MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ದಿನವಿಡೀ ಒಂದೇ ಸ್ಯಾನಿಟರಿ ಪ್ಯಾಡ್ ಧರಿಸೋ ಅಭ್ಯಾಸವಿದ್ಯಾ? ಹೆಲ್ತ್ ಹಾಳಾಗೋದು ಗ್ಯಾರಂಟಿ

ದಿನವಿಡೀ ಒಂದೇ ಸ್ಯಾನಿಟರಿ ಪ್ಯಾಡ್ ಧರಿಸೋ ಅಭ್ಯಾಸವಿದ್ಯಾ? ಹೆಲ್ತ್ ಹಾಳಾಗೋದು ಗ್ಯಾರಂಟಿ

ಮುಟ್ಟಿನ ಸಮಯದಲ್ಲಿ ಮಹಿಳೆಯರು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿ 4 ಅಥವಾ 5 ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್ ಅನ್ನು ಬದಲಾಯಿಸಬೇಕು. ಇಲ್ಲದಿದ್ದರೆ, ಯೋನಿ ತುರಿಕೆಯಿಂದ ಯೋನಿ ವಾಸನೆಯವರೆಗೆ ಅನೇಕ ಸಮಸ್ಯೆಗಳು ಎದುರಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

2 Min read
Author : Vinutha Perla
Published : Mar 04 2023, 03:49 PM IST
Share this Photo Gallery
  • FB
  • TW
  • Linkdin
  • Whatsapp
17

ಋತುಚಕ್ರದ ಸಮಯದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೊಟ್ಟೆ ನೋವು, ಸೆಳೆತ, ಮೂಡ್ ಸ್ವಿಂಗ್, ಆಯಾಸ, ದೌರ್ಬಲ್ಯ ಸಮಸ್ಯೆ. ಮೊದಲಾದವು. ಈ ಎಲ್ಲಾ ಸಮಸ್ಯೆಯಿದ್ದರೂ ಪಿರಿಯಡ್ ಟೈಮ್ ನಲ್ಲಿ ನೈರ್ಮಲ್ಯವನ್ನು ಪಾಲಿಸಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮುಟ್ಟಿನ ಸಮಯದಲ್ಲಿ ದೇಹದಿಂದ ಬ್ಯಾಕ್ಟೀರಿಯಾಗಳು ಬಿಡುಗಡೆಯಾಗುತ್ತವೆ. ಅದರಲ್ಲೂ ಪ್ರತಿ 4 ಗಂಟೆಗೊಮ್ಮೆ ಸ್ಯಾನಿಟರಿ ಪ್ಯಾಡ್ ಬದಲಾಯಿಸದಿದ್ದರೆ ಹಲವು ಕಾಯಿಲೆಗಳು ಕಾಡಬಹುದು.

27

ತಜ್ಞರ ಪ್ರಕಾರ, ಅನೇಕ ಮಹಿಳೆಯರು ತಮ್ಮ ರಕ್ತದ ಹರಿವನ್ನು ಅವಲಂಬಿಸಿ ಪ್ಯಾಡ್‌ಗಳನ್ನು ಬದಲಾಯಿಸುತ್ತಾರೆ. ಆದರೆ ತಜ್ಞರು ಹೇಳುವಂತೆ ರಕ್ತದ ಹರಿವು ಹೆಚ್ಚಿರಲಿ ಅಥವಾ ಕಡಿಮೆಯಾಗಿರಲಿ ಪ್ರತಿ 4 ಗಂಟೆಗಳಿಗೊಮ್ಮೆ ಪ್ಯಾಡ್‌ನ್ನು ಬದಲಾಯಿಸಬೇಕು. ಏಕೆಂದರೆ ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ರಕ್ತಸ್ರಾವವಾಗದೆ ದಿನವಿಡೀ ಪ್ಯಾಡ್ ಇಟ್ಟರೆ ಸೋಂಕುಗಳು ಬರುತ್ತವೆ. ಮೇಲಾಗಿ ಯೋನಿಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

37

ಲ್ಯುಕೋರಿಯಾ: ಲ್ಯುಕೇರಿಯಾವು ಯೋನಿಯಿಂದ ಬಿಳಿ ಅಥವಾ ಹಳದಿ ಸ್ರವಿಸುವಿಕೆಯಾಗಿದೆ. ಇದರಿಂದ ಮಹಿಳೆಯರು ದುರ್ಬಲರಾಗುತ್ತಾರೆ. ತುಂಬಾ ಆಯಾಸವನ್ನು ಅನುಭವಿಸುತ್ತಾರೆ. ತಜ್ಞರ ಪ್ರಕಾರ, ಸಮಯಕ್ಕೆ ಸರಿಯಾಗಿ ಪ್ಯಾಡ್ ಬದಲಾಯಿಸದ ಕಾರಣ ಲ್ಯುಕೇಮಿಯಾ ಉಂಟಾಗುತ್ತದೆ.

47

ಯೋನಿ ತುರಿಕೆ: ಚರ್ಮದ ತುರಿಕೆ ಚರ್ಮದ ಸೋಂಕಿನ ಏಕೈಕ ಕಾರಣವಾಗಿದೆ. ಒಂದೇ ಪ್ಯಾಡ್ ಅನ್ನು ದಿನವಿಡೀ ಅಥವಾ 4 ಗಂಟೆಗಳಿಗಿಂತ ಹೆಚ್ಚು ಕಾಲ ಬಳಸಿದರೆ, ಅದು ಚರ್ಮದ ಮೇಲೆ ದದ್ದುಗಳು ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ಪರಿಣಾಮವಾಗಿ ಅಸಹನೀಯ ತುರಿಕೆ ಅಥವಾ ಸುಡುವ ಸಂವೇದನೆಯ ಅನುಭವವಾಗವಬಹುದು.

57

ಚರ್ಮದ ದದ್ದು: ಯೋನಿಯ ಅಥವಾ ಅದರ ಸುತ್ತ ಗುಳ್ಳೆಗಳಾಗಲು ಮುಖ್ಯ ಕಾರಣಗಳಲ್ಲಿ ಅಸಮರ್ಪಕ ನೈರ್ಮಲ್ಯವೂ ಒಂದು. ವಿಶೇಷವಾಗಿ ಪಿರಿಯಡ್ಸ್ ಸಮಯದಲ್ಲ. ಪ್ಯಾಡ್ ಬದಲಾಯಿಸದಿರುವುದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಕಾರಣವಾಗಬಹುದು. ಇದು ದದ್ದುಗಳು ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

67

ಮೂತ್ರನಾಳದ ಸೋಂಕಿನ ಅಪಾಯ: ತಜ್ಞರ ಪ್ರಕಾರ, ಸಮಯಕ್ಕೆ ಸರಿಯಾಗಿ ಪ್ಯಾಡ್‌ಗಳನ್ನು ಬದಲಾಯಿಸದಿದ್ದರೆ ಯುಟಿಐ ಸಮಸ್ಯೆಯ ಅಪಾಯವೂ ಇದೆ. ಯುಟಿಐಗಳ ತೊಡಕುಗಳು ಮೂತ್ರಪಿಂಡಗಳು, ಮೂತ್ರನಾಳಗಳು, ಮೂತ್ರಕೋಶ ಮತ್ತು ಮೂತ್ರದ ವ್ಯವಸ್ಥೆಯ ಸೋಂಕನ್ನು ಒಳಗೊಂಡಿವೆ. ಇದು ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಹೊಟ್ಟೆ ನೋವು ಮತ್ತು ಯೋನಿಯಿಂದ ಕೆಟ್ಟ ವಾಸನೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

77

ದುರ್ವಾಸನೆ: ಸಮಯಕ್ಕೆ ಸರಿಯಾಗಿ ಪ್ಯಾಡ್‌ನ್ನು ಬದಲಾಯಿಸದಿದ್ದರೆ, ಪ್ಯಾಡ್ ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ. ಯೋನಿಯಿಂದ ಹಲವಾರು ದಿನಗಳವರೆಗೆ ಕೆಟ್ಟ ವಾಸನೆ ಬರುತ್ತದೆ. ಆದರೆ ಪಿರಿಯಡ್ಸ್ ಸಮಯದಲ್ಲಿ ಬಿಡುಗಡೆಯಾಗುವ ಬ್ಯಾಕ್ಟೀರಿಯಾ ಕೊಳೆತ ವಾಸನೆಯನ್ನು ನೀಡುತ್ತದೆ. ಇದರಿಂದ ದೇಹದಿಂದ ಕೆಟ್ಟ ದುರ್ಗಂಧ ಬರಬಹುದು.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

VP
Vinutha Perla
ಋತುಚಕ್ರ
ಆರೋಗ್ಯ

Latest Videos
Recommended Stories
Recommended image1
ಅದೊಂದು ಟಿಪ್ಸ್‌ ಫಾಲೋ ಮಾಡಿ, ತಳ ಸೀದು ಹೋದ ಕುಕ್ಕರ್‌, ಕಾಫಿ ಪಾತ್ರೆ ಕ್ಷಣಾರ್ಧದಲ್ಲೆ ಕ್ಲೀನ್‌ ಆಗುತ್ತೆ!
Recommended image2
Red Chutney: ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!
Recommended image3
ಮುಖದ ಮೇಲೆ ಮೊಡವೆ ಜಾಸ್ತಿಯಾಗಲು ನೀವ್ ತಿನ್ನೋ ಈ ಆಹಾರಗಳೇ ಕಾರಣ! ತಜ್ಞರು ಹೇಳೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved