ಹಗಲು-ರಾತ್ರಿ, ಜಾತಿ-ಧರ್ಮ, ವಯಸ್ಸು ಯಾವುದರ ವ್ಯತ್ಯಾಸವೂ ಇಲ್ಲದೆ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಹೀಗಾಗಿ ಹೆಣ್ಮಕ್ಕಳು ಉದ್ಯೋಗ, ಕೆಲಸಕ್ಕಾಗಿ ನಗರಗಳಿಗೆ ಬರಲು ಹಿಂಜರಿಯುತ್ತಾರೆ. ದೇಶದಲ್ಲಿ ಮಹಿಳೆಯರಿಗೆ ಸೇಫ್ ಆಗಿರೋ ಸಿಟಿ ಯಾವುದು ? ಇಲ್ಲಿದೆ ಮಾಹಿತಿ.

ಹಿಳೆಯೊಬ್ಬಳು ಮಧ್ಯರಾತ್ರಿ ನಿರ್ಭೀತಗಳಾಗಿ ಓಡಾಡಿದಾಗ ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ಬಂದಂತಾಗುತ್ತದೆ ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೇಳಿದ್ದರು. ಆದ್ರೆ ಹೆಣ್ಣು ಒಬ್ಬಂಟಿಯಾಗಿ ರಾತ್ರಿ ಓಡಾಡೋದಿರಲಿ, ಹಗಲು ಓಡಾಡೋದೆ ಕಷ್ಟ ಎಂಬಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಒಂಟಿಯಾಗಿದ್ದರೂ, ಗುಂಪಲ್ಲಿದ್ದರೂ ಅಶ್ಲೀಲ ಮಾತು, ಲೈಂಗಿಕ ಕಿರುಕುಳ, ದೌರ್ಜನ್ಯವನ್ನು ಎದುರಿಸಬೇಕಾಗುತ್ತದೆ. ರಾತ್ರಿ ಮಾತ್ರವಲ್ಲ ಹಗಲೂ ಸಹ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆ. ಹೀಗಾಗಿ ಹೆಣ್ಣುಮಕ್ಕಳು ಮನೆ ಬಿಟ್ಟು ನಗರಕ್ಕೆ ವಿದ್ಯಾಭ್ಯಾಸ, ಉದ್ಯೋಗಕ್ಕೆಂದು ಬರಲು ಭಯಪಡುವಂತಾಗಿದೆ. ದೇಶದ ಎಲ್ಲಾ ಮೆಟ್ರೋಪಾಲಿಟನ್ ನಗರಗಳು ಹೆಣ್ಣುಮಕ್ಕಳ ಪಾಲಿಗೆ ಅನ್‌ಸೇಫ್ ಎಂಬಂತಾಗಿಬಿಟ್ಟಿದೆ.

ಭಾರತದ ಸೇಫ್ ನಗರಗಳ ಪಟ್ಟಿಯಲ್ಲಿ ಚೆನ್ನೈಗೆ ಅಗ್ರಸ್ಥಾನ
ಭಾರತದಲ್ಲಿ ಹೆಣ್ಣು ಮಕ್ಕಳು ಕೆಲವೇ ನಗರಗಳನ್ನು ಮಾತ್ರ ಸೇಫ್ ಎಂದು ಅಂದುಕೊಂಡಿದ್ದಾರೆ. ಆ ಟಾಪ್ 10 ನಗರಗಳಲ್ಲಿ ಚೆನ್ನೈ, ಪುಣೆ, ಬೆಂಗಳೂರು, ಹೈದರಾಬಾದ್, ಮುಂಬೈ, ಅಹಮದಾಬಾದ್, ವಿಶಾಖಪಟ್ಟಣಂ, ಕೋಲ್ಕತ್ತಾ, ಕೊಯಮತ್ತೂರು ಮತ್ತು ಮಧುರೈ ನಗರಗಳು ಸೇರುತ್ತವೆ. 1 ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಪಟ್ಟಣಗಳಲ್ಲಿ, ತಿರುಚಿರಾಪಳ್ಳಿ, ವೆಲ್ಲೂರು, ಈರೋಡ್, ಸೇಲಂ, ತಿರುಪುರ್, ಪುದುಚೇರಿ, ಶಿಮ್ಲಾ, ಮಂಗಳೂರು, ತಿರುವನಂತಪುರಂ ಮತ್ತು ಬೆಳಗಾವಿಗೆ ಆದ್ಯತೆ ನೀಡಲಾಗುತ್ತದೆ.

ದಿನವಿಡೀ ಒಂದೇ ಸ್ಯಾನಿಟರಿ ಪ್ಯಾಡ್ ಧರಿಸೋ ಅಭ್ಯಾಸವಿದ್ಯಾ? ಹೆಲ್ತ್ ಹಾಳಾಗೋದು ಗ್ಯಾರಂಟಿ

ಹಲವು ರಾಜ್ಯಗಳ ರಾಜಧಾನಿಗಳು ನಾಟ್ ಸೇಫ್‌
ಹಲವು ರಾಜ್ಯಗಳ ರಾಜಧಾನಿ ನಗರಗಳು ಮಹಿಳೆಯರ (Women) ನೆಚ್ಚಿನ ತಾಣ ಎಂಬ ಪಟ್ಟಿಯಲ್ಲಿ ಅಗ್ರ 25 ಸ್ಥಾನಗಳಲ್ಲಿ ಕಾಣಿಸಿಕೊಂಡಿಲ್ಲ.ಟಾಪ್ 25 ರಲ್ಲಿ ಕಾಣಿಸಿಕೊಂಡಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ರಾಜಧಾನಿಗಳು (Capital) ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಕೇರಳ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮತ್ತು ಒಡಿಶಾಗೆ ಸೇರಿವೆ. ಹೆಚ್ಚಿನ ರಾಜ್ಯ ರಾಜಧಾನಿಗಳು ರಾಜಕೀಯವಾಗಿ, ಸಾಮಾಜಿಕ-ಆರ್ಥಿಕವಾಗಿ, ಪರಿಸರ ಮತ್ತು ಅಭಿವೃದ್ಧಿ ಸಾಮಾನ್ಯವಾಗಿ ಹೆಚ್ಚಿನ ಗಮನವನ್ನು ಪಡೆಯುತ್ತವೆ. ಆದರೆ ಇವು ಮಹಿಳಾ ಸ್ನೇಹಿ ನಗರಗಳಲ್ಲ.

ಅವತಾರ್ ಸಂಸ್ಥಾಪಕ ಸೌಂದರ್ಯ ರಾಜೇಶ್ ಪ್ರಕಾರ, ದಕ್ಷಿಣ ಭಾರತದ ನಗರಗಳು (City) ಐತಿಹಾಸಿಕವಾಗಿ ಮಹಿಳೆಯರಿಗೆ ಹೆಚ್ಚು ಬೆಂಬಲ ನೀಡಿವೆ. ವಿಶ್ವಸಂಸ್ಥೆಯು ಮಹಿಳಾ ಸ್ನೇಹಿ ನಗರಗಳನ್ನು ಮಹಿಳೆಯರಿಗೆ ಆರೋಗ್ಯ (Health), ಶಿಕ್ಷಣ (Education), ಉದ್ಯೋಗಾವಕಾಶಗಳು, ಸಮಗ್ರ ನಗರ ಸಾಮಾಜಿಕ ಸೇವಾ ವ್ಯವಸ್ಥೆ ಮತ್ತು ಸುರಕ್ಷತೆಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ವ್ಯಾಖ್ಯಾನಿಸುತ್ತದೆ. ಮಹಿಳಾ ಸಮಸ್ಯೆಗಳ ಬಗ್ಗೆ ಸ್ಥಳೀಯ ಸರ್ಕಾರವು ಜಾಗೃತವಾಗಿರುವ ನಗರಗಳು ಇವು ಎಂದು ಅವರು ವಿವರಿಸಿದರು. ನವದೆಹಲಿ ನಂಬಲಾಗದ ಮೆಟ್ರೋ ವ್ಯವಸ್ಥೆಯನ್ನು ಹೊಂದಿರಬಹುದು, ಆದರೆ ಅಪರಾಧ ಪ್ರತಿಕ್ರಿಯೆ ದರವು ಕಳಪೆಯಾಗಿದೆ ಎಂಬುದು ಸತ್ಯ. ದೇಶದ ರಾಜಧಾನಿಯಲ್ಲಿ ಕೆಲಸ ಮಾಡಲು ಇತರ ಸ್ಥಳಗಳ ಮಹಿಳೆಯರಿಗೆ ಸಾಕಷ್ಟು ಹಾಸ್ಟೆಲ್‌ಗಳನ್ನು ನಗರವು ಒದಗಿಸಬೇಕಾಗಿದೆ ಎಂದು ಅವರು ಹೇಳಿದರು.

.Money Saving Tips: ಹೂಡಿಕೆ ಮಾಡುವ ಮುನ್ನ ಮಹಿಳೆಯರು ಈ ಸಂಗತಿ ತಿಳಿದಿರ್ಬೇಕು

ಶ್ರೇಣಿ-1, 2 ಮತ್ತು 3 ನಗರಗಳು ಸೇರಿದಂತೆ 111 ನಗರಗಳಲ್ಲಿ 783 ಮಹಿಳೆಯರ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಸಾಮಾಜಿಕ ಸೇರ್ಪಡೆ ಸ್ಕೋರ್ ಮತ್ತು ಕೈಗಾರಿಕಾ ಸೇರ್ಪಡೆಗೆ ಮಹಿಳೆಯರ ಸಂಖ್ಯೆಯನ್ನು ಆಧರಿಸಿ ಇದನ್ನು ನಿರ್ಣಯಿಸಲಾಗಿದೆ. ಸೂಚ್ಯಂಕದ 111 ನಗರಗಳಲ್ಲಿ, 47 ಮಾತ್ರ ರಾಷ್ಟ್ರೀಯ ಸರಾಸರಿ 37.75 ಕ್ಕಿಂತ ಹೆಚ್ಚಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಧ್ಯಯನದಲ್ಲಿ ಸುಮಾರು 58 ಪ್ರತಿಶತ ನಗರಗಳು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ, ಇದು ಸ್ವತಃ 50 ರ ಸರಾಸರಿಗಿಂತ ಸುಮಾರು 12 ಅಂಕಗಳು ಕಡಿಮೆಯಾಗಿದೆ. ಬಹುಪಾಲು ನಗರಗಳಿಗೆ ತಕ್ಷಣದ ಸುಧಾರಣೆ (Improve)ಯಾಗಬೇಕು ಎಂದು ಇದು ಅಧಿಕಾರಿಗಳಿಗೆ ಸ್ಪಷ್ಟವಾದ ಕರೆಯಾಗಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.