ಹೆಂಗಸರ ಬಗ್ಗೆ ತಪ್ಪು ತಿಳಿವಳಿಕೆ ಬೇಡ, 70ರಲ್ಲೂ ಅವಳಿಗೆ ಸೆಕ್ಸ್ ಆಸಕ್ತಿ ಜೀವಂತವಾಗಿರಬಹುದು!
ಹೆಂಗಸರಿಗೆ ಆ ವಿಚಾರದಲ್ಲಿ ಕೊಂಚ ಸಂಕೋಚ ಹೆಚ್ಚು. ಹೀಗಾಗಿ ನಿರಾಸಕ್ತಿ ತೋರಿಸುತ್ತಿರುತ್ತಾರೆ. ಆದರೆ ನಿಜವಾಗಿಯೂ ಹೆಂಗಸರಿಗೆ ಸೆಕ್ಸ್ ಮೇಲಿನ ಇಂಟರೆಸ್ಟ್ ಕಡಿಮೆ ಆಗೋದು ಯಾವಾಗ ಗೊತ್ತಾ?
ಹೆಂಗಸರ ಬಗ್ಗೆ ಹೆಚ್ಚಿನ ಗಂಡಸರಿಗೆ ಪೂರ್ವಾಗ್ರಹ ಹೆಚ್ಚು. ಹೆಣ್ಮಕ್ಕಳು ಒಂದು ಹಂತದ ನಂತರ ಲೈಂಗಿಕ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ ಅಂತ ಬಹಳ ಮಂದಿ ತಿಳಿದುಕೊಂಡು ಅವರ ಆಸಕ್ತಿ ಕಡೆ ಹೆಚ್ಚಿನ ಗಮನ ನೀಡೋದಿಲ್ಲ. ಆದರೆ ಫ್ಯಾಕ್ಟ್ ಏನು ಅಂದರೆ ಹೆಣ್ಮಕ್ಕಳು ತಮ್ಮ ಎಪ್ಪತ್ತನೇ ವಯಸ್ಸಿನವರೆಗೂ ಸೆಕ್ಸ್‌ನಲ್ಲಿ ಆಕ್ಟಿವ್ ಆಗಿ ಇರಬಲ್ಲರು. ಅವರಿಗೆ ಗಂಡಸರಿಗಿಂತ ಸ್ವಲ್ಪ ಹೆಚ್ಚೇ ಲೈಂಗಿಕ ವಾಂಛೆ ಇರಬಲ್ಲದು ಅಂತ ಅಮೆರಿಕಾದ ವೈದ್ಯರು ಈ ಕುರಿತು ಸಂಶೋಧನೆ ಮಾಡಿ ಹೇಳಿದ್ದಾರೆ. ಆದರೆ ಎಲ್ಲೆಲ್ಲೂ ಅಡ್ವಾಂಟೇಜ್ ತಗೊಳ್ಳೋದು ಗಂಡಸಿನ ಗುಣ. ಪ್ರಕೃತಿಯೂ ಈ ವಿಚಾರದಲ್ಲಿ ಆತನ ಪರವಾಗಿರಬಹುದೇನೋ. ಏಕೆಂದರೆ ಹೆರಿಗೆ, ಪೀರಿಯೆಡ್ಸ್, ಮೆನೊಪಾಸ್‌ನಂಥ ಯಾವ ನೋವುಗಳೂ ಆತನಿಗಿಲ್ಲ. ಹಾಗಂತ ಹೆಚ್ಚಿನ ಹೆಣ್ಣುಮಕ್ಕಳು ಇದನ್ನೇನೂ ಶಾಪ ಅಂತ ತಗೊಂಡಿಲ್ಲ. ಆದರೆ ಇಂಥಾ ದೈಹಿಕ ಸ್ಥಿತಿಗಳು ಅವರನ್ನು ಕಟ್ಟಿ ಹಾಕೋದು ಜಾಸ್ತಿ.
ಪ್ರೆಗ್ನೆನ್ಸಿ ಟೈಮಲ್ಲಿ ಅವಳು ಮನಸೋ ಇಚ್ಛೆ ತನಗೆ ಬೇಕಂದ ಹಾಗೆ ಇರೋ ಹಾಗಿಲ್ಲ. ಪೀರಿಯೆಡ್ಸ್ ಟೈಮಲ್ಲೂ ಹೆಚ್ಚಿನ ಹೆಣ್ಣುಮಕ್ಕಳಿಗೆ ಅನೇಕ ದೈಹಿಕ ಮಾನಸಿಕ ಸಮಸ್ಯೆಗಳು ಬರುತ್ತವೆ. ಆದರೆ ಇದನ್ನು ಅವಳು ಸಹಜವಾಗಿಯೇ ತೆಗದುಕೊಳ್ತಾಳೆ. ಇದರಿಂದ ಅವಳಿಗೆ ಗಂಡಸಿನ ಹಾಗೆ ಬೇಕೆಂದ ಹಾಗೆ ಇರಲಾಗುವುದಿಲ್ಲ ಅನ್ನೋದು ಸತ್ಯವೇ.
ಕರ್ನಾಟಕದಲ್ಲಿ ಕ್ಯಾನ್ಸರ್ ಹೆಚ್ಚಳ, ಕಾರಣ ಕುರಿತು ಅಧ್ಯಯನ ನಡೆಸಿ: ಸಿಎಂ ಸಿದ್ದರಾಮಯ್ಯ
ಇರಲಿ, ಇವಿಷ್ಟೂ ಮಾತಿನ ಸಾರ ಏನಪ್ಪ ಅಂದರೆ ಹೆಣ್ಣಿನ ಪ್ರಕೃತಿಯೇ ಗಂಡಿಗಿಂತ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸಿಬಿಟ್ಟಿದೆ. ಮಗವನ್ನು ಹೊಟ್ಟೆಯಲ್ಲಿ ಹೊರುವ, ಹೆರುವ ಕೆಲಸವೇ ಅವಳನ್ನು ಜವಾಬ್ದಾರಿಯುತಳನ್ನಾಗಿ ಮಾಡುತ್ತದೆ. ಸರ್ವೆಗಳ ಪ್ರಕಾರವೂ ಗಂಡಸಿಗಿಂತ ಹೆಣ್ಣು ಹೆಚ್ಚು ಜವಾಬ್ದಾರಿಯುತವಾಗಿ ಇರಬಲ್ಲಳು. ಆದರೆ ಅವಳಿಗೆ ಈ ಜವಾಬ್ದಾರಿ ಅತಿಯಾದಾಗ ಸೆಕ್ಸ್ ಅನ್ನೋದರ ಕಡೆ ಗಮನ ಕಡಿಮೆ ಆಗುತ್ತದೆ. ಹೊಣೆಗಾರಿಕೆಗೆ ಆಕೆ ಹೆಚ್ಚಿನ ಆದ್ಯತೆ ಕೊಡಬಹುದು. ಇದನ್ನು ಎಷ್ಟೋ ಗಂಡಸರು ಅವಳ ಲೈಂಗಿಕ ನಿರಾಸಕ್ತಿ ಅಂತ ತಪ್ಪು ಅರ್ಥ ಮಾಡಿಕೊಂಡಿರುವ ಸಾಧ್ಯತೆ ಇದೆ. ಮಗುವನ್ನು ಹೊರುವ, ಹೆರುವ ಕೆಲಸ ಅವಳೇ ಮಾಡದೆ ವಿಧಿಯಿಲ್ಲ, ಅದನ್ನು ಬೆಳೆಸುವ ಕೆಲಸವನ್ನಾದರೂ ಗಂಡಸರು ಹೊತ್ತುಕೊಂಡರೆ ಅವಳ ಸೆಕ್ಸ್ ಬದುಕಿನ ಆಸಕ್ತಿ ಇನ್ನಷ್ಟು ಜೀವಂತ ಇರಹುದೇನೋ ಅಂತ ಅಮೇರಿಕಾದ ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಇರಲಿ, ಈಗ ಮೆನೊಪಾಸ್ ವಿಚಾರಕ್ಕೆ ಬರೋಣ. ಎಷ್ಟೋ ಮಂದಿ ಅಂದುಕೊಂಡಿರ್ತಾರೆ, ಮೆನೊಪಾಸ್ ನಂತರ ಹೆಣ್ಣಿಗೆ ಲೈಂಗಿಕ ಆಸಕ್ತಿ ಇರೋದಿಲ್ಲ ಅಂತ. ಅದು ಸಂಪೂರ್ಣ ತಪ್ಪು ಅಂತ ಅಧ್ಯಯನ ಹೇಳುತ್ತೆ. ಹಾಗಂತ ಈ ಮಾತನ್ನು ಸಂಪೂರ್ಣ ಅಲ್ಲಗೆಳೆಯಲಾಗದು ಅನ್ನುವ ಮಾತೂ ಇದೆ. ಏಕೆಂದರೆ ಲೈಂಗಿಕ ವಾಂಛೆ ಹುಟ್ಟುವುದರ ಹಿಂದಿನ ಕಾರಣ ಸಂತಾನೋತ್ಪತ್ತಿ. ಮೆನೊಪಾಸ್ ಅಂದರೆ ಹೆಣ್ಣಿನ ಸಂತಾನೋತ್ಪತ್ತಿ ಸಾಮರ್ಥ್ಯ ಸಂಪೂರ್ಣ ನಿಂತು ಹೋಗುವುದು. ಹೀಗಾಗಿ ಆ ಹೊತ್ತಿನಲ್ಲಿ ಪ್ರಕೃತಿ ಸಹಜವಾಗಿಯೇ ಹೆಣ್ಣಿನ ಲೈಂಗಿಕ ಆಸಕ್ತಿಯೂ ಕಡಿಮೆ ಆಗುತ್ತದೆ ಎಂಬ ಮಾತಿದೆ. ಜೊತೆಗೆ ಈ ಹೊತ್ತಿಗೆ ಲ್ಯುಬ್ರಿಗೇಶನ್ ಸಹ ಕಡಿಮೆ ಆಗುತ್ತೆ.
ವಾರದಲ್ಲಿ 90 ಗಂಟೆ ಕೆಲಸ ಮಾಡಿ ಎಂದ ಎಲ್‌ಟಿ ಅಧ್ಯಕ್ಷರ ಹೇಳಿಕೆಗೆ ದೀಪಿಕಾ ಪಡುಕೋಣೆ ಆಕ್ರೋಶ
ಹೀಗಾಗಿ ಸೆಕ್ಸ್ ಮಾಡುವಾಗ ನೋವು ಉಂಟಾಗಬಹುದು. ಕೊನೆಯತನಕ ಸೆಕ್ಸ್ ಅನ್ನು ಎನ್‌ಜಾಯ್ ಮಾಡಲು ಸಾಧ್ಯವಾಗದೇ ಹೋಗಬಹುದು. ಆದರೆ ಈ ನಡುವೆ ಅಧ್ಯಯನವೊಂದು ಎಪ್ಪತ್ತರಲ್ಲೂ ಹೆಣ್ಣು ಸೆಕ್ಷುವಲೀ ಆಕ್ಟಿವ್ ಆಗಿ ಇರಬಲ್ಲಳು ಎಂದಿದೆ. ಅದು ಹೇಗೆ ಸಾಧ್ಯ ಎನ್ನುವವರಿಗೆ ಅದು ಸಾಧ್ಯವಿದೆ ಅಂತ ಸಾಬೀತು ಮಾಡಿ ತೋರಿಸಿದವರೂ ಇದ್ದಾರೆ. ಅಪನಂಬಿಕೆಗಳಿದ್ದರೂ ಇದನ್ನು ಒಪ್ಪದೇ ವಿಧಿಯಿಲ್ಲ.