Asianet Suvarna News Asianet Suvarna News

Sexual Harassment: ಒಂದಲ್ಲ ಒಂದು ಜಾಗದಲ್ಲಿ ದೌರ್ಜನ್ಯಕ್ಕೆ ಒಳಗಾಗ್ತಾರೆ ಮಹಿಳೆಯರು

ಸಾರ್ವಜನಿಕ ಪ್ರದೇಶಗಳಲ್ಲಿ ನೂರಾರು ಅಪರಿಚಿತರು ಭೇಟಿಯಾಗ್ತಾರೆ. ಅವರನ್ನು ಎದುರಿಸುವ ಧೈರ್ಯ ಎಷ್ಟಿದ್ರೂ ಪುರುಷರ ಕೆಟ್ಟ ವರ್ತನೆ ಮಹಿಳೆಯರ ಬೆವರಿಳಿಸುತ್ತದೆ. 2023 ಬಂದ್ರೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಿಂಚಿತ್ತೂ ಕಡಿಮೆಯಾಗದಿರುವುದು ವಿಪರ್ಯಾಸ.

Women Face Sexual Harassment
Author
First Published Dec 3, 2022, 5:10 PM IST

ಭಾರತ ಬದಲಾಗಿದೆ, ಬೆಳವಣಿಗೆಯತ್ತ ಸಾಗಿದೆ, ಜನರು ವಿದ್ಯಾವಂತರಾಗಿದ್ದಾರೆ ಎಂದೆಲ್ಲ ನಾವು ಹೇಳ್ತೆವೆ. ಆದ್ರೆ ಸ್ತ್ರೀ ವಿಷ್ಯದಲ್ಲಿ ಭಾರತ ಸ್ವಲ್ಪವೂ ಬದಲಾಗಿಲ್ಲ. ಮಹಿಳೆ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ಭಾರತದಲ್ಲಿ ಮಹಿಳೆ ಸುರಕ್ಷಿತಳಲ್ಲವೇ ಅಲ್ಲ. ಮಹಿಳೆ ಮೇಲೆ ಲೈಂಗಿಕ ಕಿರುಕುಳಗಳ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಒಂಟಿ (Alone) ಮಹಿಳೆ ರಾತ್ರಿ ಇರಲಿ ಹಗಲಿನಲ್ಲಿ ಪ್ರಯಾಣ (Travel) ಬೆಳೆಸುವುದು ಕೂಡ ಕಷ್ಟವಾಗಿದೆ. ಇಂದಿನ ದಿನಗಳಲ್ಲಿ ದಾರಿಯಲ್ಲಿ ಪುರುಷರಿಂದ ಚಿತ್ರಹಿಂಸೆಗೊಳಗಾದ ಮಹಿಳೆಯರು ಎಲ್ಲರ ಮುಂದೆ ಬಂದು ಧೈರ್ಯವಾಗಿ ತಮ್ಮ ನೋವನ್ನು (Pain) ಹೇಳಿಕೊಳ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಲೈಂಗಿಕ (Sexual) ಕಿರುಕುಳ ಅಂದ್ರೆ ಬರೀ ಅತ್ಯಾಚಾರವಲ್ಲ, ರಸ್ತೆಯಲ್ಲಿ, ಪ್ರಯಾಣದ ವೇಳೆ, ಸಾರ್ವಜನಿಕ ವಾಹನದಲ್ಲಿ, ನಿರ್ಜನ ಪ್ರದೇಶದಲ್ಲಿ ಮಹಿಳೆಯರಿಗೆ ಪುರುಷರು ನೀಡುವ ಎಲ್ಲ ಹಿಂಸೆಗಳು ಲೈಂಗಿಕ ಕಿರುಕುಳಕ್ಕೆ ಸೇರುತ್ತವೆ.

ಯುಟ್ಯೂಬರ್ ಕೈ ಹಿಡಿದು ಎಳೆದ ಹುಡುಗ: ಮುಂಬೈನಲ್ಲಿ ಯುಟ್ಯೂಬರ್ ಒಬ್ಬಳಿಗೆ ಹುಡುಗರು ಹಿಂಸೆ ನೀಡಿದ ವಿಡಿಯೋ ವೈರಲ್ ಆಗಿದೆ. ಆಕೆ ಯುಟ್ಯೂಬ್ ಲೈವ್ ನಲ್ಲಿರುವ ವೇಳೆ ಆಕೆ ಕೈ ಹಿಡಿದು ಎಳೆದ ಹುಡುಗ ಮತ್ತು ನೀಡುವ ಪ್ರಯತ್ನ ನಡೆಸಿದ್ದಾನೆ. ಸಾವಿರಕ್ಕಿಂತ ಹೆಚ್ಚು ಜನರು ಇದನ್ನು ನೋಡಿದ್ದಾರೆ. 

ಬೆಳಗ್ಗೆ ಮಹಿಳೆಯರು ಈ ಕೆಲಸ ಮಾಡಿದ್ರೆ ಕೋಪಗೊಳ್ತಾಳೆ ಲಕ್ಷ್ಮಿ

ಮಹಿಳೆ ಮುಂದೆ ಹಸ್ತಮೈಥುನ : ಮಹಿಳೆಯರ ಮುಂದೆ ಹಸ್ತಮೈಥುನ ಮಾಡ್ತಿದ್ದ ಘಟನೆ ಆಗಾಗ ಬೆಳಕಿಗೆ ಬರ್ತಿರುತ್ತದೆ. ಮುಂಬೈನಲ್ಲಿ ಇತ್ತೀಚಿಗೆ ಇಂಥ ಘಟನೆಯೊಂದು ನಡೆದಿದೆ. ಮಹಿಳಾ ಕಂಪಾರ್ಟ್ ಮೆಂಟ್ ನಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿದ್ದಾನೆ. ಇದು ಮುಂಬೈನ ಸ್ಥಳೀಯರ ಟ್ರೈನ್ ನಲ್ಲಿ ನಡೆದಿದೆ. ಹನಾ ಮೊಹ್ಸಿನ್ ಖಾನ್ ಎಂಬ ಟ್ವಿಟರ್ ಬಳಕೆದಾರಳ ಮುಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಈ ಕೆಲಸ ಮಾಡಿದ್ದಾನೆ. ಆಕೆ ಸೀಟ್ ಬದಲಿಸಲು ಪ್ರಯತ್ನಿಸಿದ್ರೂ ಆತ ತನ್ನ ಕೆಲಸ ಬಿಡಲಿಲ್ಲ ಎಂದು ಸ್ವತಃ ಹನಾ ಟ್ವೀಟ್ ಮಾಡಿದ್ದಾಳೆ.

ದೆಹಲಿಯಲ್ಲೂ ನಡೆದಿದೆ ಇಂಥದ್ದೇ ಘಟನೆ : ದೆಹಲಿಯ ಕನ್ನಾಟ್ ಪ್ಲೇಸ್ ಅಥವಾ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಸದಾ ಸಹಸ್ರಾರು ಜನರು ಇರ್ತಾರೆ.  ಇಲ್ಲಿ ಹಸ್ತಮೈಥುನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯೊಬ್ಬಳ ಮುಂದೆ ಈ ಕೃತ್ಯವೆಸಗಿದ್ದಾನೆ. ಅಲ್ಲಿದ್ದವರೆಲ್ಲ ಇದನ್ನು ತಡೆಯುವ ಬದಲು ನಗ್ತಿದ್ದಿದ್ದು ವಿಪರ್ಯಾಸ.

ವರದಕ್ಷಿಣೆ ಬಗ್ಗೆ ಭಾರತದ ಕಾನೂನು ಹೇಳೋದೇನು? ಹೆಣ್ಣು ಮಕ್ಕಳಿಗೆ ಗೊತ್ತಿರಬೇಕಿವು!

ದಾರಿ ಬದಲಿಸಿದ ಆಟೋ ಡ್ರೈವರ್ : ಇದು ಕೂಡ ಹೊಸತೇನಲ್ಲ. ಒಂಟಿ ಮಹಿಳೆ ಕ್ಯಾಬ್ ಅಥವಾ ಆಟೋದಲ್ಲಿ ಪ್ರಯಾಣ ಬೆಳೆಸೋದೆ ಕಷ್ಟವಾಗ್ತಿದೆ. ಆಟೋ ಡ್ರೈವರ್ ಒಬ್ಬ ದಾರಿ ಬದಲಿಸಿ ವಿಚಿತ್ರವಾಗಿ ವರ್ತಿಸಿದ್ದಾನೆಂದು ಪತ್ರಕರ್ತೆ ಸಂವಿದಾ ತಿವಾರಿ ಹೇಳಿದ್ದಾರೆ. ರಾತ್ರಿ 9 ಗಂಟೆ 30 ನಿಮಿಷಕ್ಕೆ ಸಂವಿದಾ ಆಟೋ ಹತ್ತಿದ್ದಾರೆ. ಅವರ ಮನೆ ನೋಯ್ಡಾದ ನಿರ್ಜನ ಪ್ರದೇಶದಲ್ಲಿದೆ. ಅಲ್ಲಿಗೆ ಹೋಗುವ ಬದಲು ಆಟೋ ಚಾಲಕ ದಾರಿ ಬದಲಿಸಿದ್ದನಂತೆ. ಆಕೆ ಕೂಗಿಕೊಂಡಾಗ ಸರಿ ದಾರಿಗೆ ಬಂದ ಚಾಲಕ, ಮೂತ್ರ ವಿಸರ್ಜನೆ ಹೆಸರಿನಲ್ಲಿ ಆಟೋ ನಿಲ್ಲಿಸಿದ್ದನಂತೆ. ನಂತ್ರ ಚಳಿಯಾಗ್ತಿದೆ, ಚಳಿಯಾಗ್ತಿದೆ ಎಂದು ಆಗಾಗ ಹೇಳ್ತಿದ್ದನಂತೆ.

ಹುಡುಗಿರನ್ನು ನೋಡಿದ್ರೆ ಹಾಡು: ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಮಾತ್ರವಲ್ಲ ಹುಡುಗಿಯರು ಬಸ್ ನಿಲ್ದಾಣದಲ್ಲಿ ಕಾಣಲಿ ಇಲ್ಲ ಬೇರೆ ಸಾರ್ವಜನಿಕ ಪ್ರದೇಶದಲ್ಲಿರಲಿ ಅವರನ್ನು ನೋಡಿದ ತಕ್ಷಣ ಹಾಡು ಹೇಳಲು ಶುರು ಮಾಡ್ತಾರೆ ಹುಡುಗ್ರು. ಅಸಭ್ಯ ಹಾಡುಗಳನ್ನು ಹಾಡುವ ಮೂಲಕ ಕಿರುಕುಳ ನೀಡುತ್ತಾರೆ. ಮಾರ್ಕೆಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸುರಭಿ ಶುಕ್ಲಾ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ರೈಲಿನಲ್ಲಿ ಕೆಟ್ಟ ಹಾಡನ್ನು ಹೇಳಲಾಗ್ತಿತ್ತಂತೆ. ಈ ಬಗ್ಗೆ ಟಿಟಿಗೆ ದೂರು ನೀಡಿದಾಗ ಹಾಡು ನಿಂತಿತ್ತು ಎನ್ನುತ್ತಾರೆ. ಆದ್ರೆ ರಾತ್ರಿ ಅನೇಕ ಬಾರಿ ನನ್ನನ್ನು ಸ್ಪರ್ಶಿಸಲು ಆತ ಪ್ರಯತ್ನಿಸಿದ ಎನ್ನುತ್ತಾರೆ ಆಕೆ. ಇದಿಷ್ಟು ಕೇವಲ ಉದಾಹರಣೆ ಅಷ್ಟೆ. ದಿನಕ್ಕೆ ಇಂಥ ಎಷ್ಟೋ ಘಟನೆ ನಡೆಯುತ್ತದೆ. ಇದನ್ನು ತಪ್ಪಿಸುವ ಬದಲು ಜನರು ನಗ್ತಾ, ತಮಾಷೆ ನೋಡ್ತಿರುತ್ತಾರೆ. 2022 ಕಳೆಯುತ್ತ ಬಂದ್ರೂ ಸಮಾಜ ಬದಲಾಗಿಲ್ಲ. ಮಹಿಳೆಗೆ ಗೌರವ, ಮಾನ್ಯತೆ ಸಿಗೋದು ಕನಸಿನ ಮಾತಾಗಿಯೇ ಇದೆ. 

Follow Us:
Download App:
  • android
  • ios