ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ತಾಯ್ತನದ ಸವಾಲುಗಳ ಬಗ್ಗೆ ಮಾತನಾಡಿದ್ದು, ಐಐಟಿ, ಐಐಎಂ ಪರೀಕ್ಷೆಗಳಿಗಿಂತ ಕಠಿಣವೆಂದು ಹೇಳಿದ್ದಾರೆ. ಮಕ್ಕಳನ್ನು ಬೆಳೆಸುವಲ್ಲಿ ಹೆಣ್ಣುಮಕ್ಕಳು ನಿಭಾಯಿಸುವ ಕಷ್ಟಗಳು ಮತ್ತು ವೃತ್ತಿ ಜೀವನದ ಸವಾಲುಗಳ ಬಗ್ಗೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಯಶಸ್ವಿ ತಾಯ್ತನದ ಮುಂದೆ ಐಐಟಿ ಐಐಎಂ ಯುಪಿಎಸ್‌ ಏನೂ ಅಲ್ಲ, ಈ ಎಲ್ಲಾ ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡಿದೆ, ಆದರೆ ತಾಯ್ತನದ ಪರೀಕ್ಷೆಗೆ ಏನೇನೋ ಸಿದ್ಧಗೊಂಡಿರಲಿಲ್ಲ ಎಂದು ಐಎಎಸ್ ಅಧಿಕಾರಿಯೊಬ್ಬರು ತಾಯ್ತನದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನ ಹಳೆಯ ವಿದ್ಯಾರ್ಥಿನಿಯಾಗಿರುವ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಅಧಿಕಾರಿ ದಿವ್ಯಾ ಮಿತ್ತಲ್ ಅವರು, ಭಾರತದ ಹಲವು ಬಹಳ ಕಠಿಣವಾದ ಶೈಕ್ಷಣಿಕ ಹಾಗೂ ವೃತ್ತಿಪರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಪಾಸು ಮಾಡಿದ್ದಾರೆ. ಆದರೆ ಅವುಗಳು ಯಾವುದು ಕೂಡ ತಾಯಿಯೊಬ್ಬಳ ಸವಾಲುಗಳಿಗಿರುವ ಹೋಲಿಕೆಯೇ ಅಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

ಮಾರ್ಚ್‌ 8 ರಂದು ಮಹಿಳಾ ದಿನಾಚರಣೆ ಕಳೆದು ಹೋಯ್ತು,ಈ ಸಂದರ್ಭದಲ್ಲಿ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಕ್ಕಳನ್ನು ಬೆಳೆಸುವಲ್ಲಿ ಹೆಣ್ಮಕ್ಕಳು ನಿಭಾಯಿಸುವ ಸವಾಲು ಹೋರಾಟಗಳ ಬಗ್ಗೆ ಹೇಳಿಕೊಂಡಿದ್ದು, ವೃತ್ತಿ ಜೀವನವನ್ನು ನಿಭಾಯಿಸುವುದರ ಜೊತೆ ಜೊತೆಗೆ ತಮ್ಮಿಬ್ಬರು ಹೆಣ್ಣು ಮಕ್ಕಳನ್ನು ಬೆಳೆಸುವಾಗ ಪಟ್ಟ ಕಷ್ಟವನ್ನು ಅವರು ನೆನಪಿಸಿಕೊಂಡಿದ್ದಾರೆ. ಶೈಕ್ಷಣಿಕವಾಗಿ ವೃತ್ತಿಪರವಾಗಿ ಹಲವು ಕಠಿಣ ಪರೀಕ್ಷೆಗಳನ್ನು ಪಾಸು ಮಾಡಿ ಸಾಧನೆ ಮಾಡಿದ್ದ ತನಗೆ ಪೋಷಕರ ಭಾವನಾತ್ಮಕ ಮತ್ತು ಮಾನಸಿಕ ಸವಾಲುಗಳಿಗೆ ಮೊದಲೇ ಸಿದ್ಧಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

ಹೆಣ್ಣು ಮಕ್ಕಳು ಎದುರಿಸುವ ಸವಾಲಿನ ಬಗ್ಗೆ ಅಧಿಕಾರಿ ಮಾತು

ನಾನು ಐಎಎಸ್ ಅಧಿಕಾರಿ, ನಾನು ಐಐಟಿ ಹಾಗೂ ಐಐಎಂನಲ್ಲಿ ಅಧ್ಯಯನ ನಡೆಸಿದ್ದೇನೆ. ಇದೆಲ್ಲ ಸಾಧನೆಗಳನ್ನು ಮಾಡಲು ನಾನು ಕಷ್ಟಪಟ್ಟಿದ್ದೇನೆ. ಆದರೆ ಆದರೆ ನನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ಬೆಳೆಸುವ ಸವಾಲುಗಳಿಗೆ ಯಾವುದೂ ನನ್ನನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ, ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶ ಕೇಡರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಮಿತ್ತಲ್, ತಮ್ಮ ಎಂಟು ವರ್ಷದ ಮಗಳು ಈಗಾಗಲೇ ಸಾಮಾಜಿಕ ಒತ್ತಡವನ್ನು ಎದುರಿಸುತ್ತಿದ್ದಾರೆ ಮತ್ತು ಅದು ಅವರ ಅಭಿಪ್ರಾಯಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೊಂಡರು. 

ಅಪ್ಪ ಅಮ್ಮನ ಒಪ್ಪಿಗೆ ಇಲ್ಲದೇ ನಿಮ್ಮ 'ಪ್ರೀತಿ'ಯನ್ನು ಮದ್ವೆ ಆಗ್ತೀರಾ? ಹುಡುಗರ ಉತ್ತರ ಕೇಳಿ ಹುಡುಗಿರು ಗರಂ

ನನ್ನ ಹಿರಿಯ ಮಗಳಿಗೆ 8 ವರ್ಷ. ಅವಳು ನಮ್ಮಗಿಂತ ಭಿನ್ನ ಎನಿಸಿದಾಗ ಜಗತ್ತು ಈಗಾಗಲೇ ಅವಳ ಸಣ್ಣ ಧ್ವನಿಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ನಾವು ಅವರ ಬೆಳಕನ್ನು ಮಂದಗೊಳಿಸಲು ಬಿಡಬಾರದು. ಅವಳಿಗೆ ಗೌರವಯುತವಾಗಿರಲು ಆದರೆ ದೃಢವಾಗಿರಲು ಕಲಿಸಿ. ಧ್ವನಿ ಅಲುಗುತ್ತಿದ್ದರು ಧ್ವನಿ ಎತ್ತುವುದು ಮುಖ್ಯ ಎಂದು ಅವಳಿಗೆ ಹೇಳಿ ಎಂದು ಅವರು ಹೇಳಿದರು.

ಮನೆ ಹಾಗೂ ವೃತ್ತಿಯನ್ನು ಜೊತೆಯಾಗಿ ನಿಭಾಯಿಸುವ ಸವಾಲು

ಮನೆಯಲ್ಲಿ ಮಕ್ಕಳ ಪಾಲನೆ ಹಾಗೂ ಕೆಲಸ ಎರಡನ್ನೂ ಸಮವಾಗಿ ಬ್ಯಾಲೆನ್ಸ್ ಮಾಡಿಕೊಳ್ಳುವ ಕಷ್ಟವನ್ನು ಕೂಡ ಮಿತ್ತಲ್ ಹೇಳಿಕೊಂಡಿದ್ದಾರೆ. ನಾನು ಕೆಲವೊಮ್ಮೆ ರಾತ್ರಿಯ ವೇಳೆಗೆ ಪೂರ್ತಿ ಸುಸ್ತಾಗಿ ಅತ್ತುಬಿಡುತ್ತೇನೆ. ಈ ವೇಳೆ ಆಕೆ ನನ್ನನ್ನು ತಬ್ಬಿಕೊಂಡು ನೀನೇ ನನ್ನ ಹೀರೋ ಎಂದು ಹೇಳುತ್ತಾಳೆ. ಅವರು ನಮ್ಮನ್ನು ನೋಡುತ್ತಾರೆ. ನಮ್ಮ ವೈಫಲ್ಯಗಳನ್ನು ನೋಡಿ ಚೇತರಿಸಿಕೊಳ್ಳುವುದನ್ನು ಕಲಿಯುತ್ತಾರೆ ಬೀಳುವುದು ತಪ್ಪಲ್ಲ ಎಂದು ಹೇಳಿ ಅವರಿಗೆ ತೋರಿಸಿ ನಂತರ ಎದ್ದೇಳಿಸಿ, ನನ್ನ ಕೆಲಸ ನನಗೆ ಕಲಿಸಿದ್ದು ಇದನ್ನೇ ಶಕ್ತಿಯೇ ದೊಡ್ಡದಲ್ಲ ಅದು ಸ್ಥಿರವಾಗಿರುತ್ತದೆ. ಅವಳ ಪಾಲಿಗೆ ಊರುಗೋಲಾಗಿ ಅಲ್ಲ, ಅವಳ ಪಾಲಿನ ಬಂಡೆಯಾಗಿರಿ. ಅವಳು ಬಿದ್ದು ಎದ್ದೇಳಲಿ. ಏನೇ ಆದರೂ ನೀನು ಅವಳ ಜೊತೆ ಇರುತ್ತೀಯ ಎಂದು ತೋರಿಸಿ ಎಂದು ಮಿತ್ತಲ್ ಹೆಣ್ಣು ಮಕ್ಕಳಿಗೆ ಹಾಗೂ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. 

ಕಣ್ಣೀರು ತರಿಸುವಂತಿದೆ ಪ್ರಸೂತಿ ವೈದ್ಯೆಯೊಬ್ಬರು ಹಂಚಿಕೊಂಡ ತಾಯಿಯೊಬ್ಬಳ ನೋವಿನ ಕತೆ

ಅಲ್ಲದೇ ತಾಯ್ತನವೂ ಸಂಪೂರ್ಣವಾಗಿ ಕೊರಗಿನಿಂದ ಅಥವಾ ಮಕ್ಕಳಿಗೆ ನಾವು ಇದನ್ನು ಮಾಡಲಾಗಲಿಲ್ಲ ಎಂಬ ಕೀಳರಿಮೆಯಿಂದ ಕೂಡಿದೆ. ಆದರೂ ಈ ವಿಚಾರಗಳನ್ನು ತಿಳಿದಿರಿ ನೀವು ನಿಮ್ಮದೇ ಆದ ರೀತಿಯಲ್ಲಿ, ಅವಳು ಯಾವುದನ್ನಾದರೂ ಬೆನ್ನಟ್ಟುವಂತಹ ಜಗತ್ತನ್ನು ನಿರ್ಮಿಸುತ್ತಿದ್ದೀರಿ. ನಿಮ್ಮನ್ನು ನೀವು ಕ್ಷಮಿಸಿ. ಇಷ್ಟು ಮಾಡಿ ಸಾಕು. ನೀವು ಯಾವುದೇ ಪಾತ್ರವನ್ನು ಹೊಂದಿದ್ದರೂ, ನೀವೇ ನಿಮ್ಮ ಅತ್ಯುತ್ತಮವಾದದ್ದನ್ನು ನೀಡಬೇಕು. ನೀವೇ ಬಿಟ್ಟುಕೊಟ್ಟರೆ, ಅವರು ಹೋರಾಟಗಾರ್ತಿಯಾಗಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ. ನೀವು ಅವಳ ಅತಿದೊಡ್ಡ ಮಾಡೆಲ್ . ಈ ಮಹಿಳಾ ದಿನದಂದು, ಹೆಣ್ಣು ಮಕ್ಕಳನ್ನು ಬೆಳೆಸುವ ಎಲ್ಲಾ ಪೋಷಕರಿಗೆ, ನಾವು ಇದರಲ್ಲಿ ಒಟ್ಟಿಗೆ ಇದ್ದೇವೆ. ಹೀಗೆ ಮುಂದುವರಿಯೋಣ. ಅವರಿಗಾಗಿ. ನಮಗಾಗಿ. ಅವರ ಶಕ್ತಿಯ ಅಗತ್ಯವಿರುವ ಜಗತ್ತಿಗೆ. ಪ್ರೀತಿ, ಪ್ರಯತ್ನಿಸುತ್ತಿರುವ ತಾಯಿ, ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. 

Scroll to load tweet…