ಏರ್‌ಫೋರ್ಸ್‌ನಲ್ಲಿ ಈಗಲೂ ಮಹಿಳೆಯರು ಕಾಣಿಸಿಕೊಳ್ಳುವುದು ವಿರಳ. ಆದರೆ ಇಲ್ಲೊಬ್ಬ ಯುವತಿ ಅಮೆರಿಕ ಏರ್‌ಫೋರ್ಸ್‌ನ ಎರಡನೇ ಲೆಫ್ಟಿನೆಂಟ್‌ ಆಗಿ ನೇಮಕವಾಗಿದ್ದಾರೆ. ರಾಜಸ್ಥಾನದ ಪುಟ್ಟ ಹಳ್ಳಿಯಲ್ಲೀಗ ದೊಡ್ಡ ಸಂಭ್ರಮ ಮನೆ ಮಾಡಿದೆ.

ರಾಜಸ್ಥಾನದ ಜುನ್‌ಜುನು ಜಿಲ್ಲೆಯ ಜಖಾಲ ಗ್ರಾಮದಲ್ಲಿದ್ದ ಕುಟುಂಬದ ಯುವತಿ ಅಮೆರಿಕ ಏರ್‌ಫೋರ್ಸ್‌ನ ಮುಖ್ಯ ಹುದ್ದೆಗೆ ನೇಮಕವಾಗಿದ್ದಾಳೆ. ಹಳ್ಳಿಯ ಜನರು ಈ ಸುದ್ದಿ ತಿಳಿಯುತ್ತಿದ್ದಂತೆ ಸಂಭ್ರಮಾಚರಣೆ ಮಾಡಿದ್ದಾರೆ.

ಉಚಿತವಾಗಿ ಮಾಸ್ಕ್ ಹೊಲೆದು ಹಂಚ್ತಾಳೆ ಕಸ ಆಯುವ ದಂಪತಿಯ ಪುತ್ರಿ

ಪ್ರಘ್ಯ ಶೇಖಾವತ್ ಸೆಪ್ಟೆಂಬರ್ 19ರಂದು ಅಮೆರಿಕನ್ ಏರ್‌ಫೋರ್ಸ್‌ಗೆ ಸೇರಿಕೊಂಡಿದ್ದರು. ಆಗಿನಿಂದಲೇ ಇತ್ತ ಹಳ್ಳಿಯಲ್ಲಿ ಅದರ ಸಂಭ್ರಮ ಮನೆ ಮಾಡಿತ್ತು ಎಂದು ಆಕೆಯ ಸಂಬಂಧಿ ಬಸಂತ್ ಸಿಂಗ್ ಶೇಖಾವತ್ ಹೇಳಿದ್ದಾರೆ.

ಪ್ರಘ್ಯಾಳ ಸಹೋದರ ಸುವೀರ್ ಶೇಖಾವತ್ 2015ರಲ್ಲೇ ಸೆಕೆಂಡ್ ಲೆಫ್ಟಿನೆಂಟ್ ಆಗಿ ಅಮೆರಿಕ ಏರ್‌ಫೋರ್ಸ್ ಸೇರಿದ್ದ. ನಂತರ ಕ್ಯಾಪ್ಟನ್ ಪೋಸ್ಟ್‌ಗೆ ಪ್ರಮೋಷನ್ ಆಗಿತ್ತು ಎಂದಿದ್ದಾರೆ.

ದಶಲಕ್ಷ ಫಾಲೋವರ್ಸ್ ಪಡೆದ ಸೌತ್‌ನ ಮೊದಲ ಮಹಿಳಾ ರಾಜಕಾರಣಿ..! ಹಿಂದಿದ್ದಾರೆ ರಮ್ಯಾ

ಪ್ರಘ್ಯಾಳ ದೂರದ ಸಂಬಂಧಿ ಈಗಲೂ ರಾಜಸ್ಥಾನದ ಗುಡಾದ ನವಲ್‌ಘರ್ ರಸ್ತೆಯಯಲ್ಲೇ ವಾಸವಾಗಿದ್ದಾರೆ. ಅಮೆರಿಕದ ಕಾರ್ಯಕ್ರಮ ಕೊರೋನಾದಿಂದಾಗಿ ಆನ್‌ಲೈನ್‌ನಲ್ಲಿ ನಡೆದಿದ್ದು ಪ್ರಘ್ಯಾಳ 91 ವರ್ಷದ ಅಜ್ಜಿಯೂ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೂರು ವರ್ಷದ ಹಿಂದೆ ಪ್ರಘ್ಯ ತನ್ನ ಹಳ್ಳಿಗೆ ಭೇಟಿ ಕೊಟ್ಟಿದ್ದಳು.  ಸುಮಾರು 1 ವರ್ಷದಷ್ಟು ಸಮಯ ಉಳಿದುಕೊಂಡಿದ್ದಳು. ಆ ಸಂದರ್ಭ ಹಳ್ಳಿಯ ಮಕ್ಕಳಿಗೆ ರೊಬೋಟಿಕ್ಸ್ ಬಗ್ಗೆಯೂ ಹೇಳಿಕೊಡುತ್ತಿದ್ದಳು ಎಂದಿದ್ದಾರೆ ಆಕೆಯ ಸಬಂಧಿ.

ನೈಜೀರಿಯಾದಲ್ಲಿ ರೇಪಿಸ್ಟ್‌ಗಳ ವೃಷಣಕ್ಕೆ ಕತ್ತರಿ: ಮತ್ತೊಮ್ಮೆ ಸೆಕ್ಸ್‌ಗೆ ಛಾನ್ಸೇ ಇಲ್ಲ

ಪ್ರಘ್ಯಳ ತಂದೆ ದುಷ್ಯಂತ್ ಸಿಂಗ್ ಸಿರೋಹಿಯಲ್ಲಿ ಶಿಕ್ಷಕರಾಗಿದ್ದರು. ಅವರು 1993ರಲ್ಲಿ ಅಮೆರಿಕಕ್ಕೆ ಹೋದರು. ಅಲ್ಲಿ ಎಂಜಿನಿಯರಿಂಗ್ ಮುಗಿಸಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದರು.

ಪ್ರಘ್ಯಾಗಳ ತಾಯಿ ಅರ್ಚನಾ ಕನ್ವಾರ್ ಶಿಕ್ಷಕಿಯಾಗಿದ್ದಾರೆ. ಪ್ರಘ್ಯ ಹಾಗೂ ಆಕೆಯ ಸಹೋದರ ಅಮೆರಿಕದಲ್ಲಿಯೇ ಹುಟ್ಟಿದ್ದಾರೆ. ಆದರೆ ಇಬ್ಬರೂ ರಾಜಸ್ಥಾನದ ಹಳ್ಳಿಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ.