ಅವಳಿ ಮಕ್ಕಳು ಹುಟ್ಟಿದ ಬಳಿಕ ಹೊಲಿಗೆ ಹಾಕುವಾಗ್ಲೇ ಹೊಟ್ಟೆಯಲ್ಲಿತ್ತು ಮತ್ತೊಂದು ಮಗು! ಆಗಿದ್ದೇನು ನೋಡಿ!
ಅವಳಿ ಮಕ್ಕಳು ಹುಟ್ಟಿದ ಬಳಿಕ ಹೊಲಿಗೆ ಹಾಕುವಾಗ್ಲೇ ಹೊಟ್ಟೆಯಲ್ಲಿತ್ತು ಮತ್ತೊಂದು ಮಗು. ನಿಜಕ್ಕೂ ಆಗಿದ್ದೇನು ನೋಡಿ!

ವೈದ್ಯಕೀಯ ಲೋಕ ಎಷ್ಟೇ ಮುಂದುವರೆದಿದ್ದರೂ ಕೆಲವೊಮ್ಮೆ ವೈದ್ಯರ ಊಹೆಗೂ ನಿಲುಕದ ಘಟನೆಗಳು ಸಂಭವಿಸಿಬಿಡುತ್ತವೆ. ಅದುವೇ ಪ್ರಕೃತಿಯ ವಿಸ್ಮಯ. ಅದೇ ರೀತಿ ಅವಳಿ-ಜವಳಿ ಹುಟ್ಟುತ್ತದೆ ಎಂದು ಮೊದಲೇ ವೈದ್ಯರು ಹೇಳಿದಂತೆ ಸಿಸರಿನ್ ಮೂಲಕ ಅವಳಿ ಮಕ್ಕಳು ಹುಟ್ಟಿದ ಬಳಿಕ ಇನ್ನೇನು ಹೊಟ್ಟೆಗೆ ಹೊಲಿಗೆ ಹಾಕಬೇಕು ಎನ್ನುವಷ್ಟರಲ್ಲಿ ಮತ್ತೊಂದು ಮಗು ಹೊಟ್ಟೆಯಲ್ಲಿ ಇರುವುದು ಮಹಿಳೆಗೆ ಗೊತ್ತಾಗಿ ಆಘಾತವಾಗಿರುವ ಘಟನೆ ನಡೆದಿದೆ.
ಚೀನಾದ ಶಾಂಘೈನಲ್ಲಿರುವ ಮಹಿಳೆ ಸಿಸೇರಿಯನ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು, ಆಪರೇಷನ್ ಮಾಡಬೇಕಾಗುತ್ತದೆ, ಅವಳಿ ಮಕ್ಕಳು ಎಂದು ವೈದ್ಯರು ಮೊದಲೇ ಹೇಳಿದ್ದರಿಂದ ಅದು ಕೂಡ ಆಯಿತು. ಇನ್ನೇನು ಸಿಸೇರಿಯನ್ ಬಳಿಕ ಆಪರೇಷನ್ ಮಾಡಲು ಮುಂದಾದಾಗ, ಹೊಟ್ಟೆಯಲ್ಲಿ ಏನೋ ಚಲಿಸುತ್ತಿರುವಂತೆ ಮಹಿಳೆಗೆ ಭಾಸವಾಗಿದೆ. ಅದನ್ನು ಕೂಡಲೇ ಆಕೆ ವೈದ್ಯರಿಗೆ ಹೇಳಿದಾಗ ವೈದ್ಯರೂ ಗಾಬರಿ ಬಿದ್ದಿದ್ದಾರೆ. ವೈದ್ಯಕೀಯ ಸಿಬ್ಬಂದಿ ತುರ್ತು ಕಾರ್ಯಾರಣೆ ನಡೆಸಿದರು. ಬಳಿಕ ಪರೀಕ್ಷೆ ಮಾಡಿದಾಗ ಮತ್ತೊಂದು ಮಗು ಹೊಟ್ಟೆಯಲ್ಲಿ ಇರುವಂತೆ ಭಾಸವಾಯಿತು. ಭ್ರೂಣದ ಚಲನೆ ಇದೆ ಎಂದು ಪರೀಕ್ಷೆ ಮಾಡಿದ ನರ್ಸ್ ಹೇಳಿದರು.
ಗರ್ಭಿಣಿಯರಿಗೆ MRI ಸ್ಕ್ಯಾನ್ ಮಾಡಿದ್ರೆ ಗರ್ಭದಲ್ಲಿನ ಮಗು ಏಲಿಯನ್! ಏನಿದು ವಿಚಿತ್ರ ಅಂತೀರಾ? ಡಿಟೇಲ್ಸ್ ಓದಿ...
ವೈದ್ಯರು ಬೇಗನೆ ಕಾರ್ಯಪ್ರವೃತ್ತರಾಗಿ ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದರು, ಇದು ಮಹಿಳೆಯ ಗರ್ಭಾಶಯದಲ್ಲಿ ಮೂರನೇ ಮಗುವನ್ನು ಕಂಡುಹಿಡಿಯಲು ಕಾರಣವಾಯಿತು. ಆಕೆಗೆ ಅಲ್ಟ್ರಾಸೌಂಡ್ ಮೂಲಕ ಪರೀಕ್ಷೆ ಮಾಡಿದ್ದಾಗ ಅದರಲ್ಲಿ ಎರಡೇ ಮಕ್ಕಳು ಕಾನಿಸುತ್ತಿದ್ದರು. ಬಹುಶಃ ಮತ್ತೊಂದು ಮಗು ವಿಶೇಷ ಸ್ಥಾನದಲ್ಲಿ ಇದ್ದುದರಿಂದ ಅಲ್ಟ್ರಾಸೌಂಡ್ ದೃಷ್ಟಿಗೆ ಬೀಳಲಿಲ್ಲಾ ಎಂದಿದ್ದಾರೆ ವೈದ್ಯರು.
ಕೊನೆಯಲ್ಲಿ, ಮೂರನೇ ಮಗುವನ್ನು ಸುರಕ್ಷಿತವಾಗಿ ಆಪರೇಷನ್ ಮಾಡುವ ಮೂಲಕ ತರಲಾಯಿತು, ಅವಳಿ ಮಕ್ಕಳ ಜೊತೆ ಮೂರನೆಯ ಮಗುವನ್ನು ಕೂಡ ಕುಟುಂಬವು ಆದರಿಂದ ಬರಮಾಡಿಕೊಂಡಿದೆ.
ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...