ಗೂಗಲ್‌ ಮ್ಯಾಪ್‌ ಬಳಸಿ ಕಾರು ಚಲಾಯಿಸಿ ಇಬ್ಬರು ಕೆರೆಗೆ ಬಿದ್ದು ಪ್ರಾಣ ಬಿಟ್ಟ ಘಟನೆ ಇತ್ತೀಚೆಗೆಷ್ಟೇ ಹೊರದೇಶವೊಂದರಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಮೊದಲೇ ಈಗ ಟ್ರಾನ್ಸ್‌ಲೇಷನ್‌ ಆಪ್ ಬಳಸಿ ವಿದೇಶವೊಂದರಲ್ಲಿ ದಾಳಿಂಬೆ ಜ್ಯೂಸ್‌ ಆರ್ಡರ್ ಮಾಡಿದವರನೋರ್ವನನ್ನು ಪೊಲೀಸರು ಬಂಧಿಸಿ ಕರೆದೊಯ್ದ ಘಟನೆ ಲಿಸ್ಬನ್‌ನಲ್ಲಿ ನಡೆದಿದೆ. ಭಾಷೆಯ ಗೊಂದಲದಿಂದಲೇ ಈ ಅವಾಂತರ ನಡೆದಿದೆ.

ಗೂಗಲ್‌ ಮ್ಯಾಪ್‌ ಬಳಸಿ ಕಾರು ಚಲಾಯಿಸಿ ಇಬ್ಬರು ಕೆರೆಗೆ ಬಿದ್ದು ಪ್ರಾಣ ಬಿಟ್ಟ ಘಟನೆ ಇತ್ತೀಚೆಗೆಷ್ಟೇ ಹೊರದೇಶವೊಂದರಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಮೊದಲೇ ಈಗ ಟ್ರಾನ್ಸ್‌ಲೇಷನ್‌ ಆಪ್ ಬಳಸಿ ವಿದೇಶವೊಂದರಲ್ಲಿ ದಾಳಿಂಬೆ ಜ್ಯೂಸ್‌ ಆರ್ಡರ್ ಮಾಡಿದವರನೋರ್ವನನ್ನು ಪೊಲೀಸರು ಬಂಧಿಸಿ ಕರೆದೊಯ್ದ ಘಟನೆ ಲಿಸ್ಬನ್‌ನಲ್ಲಿ ನಡೆದಿದೆ. ಭಾಷೆಯ ಗೊಂದಲದಿಂದಲೇ ಈ ಅವಾಂತರ ನಡೆದಿದೆ.

ಪ್ರತಿ 3 ಕಿಲೋಮೀಟರ್‌ಗೆ ಭಾಷೆಗಳು ಬಳಸುವ ವಿಧಾನ ಬದಲಾಗುತ್ತದೆ. ನಮ್ಮ ಕನ್ನಡವನ್ನೇ ಒಂದೊಂದು ಪ್ರದೇಶದ ಜನ ಒಂದೊಂದು ರೀತಿ ಮಾತನಾಡುತ್ತಾರೆ. ಅದರ ಜೊತೆಗೆ ಪದ ಬಳಕೆಯೂ ಕೂಡ, ಕೆಲವು ಬೈಗುಳಗಳ ಪದಗಳನ್ನು ಕೂಡ ಕೆಲವೆಡೆ ಬಹಳ ಸಲೀಸಾಗಿ ಸಾಮಾನ್ಯ ಎಂಬಂತೆ ಬಳಸುತ್ತಾರೆ. ಆದರೆ ಅದೇ ಬೈಗುಳಗಳನ್ನು ಊರು ಬಿಟ್ಟು ಇನ್ನಾವುದೋ ಊರಿನಲ್ಲಿ ಬಳಸಿದರೆ ಏಟು ತಿನ್ನುವುದಂತೂ ಗ್ಯಾರಂಟಿ, ನಮ್ಮೂರಲ್ಲಿ ನಮಗೆ ಸಾಮಾನ್ಯ ವಿಷಯ ಎನಿಸಿದ್ದು, ಬೇರೆ ಊರಿಗೆ ಹೋದಾಗ ಬೇರೆಯದೇ ಮಹತ್ವ ಪಡೆಯುತ್ತದೆ. ಇದೇ ಕಾರಣಕ್ಕೆ ಒಂದು ಪ್ರದೇಶಕ್ಕೆ ನಾವು ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯರೊಂದಿಗೆ ಬೆರೆತು ಅಲ್ಲಿನ ಭಾಷೆ ಕಲಿತಾಗ ಮಾತ್ರ ಸಲ್ಲಿಸಾಗಿ ಬದುಕಲು ಸಾಧ್ಯ. ಯಾರ ಜೊತೆ ಏಕೆ ಮಾತನಾಡಲಿ ಹೊಸ ಭಾಷೆ ಏಕೆ ಕಲಿಯಲಿ. ಅಗತ್ಯ ಬಂದ್ರೆ ಟ್ರಾನ್ಸ್‌ಲೇಷನ್ ಆಪ್ ಇದೆ ಎಂದು ಕೊಬ್ಬು ಆಡುತ್ತಾ ತಂತ್ರಜ್ಞಾನವನ್ನೇ ದೇವರಾಗಿಸಲು ಹೊರಟರೇ ಏಟಿನ ಜೊತೆ ಜೇಬಿಗೂ ಕತ್ತರಿ ಬೀಳುವುದು ಮಾತ್ರ ಪಕ್ಕ. ಹಾಗೆಯೇ ಇಲ್ಲೊಂದು ಕರೆ ಸ್ಥಳೀಯ ಭಾಷೆ ಅರಿಯದ ಯುವಕನೋರ್ವ ಟ್ರಾನ್ಸ್‌ಲೇಷನ್ ಆಪ್ ಬಳಸಿ ದಾಳಿಂಬೆ ಜ್ಯೂಸ್‌ ಆರ್ಡರ್‌ ಮಾಡಿದ್ದಾನೆ. ಆದರೆ ಅಂಗಡಿ ಮಾಲೀಕ ಮಾತ್ರ ಪೊಲೀಸರಿಗೆ ಕರೆ ಮಾಡಿದ್ದಾನೆ. 

ಹಮಾಸ್‌ ಜತೆ ಕೈಜೋಡಿಸಿದ ಹೌಥಿ ಉಗ್ರರು: ಇಸ್ರೇಲ್ ಮೇಲೆ ಡ್ರೋನ್‌, ಕ್ಷಿಪಣಿ ದಾಳಿ

ಹಾಗಾದರೆ ಅಲ್ಲಾಗಿದ್ದೇನು? 

ಪೋರ್ಚುಗಲ್‌ನ ಲಿಸ್ಬನ್‌ಗೆ ಪ್ರವಾಸ ಬಂದಿದ್ದ, 36 ವರ್ಷ ಪ್ರಾಯದ ರಷ್ಯನ್ ಭಾಷೆ (Russian Language) ಮಾತನಾಡುವ ಅಜೆರ್ಬಿಜನ್‌ ಮೂಲದ ಪ್ರವಾಸಿಗರೊಬ್ಬರಿಗೆ ಅಲ್ಲಿ ದಾಳಿಂಬೆ ಜ್ಯೂಸ್ ಕುಡಿಯುವ ಮನಸ್ಸಾಗಿದ್ದು, ಅಲ್ಲಿನ ಹೊಟೇಲೊಂದಕ್ಕೆ ತೆರಳಿದ ಅವರು ಸ್ಥಳೀಯ ಭಾಷೆ ಗೊತ್ತಿಲ್ಲದ ಕಾರಣ ಟ್ರಾನ್ಸ್ಲೇಷನ್ ಆಪ್‌ ಬಳಸಿ ಜ್ಯೂಸ್‌ ಆರ್ಡರ್‌ ಮಾಡಿದ್ದಾರೆ. ಆದರೆ ಆ ಟ್ರಾನ್ಸ್‌ಲೇಷನ್ ಆಪ್ ಅವರಿಗೆ ತಪ್ಪಾಗಿ ಭಾಷಾಂತರ ಒದಗಿಸಿದೆ. ಆದರೆ ಇದರ ಅರಿವಿರದ ಆತ ಟ್ರಾನ್ಸ್‌ಲೇಷನ್ ಆಪ್ (Translation App) ನೀಡಿದ ಪದ ಬಳಸಿ, ಪೊಮೋಗ್ರಾನೆಟ್ (ದಾಳಿಂಬೆ) ಜ್ಯೂಸ್‌ ಅನ್ನು ಪೋರ್ಚುಗೀಸ್ ಭಾಷೆಯಲ್ಲಿ ಆರ್ಡರ್‌ ಮಾಡಲು ಆತ ಗ್ರೇನೆಡ್ ಎಂದು ಕೇಳಿದ್ದಾನೆ. ಆದರೆ ಅಲ್ಲಿನ ವೈಟರ್ ಈತ ಗ್ರೇನೇಡ್‌ ಎಂದು ಹೇಳಿ ತನಗೆ ಬಾಂಬ್ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ಸೀದಾ ಪೊಲೀಸರಿಗೆ ಕರೆ ಮಾಡಿದ್ದಾನೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. 

ಗೆಳತಿ ಜಾಸ್ಮಿನ್‌ ಜೊತೆ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ನಿಶ್ಚಿತಾರ್ಥ

ಲಿಸ್ಬೆನ್‌ನ ರೆಸ್ಟೋರೆಂಟ್‌ನ ಹೊರಗಿನ ಕಾರ್‌ಪಾರ್ಕ್‌ ಬಳಿ ಸೆರೆಯಾದ ವೀಡಿಯೋದಲ್ಲಿ ಐದು ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳು, ಈ ರಷ್ಯನ್‌ ಪ್ರವಾಸಿಗನಿಗೆ ಕೈಕೋಳ ತೊಡಿಸುತ್ತಿರುವುದು ಕಂಡು ಬಂದಿದೆ. ನಂತರ ಈತನನ್ನು ಅಲ್ಲಿನ ಪೊಲೀಸರು ವಿಚಾರಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ನಂತರ ಆತನ ಬಳಿ ಯಾವುದೇ ಆಯುಧಗಳು ಇಲ್ಲದ ಕಾರಣ ವಿಚಾರಣೆ ನಡೆಸಿ ಪೊಲೀಸರು ಆತನನ್ನು ಬಿಡುಗಡೆಗೊಳಿಸಿದ್ದಾರೆ. ಇದಕ್ಕೂ ಮೊದಲು ಪೊಲೀಸರು ಆತ ವಾಸವಿದ್ದ ಹೊಟೇಲ್‌ನಲ್ಲಿ ಕೂಡ ಪರಿಶೀಲನೆ ನಡೆಸಿದ್ದಾರೆ.

ಹೆಣ್ಣಿನಂತೆ ಅಳು, ರಕ್ಷಿಸುವಂತೆ ಮೊರೆ: ಪಕ್ಕದ ಮನೆಯವರು ನೀಡಿದ ದೂರು ಕೇಳಿ ಮನೆಗೆ ಬಂದ ಪೊಲೀಸರೇ ಶಾಕ್‌?

ಆವರಣದ ಸಂಪೂರ್ಣ ತಪಾಸಣೆ ನಡೆಸುವ ಮೊದಲೇ ಆತ ಅಲ್ಲಿಂದ ಹೊರಡಲು ಮುಂದಾದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಯ್ತು ಎಂದು ಅಲ್ಲಿನ ಪೊಲೀಸ್ ವಕ್ತಾರರು ಹೇಳಿದ್ದಾರೆ. ನಂತರ ಲಿಸ್ಬನ್ ಪೊಲೀಸರು ತಮ್ಮ ಡೇಟಾಬೇಸ್‌ ನೆರವಿನಿಂದ ಹುಡುಕಾಟವನ್ನು ನಡೆಸಿದರು ಮತ್ತು ಪೋರ್ಚುಗಲ್‌ನ ಭಯೋತ್ಪಾದನಾ ವಿರೋಧಿ ಸಮನ್ವಯ ಘಟಕವನ್ನೂ ಕೂಡ ಸಂಪರ್ಕಿಸಿದರು, ಆದರೆ ಅಲ್ಲಿ ಏನೂ ಕಂಡುಬಾರದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆಗೊಳಿಸಿದರು.

ರಷ್ಯಾದ ಭಾಷೆಯಲ್ಲಿ ದಾಳಿಂಬೆ ಮತ್ತು ಗ್ರೆನೇಡ್ ಪದಗಳು ಒಂದೇ ಅಂತೆ ಆದರೆ ಪೋರ್ಚುಗೀಸ್‌ನ ಸ್ಥಳೀಯ ಭಾಷೆಯಲ್ಲಿ ಅವೆರಡು ಪ್ರತ್ಯೇಕ ಪದಗಳಾಗಿವೆ (ಪೋರ್ಚುಗೀಸ್‌ ಭಾಷೆಯಲ್ಲಿ ರೋಮಾ ಎಂದರೆ ದಾಳಿಂಬೆ ಮತ್ತು ಗ್ರೆನಡಾ ಎಂದರೆ ಗ್ರೆನೇಡ್‌) ಹೀಗಾಗಿ ಭಾಷಾಂತರ ಆಪ್‌ನ ಅವಾಂತರದಿಂದಾಗಿ ಪ್ರವಾಸಿಗ ಇಲ್ಲಿ ಸಂಕಷ್ಟಕ್ಕೀಡಾಗಿದ್ದಾನೆ. 

ಒಟ್ಟಿನಲ್ಲಿ ಈ ಘಟನೆ ಸ್ಥಳೀಯ ಭಾಷೆ ಹಾಗೂ ಸ್ಥಳೀಯ ಜ್ಞಾನದ ಬಗ್ಗೆ ಅರಿವು ಎಷ್ಟು ಮಹತ್ವದು ಎಂಬುದನ್ನು ತೋರಿಸಿಕೊಟ್ಟಿದೆ. ಹೀಗಾಗಿ ನಾವು ಯಾವ ಪ್ರದೇಶಕ್ಕೆ ಹೋದರೂ ಆ ಪ್ರದೇಶದ ಭಾಷೆಯನ್ನು ಕಲಿಯಬೇಕು ಅಥವಾ ಕಲಿಯಲು ಪ್ರಯತ್ನ ಮಾಡಬೇಕು. ಕಲಿತರೆ ನಮಗೆ ಒಳ್ಳೇದು ಕಲಿದಿದ್ರು ನಮ್ಗೆ ನಷ್ಟ. ಕನ್ನಡಿಗರಾದ ನಮಗೆ ಬೇರೆ ಭಾಷೆ ಕಲಿಯುವುದಕ್ಕೆ ಹೇಳಿ ಕೊಡಬೇಕಾಗಿಲ್ಲ ಬಿಡಿ..! ಆದರೂ ಟ್ರಾನ್ಸ್‌ಲೇಷನ್‌ ಆಫ್‌ ಬಳಸುವಾಗ ಸ್ವಲ್ಪ ಯೋಚಿಸುವುದೊಳಿತು.