Asianet Suvarna News Asianet Suvarna News

Women Safety: ಬ್ಯಾಗಲ್ಲಿ ಪೆಪ್ಪರ್ ಸ್ಪೇ, ಗನ್ ಏನಾದರೂ ಇಟ್ಕೊಂಡಿದ್ದೀರಾ?

ಮಹಿಳೆ ರಕ್ಷಣೆಗೆ ಅನೇಕ ಕಾನೂನಿದೆ, ಪೊಲೀಸರಿದ್ದಾರೆ. ಆದ್ರೆ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಕಲಿತಿರಬೇಕು. ಕೆಲವೊಂದು ಎಚ್ಚರಿಕೆ ಹೆಜ್ಜೆ ಆಕೆಯನ್ನು ಸದಾ ಸುರಕ್ಷಿತವಾಗಿಟ್ಟಿರುತ್ತದೆ. ರಕ್ಷಣೆಗೆ ಆಕೆ ಏನು ಮಾಡ್ಬೇಕು ಗೊತ್ತಾ?

Women Self Safety Tips
Author
First Published Jan 14, 2023, 12:20 PM IST

ನಮ್ಮ ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಗೌರವವಿದೆ ನಿಜ. ಆದ್ರೆ ಈ ಗೌರವ ಕೇವಲ ದಾಖಲೆ, ಬಾಯಿ ಮಾತಿಗೆ ಸೀಮಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಎಲ್ಲೆ ಮೀರಿವೆ. ಅತ್ಯಾಚಾರ, ಕೊಲೆ, ಕಿರುಕುಳ ಹೀಗೆ ಅನೇಕ ಘಟನೆಗಳು ಪ್ರತಿ ದಿನ ವರದಿಯಾಗ್ತಿವೆ. ಹೆಣ್ಣು ಮಗು ಮನೆಯಲ್ಲಿ ಒಂಟಿಯಾಗಿರೋದೆ ಕಷ್ಟವಾಗಿದೆ. ಹಾಗಿರುವಾಗ ಬೀದಿಯಲ್ಲಿ ಒಬ್ಬಳೆ ನಡೆದು ಹೋಗುವುದು ಅಪಾಯವನ್ನು ಆಹ್ವಾನಿಸಿದಂತೆ ಅಂದ್ರೆ ತಪ್ಪಾಗೋದಿಲ್ಲ. ಸರ್ಕಾರ ಹಾಗೂ ಕಾನೂನು ಹೆಣ್ಮಕ್ಕಳ ರಕ್ಷಣೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರ ಬಗ್ಗೆ ಹೆಣ್ಣು ಮಕ್ಕಳು ಮಾಹಿತಿ ಹೊಂದಿರುವ ಜೊತೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕು. ಆಕೆ ಎಚ್ಚರಿಕೆವಹಿಸಿದ್ರೆ ಮುಂದೆ ಬರುವ ಅಪಾಯವನ್ನು ತಪ್ಪಿಸಬಹುದು. ನಾವಿಂದು ಮಹಿಳೆ ತನ್ನ ರಕ್ಷಣೆಗೆ ಏನೆಲ್ಲ ಮಾಡ್ಬೇಕು ಎಂಬುದನ್ನು ಹೇಳ್ತೆವೆ.

ಮಹಿಳೆ (Woman) ಹೀಗೆ ಮಾಡ್ಬೇಕು ತನ್ನ ರಕ್ಷಣೆ (Protection) : 
ಸ್ನೇಹಿತ (Friend) ರ ಬಗ್ಗೆ ಇರಲಿ ಗಮನ :
ಒಂದೇ ಕಡೆ ಹೆಣ್ಣು ಹಾಗೂ ಗಂಡು ಮಕ್ಕಳು ಕುಳಿತು ಕಲಿಯುವ ಸಮಯವಿದು. ಇಬ್ಬರಿಗೂ ಸಮಾನತೆ ನೀಡಲಾಗಿದೆ. ಹಾಗೆಯೇ ಹೆಣ್ಮಕ್ಕಳಿಗೆ ಗಂಡು ಮಕ್ಕಳು ಸ್ನೇಹಿತರಿರೋದು ಕೂಡ ಸಾಮಾನ್ಯವಾಗಿದೆ. ಆದ್ರೆ ಹುಡುಗ್ರ ಸ್ನೇಹ ಬೆಳೆಸುವ ಮುನ್ನ ಹುಡುಗಿಯಾದವಳು ಕೆಲ ಸಂಗತಿ ತಿಳಿದಿರಬೇಕು. ಯಾವುದೇ ಕಾರಣಕ್ಕೂ ಆರಂಭದಲ್ಲಿಯೇ ತನ್ನೆಲ್ಲ ವಿಷ್ಯವನ್ನು ಹೇಳಬಾರದು. ಹಾಗೆಯೇ ಇಬ್ಬರ ಮಧ್ಯೆ ಒಂದು ಗೆರೆ ಸದಾ ಇರುವಂತೆ ನೋಡಿಕೊಳ್ಳಬೇಕು. ಸಾಧ್ಯವಾದ್ರೆ ಗೆಳೆಯರನ್ನು ಕುಟುಂಬದ ಸದಸ್ಯರಿಗೆ ಪರಿಚಯಿಸಬೇಕು. ಗೆಳೆಯನ ಜೊತೆ ಒಂಟಿಯಾಗಿ ಯಾವುದೇ ಪ್ರದೇಶಕ್ಕೆ ಹೋಗದಿರುವುದು ಒಳ್ಳೆಯದು. ಹೋಗುವ ಸಂದರ್ಭ ಬಂದ್ರೆ ಮನೆಯವರಿಗೆ ಕರೆ ಮಾಡಿ ಈ ವಿಷ್ಯವನ್ನು ತಿಳಿಸಿ. ಒಂದ್ವೇಳೆ ಗಮ್ಯ ಸ್ಥಾನವನ್ನು ಆತ ಬದಲಿಸಿದ್ರೆ ಖಂಡಿತಾ ಆತನ ಜೊತೆ ಹೋಗ್ಬೇಡಿ. ಮೊಬೈಲ್‌ನಲ್ಲಿ ಜಿಪಿಎಸ್ ಸಿಸ್ಟಮ್ ಮತ್ತು ರೆಕಾರ್ಡಿಂಗ್ ಸಿಸ್ಟಮ್ ಡೌನ್‌ಲೋಡ್ ಆಗಿರಲಿ. ಪೋಷಕರ ಮೊಬೈಲ್ ನಲ್ಲೂ ಇದು ಡೌನ್ಲೋಡ್ ಆಗಿರಲಿ. 

ಸಿಸೇರಿಯನ್ ಹೆರಿಗೆ ನಂತ್ರ ಸೀನುವಾಗ ಎಚ್ಚರವಿರಲಿ ಅಂತಾರಲ್ಲ, ಏಕೆ?

ಡೇಟಿಂಗ್ ವೇಳೆ ಇರಲಿ ಎಚ್ಚರ : ಡೇಟಿಂಗ್ ಮಾಡುವ ಸಂದರ್ಭದಲ್ಲಿ ಕೂಡ ಮೈಮರೆಯಬಾರದು. ಬ್ಲೈಂಡ್ ಡೇಟ್ ತೆಗೆದುಕೊಳ್ಳದಿರುವುದು ಉತ್ತಮ. ಇದಕ್ಕೆ ಹೋಗ್ಲೇಬೇಕು ಎನ್ನುವವರು ನಿರ್ಜನ ಪ್ರದೇಶವನ್ನು ಎಂದೂ ಆಯ್ಕೆ ಮಾಡಬೇಡಿ. ನಿಮ್ಮ ಯಾವುದೇ ಖಾಸಗಿ ಫೋಟೋವನ್ನು ಆತ ಎಷ್ಟೇ ಆಪ್ತ ಎನ್ನಿಸಿದ್ರೂ ಹಂಚಿಕೊಳ್ಳದಿರುವುದು ಒಳ್ಳೆಯದು. ಹಾಗೆಯೇ ಪಾನೀಯ ಸೇವನೆ ವೇಳೆ ಗಮನವಿರಲಿ. ಮದ್ಯಪಾನ ನಿಮ್ಮ ಮೂಡ್ ಬದಲಿಸುತ್ತದೆ. 

ಪಾರ್ಟಿಯಲ್ಲಿ ನಿಯಮ ಮರೆಯಬೇಡಿ : ಪಾರ್ಟಿಯಲ್ಲಿ ಯಾವುದೇ ಅಪರಿಚಿತ ವ್ಯಕ್ತಿ ನೀಡಿದ ಪಾನೀಯ ಸೇವನೆ ಮಾಡಬೇಡಿ. ಅಥವಾ ನಿಮಗೆ ಪ್ರತ್ಯೇಕವಾಗಿ ನೀಡಿದ ಆಹಾರ, ಪಾನೀಯ ಸೇವಿಸಬೇಡಿ. ಇತ್ತೀಚಿನ ದಿನಗಳಲ್ಲಿ ಅಮಲಿನ ಪದಾರ್ಥ ನೀಡಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪಾರ್ಟಿಗಳಿಗೆ ಹೋಗುವಾಗ ಸ್ನೇಹಿತರು ಜೊತೆಗಿರಲಿ. ನಿಮ್ಮ ದೇಹದಲ್ಲಿ ಬದಲಾವಣೆಯಾಗ್ತಿದೆ ಎಂಬುದು ನಿಮ್ಮ ಅರಿವಿಗೆ ಬಂದ್ರೆ ತಕ್ಷಣ ಕುಟುಂಬಸ್ಥರಿಗೆ ಕರೆ ಮಾಡಿ. 

ರಸ್ತೆಯಲ್ಲಿ ನಡೆಯುವಾಗ ಇಡಿ ಎಚ್ಚರಿಕೆ ಹೆಜ್ಜೆ : ಯಾವುದೇ ಕಾರಣಕ್ಕೂ ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಓಡಾಡಬೇಡಿ. ಹಗಲಿನಲ್ಲಿ ಕೂಡ ಅಪರಾಧಗಳು ಹೆಚ್ಚಾಗ್ತಿರುವ ಕಾರಣ ನೀವು ಆದಷ್ಟು ಜನರು ಓಡಾಡುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಅಪರಿಚಿತ ವಾಹನವನ್ನು ಏರಬೇಡಿ. ವಿಳಾಸ ಕೇಳುವ ನೆಪದಲ್ಲಿ ಅಪರಿಚಿತ ವ್ಯಕ್ತಿ ನಿಮ್ಮ ಬಳಿ ಬಂದ್ರೆ ಅದಕ್ಕೆ ಹೆಚ್ಚು ಗಮನ ನೀಡಬೇಡಿ. ಖಾಸಗಿ ವಾಹನದಲ್ಲಿ ಪ್ರಯಾಣ ಬೇಡ. ಸರ್ಕಾರಿ ಬಸ್ ನಿಲ್ಲುವ ಸ್ಥಳದಲ್ಲಿಯೇ ನಿಲ್ಲಿ. ಟ್ಯಾಕ್ಸಿ ಅಥವಾ ಆಟೋ ಹತ್ತಿದ್ರೆ ಮನೆಗೆ ಕರೆ ಮಾಡಿ ನಂಬರ್ ತಿಳಿಸಿ. ಈಗ ಟ್ರ್ಯಾಕ್ ವ್ಯವಸ್ಥೆ ಇದ್ದು ನೀವು ಲಿಂಕ್ ಹಂಚಿಕೊಳ್ಳಬಹುದು. 

Women Finance: ಮಹಿಳೆಗೂ ಇರಲಿ ಬ್ಯಾಂಕಿಂಗ್ ಜ್ಞಾನ

ಸುರಕ್ಷತಾ ವಸ್ತು ನಿಮ್ಮ ಬಳಿ ಇರಲಿ : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಗೆ ಅನೇಕ ವಸ್ತುಗಳು ಲಭ್ಯವಿದೆ. ಮೊಬೈಲ್ ಅಪ್ಲಿಕೇಷನ್, ಅಲಾರಾಂ, ಗನ್, ಸ್ಪ್ರೇ ಎಲ್ಲವೂ ಇದ್ದು, ಅದ್ರಲ್ಲಿ ನಿಮಗೆ ಅನುಕೂಲವಾಗುವುದನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ.
 

Follow Us:
Download App:
  • android
  • ios