ಬೈಕ್‌ನಲ್ಲಿ ಹೋಗುವಾಗ ಸೀರೆಯ ಸೆರಗು ಚಕ್ರಕ್ಕೆ ಸಿಲುಕದಂತೆ ಎಚ್ಚರಿಸಲು ಹೋದವರಿಗೆ ಮಹಿಳೆ ನೀಡಿದ ಉತ್ತರ ವೈರಲ್ ಆಗಿದೆ..
ಸಾಮಾನ್ಯವಾಗಿ ಬೈಕ್ ಸ್ಕೂಟರ್‌ಗಳಲ್ಲಿ ಹೋಗುವಾಗ ಹೆಣ್ಣು ಮಕ್ಕಳು ತಮ್ಮ ಸೀರೆಯ ಸೆರಗು ಅಥವಾ ಕತ್ತಿಗೆ ಹಾಕುವ ಶಾಲುಗಳನ್ನು ಜೋಪಾನವಾಗಿ ವಾಹನದ ಟೈರ್‌ಗೆ ಸಿಲುಕದಂತೆ ನೋಡಿಕೊಳ್ಳಬೇಕು. ಆದರೆ ಕೆಲವೊಮ್ಮೆ ಹೆಣ್ಣು ಮಕ್ಕಳು ಬೈಕ್ ಸ್ಕೂಟಿ ಸ್ಕೂಟರ್‌ಗಳಲ್ಲಿ ಕುಳಿತಿರುವಾಗ ಇದರ ಬಗ್ಗೆ ಗಮನವೇ ಕೊಡುವುದಿಲ್ಲ. ಸೀರೆಯ ಸೆರಗು ಅಥವಾ ಪಲ್ಲು, ಚೂಡಿಧಾರದ ಶಾಲು, ಗಾಳಿಯಲ್ಲಿ ಹಾರಾಡುತ್ತಾ ಎಲ್ಲಿ ವಾಹನದ ಚಕ್ರಕ್ಕೆ ಸಿಲುಕಿ ಅವರು ಎಲ್ಲಿ ಅಪಾಯಕ್ಕೊಳಗಾಗುವರೋ ಎಂದು ನೋಡುಗರು ಭಯಗೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಇಂತಹ ಸಂದರ್ಭಗಳು ನೋಡುವುದಕ್ಕೆ ಸಿಕ್ಕರೆ ಜೊತೆಯಲ್ಲಿ ಬೇರೆ ವಾಹನದಲ್ಲಿ ಹೋಗುವ ಇತರರು ಅವರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಾರೆ. ಶಾಲನ್ನು ಅಥವಾ ಸೀರೆ ಸೆರಗನ್ನು ಚಕ್ರಕ್ಕೆ ಸಿಕ್ಕದಂತೆ ಸುರಕ್ಷಿತವಾಗಿ ಹಾಕಿಕೊಳ್ಳುವಂತೆ ಎಚ್ಚರಿಸುತ್ತಾರೆ.
ಚಕ್ರಕ್ಕೆ ಸಿಲುಕುವಂತೆ ನೇತಾಡುತ್ತಿದ್ದ ಸೆರಗು
ಅದೇ ರೀತಿ ಇಲ್ಲೊಂದು ಮಹಿಳೆಯೊಬ್ಬರು ತಮ್ಮ ಪತಿಯ ಜೊತೆ ಬೈಕ್‌ನಲ್ಲಿ ಸಾಗುವ ವೇಳೆ ಅವರ ಸೀರೆಯ ಸೆರಗು ಗಾಳಿಯಲ್ಲಿ ಹಾರಾಡಲು ಶುರುವಾಗಿದ್ದು, ಅವರ ಹಿಂದೆ ಚಲಿಸುತ್ತಿದ್ದ ವಾಹನ ಸವಾರರು ಅವರಿಗೆ ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಸೆರಗನ್ನು ಚಕ್ರಕ್ಕೆ ಸಿಲುಕದಂತೆ ಸುರಕ್ಷಿತವಾಗಿರಿಸಿಕೊಳ್ಳಿ ಎಂದು ಹೇಳುವ ಸಲುವಾಗಿ ಭಾಬಿಜೀ ಪಲ್ಲು ಪಲ್ಲು ಎಂದು ಬೊಬ್ಬೆ ಹೊಡೆಯಲು ಶುರು ಮಾಡಿದ್ದಾರೆ. ಈ ವೇಳೆ ಆ ಮಹಿಳೆ ಏನ್ ಹೇಳಿರಬಹುದು ಗೆಸ್ ಮಾಡಿ. ಆಕೆಯ ಮಾತು ಕೇಳಿ ಈಗ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.
ಕಣ್ಣೀರು ತರಿಸುವಂತಿದೆ ಪ್ರಸೂತಿ ವೈದ್ಯೆಯೊಬ್ಬರು ಹಂಚಿಕೊಂಡ ತಾಯಿಯೊಬ್ಬಳ ನೋವಿನ ಕತೆ
ಸೀರೆಗೆ 1500 ರೂಪಾಯಿ ಎಂದ ಮಹಿಳೆ
ಸೀರೆಯ ಸೆರಗು ಸರಿಪಡಿಸಿಕೊಳ್ಳುವ ಬದಲು ಬೈಕ್‌ನ ಹಿಂದೆ ಕುಳಿತಿದ್ದ ಆ ಮಹಿಳೆ ಸೀರೆಯ ಸೆರಗನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾ 1500 ರೂಪಾಯಿ ಎಂದು ಹೇಳಿದ್ದಾಳೆ. ಇದನ್ನು ಕೇಳಿ ಹಿಂದಿದ್ದ ವಾಹನ ಸವಾರರು ಜೋರಾಗಿ ನಕ್ಕಿದ್ದಲ್ಲದೇ ಅಯ್ಯೋ ನಿಮ್ಮ ಸೆರಗು ಕೆಳಗೆ ನೇತಾಡುತ್ತಿದೆ. ಅದನ್ನು ಹೇಳುವುದಕ್ಕೆ ಬಂದೆವು ಎಂದು ಆಕೆ ಮತ್ತೆ ಎಚ್ಚರಿಸಿದ್ದಾಳೆ. ಈ ವೇಳೆ ಮಹಿಳೆ ಸೆರಗು ಸರಿಪಡಿಸಿಕೊಂಡು ಮುಂದೆ ಸಾಗಿದ್ದು ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ನಕ್ಕು ನಕ್ಕು ಸುಸ್ತಾಗಿದ್ದಾರೆ.
IIT, IIM, UPSC ಗೆ ಸುಲಭವಾಗಿ ಪಾಸಾದೆ ಆದರೆ... ತಾಯ್ತನದ ಸವಾಲಿನ ಬಗ್ಗೆ ಐಎಎಸ್ ಅಧಿಕಾರಿ ಮಾತು
ಮಹಿಳೆಯ ಉತ್ತರಕ್ಕೆ ಭಾರಿ ನಗು
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದ್ದು, ಜನ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಇದು ಮಹಿಳಾ ದಿನದ ವಿಶೇಷ ಎಂದು ಕಾಲೆಳೆದಿದ್ದಾರೆ. @gharkekalesh ಎಂಬುವವರು 6 ಸೆಕೆಂಡ್‌ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 2 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದು, ಮಹಿಳೆ ಆಕೆಯ ಸೀರೆಯನ್ನು ಇಷ್ಟಪಡುತ್ತಾಳೆ. ಅದೇ ದೊಡ್ಡ ವಿಚಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ವೈರಲ್ ವೀಡಿಯೋ ಇಲ್ಲಿದೆ ನೋಡಿ
