ಕಸಹೆಕ್ಕುವ ದಂಪತಿಯ 12 ವರ್ಷದ ಪುತ್ರಿ ಪ್ರತಿದಿನ ಮಾಸ್ಕ್ ಹೊಲಿದು ಬಡವರಿಗೆ ಹಂಚುತ್ತಿದ್ದಾಳೆ. ತನ್ನ ಸುತ್ತಮುತ್ತಲಿನ ಮಕ್ಕಳು, ವೃದ್ಧರಿಗೆ ಉಚಿತವಾಗಿ ಮಾಸ್ಕ್ ತಯಾರಿಸಿ ಹಂಚುತ್ತಾಳೆ ಈ ಬಾಲಕಿ.

ಪ್ರತಿದಿನ ಈ ಬಾಲಕಿ 2 ಗಂಟೆಗಳ ಹೊತ್ತು ಮಾಸ್ಕ್ ಹೊಲಿಯುತ್ತಾಳೆ. ಕೊರೋನಾ ವೈರಸ್‌ನಿಂದ ವೃದ್ಧರೂ, ಮಕ್ಕಳನ್ನು ರಕ್ಷಿಸಲು ಭಾರತಿ ಕುಮಾರಿ ಎಂಬ ಬಾಲಕಿ ಪ್ರತಿದಿನ ಕುಳಿತು ಮಾಸ್ಕ್ ಹೊಲಿಯುತ್ತಾಳೆ.

ದಶಲಕ್ಷ ಫಾಲೋವರ್ಸ್ ಪಡೆದ ಸೌತ್‌ನ ಮೊದಲ ಮಹಿಳಾ ರಾಜಕಾರಣಿ..! ಹಿಂದಿದ್ದಾರೆ ರಮ್ಯಾ

ಎನ್‌ಜಿಒ ಚಿಂತನ್‌ನ ಇನ್ಫಾರ್ಮಲ್‌ ಕಲಿಕಾ ಕೇಂದ್ರದಲ್ಲಿ ಈಕೆ ಕಲಿಯುತ್ತಾಳೆ. ತಂದೆ ತಾಯಿ ಇಬ್ಬರೂ ಕಸ ಹೆಕ್ಕಿ ಜೀವನ ಸಾಗಿಸುತ್ತಿದ್ದು, ಭಾರತಿ ಕುಮಾರಿ ಸಾಮಾಜಿಕ ಕಾರ್ಯಕರ್ತೆಯಾಗಲು ಬಯಸಿದ್ದಾಳೆ.

ಆಕೆಯ ಪೋಷಕರಾದ ರಾಮಜೀತ್‌ ತಿವಾರಿ(38) ಮಾಯಾ ದೇವಿ(33) ಭಸ್ಲ್ವಾ ಡೈರಿಗಾಗಿ ಕಸ ಸಂಗ್ರಹಿಸುತ್ತಾರೆ. ಭಾರತಿ ಆಕೆಯ ಸೀನಿಯರ್ ಟ್ರೈನರ್ ಲಕ್ಷ್ಮೀ ಮೋರ್ಯಾ ನಡೆಸುವ ಹೈಜೀನ್ ಸೆಷನ್‌ಗಳಲ್ಲಿಯೂ ಭಾಗವಹಿಸುತ್ತಾಳೆ.

ನೈಜೀರಿಯಾದಲ್ಲಿ ರೇಪಿಸ್ಟ್‌ಗಳ ವೃಷಣಕ್ಕೆ ಕತ್ತರಿ: ಮತ್ತೊಮ್ಮೆ ಸೆಕ್ಸ್‌ಗೆ ಛಾನ್ಸೇ ಇಲ್ಲ

ತನ್ನ ಅಕ್ಕಪಕ್ಕದ ಮನೆ ಹಾಗೂ ಸಂಬಂಧಿಕರು ಮಾಸ್ಕ್ ಧರಿಸದಿರುವುದನ್ನು ನೋಡಿದ ಭಾರತಿಗೆ ಮೊದಲು ಆಘಾತವಾಗಿತ್ತು. ನಂತರ ಆಕೆಯೇ ಸ್ವಯಂಪ್ರೇರಿತಳಾಗಿ ಮಾಸ್ಕ್ ಹೊಲಿದು ಹಂಚುತ್ತಿದ್ದಾಳೆ.