ನೀಲಿ ಕಣ್ಣು ತೆಳ್ಳಗೆ ಬೆಳ್ಳಗೆ... ಆಟಗಾರರ ತಾಳಕ್ಕೆ ಕುಣಿದ ಯುನೈಟೆಡ್ ಏರ್‌ಲೈನ್ಸ್ : ಕೇಸ್ ಜಡಿದ ಗಗನಸಖಿಯರು..!
ಕೇವಲ ಬಿಳಿ ಬಣ್ಣದ ನವ ತರುಣಿಯರಿಗೆ ಮಾತ್ರ ವಿಮಾನದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಅಥವಾ ಗಗನಸಖಿಯರಾಗಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿ ಇಬ್ಬರು ಗಗನಸಖಿಯರು ಯುಎಸ್ ಏರ್‌ಲೈನ್ಸ್ ವಿರುದ್ಧ ದೂರು ನೀಡಿದ್ದಾರೆ.
ಅಮೆರಿಕಾದ ಏರ್‌ಲೈನ್ಸ್ ವಿರುದ್ಧ ಇಬ್ಬರು ಗಗನಸಖಿಯರು ಕೇಸ್ ದಾಖಲಿಸಿದ್ದಾರೆ. ಕೇವಲ ಬಿಳಿ ಬಣ್ಣದ ನವ ತರುಣಿಯರಿಗೆ ಮಾತ್ರ ವಿಮಾನದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಅಥವಾ ಗಗನಸಖಿಯರಾಗಿ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿ ಇಬ್ಬರು ಗಗನಸಖಿಯರು ಯುಎಸ್ ಏರ್‌ಲೈನ್ಸ್ ವಿರುದ್ಧ ದೂರು ನೀಡಿದ್ದಾರೆ.
ವೃತ್ತಿಪರ ಮತ್ತು ಕಾಲೇಜು ಕ್ರೀಡಾ ತಂಡ ಪ್ರಯಾಣಿಸುವ ಚಾರ್ಟೆಡ್ ಫ್ಲೈಟ್‌ನಲ್ಲಿ ಪರಿಚಾರಿಕೆಯರಾಗಿ ಕೆಲಸ ಮಾಡುವುದಕ್ಕೆ ಕೇವಲ ಬಿಳಿ ಬಣ್ಣದ, ಕಡಿಮೆ ವಯಸ್ಸಿನ ಹಾಗೂ ನಿರ್ದಿಷ್ಟ ದೇಹ ಸೌಂದರ್ಯವನ್ನು ಹೊಂದಿರುವವರಿಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂದು ಈ ಗಗನಸಖಿಯರು ಆರೋಪಿಸಿದ್ದಾರೆ. ಏರ್‌ಲೈನ್ಸ್ ವಿರುದ್ಧ ಇಲಿನೊಯ್ಸ್‌ನ ಚಿಕಾಗೋದಲ್ಲಿ ತಾರತಮ್ಯ ತೋರಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ದಾಳಿಂಬೆ ಜ್ಯೂಸ್‌ನಲ್ಲಿ ಬಾಂಬ್: ಆರ್ಡರ್ ಮಾಡಿದವನ ಎಳೆದೊಯ್ದ ಪೊಲೀಸರು
ಲಾಸ್ ಏಂಜಲೀಸ್ ಟೈಮ್ಸ್ ಪ್ರಕಾರ, ಯುನೈಟೆಡ್ ಏರ್‌ಲೈನ್ಸ್‌ನ ಇಬ್ಬರು ಪರಿಚಾರಿಕೆಯರನ್ನು (ಗಗನಸಖಿಯರು) ಲಾಸ್ ಏಂಜಲೀಸ್ ಡಾಡ್ಜರ್ಸ್ ಬೇಸ್‌ಬಾಲ್ ತಂಡಕ್ಕಾಗಿ ಚಾರ್ಟರ್ ಫ್ಲೈಟ್‌ಗಳಲ್ಲಿ ಕೆಲಸ ಮಾಡುವುದಕ್ಕಾಗಿ ನಿಯೋಜಿಸಲಾಗಿತ್ತು. ಆದರೆ ಈ ಫ್ಲೈಟ್‌ನಲ್ಲಿ ಪ್ರಯಾಣಿಸುವ ಆಟಗಾರರು, ತಮ್ಮ ಫ್ಲೈಟ್‌ನಲ್ಲಿರುವ ಗಗನಸಖಿಯರು, ಸುಂದರವಾಗಿರಬೇಕು, ನೀಲಿ ಕಂಗಳನ್ನು ಹೊಂದಿರಬೇಕು, ಕಡಿಮೆ ವಯಸ್ಸಿನವರಾಗಿರಬೇಕು, ನೋಡಲು ಬಹಳ ಆಕರ್ಷಕವಾಗಿರಬೇಕು ಹೀಗಿರಬೇಕು ಹಾಗಿರಬೇಕು ಎಂದೆಲ್ಲಾ ಗಗನಸಖಿಯರಿಗೆ ಸೌಂದರ್ಯದ ಮಾನದಂಡವನ್ನು ಹೇಳಿ ಏರ್‌ಲೈನ್ಸ್‌ಗೆ ಬೇಡಿಕೆ ಇಟ್ಟಿದ್ದರಿಂದ ನಮ್ಮನ್ನು ಆ ಫ್ಲೈಟ್‌ನಲ್ಲಿ ಕಾರ್ಯ ನಿಯೋಜನೆಯಿಂದ ಬೇರೆಡೆ ಸ್ಥಳಾಂತರಿಸಲಾಯಿತು ಎಂದು ಇಬ್ಬರು ಗಗನಸಖಿಯರು (flight attendant) ದೂರು ನೀಡಿದ್ದಾರೆ. ಹೀಗಾಗಿ ಈಗ ಆಟಗಾರರ ತಾಳಕ್ಕೆ ಕುಣಿದ ಯುನೈಟೆಡ್ ಏರ್‌ಲೈನ್ಸ್ ಈಗ ಸಂಕಷ್ಟಕ್ಕೀಡಾಗಿದೆ.
ಬಂಗಾಳದಿಂದ ಬಾಂಗ್ಲಾ ಮೂಲಕ ತ್ರಿಪುರಾಗೆ ರೈಲು: 38 ಗಂಟೆಯ ಪ್ರಯಾಣ ಈಗ 12ಕ್ಕೆ ಇಳಿಕೆ
ಯುನೈಟೆಡ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 50 ವರ್ಷ ವಯಸ್ಸಿನ ಡಾನ್ ಟಾಡ್ ಮತ್ತು 44 ವರ್ಷ ವಯಸ್ಸಿನ ಡಾರ್ಬಿ ಕ್ವೆಜಾಡಾ ಎಂಬುವವರೇ ಹೀಗೆ ಏರ್‌ಲೈನ್ಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗಗನಸಖಿಯರು. ಯುವ ಹಾಗೂ ಸಣ್ಣಗಿರುವ ಹುಡುಗಿಯರು ಬೇಕು ಎಂದು ಕೇಳಿದ ಕಾರಣ ಏರ್‌ಲೈನ್ಸ್ ನಮ್ಮನ್ನು ಈ ವಿಮಾನದಿಂದ ಹೊರಗಿಟ್ಟಿದೆ ಎಂದು ಈ ಗಗನಸಖಿಯರು ದೂರಿದ್ದಾರೆ.
ಹಮಾಸ್ ಜತೆ ಕೈಜೋಡಿಸಿದ ಹೌಥಿ ಉಗ್ರರು: ಇಸ್ರೇಲ್ ಮೇಲೆ ಡ್ರೋನ್, ಕ್ಷಿಪಣಿ ದಾಳಿ
ಲಾಸ್ ಏಂಜಲೀಸ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಅಕ್ಟೋಬರ್ 25 ರಂದು ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ. ದೂರಿನಲ್ಲಿ ಯುನೈಟೆಡ್‌ನ ಚಾರ್ಟರ್ ಫ್ಲೈಟ್‌ಗಳ ಸಿಬ್ಬಂದಿಗೆ ಸಂಬಂಧಿಸಿದಂತೆ ಜನಾಂಗ, ರಾಷ್ಟ್ರೀಯತೆ ಮೂಲ, ಧರ್ಮ ಮತ್ತು ವಯಸ್ಸಿನ ಆಧಾರದ ಮೇಲೆ ಕಿರುಕುಳ ಹಾಗೂ ತಾರತಮ್ಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗೆಳತಿ ಜಾಸ್ಮಿನ್ ಜೊತೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ನಿಶ್ಚಿತಾರ್ಥ
ಕಳೆದ 15 ವರ್ಷಗಳಿಂದಲೂ ಈ ಇಬ್ಬರೂ ಮಹಿಳೆಯರು ಯುನೈಟೆಡ್ ಏರ್‌ಲೈನ್ಸ್‌ಗಾಗಿ ಕೆಲಸ ಮಾಡುತ್ತಿದ್ದಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಇದೇ ಏರ್‌ಲೈನ್ಸ್‌ನಿಂದ ನಿರ್ವಹಿಸಲ್ಪಡುವ ಚಾರ್ಟರ್ ಫ್ಲೈಟ್‌ನಲ್ಲಿ ಕೆಲಸ ಮಾಡುವುದಕ್ಕಾಗಿ ಕಳೆದೊಂದು ದಶಕದಿಂದಲೂ ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಏಕೆಂದರೆ ಇದರಲ್ಲಿ ಕೆಲಸ ಮಾಡುವ ಫ್ಲೈಟ್ ಅಟೆಂಡೆಂಟ್‌ಗಳಿಗೆ ಇತರ ಫ್ಲೈಟ್‌ಗಳಲ್ಲಿ ನೀಡುವುದಕ್ಕಿಂತ ಹೆಚ್ಚು ಆದಾಯವನ್ನು ನೀಡುತ್ತದೆ. ಆದರೆ ತಾವು ಬೆಳ್ಳಗಿಲ್ಲ ಎಂಬ ಕಾರಣ ನೀಡಿ ತಮ್ಮನ್ನು ಈ ಸೇವೆಯಿಂದ ತಡೆ ಹಿಡಿಯಲಾಗಿದೆ ಎಂದು ಇಬ್ಬರು ಗಗನಸಖಿಯರು ದೂರಿದ್ದಾರೆ.
ಹಂದಿಯ ಹೃದಯ ಕಸಿಗೊಳಗಾಗಿ ಬದುಕಿದ್ದ ವ್ಯಕ್ತಿ 40 ದಿನದ ಬಳಿಕ ಸಾವು