Asianet Suvarna News Asianet Suvarna News

ಗೆಳತಿ ಜಾಸ್ಮಿನ್‌ ಜೊತೆ ವಿಜಯ್‌ ಮಲ್ಯ ಪುತ್ರ ಸಿದ್ಧಾರ್ಥ್‌ ನಿಶ್ಚಿತಾರ್ಥ

ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರು. ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯರ ಪುತ್ರ ಸಿದ್ಧಾರ್ಥ್‌ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್‌ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
 

Siddharth Malya son of businessman Vijay Mallya is engaged to his longtime girlfriend Jasmine Vijay Malya who fled to Britain after cheating Thousands of crores to banks akb
Author
First Published Nov 2, 2023, 7:19 AM IST

ನವದೆಹಲಿ: ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರು. ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯರ ಪುತ್ರ ಸಿದ್ಧಾರ್ಥ್‌ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್‌ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಅಮೆರಿಕದ (USA) ಕ್ಯಾಲಿಫೋರ್ನಿಯಾದ (California) ಲಾಸ್‌ ಎಂಜಲೀಸ್‌ನಲ್ಲಿ(Los Angeles) ನಡೆದ ಹ್ಯಾಲೋವಿನ್‌ ಪಾರ್ಟಿಯಲ್ಲಿ (Halloween party) ಸಿದ್ಧಾರ್ಥ್‌ ಮದುವೆ ನಿವೇದನೆ ಮಾಡಿದ್ದಾರೆ. ಈ ಪೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ಧಾರ್ಥ್‌ ‘ನೀನು ಇನ್ನೆಂದಿಗೂ ನನ್ನ ಜೊತೆಗಿರುತ್ತೀಯಾ ಎಂದು ಭಾವಿಸಿದ್ದೇನೆ. ಈ ಕುಂಬಳಕಾಯಿ ಪ್ರೀತಿಗೆ ಸಮ್ಮತಿ ನೀಡಿದ್ದಕ್ಕೆ ಧನ್ಯವಾದಗಳು. ನಾನು ನಿನ್ನ ಪ್ರೀತಿಸುತ್ತೇನೆ’ ಎಂದಿದ್ದಾರೆ.

8 ಅಡಿ ಚಿನ್ನಲೇಪಿತ ಸಿಂಹಾಸನ ಮೇಲೆ ರಾಮಲಲ್ಲಾ ವಿರಾಜಮಾನ: ಅಕ್ಷತೆ ಪೂಜೆಗೆ 100 ಕ್ವಿಂಟಲ್‌ ಅಕ್ಕಿ ಬಳಕೆ

ಈ ಹಿಂದೆ ನಟಿ ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್‌ ಪ್ರೀತಿಸುತ್ತಿದ್ದರು. ಬಳಿಕ ಅವರು ದೂರವಾಗಿದ್ದರು.  ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಅವರ ಆಫೇರ್‌ ರೂಮರ್ಸ್ ಒಂದಷ್ಷು ದಿನ ಸದ್ದು ಮಾಡಿತ್ತು. ಐಪಿಎಲ್ ಪಂದ್ಯದ ವೇಳೆ ಪರಸ್ಪರ ಚುಂಬಿಸುತ್ತಿರುವುದನ್ನು ಸಹ ಕಂಡು ಬಂದಿತ್ತು. ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದ ಈ ಕಪಲ್‌ನ ಬ್ರೇಕಪ್‌ಗೆ ಮಾತ್ರ ಸರಿಯಾದ ಕಾರಣ ತಿಳಿಯಲಿಲ್ಲ. ಸಿದ್ಧಾರ್ಥ್ ಜೊತೆಯ ಸಂಬಂಧದ ಬಗ್ಗೆ ದೀಪಿಕಾ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲವಾದರೂ, ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಹಂದಿಯ ಹೃದಯ ಕಸಿಗೊಳಗಾಗಿ ಬದುಕಿದ್ದ ವ್ಯಕ್ತಿ 40 ದಿನದ ಬಳಿಕ ಸಾವು

ನಟಿ ಕ್ಲಾಸ್‌ ಮತ್ತು ಸ್ಟೇಟಸ್‌ ಕಾರಣದಿಂದಾಗಿ ಬೇರೆಯಾದರು ಎಂದು ವಿವೇನ್ಸ್‌ ಎರಾ ವರದಿ ಮಾಡಿತ್ತು.  'ನಾನು ಸಂಬಂಧವನ್ನು ಉಳಿಸಿಕೊಳ್ಳಲು ಯತ್ನಿಸಿದೆ. ಇತ್ತೀಚಿಗೆ ಸಿದ್ಧಾರ್ಥ್ ನಡೆ ಅಸಹ್ಯವಾಗುತ್ತಿತ್ತು. ಕೊನೆ ಬಾರಿ ನಾವು ಡಿನ್ನರ್‌ ಡೇಟ್‌ಗೆ ಭೇಟಿಯಾದಾಗ ಬಿಲ್ ಪಾವತಿಸಲು ನನಗೆ ಹೇಳಿದ. ನನಗೆ ಮುಜುಗರವಾಯಿತು. ಈ ಸಂಬಂಧವನ್ನು ಕೊನೆಗೊಳಿಸುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ, ಹಿಡಿದಿಡಲು ನನಗೆ ಏನೂ ಉಳಿದಿರಲಿಲ್ಲ,' ಎಂದು ದೀಪಿಕಾ ಹೇಳಿದರು ಎಂಬುದನ್ನು ಐಬಿಟೈಮ್ಸ್  ವರದಿ ಮಾಡಿತ್ತು.

ದೀಪಿಕಾರ ಮೇಲಿನ ಹೇಳಿಕೆಯನ್ನು ಕನ್ಫರ್ಮ್‌ ಮಾಡಿಕೊಳ್ಳಲು ಐಬಿಟಿ ಸಿದ್ಧಾರ್ಥ್‌ರನ್ನು ತಲುಪಿದಾಗ, 'ಗೊಂದಲ ಏನು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದರು. 'ದೀಪಿಕಾ ಒಬ್ಬ ಕ್ರೇಜಿ ಫಿಮೇಲ್, ನನ್ನ ತಂದೆ ತಮ್ಮ ಸಾಲವನ್ನು ತೀರಿಸಿದ ನಂತರ ಮತ್ತು ಅವರು ಎಲ್ಲ ಆರೋಪಗಳಿಂದ ದೋಷಮುಕ್ತರಾದ ನಂತರ ಸಾಲ ತೀರಿಸುವುದಾಗಿ ಹೇಳಿದೆ. ಆದರೆ ಅವಳು ಕೇಳಲು ರೆಡಿ ಇರಲಿಲ್ಲ,' ಎಂದು ದೀಪಿಕಾ ಹೇಳಿಕೆಗೆ ಸಿದ್ಧಾರ್ಥ್ ಪ್ರತಿಕ್ರಿಯೆ ನೀಡಿದರು.

'ನಾನು ಅವಳಿಗೆ ದುಬಾರಿ ವಜ್ರಗಳು, ಐಷಾರಾಮಿ ಬ್ಯಾಗ್‌ಗಳನ್ನು ಉಡುಗೊರೆಯಾಗಿ ನೀಡಿದ ಸಮಯವನ್ನು ಅವಳು ಮರೆತಿದ್ದಾಳೆ, ಅವಳ ಹಾಲಿಡೇಗಾಗಿ ತುಂಬಾ ಖರ್ಚು ಮಾಡಿದ್ದೇನೆ. ಅವಳ ಸ್ನೇಹಿತರಿಗಾಗಿಯೂ ಪಾರ್ಟಿಗಳನ್ನು ಆಯೋಜಿಸಿದ್ದೇನೆ' ಎಂದು ಸಿದ್ಧಾರ್ಥ್‌ ಹೇಳಿಕೊಂಡಿದ್ದರು. 

Follow Us:
Download App:
  • android
  • ios