Womens Health: ಮಹಿಳೆ ಈ ವಸ್ತುಗಳನ್ನೆಲ್ಲಾ ಬಳಸೋದು ಆರೋಗ್ಯಕ್ಕೆ ಒಳ್ಳೇದಲ್ಲ
ಕೆಲವೊಂದು ವಸ್ತುಗಳ ಬಗ್ಗೆ ನಮಗೆ ಸರಿಯಾದ ಜ್ಞಾನವಿರೋದಿಲ್ಲ. ಎಲ್ಲರು ಬಳಕೆ ಮಾಡ್ತಾರೆ ಎನ್ನುವ ಕಾರಣಕ್ಕೆ ಇಲ್ಲವೆ ಇದು ಬೆಸ್ಟ್ ಎಂದು ನಾಲ್ಕೈದು ಮಂದಿ ಹೇಳಿದ್ರೆ ಕುರಿಗಳಂತೆ ನಾವೂ ಅದ್ರ ಪಾಲನೆ ಮಾಡ್ತೇವೆ. ನಮಗೆ ಆ ಕ್ಷಣಕ್ಕೆ ಪರಿಹಾರ ಬೇಕೇ ವಿನಃ ದೀರ್ಘಾವದಿಯಲ್ಲಿ ಅದ್ರ ಅಡ್ಡ ಪರಿಣಾಮವೇನು ಎಂಬುದನ್ನು ಆಲೋಚನೆ ಮಾಡೋದಿಲ್ಲ. ಇದ್ರಲ್ಲಿ ಮಹಿಳೆಯರು ಮುಂದಿದ್ದಾರೆ.
ಮಹಿಳೆಯರು ಸೌಂದರ್ಯಕ್ಕೆ ನೀಡಿದಷ್ಟು ಕಾಳಜಿಯನ್ನು ಆರೋಗ್ಯಕ್ಕೆ ನೀಡೋದಿಲ್ಲ. ಅನೇಕ ಬಾರಿ ತಪ್ಪು ಸೌಂದರ್ಯ ವರ್ದಕ ಬಳಕೆಯಿಂದ ಅವರ ಆರೋಗ್ಯ ಹದಗೆಡುತ್ತದೆ. ಕೆಲವೊಮ್ಮೆ ಇದು ಗಂಭೀರ ಖಾಯಿಲೆಗೆ ದಾರಿಮಾಡಿ ಕೊಡುತ್ತದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆ ಕೂಡ ವಸ್ತುಗಳ ಬಳಕೆ ವೇಳೆ ಎಚ್ಚರಿಕೆ ವಹಿಸಬೇಕಾಗುತ್ತದೆ. ನಾವಿಂದು ಮಹಿಳೆಯಾದವಳು ಯಾವೆಲ್ಲ ವಸ್ತುಗಳನ್ನು ಬಳಕೆ ಮಾಡ್ಬಾರದು ಎಂಬುದನ್ನು ನಿಮಗೆ ಹೇಳ್ತೆವೆ.
ಮಹಿಳೆ (Women) ಯರು ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬಳಸ್ಬೇಡಿ :
ಕಣ್ಣೇ ಹೋಗ್ಬಹುದು ಎಚ್ಚರ : ಹೆಣ್ಣಿಗೆ ಕಾಡಿಗೆ ಚೆಂದ. ಕಣ್ಣಿಗೆ ಕಾಡಿಗೆ ಹಚ್ಚದೆ ಮನೆಯಿಂದ ಹೊರಗೆ ಬೀಳೋಸ ಹುಡುಗಿಯರಲಿಲ್ಲ. ಕಾಜಲ್ (Kajal ) ಕಣ್ಣಿನ ಸೌಂದರ್ಯ (Beauty) ವನ್ನು ವೃದ್ಧಿಸೋದು ಮಾತ್ರವಲ್ಲ, ಕಣ್ಣನ್ನು ತಂಪು ಮಾಡುತ್ತದೆ. ಕಣ್ಣಿಗೆ ಆರಾಮ ನೀಡುತ್ತದೆ. ದೃಷ್ಟಿಯನ್ನು ಸುಧಾರಿಸುವ ಕೆಲಸ ಕೂಡ ಮಾಡುತ್ತದೆ. ಆದ್ರೆ ಕಾಜಲ್ ಗೆ ರಾಸಾಯನಿಕ ಬಳಸೋದ್ರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆ. ಸೈಕ್ಲೋಪೆಂಟಾಸಿಲೋಕ್ಸೇನ್ ಹೊಂದಿರುವ ಕೃತಕವಾಗಿ ವರ್ಣದ್ರವ್ಯ ಕಾಜಲ್ ಡಾರ್ಕ್ ಸರ್ಕಲ್, ಸೋಂಕು ಸೇರಿದಂತೆ ಅನೇಕ ಕಣ್ಣಿನ ರೋಗಕ್ಕೆ ಕಾಜಲ್ ಕಾರಣವಾಗ್ತಿದೆ. ಹಾಗಾಗಿ ನೀವು ಆಯುರ್ವೇದಿಕ್ ಕಾಜಲ್ ಬಳಕೆ ಮಾಡಿ. ತುಳಸಿ, ತ್ರಿಪಲಾ, ಕ್ಯಾಸ್ಟರಾಯಿಲ್ ಇರುವ ಕಾಜಲ್ ಬಳಕೆ ಮಾಡಿ ಎನ್ನುತ್ತಾರೆ ತಜ್ಞರು.
ಜಪಾನ್ ಹೆಣ್ಮಕ್ಕಳು ಇಷ್ಟು ಚೆಂದ ಇರ್ತಾರಲ್ಲ, ಹೊಟ್ಟೆಗೇನು ತಿಂತಾರೆ?
ಹೇರ್ ರಿಮೂವರ್ : ಖಾಸಗಿ ಅಂಗದಲ್ಲಿರುವ ಕೂದಲು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೇ ಅನೇಕ ಹೇರ್ ರಿಮೂವಲ್ ಕ್ರೀಮ್ ಹಾಗೂ ಉತ್ಪನ್ನ ತಯಾರಿಸುವ ಕಂಪನಿಗಳು ಹೇಳ್ತಿವೆ. ಆದ್ರೆ ಖಾಸಗಿ ಅಂಗದಲ್ಲಿರುವ ಕೂದಲು ಮೂತ್ರನಾಳದ ಸೋಂಕು ತಡೆಗಟ್ಟಲು ಮತ್ತು ಸೆಕ್ಸ್ ವೇಳೆ ಸೋಂಕು ಹರಡದಂತೆ ತಡೆಯುತ್ತದೆ ಎಂದು ವೈದ್ಯರು ಹೇಳ್ತಾರೆ. ಖಾಸಗಿ ಅಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಅಂಗದಲ್ಲಿರುವ ಕೂದಲನ್ನು ತೆಗೆಯುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ ಅದಕ್ಕೆ ಅನೇಕ ವಸ್ತುಗಳ ಬಳಕೆ ಮಾಡ್ತಾರೆ. ನೀವು ಬಳಸುವ ಹೇರ್ ರಿಮೂವಲ್ ಕ್ರೀಮ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನು ವ್ಯಾಕ್ಸಿನ್ ಕೂಡ ಚರ್ಮಕ್ಕೆ ಹಾನಿ ಮಾಡುತ್ತದೆ. ಇನ್ನು ಶೇವಿಂಗ್ ಕೂಡ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ. ಇದಲ್ಲದೆ ರೇಸರ್ ಕ್ಲೀನಿಂಗ್ ಕೂಡ ದೀರ್ಘ ಸಮಯದಲ್ಲಿ ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಟ್ರಿಮ್ಮಿಂಗ್ ಎಲ್ಲಕ್ಕಿಂತ ಸುರಕ್ಷಿತ ವಿಧಾನವಾಗಿದೆ. ಕ್ಲೀನ್ ಹಾಗೂ ಶಾರ್ಪ್ ಆಗಿರುವ ಕತ್ತರಿಯನ್ನು ಬಳಕೆ ಮಾಡ್ಬೇಕು.
ಮುಟ್ಟಿನ ನೋವು ನಿವಾರಕ ಮಾತ್ರೆ : ಮುಟ್ಟಿನ ನೋವು ಕಾಣಿಸಿಕೊಳ್ತಿದ್ದಂತೆ ಮಹಿಳೆಯರು ಮಾತ್ರೆ ಸೇವನೆ ಮಾಡ್ತಾರೆ. ಶೇಕಡಾ 100ರಲ್ಲಿ 51ರಷ್ಟು ಮಹಿಳೆಯರಿಗೆ ಈ ಮಾತ್ರೆ ಸೇವನೆ ಮಾಡಿದ ನಂತ್ರವೂ ನೋವು ಕಾಣಿಸಿಕೊಳ್ಳುತ್ತಂತೆ. ಇದು ಆ ಕ್ಷಣಕ್ಕೆ ಪರಿಹಾರವೇ ಹೊರತು ದೀರ್ಘಕಾಲಕ್ಕೆ ಇದು ಒಳ್ಳೆಯದಲ್ಲ. ಇದರ ಸೇವನೆಯಿಂದ ತಲೆನೋವು, ಹೊಟ್ಟೆಯ ಸಮಸ್ಯೆ, ಹೊಟ್ಟೆಯಲ್ಲಿ ಉರಿ, ವಾಕರಿಕೆ ಸೇರಿದಂತೆ ಅನೇಕ ಅಡ್ಡಪರಿಣಾಮಗಳು ಕಾಡುತ್ತವೆ.
ಮುಟ್ಟಿನ ನೋವಿಗೆ ಒಳ್ಳೆಯ ಚಿಕಿತ್ಸೆ ಅಂದ್ರೆ ಹೀಟ್ ಥೆರಪಿ. ಅನೇಕ ಅಧ್ಯಯನಗಳು ಇದನ್ನು ಸ್ಪಷ್ಟಪಡಿಸಿವೆ. ಯಾವುದೇ ಅಡ್ಡಪರಿಣಾಮ ಕೂಡ ಇದ್ರಲ್ಲಿಲ್ಲ. ಹೀಟ್ ಪ್ಯಾಚಸ್ ಗಳನ್ನು ನೀವು ಬಳಕೆ ಆಡ್ಬಹುದು. ಹಾಟ್ ವಾಟರ್ ಪ್ಯಾಕ್ ಕೂಡ ನೀವು ಬಳಸಬಹುದು. ಇದಲ್ಲದೆ ಕ್ಯಾಸ್ಟ್ರೋಲ್ ಎಣ್ಣೆಯಿಂದ ಹೊಟ್ಟೆಗೆ ಮಸಾಜ್ ಮಾಡಿದ್ರೆ ನೋವು ಕಡಿಮೆಯಾಗುತ್ತದೆ. ಇದಲ್ಲದೆ ಚೈಲ್ಡ್ ಫೋಸ್ ಯೋಗ ಕೂಡ ನಿಮ್ಮ ಮುಟ್ಟಿನ ನೋವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.
ಸಂಬಂಧ ಚೆನ್ನಾಗಿರ್ಬೇಕಾ? ಮೂರು ವಿಚಾರಗಳನ್ನ ಕಲಿತುಕೊಳ್ಬೇಡಿ
ಸಿಂಥೆಟಿಕ್ ಒಳ ಉಡುಪು : ಇದು ನೋಡಲು ಸುಂದರವಾಗಿರುತ್ತೆ. ಹಾಗೆ ಪ್ಯಾಂಟಿ ಲೈನ್ ಕಾಣೋದಿಲ್ಲ. ಹಾಗಾಗಿಯೇ ಹೆಚ್ಚಿನ ಮಹಿಳೆಯರು ಇದನ್ನು ಬಳಕೆ ಮಾಡ್ತಾರೆ. ಆದ್ರೆ ಸಿಂಥೆಟಿಕ್ ಒಳ ಉಡುಪು ಆರೋಗ್ಯಕ್ಕೆ ಹಾನಿಕರ. ಬೆವರನ್ನು ಇದು ಹೊರ ಹಾಕುವ ಶಕ್ತಿ ಹೊಂದಿರೋದಿಲ್ಲ. ಸರಿಯಾಗಿ ಆಮ್ಲಜನರ ಖಾಸಗಿ ಅಂಗಕ್ಕೆ ಹೋಗೋದಿಲ್ಲ. ಹಾಗಾಗಿ ಅನೇಕ ಸೋಂಕು ನಿಮ್ಮನ್ನು ಕಾಡುತ್ತದೆ. ಸಂಶೋಧನೆ ಪ್ರಕಾರ ಕಾಟನ್ ಒಳ ಉಡುಪು ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಹೆಚ್ಚು ಬಿಗಿಯಾದ ಬಟ್ಟೆ ಬಳಸಬೇಡಿ ಎನ್ನುತ್ತಾರೆ ತಜ್ಞರು.