ತಿಂಗಳಿಗೆ 6 ಲಕ್ಷ ಜೀವನಾಂಶ ಕೇಳಿದ ಹೈಫೈ ಪತ್ನಿಗೆ ಉಗಿದು ಕಳಿಸಿದ ನ್ಯಾಯಾಧೀಶೆ: ಕೋರ್ಟ್ ಕೇಸ್ ವೈರಲ್
ಬೇರ್ಪಟ್ಟ ಪತಿಯಿಂದ ತಿಂಗಳಿಗೆ ಆರು ಲಕ್ಷ ರೂಪಾಯಿ ಹಣವನ್ನು ನಿರ್ವಹಣಾ ಭತ್ಯೆಯ ರೂಪದಲ್ಲಿ ನೀಡಲು ಆದೇಶಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಹೇಳಿದ್ದೇನು ಕೇಳಿ...
ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಅವರ ಸಾವಿನ ಬೆನ್ನಲ್ಲೇ #justiceforAtul ಟ್ರೆಂಡ್ ಆಗಿದೆ. ಅತುಲ್ಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಕೂಗು ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಅಮಾಯಕ ಪತಿಯೊಬ್ಬ ಜೀವ ಕಳೆದುಕೊಂಡಾಗಿದೆ. ಇದರ ಬೆನ್ನಲ್ಲೇ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ, ಪರಿಹಾರದ ಹೆಸರಿನಲ್ಲಿ ಪತ್ನಿಯರು ನಡೆಸಿಕೊಳ್ಳುತ್ತಿರುವ ರೀತಿಯ ಕೋರ್ಟ್ ಪ್ರೊಸೀಡಿಂಗ್ಸ್ ವೈರಲ್ ಆಗುತ್ತಿವೆ. ಈಗ ಕೋರ್ಟ್ ಪ್ರೊಸೀಡಿಂಗ್ಸ್ಗಳನ್ನು ನೇರ ಪ್ರಸಾರದಲ್ಲಿ ನೋಡಬಹುದಾಗಿರುವ ಹಿನ್ನೆಲೆಯಲ್ಲಿ, ಈ ಕೇಸಿನ ವಿಡಿಯೋ ಕೂಡ ವೈರಲ್ ಆಗಿದೆ. ಇದು ಎಲ್ಲಿಯ ವಿಡಿಯೋ ಎನ್ನುವುದು ಸ್ಪಷ್ಟವಾಗಿ ನಮೂದಾಗಿಲ್ಲ. ಆದರೆ ಅತುಲ್ ಅವರ ಪ್ರಕರಣದ ಹಿನ್ನೆಲೆಯಲ್ಲಿ ಹಳೆಯ ಕೇಸ್ ಇದಾಗಿದೆ ಎನ್ನಲಾಗುತ್ತಿದೆ. ಹೈಫೈ, ಬ್ರಾಂಡೆಡ್ ಪತ್ನಿಯೊಬ್ಬಳು ತಿಂಗಳಿಗೆ ಆರು ಲಕ್ಷ ರೂಪಾಯಿ ಡಿಮಾಂಡ್ ಮಾಡಿ ನ್ಯಾಯಾಧೀಶೆಯಿಂದ ಉಗಿಸಿಕೊಂಡಿರುವ ಕೊರ್ಟ್ ಕೇಸ್ ಇದಾಗಿದೆ.
ಇದರಲ್ಲಿ ಪತ್ನಿಯೊಬ್ಬಳು ವಿಚ್ಛೇದಿತ ಪತಿಯಿಂದ ತಿಂಗಳಿಗೆ 6 ಲಕ್ಷದ 16 ಸಾವಿರ ರೂಪಾಯಿಗಳ ಬೇಡಿಕೆ ಇಟ್ಟಿದ್ದಾಳೆ. ಇದನ್ನು ಪ್ರಶ್ನಿಸಿ ಪತಿ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯನ್ನು ನೋಡುತ್ತಲೇ ನ್ಯಾಯಾಧೀಶೆ ಕೆಂಡಾಮಂಡಲ ಆಗಿದ್ದಾರೆ. ಇಷ್ಟು ಬಜೆಟ್ನಲ್ಲಿ ಸಾಮಾನ್ಯ ಕುಟುಂಬವೊಂದು ಇಡೀ ವರ್ಷದ ಜೀವನ ಸಾಗಿಸುತ್ತಿದೆ. ಹೀಗಿರುವಾಗ ತಿಂಗಳಿಗೆ ಒಬ್ಬಳಿಗಾಗಿ ಇಷ್ಟೊಂದು ಹಣದ ಬೇಡಿಕೆ ಇಟ್ಟಿರುವುದನ್ನು ನೋಡಿ ನ್ಯಾಯಾಧೀಶೆ ಅಚ್ಚರಿಕೊಂಡಿದ್ದಾರೆ. ಅವರ ಪರ ವಾದಿಸಲು ಬಂದಿರುವ ವಕೀಲರಿಗೆ ಸರಿಯಾದ ಬುದ್ಧಿ ಮಾತನ್ನು ಹೇಳಿರುವ ನ್ಯಾಯಾಧೀಶೆ, ದುರಾಸೆಯ ಪತ್ನಿಯ ವಿರುದ್ಧ ಮಾತಿನ ಏಟು ನೀಡಿದ್ದಾರೆ. 'ಒಬ್ಬಳಿಗೆ ತಿಂಗಳಿಗೆ ಇಷ್ಟೊಂದು ದುಡ್ಡು ಬೇಕಾ? ಇದೇನು ಆಟನಾ' ಎಂದು ಪ್ರಶ್ನಿಸಿರೋ ನ್ಯಾಯಾಧೀಶೆ, 'ಇಷ್ಟೊಂದು ಆಕೆಗೆ ಬೇಕಿದ್ದರೆ ದುಡಿಯಲು ಹೇಳಿ' ಎಂದು ಪತ್ನಿಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ಕುಟುಂಬದ ಯಾವುದೇ ಜವಾಬ್ದಾರಿ ಇಲ್ಲ, ಮಕ್ಕಳನ್ನು ನೋಡಿಕೊಳ್ಳುವ ಪ್ರಶ್ನೆಯೂ ಇಲ್ಲ. ಒಬ್ಬಳ ಸಲುವಾಗಿ ಇಷ್ಟೊಂದು ಹಣ ಬೇಕಾ? ಬುದ್ಧಿ ಇಲ್ವಾ' ಎಂದು ಗರಂ ಆಗಿದ್ದಾರೆ ನ್ಯಾಯಾಧೀಶೆ. ಕಾನೂನು ಇರೋದು ಹೀಗೆಲ್ಲಾ ಡಿಮಾಂಡ್ ಮಾಡಿ ಪತಿಗೆ ಶಿಕ್ಷೆ ಕೊಡಲು ಅಲ್ಲ ಎಂದು ಹೇಳಿದ್ದಾರೆ. ಕೆಳ ಹಂತದ ಕೋರ್ಟ್ ಇಷ್ಟು ಹಣವನ್ನು ನೀಡುವಂತೆ ಆದೇಶ ಮಾಡಿದೆ ಎಂದು ವಕೀಲರು ಹೇಳುತ್ತಿದ್ದಂತೆಯೇ, ಅದೆಲ್ಲಾ ನಮಗೆ ಬೇಡ, ಇಷ್ಟು ಹಣ ಪತ್ನಿಗೆ ಯಾಕೆ ಬೇಕು ಹೇಳಿ ಎಂದಾಗ, ವಕೀಲರು, ಪತ್ನಿಯ ಹೈಫೈ ಲೈಫ್ಸ್ಟೈಲ್ ಹೇಳಿದ್ದಾರೆ.
ಒಂದು ತಿಂಗಳು ಜೊತೆಗಿದ್ದು 15 ವರ್ಷ ದೂರವಿದ್ದಾಕೆಯಿಂದ 40 ಲಕ್ಷ ಡಿಮಾಂಡ್! ಕೋರ್ಟ್ ಕೇಸ್ ವೈರಲ್
'ಒಟ್ಟಿಗೇ ಇದ್ದಾಗ ನ್ಯೂಟ್ರೀಷನ್ ಫುಡ್ ತರುತ್ತಿದ್ದರು. ಪತ್ನಿ ಅದನ್ನೇ ಮುಂದುವರೆಯಸಬೇಕು. ಅದಕ್ಕಾಗಿ ಹೆಚ್ಚಿಗೆ ಹಣ ಬೇಕು. ಅಷ್ಟೇ ಅಲ್ಲದೇ ಪತ್ನಿಯು ಬ್ರಾಂಡೆಂಡ್ ಬಟ್ಟೆಗಳನ್ನೇ ಧರಿಸುವುದು, ಲೈಫ್ಸ್ಟೈಲ್ ಕೂಡ ಮೊದಲಿನಂತೆಯೇ ನಡೆಯಬೇಕು. ಆದ್ದರಿಂದ ಇಷ್ಟು ಹಣ ಬೇಕು' ಎಂದರು. ಒಂದೊಂದು ಡ್ರೆಸ್ಗೆ 10 ಸಾವಿರ ರೂಪಾಯಿಗೂ ಮೇಲೆ ಇರುತ್ತೆ ಎಂದರು. ಇದರಿಂದ ನ್ಯಾಯಾಧೀಶೆಗೆ ಮತ್ತಷ್ಟು ಕೋಪ ಬಂತು. ಇವೆಲ್ಲಾ ಮನುಷ್ಯನ ಅಗತ್ಯನಾ? ಇಂಥ ಲೈಫ್ ಬೇಕಿದ್ದರೆ ಸ್ವಂತ ದುಡಿಯಲಿ ಎಂದು ಹೇಳಿದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಹಸ್ರಾರು ಮಂದಿ ಕಮೆಂಟ್ ಮಾಡುವ ಮೂಲಕ, ಇಂಥ ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಲಿ ಎನ್ನುತ್ತಿದ್ದಾರೆ.
ಮೀಡಿಯಾ ಅಟೆನ್ಷನ್, ಜನರ ಪ್ರತಿಭಟನೆ ಎಲ್ಲಕ್ಕೂ ಮುಖ್ಯವಾಗಿ ಅತುಲ್ ಬರೆದಿಟ್ಟಿರುವ ಸುದೀರ್ಘ ಪತ್ರ, ವಿಡಿಯೋ ರೆಕಾರ್ಡಿಂಗ್ ಇವೆಲ್ಲವುಗಳಿಂದ ಈ ಕೇಸು ಇಷ್ಟು ಜನಪ್ರಿಯತೆ ಪಡೆಯಿತು ಎನ್ನುವುದೇನೂ ಸುಳ್ಳಲ್ಲ. ಇಲ್ಲದಿದ್ದರೆ ಅತುಲ್ ಸಾವು ಕೂಡ ಎಲ್ಲೋ ಒಂದೆರಡು ಕಡೆ ಸುದ್ದಿಯಾಗಿ ಮುಗಿದು ಹೋಗುವ ಕಥೆಯಾಗಿತ್ತು. ಆರೋಪಿಗಳು ಕೂಡ ನುಸುಳಿಸಿಕೊಂಡು, ಜಾಮೀನು ಪಡೆದುಕೊಂಡು ನೆಮ್ಮದಿಯಾಗಿ ಇರುತ್ತಿದ್ದರು ಎನ್ನುವ ಮಾತು ಕೂಡ ಸುಳ್ಳಲ್ಲ. ಅತುಲ್ ಒಂದು ಉದಾಹರಣೆ ಮಾತ್ರ. ಇವರಂತೆಯೇ ಹೆಣ್ಣು ಹಾಗೂ ಹೆಣ್ಣಿನ ಮನೆಯ ದೌರ್ಜನ್ಯಕ್ಕೆ ಒಳಗಾಗಿ ನೋವು ಅನುಭವಿಸುತ್ತಿರುವ ಅದೆಷ್ಟೋ ಗಂಡಸರು ಇದ್ದಾರೆ. ಆದರೆ ಅವರ ಕೇಸುಗಳು ಅತುಲ್ ಕೇಸ್ ಆದಂತೆ ಪ್ರತಿಭಟನೆಯ ಹಂತಕ್ಕೆ ಹೋಗದ ಕಾರಣ, ಇನ್ನೂ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಲೇ ಇದೆ ಎನ್ನುವ ಅಭಿಮತವೂ ಇದೇ ವೇಳೆ ವ್ಯಕ್ತವಾಗುತ್ತಿದೆ.
ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...