ಗರ್ಭಿಣಿಯರಿಗೆ MRI ಸ್ಕ್ಯಾನ್ ಮಾಡಿದ್ರೆ ಗರ್ಭದಲ್ಲಿನ ಮಗು ಏಲಿಯನ್! ಏನಿದು ವಿಚಿತ್ರ ಅಂತೀರಾ? ಡಿಟೇಲ್ಸ್ ಓದಿ...
ಗರ್ಭಿಣಿಯರಿಗೆ MRI ಸ್ಕ್ಯಾನ್ ಮಾಡಿದ್ರೆ ಗರ್ಭದಲ್ಲಿನ ಮಗು ಏಲಿಯನ್ ಆಗುತ್ತದೆ! ಏನಿದು ವಿಚಿತ್ರ ಅಂತೀರಾ? ಡಿಟೇಲ್ಸ್ ಓದಿ...

ಅಮ್ಮನಾಗುವುದು ಪ್ರತಿಯೊಬ್ಬ ಹೆಣ್ಣಿನ ಕನಸು. ಒಮ್ಮೆ ಗರ್ಭಿಣಿಯಾದರೆ ಆ ಖುಷಿಯೇ ಬೇರೆ. ಹಲವರು ತಮಗೆ ಗಂಡು ಮಗು ಆಗಲಿ ಎಂದುಕೊಳ್ಳುತ್ತಿದ್ದರೆ, ಹೆಣ್ಣು ಮಗುವಿಗಾಗಿ ಹಂಬಲಿಸುವವರೂ ಅಷ್ಟೇ ಅಮ್ಮಂದಿರದಿದ್ದಾರೆ. ಮಗು ಯಾವುದೇ ಹುಟ್ಟಲಿ ಆರೋಗ್ಯವಂತವಾಗಿದ್ದರೆ ಸಾಕು ಎಂದುಕೊಳ್ಳುವವರೂ ಹಲವರಿದ್ದಾರೆ. ಹುಟ್ಟುವ ಮಗು ಹೇಗೆ ಇರುತ್ತದೆ, ನನ್ನ ಹಾಗಾ? ಅಪ್ಪನ ಹಾಗಾ? ಅಜ್ಜ-ಅಜ್ಜಿಯ ಹಾಗಾ...? ಹೀಗೆ ಹತ್ತಾರು ಪ್ರಶ್ನೆಗಳು ಗರ್ಭಿಣಿಯರನ್ನು ಕಾಡುವುದು ಸಹಜ. ವೈದ್ಯಕೀಯ ಕ್ಷೇತ್ರದಲ್ಲಿಯೂ ಸಾಕಷ್ಟು ಕ್ರಾಂತಿಯಾಗಿರುವುದರಿಂದ ಮಗು ಹೇಗೆ ಇದೆ ಎಂದು ಗರ್ಭಿಣಿಯರು ಗರ್ಭದಲ್ಲಿರುವ ಮಗುವನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಹುಟ್ಟಲಿರುವ ಮಗು ಹೆಣ್ಣೋ, ಗಂಡೋ ಎಂದು ತಿಳಿದುಕೊಳ್ಳಬಹುದಾದರೂ, ಭ್ರೂಣ ಪತ್ತೆ ಶಿಕ್ಷಾರ್ಹ ಅಪರಾಧ ಆಗಿರುವುದರಿಂದ ಅದನ್ನು ಬಹುತೇಕ ವೈದ್ಯರು ಮಾಡುವುದಿಲ್ಲ. ಆದರೆ ಮಗು ಹೇಗೆ ಹುಟ್ಟುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.
ಇಲ್ಲೊಂದು ಇಂಟರೆಸ್ಟಿಂಗ್ ವಿಷಯ ಇದೆ. ಅದೇನೆಂದ್ರೆ, ಗರ್ಭಿಣಿಯರಿಗೆ ಪರೀಕ್ಷೆ ಮಾಡುವಾಗ ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಲಾಗುತ್ತದೆ. ಹೊಟ್ಟೆಗೆ ಜೆಲ್ ಹಚ್ಚಿ ನಂತರ ವೈದ್ಯರು ಪರೀಕ್ಷೆ ಮಾಡುವಾಗ, ಪರದೆಯ ಮೇಲೆ ಮಗುವಿನ ಚಲನ ವಲನಗಳನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ಒಂದು ವೇಳೆ ಅಪ್ಪಿ ತಪ್ಪಿ MRI ಮಾಡಿದ್ರೆ ಏನಾಗುತ್ತೆ ಗೊತ್ತಾ? ಈ ಪರೀಕ್ಷೆಯಿಂದಲೂ ಮಗುವಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾದರು ಎಂಆರ್ಐನಲ್ಲಿ ನೀವು ಹೊಟ್ಟೆಯಲ್ಲಿರುವ ಮಗುವನ್ನು ನೋಡಿಬಿಟ್ಟರೆ, ಹೌಹಾರಿ, ಕಂಗಾಲಾಗಿ, ಬೆದರಿ ಹೋಗುವಿರಿ ಎನ್ನುತ್ತಾರೆ ವೈದ್ಯರು. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಇಲ್ಲಿರುವ ಫೋಟೋಗಳು!
ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...
ಹೌದು. ಎಂಆರ್‌ಐ ಮೂಲಕ ಗರ್ಭದಲ್ಲಿರುವ ಮಗುವನ್ನು ನೋಡಿದರೆ ಮಗು ಏಲಿಯನ್ ರೀತಿ ಕಾಣಿಸುತ್ತದೆ ಎನ್ನುವುದು ಈ ಫೋಟೋಗಳನ್ನು ನೋಡಿದರೆ ತಿಳಿದುಕೊಳ್ಳಬಹುದಾಗಿದೆ. ಹಾಲಿವುಡ್ ವೈಜ್ಞಾನಿಕ ಕಾದಂಬರಿ ಬ್ಲಾಕ್‌ಬಸ್ಟರ್‌ನಿಂದ ಬಂದ ಅನ್ಯಗ್ರಹ ಜೀವಿಗಳು ಎಂದು ನೀವು ಭಾವಿಸುತ್ತೀರಿ ಎನ್ನುತ್ತಾರೆ ವೈದ್ಯರು. ಇದನ್ನು ನೋಡಿದರೆ ಗರ್ಭಿಣಿಯರು ಅಲ್ಲಿಯೇ ಮೂರ್ಛೆ ತಪ್ಪಲೂಬಹುದು ಎನ್ನಲಾಗಿದೆ. ಇದೇ ಕಾರಣಕ್ಕೆ ಗರ್ಭಿಣಿಯರಿಗೆ ಅವರ ಗರ್ಭಧಾರಣೆಯ ಉದ್ದಕ್ಕೂ ನಿಯಮಿತವಾಗಿ MRI ನೀಡಲಾಗುವುದಿಲ್ಲ.
ಸಾಮಾನ್ಯವಾಗಿ ಮಗುವಿನ ಬೆಳವಣಿಗೆ ಬಗ್ಗೆ ಸಂದೇಹಗಳು ಇದ್ದ ಸಂದರ್ಭದಲ್ಲಿ ವೈದ್ಯರು ಎಂಆರ್‌ಐ ಮೊರೆ ಹೋಗುವುದು ಇದೆ. ಉದಾಹರಣೆಗೆ, ಭ್ರೂಣದ ಕುತ್ತಿಗೆ, ಎದೆಗೂಡಿನ, ಹೊಟ್ಟೆ ಮತ್ತು ಬೆನ್ನುಮೂಳೆಯ ವಿರೂಪಗಳನ್ನು ವ್ಯಾಖ್ಯಾನಿಸಲು ಮತ್ತು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ. ಆದರೆ, ಇದನ್ನು ಭಾವಿ ಅಮ್ಮನಿಗೆ ಮಾತ್ರ ತೋರಿಸುವುದಿಲ್ಲ ಎನ್ನಿಸುತ್ತದೆ.
ನಿಜಕ್ಕೂ ಏಲಿಯನ್‌ಗಳು ಇವೆಯಾ? ಇಸ್ರೋ ಅಧ್ಯಕ್ಷ ಡಾ.ಸೋಮನಾಥ್‌ರಿಂದ ಅಚ್ಚರಿಯ ವಿಷಯ ರಿವೀಲ್!