Asianet Suvarna News Asianet Suvarna News

ನೈಜೀರಿಯಾದಲ್ಲಿ ರೇಪಿಸ್ಟ್‌ಗಳ  ವೃಷಣಕ್ಕೆ ಕತ್ತರಿ: ಮತ್ತೊಮ್ಮೆ ಸೆಕ್ಸ್‌ಗೆ ಛಾನ್ಸೇ ಇಲ್ಲ

ಬಹಳಷ್ಟು ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುತ್ತದೆ. ಒಂದೊಂದು ಕಡೆ ಒಂದೊಂದು ರೀತಿಯ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಅತ್ಯಾಚಾರಿಗೆ ಕೊಡೋ ಶಿಕ್ಷೆ ಏನು ನೋಡಿ, ಆತ ಮತ್ಯಾವತ್ತೂ ಸೆಕ್ಸ್ ಮಾಡೋಕೆ ಆಗಲ್ಲ

Rapists to be surgically castrated under new law in Nigerian state dpl
Author
Bangalore, First Published Sep 18, 2020, 10:34 AM IST

ಅತ್ಯಾಚಾರ ಎಂಬುದು ಕ್ರೂರ ಕೃತ್ಯ. ಸಮ್ಮತವಲ್ಲದ ಸೆಕ್ಸ್‌, ಬಲಾತ್ಕಾರ ಹೆಣ್ಣುಮಕ್ಕಳ ಮೇಲೆ ದೀರ್ಘಕಾಲಿಕ ಮಾನಸಿಕ ಸಮಸ್ಯೆಯನ್ನೂ ತರುತ್ತದೆ. ರೇಪ್ ಅತ್ಯಂತ ಭೀಕರ ಎಂದು ಗೊತ್ತಿದ್ದರೂ ಹಲವು ರಾಷ್ಟ್ರಗಳಲ್ಲಿ ಅಂತಹ ದೊಡ್ಡ ಶಿಕ್ಷೆ ಏನಿಲ್ಲ. ಆದರೆ ನೈಜೀರಿಯಾದಲ್ಲಿ ಏನಾಗಿದೆ ನೋಡಿ..

ಬಹಳಷ್ಟು ರಾಷ್ಟ್ರಗಳಲ್ಲಿ ಅತ್ಯಾಚಾರ ನಡೆಯುತ್ತದೆ. ಒಂದೊಂದು ಕಡೆ ಒಂದೊಂದು ರೀತಿಯ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಅತ್ಯಾಚಾರಿಗೆ ಕೊಡೋ ಶಿಕ್ಷೆ ಏನು ನೋಡಿ, ಆತ ಮತ್ಯಾವತ್ತೂ ಸೆಕ್ಸ್ ಮಾಡೋಕೆ ಆಗಲ್ಲ

ಅತ್ಯಾಚಾರಿಗಳಿಗೆ ಎಂಥ ಶಿಕ್ಷೆ ಕೊಡಬೇಕು ಎಂದು ತಿಳಿಸಿದ ಇಮ್ರಾನ್ ಖಾನ್

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ಕಲ್ಲು ಹೊಡೆದು ಸಾಯಿಸುವುದು, ಜೀವಾವಧಿ ಜೈಲು ಶಿಕ್ಷೆ ಹೀಗೆ ವಿವಿಧ ರೀತಿಯ ಶಿಕ್ಷೆ ನೀಡಲಾಗುತ್ತದೆ. ನೈಜೀರಿಯಾದ ಕದುನಾ ಎಂಬ ರಾಜ್ಯದಲ್ಲಿ ಅತ್ಯಾಚಾರಿಗಳನ್ನು ಶಿಕ್ಷಿಸಲು ವಿಚಿತ್ರ ಕಾನೂನೊಂದನ್ನು ಜಾರಿ ಮಾಡಲಾಗಿದೆ.

ಶಿಕ್ಷೆಗೆ ಗುರಿಯಾದವರು ಮತ್ತೆಂದೂ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವೇ ಇಲ್ಲ. ಒಂದು ವೇಳೆ 14 ವರ್ಷದ ಒಳಗಿನವರ ಮೇಲೆ ಅತ್ಯಾಚಾರ ಎಸಗಿದರೆ ಮರಣದಂಡನೆ ಶಿಕ್ಷೆ ಗ್ಯಾರಂಟಿ. ನೈಜೀರಿಯಾದಲ್ಲಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು.

ಮನೆಗೆ ಹಿಂದಿರುಗುತ್ತಿದ್ದ ಯುವತಿ ಕಿಡ್ನಾಪ್; ಮದ್ಯ ಕುಡಿಸಿ ರೇಪ್

ನೈಜಿರಿಯಾದಲ್ಲಿ ರೇಪ್ ಮಾಡಿದ ವ್ಯಕ್ತಿಯ ವೃಷ್ಣಣವನ್ನೇ ಕತ್ತರಿಸಲಾಗುತ್ತದೆ. ಇನ್ನು 14 ವರ್ಷಕ್ಕಿಂತ ಕೆಳಗಿನ ಅಪ್ರಾಪ್ತೆಯನ್ನೇನಾದರೂ ರೇಪ್ ಮಾಡಿದರೆ ಮರಣ ದಂಡನೆ ವಿಧಿಸಲಾಗುತ್ತದೆ.

ನೈಜಿರಿಯಾ ರಾಷ್ಟ್ರದ ಕಡುನಾ ಎಂಬ ರಾಜ್ಯದ ರಾಜ್ಯಪಾಲ ನಾಸಿರ್ ಅಹ್ಮದ್ ಎಲ್-ರುಫಾಯಿ ಈ ನಿಯಮ ತಂದಿದ್ದು, ಗಂಭೀರ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಇಂತಹ ಕಠಿಣ ಶಿಕ್ಷೆ ವಿಧಿಸಬೇಕಾದ ಅಗತ್ಯವಿದೆ ಎಂದಿದ್ದಾರೆ.

ಗೆಳೆಯನ ಹೆಂಡತಿ ಮತ್ತು ಮಗಳ ರೇಪ್ ಮಾಡಿ ವಿಡಿಯೋ ಮಾಡಿಟ್ಟುಕೊಂಡಿದ್ದ!

ಕೊರೋನಾ ವೈರಸ್ ಕಾಲಾವಧಿಯಲ್ಲೇ ನೈಜಿರಿಯಾದಲ್ಲಿ ಅತ್ಯಂತ ಹೆಚ್ಚು ರೇಪ್ ಪ್ರಕರಣಗಳು ವರದಿಯಾಗಿವೆ. ಮರಣದಂಡನೆ ಸೇರಿದಂತೆ ಅತ್ಯಾಚಾರ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು ಎಂದು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು.

ನೈಜಿರಿಯಾದ ಉಳಿದ ರಾಜ್ಯದಲ್ಲೂ ಈ ಕಾನೂನು ಜಾರಿಯಾಗಬೇಕೆಂದು ಲಿಂಗ ಕಾರ್ಯಕರ್ತೆ ಹಾಗೂ ರೇಪ್ ಸಂತ್ರಸ್ತೆ ದೊರೋತಿ ಜೆಮಂನ್ಝೆ ಆಗ್ರಹಿಸಿದ್ದಾರೆ. ಆಫ್ರಿಕಾದ ಅತ್ಯಂತ ಪ್ರಸಿದ್ಧ ರಾಷ್ಟ್ರ ನೈಜಿರಿಯಾದಲ್ಲಿ ರೇಪ್ ಶಿಕ್ಷೆ ಅತ್ಯಾಚಾರಿಗೆ ನೀಡಲಾದ ಅತ್ಯಂತ ಕಠಿಣ ಶಿಕ್ಷೆಯಾಗಿದೆ

Follow Us:
Download App:
  • android
  • ios