ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಸಂಘರ್ಷದಲ್ಲಿ ಹಮಾಸ್‌ಗ ಬೆಂಬಲ ಸೂಚಿಸಿರುವ ಯೆಮನ್‌ನ ಹೌಥೀ ಉಗ್ರರು ಇಸ್ರೇಲ್‌ ಮೇಲೆ ಡ್ರೋನ್‌ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದ್ದಾರೆ.

ಟೆಲ್‌ ಅವಿವ್‌: ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಸಂಘರ್ಷದಲ್ಲಿ ಹಮಾಸ್‌ಗ ಬೆಂಬಲ ಸೂಚಿಸಿರುವ ಯೆಮನ್‌ನ ಹೌಥೀ ಉಗ್ರರು ಇಸ್ರೇಲ್‌ ಮೇಲೆ ಡ್ರೋನ್‌ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದ್ದಾರೆ.

ಸುಮಾರು 1 ಸಾವಿರ ಮೈಲಿಗೂ ಹೆಚ್ಚು ದೂರದಲ್ಲಿದ್ದುಕೊಂಡೇ ಹೌಥೀಸ್‌ ಉಗ್ರರು ಮಂಗಳವಾರ ಡ್ರೋನ್‌ಗಳ ಮೂಲಕ ದಾಳಿ ನಡೆಸಿದ್ದಾರೆ. ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ಆರಂಭಿಸಿದಾಗಿನಿಂದಲೂ ಹೌಥಿ ಉಗ್ರರು ಹಮಾಸ್‌ಗೆ ಬೆಂಬಲ ಸೂಚಿಸುತ್ತಲೇ ಇದ್ದಾರೆ. ಇಸ್ರೇಲ್‌ ಮೇಲೆ ಬ್ಯಾಲೆಸ್ಟಿಕ್‌ ಕ್ಷಿಪಣಿಗಳು (ballistic missiles) ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ಇನ್ನು ಮುಂದೆ ಸಹ ಹಲವು ದಾಳಿ ನಡೆಸಿ, ಪ್ಯಾಲೆಸ್ತೀನಿಯನ್ನರ ಗೆಲುವಿಗೆ ಸಹಕಾರ ನೀಡಲಾಗುತ್ತದೆ ಎಂದು ಹೌಥಿ ಉಗ್ರ ಸಂಘಟನೆಯ ವಕ್ತಾರ ಯಹ್ಯ ಸಾರಿ ಹೇಳಿದ್ದಾನೆ.

8 ಅಡಿ ಚಿನ್ನಲೇಪಿತ ಸಿಂಹಾಸನ ಮೇಲೆ ರಾಮಲಲ್ಲಾ ವಿರಾಜಮಾನ: ಅಕ್ಷತೆ ಪೂಜೆಗೆ 100 ಕ್ವಿಂಟಲ್‌ ಅಕ್ಕಿ ಬಳಕೆ

ಸಂಘರ್ಷ ಆರಂಭವಾದ ಬಳಿಕ ಇದು 3ನೇ ಬಾರಿ ಹೌಥಿಗಳು ದಾಳಿ ನಡೆಸುತ್ತಿದ್ದಾರೆ. ಅ.28ರಂದು ಹೌಥಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದರು, ಇದು ಈಜಿಪ್ಟ್‌ನಲ್ಲಿ ಸ್ಫೋಟಗೊಂಡಿತ್ತು. ಅ.19ರಂದು ನಡೆಸಿದ ದಾಳಿಯನ್ನು ಅಮೆರಿಕ ನೌಕಾಪಡೆ ಪ್ರತಿ ಬಂಧಿಸಿತ್ತು ಎಂದು ಅವನು ಹೇಳಿದ್ದಾನೆ.

ಇಸ್ರೇಲ್‌ಗೆ ಪೆಟ್ರೋಲ್‌ ಪೂರೈಕೆ ನಿಲ್ಲಿಸಲು ಕರೆ:

ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್‌ಗೆ ಪೂರೈಕೆ ಮಾಡಲಾಗುತ್ತಿರುವ ಪೆಟ್ರೋಲಿಯಂ ಉತ್ಪನ್ನ ಮತ್ತು ಆಹಾರವನ್ನು ಮುಸ್ಲಿಂ ರಾಷ್ಟ್ರಗಳು ಸ್ಥಗಿತಗೊಳಿಸಬೇಕು ಎಂದು ಇರಾನಿನ ಸರ್ವೋಚ್ಚ ನಾಯಕ ಅಯಾತೋಲ್ಲಾ ಅಲಿ ಖಾಮೇನಿ (Ayatollah Ali Khamenei) ಕರೆ ನೀಡಿದ್ದಾರೆ. ಇವರು ಈ ಹಿಂದೆ ಹಮಾಸ್‌ ಕೈಗೊಂಡಿದ್ದ ಕೃತ್ಯವನ್ನು ಬೆಂಬಲಿಸಿದ್ದರು.

ರಾಯಭಾರಿ ವಾಪಸ್‌ ಕರೆಸಿಕೊಂಡ ಜೋರ್ಡಾನ್‌

ಗಾಜಾಪಟ್ಟಿಯ (Gaza Strip) ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಜೋರ್ಡಾನ್‌ ತನ್ನ ರಾಯಭಾರಿಯನ್ನು (ambassador) ಮರಳಿ ಕರೆಸಿಕೊಂಡಿದೆ. 1994ರಲ್ಲಿ ಇಸ್ರೇಲ್‌ ಜೊತೆ ಜೋರ್ಡಾನ್‌ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಇದೀಗ ನಡೆಯುತ್ತಿರುವ ದಾಳಿಗೆ ಪ್ರತಿಭಟನೆ ರೂಪದಲ್ಲಿ ಈ ನಿರ್ಧಾರ ಕೈಗೊಂಡಿದೆ.

ಗಾಜಾ ಜನರನ್ನು ಈಜಿಪ್ಟ್‌ಗೆ ಕಳಿಸಲು ಇಸ್ರೇಲ್‌ ಪ್ಲಾನ್‌: ಹೀಬ್ರೂ ಭಾಷೆಯ ರಹಸ್ಯ ಪತ್ರ ಲೀಕ್‌

ನವದೆಹಲಿ: ಭೂದಾಳಿಗೂ ಮುನ್ನ ಉತ್ತರ ಗಾಜಾದ ಜನರನ್ನ ದಕ್ಷಿಣ ಗಾಜಾಕ್ಕೆ ತೆರವು ಮಾಡಿದ್ದ ಇಸ್ರೇಲ್‌ ಸೂಚನೆ ಹಿಂದೆ ದೊಡ್ಡ ಯೋಜನೆ ಇದೆ ಎಂದು ವರದಿಯೊಂದು ಹೇಳಿದೆ. ಇಸ್ರೇಲ್‌ ಸರ್ಕಾರದ ರಹಸ್ಯ ಯೋಜನೆ ಎನ್ನಲಾದ ಹೀಬ್ರೂ (Hebrew) ಭಾಷೆಯಲ್ಲಿ ಇರುವ 10 ಪುಟಗಳ ದಾಖಲೆಯೊಂದು ಬುಧವಾರ ಲೀಕ್‌ ಆಗಿದೆ. ಅದರಲ್ಲಿನ ಮಾಹಿತಿ ಇಂಥದ್ದೊಂದು ಸಂಶಯಕ್ಕೆ ಕಾರಣವಾಗಿದೆ.

ಹಂದಿಯ ಹೃದಯ ಕಸಿಗೊಳಗಾಗಿ ಬದುಕಿದ್ದ ವ್ಯಕ್ತಿ 40 ದಿನದ ಬಳಿಕ ಸಾವು

ಯೋಜನೆ ಏನು?: ಮೊದಲು ಉತ್ತರ ಗಾಜಾ ಜನರನ್ನು ದಕ್ಷಿಣಕ್ಕೆ ಕಳುಹಿಸುವುದು. ಬಳಿಕ ಉತ್ತರ ಮತ್ತು ದಕ್ಷಿಣ ಗಾಜಾ ಮೇಲೆ ದಾಳಿ. ದಾಳಿ ವೇಳೆ ಜನತೆ ರಫಾ ಗಡಿಯ ಮೂಲಕ ನೆರೆಯ ಈಜಿಪ್ಟ್‌ನ ಸೈನಿಗೆ ತೆರಳುವಂತೆ ಮಾಡುವುದು. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಗಾಜಾದಿಂದ ಪ್ಯಾಲೆಸ್ತೀನಿಯ ತೆರವು (Palestinian evacuation)ಗುರಿ. 

ಆದರೆ ಈ ಯೋಜನೆಯನ್ನು ಸರ್ಕಾರ ಕೈಗೊಂಡಿದೆ ಎಂಬುದನ್ನು ಬೆಂಜಮಿನ್‌ ನೆತನ್ಯಾಹು ಅವರ ಕಚೇರಿ ತಿರಸ್ಕರಿಸಿದೆ.

ನಿರಾಶ್ರಿತರ ಶಿಬಿರದ ಮೇಲೆ ದಾಳಿ

ಗಾಜಾ ನಗರದಲ್ಲಿ ನಿರಾಶ್ರಿತರು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ವೊಂದರ ಮೇಲೆ ಇಸ್ರೇಲ್‌ ರಾಕೆಟ್‌ ದಾಳಿ ನಡೆಸಿದ್ದು, ಹಲವರು ಸಾವಿಗೀಡಾಗಿದ್ದಾರೆ ಎಂದು ಗಾಜಾ ಆಡಳಿತ ಹೇಳಿದೆ. ಇನ್ನು ಗಾಜಾಪಟ್ಟಿಯಲ್ಲಿ ಇಂಟರ್ನೆಟ್‌ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ.

ಗಾಜಾ ನಿರಾಶ್ರಿತ ಕೇಂದ್ರದ ಮೇಲೆ ಇಸ್ರೇಲ್ ಬಾಂಬ್ ದಾಳಿ: ಸಂತ್ರಸ್ತರಿಗಾಗಿ ಮೊದಲ ಬಾರಿ ರಾಫಾ ಗಡಿ ತೆರೆಯಲೊಪ್ಪಿದ ಈಜಿಫ್ಟ್‌

34 ಮಂದಿ ಪತ್ರಕರ್ತರು ಬಲಿ:

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಈವರೆಗೆ ಸುಮಾರು 34 ಪತ್ರಕರ್ತರು ಮೃತಪಟ್ಟಿದ್ದಾರೆ. ಈ ಸಾವುಗಳಿಗೆ 2 ದೇಶಗಳು ನಡೆಸಿರುವ ಕೃತ್ಯಗಳೂ ಕಾರಣವಾಗಿವೆ. ಇದನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.