ಬಂಗಾಳದಿಂದ ಬಾಂಗ್ಲಾ ಮೂಲಕ ತ್ರಿಪುರಾಗೆ ರೈಲು: 38 ಗಂಟೆಯ ಪ್ರಯಾಣ ಈಗ 12ಕ್ಕೆ ಇಳಿಕೆ
- ಅಖೌರಾ-ಅಗರ್ತಲಾ ಲಿಂಕ್ ಯೋಜನೆಗೆ ಮೋದಿ, ಹಸೀನಾ ಚಾಲನೆ
- ಇದರಿಂದ ಕೋಲ್ಕತಾ-ಅಗರ್ತಲಾ ಪ್ರಯಾಣ ಅವಧಿ 38 ತಾಸಿಂದ 12 ತಾಸಿಗೆ ಇಳಿಕೆ
- ಈಗ ಅಸ್ಸಾಂ ಮೂಲಕ ಕೋಲ್ಕತಾ-ಅಗರ್ತಲಾ ರೈಲು ಪ್ರಯಾಣಕ್ಕೆ 38 ತಾಸು ಬೇಕು
ಪಿಟಿಐ ಅಗರ್ತಲಾ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಬುಧವಾರ ಜಂಟಿಯಾಗಿ ವರ್ಚುವಲ್ ವಿಧಾನದಲ್ಲಿ ಎರಡೂ ದೇಶಗಳ ನಡುವಿನ 3 ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲಿ ತ್ರಿಪುರಾದ ನಿಶ್ಚಿಂತಪುರ (Nishchintapur) ಮತ್ತು ನೆರೆಯ ದೇಶದ ಗಂಗಾಸಾಗರ (Gangasagar) ನಡುವಿನ ಅಖೌರಾ-ಅಗರ್ತಲಾ ರೈಲ್ವೆ ಲಿಂಕ್ ಯೋಜನೆ ಪ್ರಮುಖವಾಗಿದೆ. ಇದು ತ್ರಿಪುರಾವನ್ನು ಕೋಲ್ಕತಾಗೆ ಇನ್ನಷ್ಟು ಹತ್ತಿರ ಮಾಡಲಿದೆ.
ಮೋದಿ ಮತ್ತು ಹಸೀನಾ ಉದ್ಘಾಟಿಸಿದ ಇತರ ಎರಡು ಯೋಜನೆಗಳೆಂದರೆ, 65 ಕಿ.ಮೀ. ಖುಲ್ನಾ-ಮೊಂಗ್ಲಾ ಪೋರ್ಟ್ ರೈಲು ಮಾರ್ಗ (Khulna-Mongla Port railway line) ಮತ್ತು ಬಾಂಗ್ಲಾದೇಶದ ರಾಂಪಾಲ್‌ನಲ್ಲಿ ಭಾರತದ ಸಹಯೋಗದಲ್ಲಿ ನಿರ್ಮಿಸಲಾಗಿರುವ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ಲಾಂಟ್‌ನ 2ನೇ ಘಟಕ. ಈ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, 'ರೈಲ್ ಲಿಂಕ್ ಯೋಜನೆಯು ಐತಿಹಾಸಿಕವಾಗಿದ್ದು, ಇದು ಭಾರತ-ಬಾಂಗ್ಲಾದೇಶ ನಡುವಿನ ಮೊದಲ ರೈಲು ಲಿಂಕ್ ಯೋಜನೆ ಆಗಿದೆ' ಎಂದರು.
ಹಮಾಸ್ ಜತೆ ಕೈಜೋಡಿಸಿದ ಹೌಥಿ ಉಗ್ರರು: ಇಸ್ರೇಲ್ ಮೇಲೆ ಡ್ರೋನ್, ಕ್ಷಿಪಣಿ ದಾಳಿ
ರೈಲು ಲಿಂಕ್ ಯೋಜನೆಯ ಮಹತ್ವವೇನು?:
ಪ್ರಸ್ತುತ, ಕೋಲ್ಕತ್ತಾದಿಂದ ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೆ ರೈಲಿನ ಮೂಲಕ ಪ್ರಯಾಣಿಸುವವರು ಅಸ್ಸಾಂ ಮೂಲಕ ಸಾಗಬೇಕು. ಇದು 38 ಗಂಟೆಗಳ ಸುದೀರ್ಘ ಪ್ರಯಾಣವಾಗಿದೆ. ಈಗ ಅಖೌರಾ-ಅಗರ್ತಲಾ ಕ್ರಾಸ್ ಬಾರ್ಡರ್ ರೈಲು (Akhaura-Agartala cross border rail link) ಸಂಪರ್ಕದೊಂದಿಗೆ ರೈಲುಗಳು ಕೋಲ್ಕತಾದಿಂದ ಬಾಂಗ್ಲಾದೇಶ ಮೂಲಕ ಅಗರ್ತಲಾಕ್ಕೆ ಚಲಿಸಬಹುದಾಗಿದೆ. ಇದರಿಂದ ಕೋಲ್ಕತಾದಿಂದ ತ್ರಿಪುರಾಗೆ ಪ್ರಯಾಣ ಅವಧಿ 38 ತಾಸಿನಿಂದ 12 ತಾಸಿಗೆ ಇಳಿಯುತ್ತದೆ.
ಗೆಳತಿ ಜಾಸ್ಮಿನ್ ಜೊತೆ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ನಿಶ್ಚಿತಾರ್ಥ