ಮದುವೆ ಬಂಧನವೆಂದು ಭಾವಿಸುವ ಯುವತಿಯರು ಹೆಚ್ಚುತ್ತಿದ್ದು, ರೋಬೋಟ್‌ಗಳ ಮೇಲಿನ ವ್ಯಾಮೋಹವೂ ಹೆಚ್ಚುತ್ತಿದೆ. ಲೈಂಗಿಕ ಬಯಕೆಗಳನ್ನು ರೋಬೋಟ್‌ಗಳಿಂದ ಪೂರೈಸಿಕೊಳ್ಳುವ ಸಂಸ್ಕೃತಿ ಬೆಳೆಯುತ್ತಿದ್ದು, ಶ್ರೀಮಂತ ವರ್ಗದಲ್ಲಿ ಆರಂಭವಾಗಿ ಬೇಗನೆ ಹರಡಬಹುದು. ಸೆಕ್ಸ್ ಟಾಯ್ಸ್‌ಗಳ ಬಳಕೆ ಹೆಚ್ಚುತ್ತಿರುವುದು ಈ ಬೆಳವಣಿಗೆಗೆ ಪೂರಕವಾಗಿದೆ.

ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವ ಪರಿಕಲ್ಪನೆಯೇ ಮಾಯವಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಅವಿವಾಹಿತರೇ ಹೆಚ್ಚಾಗಿ ಉಳಿಯುತ್ತಾರೆ ಎನ್ನುವ ಶಾಕಿಂಗ್​ ವರದಿಯೊಂದು ಈಚೆಗೆ ಬಂದಿದೆ. ಮದುವೆಯೆನ್ನುವುದು ಬಂಧನ ಎನ್ನುವ ಯುವತಿಯರೇ ಹೆಚ್ಚು ಎಂದು ಈ ಅಧ್ಯಯನ ಹೇಳಿದೆ. ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಲಿ, ಮದುವೆಯಾದ ಮೇಲೆ ಗಂಡ ಆತನ ಮನೆಯವರು ಹೇಳಿದಂತೆ ಕೇಳಿಕೊಂಡು ಇರಬೇಕು, ತಮ್ಮ ಕರೀಯರ್​ಗೆ ಬೆಲೆಯೇ ಇಲ್ಲವಾಗುತ್ತದೆ, ತಮ್ಮಿಂದ ದುಡ್ಡು ಬಯಸುವ ಗಂಡು ಕೂಡ ಆತನಿಗಿಂತ ಹೆಂಡತಿ ಕಡಿಮೆ ಸಂಪಾದನೆ ಮಾಡಬೇಕು ಎನ್ನುವ ಬಯಕೆ ಇರುತ್ತದೆ... ಹಾಗೆ... ಹೀಗೆ... ಹಲವಾರು ಕಾರಣಗಳನ್ನು ಇದಾಗಲೇ ಯುವತಿಯರು ಕೊಟ್ಟಾಗಿದೆ. ಸುಮ್ಮನೇ ದೈಹಿಕ ಸಂಬಂಧಕ್ಕಾಗಿ ಮದುವೆಯಾಕೆ ಆಗಬೇಕು ಎನ್ನುವುದು ಅವರ ಪ್ರಶ್ನೆ.

ಇದರ ನಡುವೆಯೇ ಇದೀಗ ಆತಂಕಕಾರಿ ವರದಿಯೊಂದು ಬಂದಿದೆ. ಅದೇನೆಂದರೆ, ಇದು ರೋಬೋಟ್​ ಯುಗ. ಇದಾಗಲೇ ಹಲವಾರು ಕ್ಷೇತ್ರಗಳನ್ನು ಮನುಷ್ಯರ ಬದಲು ರೋಬೋಟ್​ ಆಕ್ರಮಿಸಿಕೊಂಡುಬಿಟ್ಟಿದೆ. ಇದೀಗ ಹೆಣ್ಣುಮಕ್ಕಳು ಯುವಕರಿಗಿಂತಲೂ ಹೆಚ್ಚಾಗಿ ರೋಬೋಟ್​ ಮೇಲೆ ವ್ಯಾಮೋಹ ಹೊಂದುತ್ತಿದ್ದಾರೆ ಎಂದು ಬ್ರಿಟಿಷ್ ಸುದ್ದಿ ಸಂಸ್ಥೆ ದಿ ಸನ್ ಬಹಿರಂಗಪಡಿಸಿದೆ. ಹಾಗೆಂದು ಈ ದಿನವೇನೂ ದೂರವಿಲ್ಲ. ಇನ್ನೊಂದೆರಡು ವರ್ಷಗಳಲ್ಲಿ ರೋಬೋಟಿಕ್​ ಸೆಕ್ಸ್ ಹೆಚ್ಚು ಪ್ರಚಲಿತವಾಗಲಿದೆ. ರೋಬೋಟ್‌ಗಳೊಂದಿಗೆ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳುವ ಸಂಸ್ಕೃತಿ ಇನ್ನು ಕೆಲವೇ ವರ್ಷಗಳಲ್ಲಿ ಹೆಚ್ಚಲಿದೆ ಎಂದು ಈ ಅಧ್ಯಯನ ವರದಿ ಹೇಳಿದೆ.

ಅವಳಿ ಮಕ್ಕಳು ಹುಟ್ಟಿದ ಬಳಿಕ ಹೊಲಿಗೆ ಹಾಕುವಾಗ್ಲೇ ಹೊಟ್ಟೆಯಲ್ಲಿತ್ತು ಮತ್ತೊಂದು ಮಗು! ಆಗಿದ್ದೇನು ನೋಡಿ!

ಇದಾಗಲೇ ಮದುವೆಯೆಂದರೆ ಹೆಚ್ಚಿನ ಯುವತಿಯರು ಮೂಗು ಮುರಿಯುತ್ತಿದ್ದಾರೆ. ಅವಿವಾಹಿತ ಯುವಕರ ಜೊತೆ ಲೈಂಗಿಕ ಸಂಬಂಧ ಹೊಂದಿದರೆ ಅದರಿಂದ ಅಪಾಯವೇ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಸಂಶೋಧನೆಯ ಭಾಗವಾಗಿದ್ದ ಹಲವು ಯುವತಿಯರು ಅಭಿಪ್ರಾಯ ಪಟ್ಟಿದ್ದು, ತಾವು ಹೇಳಿದಂತೆ ಕೇಳಿಕೊಂಡಿರುವ, ತಮ್ಮ ಲೈಂಗಿಕ ಆಸೆಯನ್ನು ಯಾವಾಗ ಬೇಕಾದರೂ, ಹೇಗೆ ಬೇಕಾದರೂ ಕಮ್​-ಕಿಮ್​ ಎನ್ನದೇ ಪೂರೈಸುವ ರೋಬೋಟ್​ಗಳೇ ವಾಸಿ ಎಂದಿದ್ದಾರೆ. ಸದ್ಯ ಇದು ಶ್ರೀಮಂತ ಕುಟುಂಬಗಳಲ್ಲಿ ಶುರುವಾಗಿದ್ದು, ಕ್ರಮೇಣ ಬಹುಭಾಗವನ್ನು ಆಕ್ರಮಿಸುವ ಸಾಧ್ಯತೆ ಇದೆ ಎಂದು ಸಂಶೋಧನೆಯ ಉಸ್ತುವಾರಿ ವಹಿಸಿರುವ ಡಾ. ಇಯಾನ್ ಬಹಿರಂಗಪಡಿಸಿದ್ದಾರೆ. 

 ಹಾಗೆ ನೋಡಿದರೆ, ಸೆಕ್ಸ್ ಟಾಯ್ಸ್‌ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (ಎಐ), ರೋಬೋಟ್‌ಗಳು ಸಹ ಇದರ ಭಾಗವಾಗುತ್ತವೆ ಎಂಬ ವಾದವೂ ಇದೆ. ಒಟ್ಟಾರೆಯಾಗಿ, ಲೈಂಗಿಕ ವಿಷಯಗಳಲ್ಲಿ ರೋಬೋಟ್‌ಗಳ ಪ್ರವೇಶವು ಆಶ್ಚರ್ಯಕರವಲ್ಲ ಎನ್ನುವುದು ಅವರ ವಾದ. ಒಂದು ಕಾಲದಲ್ಲಿ ಲೈಂಗಿಕ ವಿಷಯಗಳ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಆದರೆ, ಇಂದು ಜನರು ಈ ವಿಷಯಗಳ ಬಗ್ಗೆ ಬಹಳ ಸಹಜವಾಗಿ ಮಾತನಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಲೈಂಗಿಕ ಆಟಿಕೆಗಳು ಮತ್ತು ವೈಬ್ರೇಟರ್‌ಗಳು ವ್ಯಾಪಕವಾಗಿ ಬಳಕೆಗೆ ಬಂದಿವೆ ಎಂದು ಅವರು ಹೇಳಿದರು. ಆದ್ದರಿಂದ ಭವಿಷ್ಯದಲ್ಲಿ ಲೈಂಗಿಕ ಚಟುವಟಿಕೆಗಳಿಗಾಗಿ ರೋಬೋಟ್‌ಗಳನ್ನು ಬಳಸುವುದು ಸಹ ಸಾಮಾನ್ಯವಾಗುತ್ತದೆ ಎನ್ನುತ್ತಾರೆ ಅವರು. 


ಗರ್ಭಿಣಿಯರಿಗೆ MRI ಸ್ಕ್ಯಾನ್‌ ಮಾಡಿದ್ರೆ ಗರ್ಭದಲ್ಲಿನ ಮಗು ಏಲಿಯನ್​! ಏನಿದು ವಿಚಿತ್ರ ಅಂತೀರಾ? ಡಿಟೇಲ್ಸ್​ ಓದಿ...