದ ಯುದ್ಧನೌಕೆಗಳು ಹೊಡೆದುರುಳಿಸಿದೆ.

US joins Israel war Israel attacks more than 100 Hamas bases In Gaza Strip akb
Author
First Published Oct 21, 2023, 10:51 AM IST

ಖಾನ್‌ ಯೂನಿಸ್ (ಗಾಜಾ ಪಟ್ಟಿ): ಹಮಾಸ್ ಉಗ್ರರ ನೆಲೆವೀಡಾಗಿರುವ ಗಾಜಾ ಮೇಲೆ ಯುದ್ಧದ 14ನೇ ದಿನವಾದ ಶುಕ್ರವಾರ ಭಾರಿ ವಾಯುದಾಳಿ ಮುಂದುವರಿಸಿರುವ ಇಸ್ರೇಲ್‌, ಪ್ಯಾಲೆಸ್ತೀನೀಯರು ಸುರಕ್ಷಿತ ಸ್ಥಳ ಅರಸಿ ತೆರಳಿದ್ದ ದಕ್ಷಿಣ ಗಾಜಾ ಮೇಲೂ ದಾಳಿ ಮಾಡಿದೆ. ಇದೇ ವೇಳೆ ಲೆಬನಾನ್‌ ಗಡಿ ಸನಿಹದ ಗಾಜಾದ ಪಟ್ಟಣವೊಂದನ್ನು ತೆರವು ಮಾಡುವಂತೆ ಅಲ್ಲಿನ ಜನರಿಗೆ ಸೂಚಿಸಿದೆ. ಇದರಿಂದಾಗಿ ಭೂದಾಳಿ ಮತ್ತಷ್ಟು ಸನ್ನಿಹಿತ ಎಂಬ ಸೂಚನೆ ನೀಡಿದೆ.

ಖಾನ್‌ ಯೂನಿಸ್‌ ದಕ್ಷಿಣ ಗಾಜಾ ನಗರವಾಗಿದ್ದು, ಇಲ್ಲಿ ಪ್ಯಾಲೆಸ್ತೀನೀಯರು ಸುರಕ್ಷಿತ ಸ್ಥಳ ಅರಸಿ ಹಮಾಸ್‌ ಉಗ್ರರ ತಾಣವಾದ ಉತ್ತರ ಗಾಜಾದಿಂದ ವಲಸೆ ಬಂದು ನೆಲೆಸಿದ್ದಾರೆ. ಆದರೆ ಇದರ ಮೇಲೂ ಇಸ್ರೇಲ್‌ ರಾಕೆಟ್‌ ದಾಳಿ ನಡೆಸಿದೆ. ಹೀಗಾಗಿ ಗಾಜಾದ 2ನೇ ಅತಿ ದೊಡ್ಡ ನಗರವಾದ ಇಲ್ಲಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ಇದರ ಬೆನ್ನಲ್ಲೇ ಇಸ್ರೇಲಿ ಸೇನಾ ವಕ್ತಾರ ನಿರ್‌ ದಿನಾರ್‌ ಹೇಳಿಕೆ ನೀಡಿ, ಇಲ್ಲಿ ಯಾವುದೂ ಸುರಕ್ಷಿತ ಸ್ಥಳಗಳಲ್ಲ ಎಂದಿದ್ದಾರೆ. ಇದರೊಂದಿಗೆ ದಕ್ಷಿಣ ಗಾಜಾದಲ್ಲೂ ಭಾರಿ ದಾಳಿಯ ಸುಳಿವು ನೀಡಿದ್ದಾರೆ.

ಭಾರತ ಎಚ್ಚರಿಕೆಯ ಬಳಿಕ ಸ್ವದೇಶಕ್ಕೆ ತೆರಳಿದ ಕೆನಡಾದ 41 ರಾಯಭಾರಿಗಳು

ಈ ನಡುವೆ ಹೇಳಿಕೆ ನೀಡಿರುವ ಇಸ್ರೇಲಿ ಸೇನೆ, ‘ಶುಕ್ರವಾರ ಹಮಾಸ್‌ ನಿಯಂತ್ರಣದ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ವಾಯುದಾಳಿ ನಡೆಸಲಾಗಿದೆ. ಇವುಗಳಲ್ಲಿ ಹಮಾಸ್‌ ಗುಹೆಗಳು ಹಾಗೂ ಶಸ್ತ್ರಾಗಾರಗಳೂ ಸೇರಿವೆ’ ಎಂದಿದೆ. ಗುರುವಾರ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲೆಂಟ್‌ ಅವರು ತಮ್ಮ ಭೂಸೇನಾ ದಳಕ್ಕೆ ಸಿದ್ಧಸ್ಥಿತಿಯಲ್ಲಿ ಇರಿ ಎಂದು ಸೂಚಿಸಿದ್ದರು. ಆಗಲೇ ಭೂದಾಳಿ ಸನ್ನಿಹಿತ ಎಂದು ಭಾವಿಸಲಾಗಿತ್ತು. ಇದಕ್ಕೆ ಪೂರಕವಾಗಿ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಪ್ರಭಾವ ಇರುವ ಗಾಜಾದ ಪಟ್ಟಣವೊಂದರ ತೆರವಿಗೆ ಸೂಚಿಸಲಾಗಿದೆ.

ಈ ನಡುವೆ ಗಾಜಾದಲ್ಲಿನ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಆಹಾರಕ್ಕೂ ಆರ್ತನಾದ ಕೇಳಿ ಬರುತ್ತಿದೆ. ಹೀಗಾಗಿ ವಿಶ್ವಸಂಸ್ಥೆಯ ಆಗ್ರಹದ ಮೇರೆಗೆ ವಾಯುದಾಳಿಗೆ ಒಳಗಾಗಿ ಹಾಳಾದ ಕೆಲವು ಗಡಿ ರಸ್ತೆ ದುರಸ್ತಿಯನ್ನು ಪ್ಯಾಲೆಸ್ತೀನಿ ಸರ್ಕಾರ ಕೈಗೊಂಡಿದೆ. ಈ ಮೂಲಕ ಗಡಿಯಲ್ಲಿ ಕಾಯುತ್ತಿರುವ ನೂರಾರು ವಿಶ್ವಸಂಸ್ಥೆ ಪರಿಹಾರ ಟ್ರಕ್‌ಗಳಿಗೆ ಗಾಜಾ ಪ್ರವೇಶಿಸಲು ಅನುವು ಮಾಡಿಕೊಡಲಾಗುತ್ತಿದೆ.

ಸುಮ್ನೆ ಅಲ್ಲ ಹಿಟ್ಲರ್‌ ಯಹೂದಿಗಳ ಮರಣಹೋಮ ಮಾಡಿದ್ದು ಎಂದ ಬ್ಯಾಂಕ್ ಉದ್ಯೋಗಿ ಮನೆಗೆ

ಇಸ್ರೇಲ್‌ ಯುದ್ಧ ಕಣಕ್ಕಿಳಿದ ಅಮೆರಿಕ

ಹಮಾಸ್‌ ಉಗ್ರರ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ಗೆ ಬೆಂಬಲ ಘೋಷಿಸಿ ತನ್ನ ಯುದ್ಧನೌಕೆಗಳನ್ನು ತಂದು ನಿಲ್ಲಿಸಿದ್ದ ಅಮೆರಿಕ, ಇದೇ ಮೊದಲ ಬಾರಿಗೆ ಯುದ್ಧ ಕಣಕ್ಕೆ ಇಳಿದಿದೆ. ಇಸ್ರೇಲ್‌ ಮೇಲೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಹಾರಿಸಿದ ಕ್ಷಿಪಣಿಗಳನ್ನು ಅಮೆರಿಕದ ಯುದ್ಧನೌಕೆಗಳು ಹೊಡೆದುರುಳಿಸಿದೆ. ಗುರುವಾರ ಮಧ್ಯಪ್ರಾಚ್ಯದ ಯೆಮೆನ್‌ ಸಮುದ್ರದ ಬಳಿ ‘ಹೌತಿ’ ಉಗ್ರಗಾಮಿಗಳು ಉಡಾಯಿಸಿದ ಮೂರು ಭೂ ದಾಳಿ ಕ್ಷಿಪಣಿಗಳು ಮತ್ತು ಹಲವಾರು ಡ್ರೋನ್‌ಗಳನ್ನು ಅಮೆರಿಕದ ಯುದ್ಧನೌಕೆ ಯಶಸ್ವಿಯಾಗಿ ವಿಫಲಗೊಳಿಸಿದೆ. ಉತ್ತರ ಯೆಮೆನ್‌ ಮೇಲೆ ತಮ್ಮ ನಿಯಂತ್ರಣ ಹೊಂದಿರುವ ಹೌತಿ ಉಗ್ರಗಾಮಿಗಳು ಇಸ್ರೇಲ್‌ ವಿರೋಧಿ ರಾಷ್ಟ್ರವಾಗಿರುವ ಇರಾನಿನ ಬೆಂಬಲದಿಂದ ದಾಳಿ ನಡೆಸಿದ್ದಾರೆ. 

900 ವರ್ಷಗಳ ಇತಿಹಾಸ ಚರ್ಚ್‌ಗೆ ಬಾಂಬ್‌ ಎಸೆದ ಇಸ್ರೇಲ್‌, ಗಾಜಾದಲ್ಲಿ 4 ಸಾವಿರದ ಗಡಿ ಮುಟ್ಟಿದ ಸಾವು!

ತನ್ನನ್ನು ಕಾಪಾಡಿಕೊಳ್ಳುತ್ತಿರುವ ಇಸ್ರೇಲ್‌ಗೆ ನಮ್ಮ ಬೆಂಬಲ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಟೆಲ್‌ ಅವಿವ್‌: ಬ್ರಿಟನ್‌ ಜನತೆ ಇಸ್ರೇಲ್‌ ಜೊತೆ ಇದ್ದಾರೆ. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಡುತ್ತಿರುವ ಕಾರ್ಯಕ್ಕೆ ನಮ್ಮ ಬೆಂಬಲ ಇದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬಳಿಕ ಇಸ್ರೇಲ್‌ಗೆ ಆಗಮಿಸಿರುವ ರಿಷಿ, ಇಸ್ರೇಲ್ ದೇಶವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು,‘ಇಸ್ರೇಲ್‌ ನಾಗರಿಕರಿಗೆ ಯಾವುದೇ ರೀತಿಯಲ್ಲೂ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದೆ. ಜೊತೆಗೆ ಪರಿಹಾರ ತಲುಪಲು ಆಸ್ಪದ ಮಾಡಿಕೊಟ್ಟಿದೆ. ಇಲ್ಲಿನ ಜನರು ಭಯೋತ್ಪಾದನೆಯ ತೀವ್ರತೆಯನ್ನು ಅನುಭವಿಸಿದ್ದಾರೆ. ನಿಮ್ಮೊಂದಿಗೆ ಬ್ರಿಟನ್‌ ಹಾಗೂ ನಾನು (ರಿಷಿ ಸುನಕ್‌) ಸದಾ ಇದ್ದೇವೆ’ ಎಂದರು.

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ

Follow Us:
Download App:
  • android
  • ios