Asianet Suvarna News Asianet Suvarna News

ವರದಕ್ಷಿಣೆ ಬಗ್ಗೆ ಭಾರತದ ಕಾನೂನು ಹೇಳೋದೇನು? ಹೆಣ್ಣು ಮಕ್ಕಳಿಗೆ ಗೊತ್ತಿರಬೇಕಿವು!

ವರದಕ್ಷಿಣೆ, ಭಾರತದ ದೊಡ್ಡ ಪಿಡುಗಿನಲ್ಲಿ ಒಂದು. ಈಗ್ಲೂ ಇದನ್ನು ನಿಯಂತ್ರಿಸಲು ಸಾಧ್ಯವಾಗ್ತಿಲ್ಲ. ಕಾನೂನಿನಲ್ಲಿ ಕಠಿಣ ಶಿಕ್ಷೆ ಜಾರಿಯಲ್ಲಿದ್ರೂ ನೋವು ನುಂಗಿಕೊಳ್ಳುವ ಜನರು ವರದಕ್ಷಿಣೆ ಹಿಂಸೆ ಅನುಭವಿಸ್ತಾರೆ. ಕಾನೂನು ತಿಳಿದ್ರೆ ಸಮಸ್ಯೆಯಿಂದ ಸುಲಭವಾಗಿ ಹೊರಗೆ ಬರಬಹುದು. 
 

Law For Dowry In India
Author
First Published Dec 2, 2022, 2:48 PM IST

ಭಾರತದಲ್ಲಿ ವರದಕ್ಷಿಣೆ ಪಿಡುಗು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ವರದಕ್ಷಿಣೆ ಪದ್ಧತಿ ಜಾರಿಯಲ್ಲಿದೆ. ಇದ್ರ ನಿಯಂತ್ರಣಕ್ಕೆ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ವರದಕ್ಷಿಣೆ ಪಡೆಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗ್ತಿದೆ. ಇಷ್ಟಾದ್ರೂ ವರದಕ್ಷಿಣೆ ಪಿಡುಗು ಮಾಯವಾಗಿಲ್ಲ. ಭಾರತದ ಮೂಲೆ ಮೂಲೆಯಲ್ಲಿ ಈಗ್ಲೂ ವರದಕ್ಷಿಣೆ ಪದ್ಧತಿ ಜಾರಿಯಲ್ಲಿದೆ. ಹೆಣ್ಣು ಹೆತ್ತವರು ವರದಕ್ಷಿಣೆ ನೀಡಲು ಪರದಾಡ್ತಿದ್ದಾರೆ. ವರದಕ್ಷಿಣೆ ನೀಡುವಂತೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವ, ವರದಕ್ಷಿಣೆ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಈಗ್ಲೂ ವರದಿಯಾಗ್ತಿವೆ. 

ಭಾರತ (India) ದಲ್ಲಿ ವರದಕ್ಷಿಣೆ (Dowry) ನಿಷೇಧ ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆ ಜಾರಿಯಲ್ಲಿದೆ. ಆದ್ರೆ ಇದ್ರ ಬಗ್ಗೆ ಅನೇಕರಿಗೆ ತಿಳುವಳಿಕೆಯಿಲ್ಲ. ಮಾಹಿತಿ ಕೊರತೆಯಿಂದಾಗಿ ಜನರು ವರದಕ್ಷಿಣೆ ವಿರುದ್ಧ ಹೋರಾಡಲು ಸಾಧ್ಯವಾಗ್ತಿಲ್ಲ. ನಾವಿಂದು ಈ ಕಾನೂನಿ (Law) ನ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.  

Working Woman ಆರೋಗ್ಯ ಚೆನ್ನಾಗಿರಲು ನವಾಸನ ಮಾಡಿದ್ರೆ ಒಳ್ಳೇದು

ವರದಕ್ಷಿಣೆ ಎಂದ್ರೇನು ? : ಮದುವೆಯ ಸಮಯದಲ್ಲಿ ತಂದೆ ತನ್ನ ಮಗಳಿಗೆ ನೀಡಿದ ವಸ್ತುವನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಭಾರತದಿಂದಲೂ ವರದಕ್ಷಿಣೆ ಪದ್ಧತಿ ನಡೆದುಕೊಂಡು ಬಂದಿದೆ. ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಹಲವು ಭಾಗಗಳಲ್ಲಿ ವರದಕ್ಷಿಣೆಯಂತಹ ವ್ಯವಸ್ಥೆ ಜಾರಿಯಲ್ಲಿದೆ. ಇದರ ಹೆಸರು ಭಿನ್ನವಾಗಿದೆ. ಪ್ರಾಚೀನ ಕಾಲದಲ್ಲಿ ವರದಕ್ಷಿಣೆಯ ಅರ್ಥ ಇಷ್ಟು  ಕ್ರೂರವಾಗಿರಲಿಲ್ಲ. ವರದಕ್ಷಿಣೆ ಎಂದರೆ ಮಗಳಿಗೆ ತಂದೆ ನೀಡಿದ ಆಸ್ತಿಯಾಗಿತ್ತು. ಈ ಆಸ್ತಿ ಮೇಲೆ ಮಗಳಿಗೆ ಹಕ್ಕಿರುತ್ತಿತ್ತು. ತಂದೆ ತನ್ನ ಸ್ವಂತ ಇಚ್ಛೆಯ ಮೇಲೆ ಆಸ್ತಿ ನೀಡುತ್ತಿದ್ದ. ಕಾಲಕ್ಕೆ ತಕ್ಕಂತೆ ವರದಕ್ಷಿಣೆಯ ಅರ್ಥ ಬದಲಾಯಿತು. ವರದಕ್ಷಿಣೆ ಒಂದು ಕೆಟ್ಟ ಮತ್ತು ಕ್ರೂರ ವ್ಯವಸ್ಥೆಯಾಗಿ ಉಳಿಯಿತು. 

ವರದಕ್ಷಿಣೆ ಕಾಯ್ದೆ (Dowry Act) :  ಭಾರತದ ಕಾನೂನುಗಳಲ್ಲಿ ವರದಕ್ಷಿಣೆಯ ಕಾನೂನು ಅರ್ಥವನ್ನು ಮೊದಲು ವರದಕ್ಷಿಣೆ ನಿಷೇಧ ಕಾಯಿದೆ 1961 ರ ಅಡಿಯಲ್ಲಿ ಪರಿಚಯಿಸಲಾಯಿತು. ಕಾಯ್ದೆಯಲ್ಲಿ ವರದಕ್ಷಿಣೆ ಎಂದರೇನು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕಾಯಿದೆಯ ವ್ಯಾಖ್ಯಾನದ ವಿಭಾಗ 2 ರ ಪ್ರಕಾರ, ವರದಕ್ಷಿಣೆಯು ಯಾವುದೇ ಬೆಲೆಬಾಳುವ ಆಸ್ತಿ ಅಥವಾ ಭದ್ರತೆ ಎಂದು ಪರಿಗಣಿಸಲಾಗುತ್ತದೆ, ಅದು ಮದುವೆಯ ಸಮಯದಲ್ಲಿ ಪರಸ್ಪರರಿಗೆ ನೀಡಲಾಗುತ್ತದೆ. ಇದನ್ನು ಮದುವೆಯ ನಂತರವೂ ನೀಡಬಹುದು. ವರದಕ್ಷಿಣೆಯ ವ್ಯಾಖ್ಯಾನವು ಬಹಳ ವಿಶಾಲವಾದ ವ್ಯಾಖ್ಯಾನವಾಗಿದೆ. ಈ ವ್ಯಾಖ್ಯಾನದ ಅಡಿಯಲ್ಲಿ, ಮನೆ, ಭೂಮಿ, ಕಾರು, ಆಭರಣಗಳು, ರೂಪಾಯಿ ಸೇರಿದಂತೆ ಸ್ಥಿರಾಸ್ತಿಯನ್ನು ಒಳಗೊಂಡಿರುತ್ತದೆ.  

ವರದಕ್ಷಿಣೆ ಪದ್ಧತಿಯನ್ನು ನಿಲ್ಲಿಸುವ ಮತ್ತು ಕೊನೆಗೊಳಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ತರಲಾಗಿದೆ. ಈ ಕಾಯ್ದೆಯಡಿ 2 ಸೆಕ್ಷನ್‌ಗಳಿವೆ. ಸೆಕ್ಷನ್ 3 ಮತ್ತು 4. ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ನೀಡುವುದು ಸೆಕ್ಷನ್ 3 ರ ಅಡಿಯಲ್ಲಿ ಅಪರಾಧವಾಗಿದೆ. ಇದಕ್ಕೆ 15,000 ವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ವರದಕ್ಷಿಣೆ ಬೇಡಿಕೆಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಸೆಕ್ಷನ್ 4 ಹೇಳಲಾಗಿದೆ.

ಕ್ಯಾನ್ಸರ್‌ಗೆ ಕಾರಣವಾಗುತ್ತೆ ಸ್ಯಾನಿಟರಿ ಪ್ಯಾಡ್‌; ಬದಲಿಗೆ ಬೇರೇನು ಬಳಸ್ಬೋದು ?

ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ? : ವರದಕ್ಷಿಣೆಗಾಗಿ ಸೆಕ್ಷನ್ 498 ಎ ಅಡಿ ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಪತಿಯನ್ನು ಹೊರತುಪಡಿಸಿ ಕುಟುಂಬದ ಇತರ ಸದಸ್ಯರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ 3 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಇದು ಕೇವಲ ವರದಕ್ಷಿಣೆ ವಿರುದ್ಧ ಮಾಡಿದ ಕಾನೂನಲ್ಲ. ಇದ್ರಲ್ಲಿ ಬೇರೆ ಕ್ರೌರ್ಯಗಳನ್ನು ಕೂಡ ಸೇರಿಸಲಾಗಿದೆ.

ವರದಕ್ಷಿಣೆ ಕಿರುಕುಳಕ್ಕೆ ಸಾವು : ವರದಕ್ಷಿಣೆಯ ಕಾರಣದಿಂದ ಸಾವು ಸಂಭವಿಸಿದ್ರೆ ಐಪಿಡಿ 304B ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ತಪ್ಪಿತಸ್ಥರಿಗೆ 7 ವರ್ಷದಿಂದ ಜೀವಿತಾವಧಿ ಜೈಲು ಶಿಕ್ಷೆಯಾಗಬಹುದು. 
 

Follow Us:
Download App:
  • android
  • ios