Asianet Suvarna News Asianet Suvarna News

ಬೆಳಗ್ಗೆ ಮಹಿಳೆಯರು ಈ ಕೆಲಸ ಮಾಡಿದ್ರೆ ಕೋಪಗೊಳ್ತಾಳೆ ಲಕ್ಷ್ಮಿ

ದಿನದ ಆರಂಭ ಯಾವಾಗ್ಲೂ ಚೆನ್ನಾಗಿರಬೇಕು. ದೇವರು ಕೃಪೆ ತೋರಬೇಕೆಂದ್ರೆ ಬೆಳಿಗ್ಗೆ ನಾವು ಮಾಡುವ ಕೆಲಸ ಕೂಡ ಮುಖ್ಯವಾಗುತ್ತದೆ. ಬೆಳಿಗ್ಗೆ ಹಾಸಿಗೆಯಿಂದ ಏಳ್ತಿದ್ದಂತೆ ಮಹಿಳೆಯರು ನಿಯಮ ಮೀರಿದ್ರೆ ಮನೆಯಲ್ಲಿ ಧನ ಹಾನಿ ಗ್ಯಾರಂಟಿ.
 

Womens Should Not Do These Work In Morning
Author
First Published Dec 2, 2022, 5:10 PM IST

ಮನೆಯ ಮಹಾಲಕ್ಷ್ಮಿ ಎಂದು ಮನೆಯ ಮಹಿಳೆಯರನ್ನು ಕರೆಯಲಾಗುತ್ತದೆ. ಆಕೆ ಸಂತೋಷವಾಗಿದ್ದರೆ ಇಡೀ ಮನೆಯಲ್ಲಿ ಸಮೃದ್ಧಿಯನ್ನು ಕಾಣಬಹುದು. ಗೃಹಿಣಿ ಇಲ್ಲದ ಮನೆ ಸ್ಮಶಾನಕ್ಕೆ ಸಮನಾಗಿರುತ್ತದೆ. ಕುಟುಂಬದ ಸಂತೋಷವನ್ನು ಹೆಚ್ಚಿಸುವ ಶಕ್ತಿ ಮಹಿಳೆಗಿರುತ್ತದೆ. ಆಕೆ ಕುಟುಂಬಸ್ಥರ ಆಗು – ಹೋಗುಗಳನ್ನು ನೋಡಿಕೊಳ್ಳುವ ಮೂಲಕ ಅವರ ಜೀವನ ನೆಮ್ಮದಿಯಿಂದ ನಡೆಯುವಂತೆ ಮಾಡ್ತಾಳೆ. ಮನೆಯಲ್ಲಿರುವ ಮಹಿಳೆಯರು ಶಾಸ್ತ್ರಗಳ ಪಾಲನೆ ಮಾಡಬೇಕು. ಇದ್ರಿಂದ ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ. ಮನೆಯಲ್ಲಿ ಸಂಪತ್ತು ತುಂಬುತ್ತದೆ. ಮನೆಯಲ್ಲಿರುವ ಅಶಾಂತಿ ದೂರವಾಗುತ್ತದೆ. ಸದಾ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. 

ಶಾಸ್ತ್ರಗಳಲ್ಲಿ ಮಹಿಳೆ (Woman) ಏನು ಮಾಡ್ಬೇಕು, ಏನು ಮಾಡಬಾರದು ಎಂಬುದನ್ನು ಹೇಳಲಾಗಿದೆ. ಬೆಳಿಗ್ಗೆ ಮಹಿಳೆ ಕೆಲವೊಂದು ಕೆಲಸ (Work) ಗಳನ್ನು ಅಪ್ಪಿತಪ್ಪಿಯೂ ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದನ್ನು ಮಾಡಿದ್ರೆ ಧನ ಹಾನಿಯಾಗುತ್ತದೆ. ದೇವರ ಆಶೀರ್ವಾದ ಸಿಗುವುದಿಲ್ಲ. ನಾವಿಂದು ಮಹಿಳೆ ಬೆಳಿಗ್ಗೆ (Morning) ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೆವೆ.

ಗಲಾಟೆ – ಜಗಳ : ಶಾಂತ ವಾತಾವರಣದಲ್ಲಿ ಲಕ್ಷ್ಮಿ (Lakshmi) ನೆಲೆ ನಿಲ್ಲುತ್ತಾಳೆ ಎಂಬ ನಂಬಿಕೆಯಿದೆ. ಬೆಳಿಗ್ಗೆ ಯಾವಾಗ್ಲೂ ಮನೆ ಶಾಂತವಾಗಿರಬೇಕು. ಮನೆಯಲ್ಲಿ ಮಹಿಳೆಯ ಲವಲವಿಕೆ ಇರಬೇಕು. ಆದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ ಮುಖವನ್ನು ಗಂಟಿಕ್ಕಿಕೊಂಡು ಗಲಾಟೆ ಶುರು ಮಾಡಿದ್ರೆ ಎಂದಿಗೂ ಮನೆಯಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಮನೆಯಲ್ಲಿ ಧನಾಗಮನವಾಗ್ಬೇಕು ಅಂದ್ರೆ ಬೆಳಿಗ್ಗೆ ಮಹಿಳೆ ಯಾವುದೇ ರೀತಿಯ ಗಲಾಟೆ – ಜಗಳವನ್ನು ಮಾಡಬಾರದು. ಇದ್ರಿಂದ ಮನೆಗೆ ದೇವರ ಆಶೀರ್ವಾದ ಸಿಗುತ್ತದೆ. ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

ಮುಂಬರುವ ಮೂರು ವರ್ಷ, ಈ ರಾಶಿಗಳ ಜನರ ಮೇಲಿರುತ್ತೆ ಶನಿ ದೃಷ್ಟಿ

ನಿದ್ರೆ ಸಮಯ (Sleeping Time) : ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಎದ್ದು, ಮನೆ ಮುಂದೆ ನೀರು ಹಾಕಿ ಕ್ಲೀನ್ ಮಾಡಬೇಕೆಂಬ ಪದ್ಧತಿ ನಮ್ಮಲ್ಲಿದೆ. ಮಹಿಳೆಯಾದವಳು ಬೆಳಿಗ್ಗೆ ಬೇಗ ಏಳಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಸೂರ್ಯ ನೆತ್ತಿಗೆ ಬಂದ್ರೂ ಹಾಸಿಗೆ ಬಿಟ್ಟು ಏಳದೆ ಹೋದ್ರೆ ದರಿದ್ರ ಆವರಿಸುತ್ತದೆ. ಲಕ್ಷ್ಮಿ ಮುನಿಸಿಕೊಂಡು ಮನೆಯಿಂದ ಹೊರಗೆ ಹೋಗ್ತಾಳೆ. ಇದ್ರ ಜೊತೆ ಆರೋಗ್ಯ ಕೂಡ ಹದಗೆಡುತ್ತದೆ. ವಾಸ್ತುವವಾಗಿ ಪುರುಷರಿಗಿಂತ ಮೊದಲು ಮಹಿಳೆ ಏಳಬೇಕು. ಯಾಕೆಂದ್ರೆ ಪುರುಷರಿಗಿಂತ ಹೆಚ್ಚು ಕೆಲಸ ಮಹಿಳೆಯರಿಗಿರುತ್ತದೆ.

ಅದೃಷ್ಟದ (Luck) ಬಗ್ಗೆ ಮಾತನಾಡ್ಬೇಡಿ : ಎಲ್ಲ ಸೌಕರ್ಯವಿದ್ರೂ ಅದೃಷ್ಟ ಸರಿಯಿಲ್ಲ ಎಂದು ಅನೇಕರು ಆಗಾಗ ಹೇಳ್ತಿರುತ್ತಾರೆ. ತಾಯಿ ಲಕ್ಷ್ಮಿ ಎಲ್ಲ ಸೌಲಭ್ಯ ನೀಡಿದ್ರೂ ಮನಸ್ಸಿನಲ್ಲಿ ಅದು ಬೇಕು, ಇದು ಬೇಕು ಎಂದು ಮಹಿಳೆ ಕೊರಗುತ್ತಿರುತ್ತಾಳೆ. ಇದ್ರಿಂದ ಲಕ್ಷ್ಮಿ ಮತ್ತಷ್ಟು ಕೋಪಗೊಳ್ತಾಳೆ. ಹಾಗೆ ಆಗಬಾರದು ಅಂದ್ರೆ ಅದೃಷ್ಟವನ್ನು ಶಪಿಸಬಾರದು. ಇರುವುದ್ರಲ್ಲಿಯೇ ಸಂತೋಷವಾಗಿದ್ದರೆ ಸಂಪತ್ತು ತಾನಾಗಿಯೇ ಬರುತ್ತದೆ. ಮಹಿಳೆ ಮಾತ್ರವಲ್ಲ ಪುರುಷ ಕೂಡ ಬೆಳಿಗ್ಗೆ ಎದ್ದ ತಕ್ಷಣ ಅದೃಷ್ಟದ ಬಗ್ಗೆ ಮಾತನಾಡಬಾರದು.

2022ರ ಅಂತ್ಯದೊಳಗೆ ಈ 5 ವಸ್ತುಗಳನ್ನು ಮನೆಗೆ ತನ್ನಿ, ಹೊಸ ವರ್ಷದಲ್ಲಿ ಹಣದ ಸಮಸ್ಯೆ ಇರೋಲ್ಲ!

ಮನೆಯ ಸ್ವಚ್ಛತೆ (Cleanliness) : ಮೊದಲೇ ಹೇಳಿದಂತೆ ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛಗೊಳಿಸಬೇಕು. ಮನೆಯ ಮೂಲೆ ಮೂಲೆ ಕ್ಲೀನ್ ಆಗಿರಬೇಕು. ಮನೆ ಸ್ವಚ್ಛವಾಗಿದ್ದರೆ ಲಕ್ಷ್ಮಿ ಖುಷಿಯಾಗ್ತಾಳೆ. ಕೊಳಕಾದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಮಹಿಳೆ ಮನೆಯನ್ನು ಸ್ವಚ್ಛಗೊಳಿಸಬೇಕು.

ಅಡುಗೆ ಮನೆಯನ್ನು ಹೀಗೆ ಬಳಸಿ : ಬೆಳಿಗ್ಗೆ ಅನೇಕ ಮಹಿಳೆಯರು ಮುಖ ತೊಳೆಯದೆ ಅಡುಗೆ ಮನೆಗೆ ಪ್ರವೇಶಿಸ್ತಾರೆ. ಆದ್ರೆ ಶಾಸ್ತ್ರಗಳ ಪ್ರಕಾರ ಇದು ತಪ್ಪು. ಅಡುಗೆ ಮನೆಯಲ್ಲಿ ಅನ್ನಪೂರ್ಣೆ ಹಾಗೂ ಲಕ್ಷ್ಮಿ ನೆಲೆಸಿರುತ್ತಾರೆ. ಹಾಗಾಗಿ ಸ್ನಾನ ಮಾಡಿಯೇ ಅಡುಗೆ ಮನೆಗೆ ಹೋಗಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. 

ಬೆಳಗ್ಗೆ ಈ ಕೆಲಸ ಮಾಡಬೇಡಿ : ಮನೆಯ ಹೊಸ್ತಿಲು ಪವಿತ್ರವಾದ ಸ್ಥಳ. ಮಹಿಳೆ ಬೆಳಿಗ್ಗೆ ಎದ್ದ ತಕ್ಷಣ ಅದನ್ನು ತುಳಿಯಬಾರದು. ಅದ್ರ ಮೇಲೆ ಕುಳಿತು ಉಪಹಾರ ಸೇವನೆ ಮಾಡಬಾರದು.  
 

Follow Us:
Download App:
  • android
  • ios