ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...

ಶಿಕ್ಷಣ ಪಡೆಯಲು ಹಣವಿಲ್ಲದೇ ಭಿಕ್ಷಾಟನೆಗೆ ಇಳಿದಿದ್ದ ಈತ ಈಗ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ. ಇವನ ಕುತೂಹಲದ ವಿಷಯ ಇಲ್ಲಿದೆ... 
 

Financial struggles to building a Rs 8 crore empire Meet Bharat Jain Indias richest beggar suc

ಕಮಲಾ ಹಾಸನ್​ ನಟನೆಯ ಮೂಕಿ ಚಿತ್ರ ಪುಷ್ಪಕ ವಿಮಾನ ನೋಡಿದವರಿಗೆ ಅಲ್ಲಿ ಹೈಲೈಟ್​ ಆಗಿರೋ ಭಿಕ್ಷುಕನ ಪಾತ್ರ ಮರೆಯಲು ಸಾಧ್ಯನೇ ಇಲ್ಲ ಬಿಡಿ. ಆತ ಸತ್ತು ಬೀದಿ ಹೆಣವಾದಾಗ ಅವನ ಬಳಿ ಕಂತು ಕಂತಿನ ನೋಟ್​ ಇತ್ತು. ಆಗ ಆತನ ಶವವನ್ನು ಸಾಗಿಸಲು ಬಂದ ಸಿಬ್ಬಂದಿ, ಹೆಣ ಅಲ್ಲಿಯೇ ಬಿಟ್ಟು ದುಡ್ಡು ಆಯ್ದುಕೊಳ್ಳಲು ಹೋಗುವ ಸನ್ನಿವೇಶ ನೆನಪಿರಬಹುದು. ಇದು ಚಿತ್ರದ ಕಥೆಯಾಯ್ತು ಬಿಡಿ.  ಕಳೆದ ವರ್ಷ,  ಮೃತಪಟ್ಟ ಭಿಕ್ಷುಕಿಯ ಬಳಿ ಲಕ್ಷಾಂತರ ರೂಪಾಯಿ ಹಣ ಸಿಕ್ಕಿದ್ದು ಸಕತ್​ ಸುದ್ದಿಯಾಗಿತ್ತು. ಆದರೆ ಇವೆಲ್ಲವನ್ನೂ ಮೀರುವ  ಇಲ್ಲೊಬ್ಬ ಭಿಕ್ಷುಕ ಇದ್ದಾನೆ. ಈತನ ಬಳಿ ಇರುವ ಹಣ ಕೇಳಿದ್ರೆ ಶ್ರೀಮಂತರೇ ಸುಸ್ತಾಗಿ ಹೋಗ್ತಾರೆ. ದೊಡ್ಡ ದೊಡ್ಡ ಉದ್ಯೋಗದಲ್ಲಿ ಭಾರಿ ಸಂಬಳ ಪಡೆಯುವವರೂ ಉಫ್​ ಎನ್ನುತ್ತಾರೆ.  ಈತನೇ  ಮುಂಬೈನ ಭರತ್ ಜೈನ್.

ಈತ ಈಗ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಎನ್ನುವ ಬಿರುದು ಪಡೆದುಕೊಂಡಿದ್ದಾನೆ. ಇವನ ದಿನದ ಸಂಪಾದನೆ ಕನಿಷ್ಠ ಎರಡೂವರೆ ಸಾವಿರ ರೂಪಾಯಿ, ಅಂದರೆ ತಿಂಗಳಿಗೆ ಏನಿಲ್ಲವೆಂದರೂ ಕನಿಷ್ಠ 75 ಸಾವಿರ ರೂಪಾಯಿ. ಅಷ್ಟೇ ಅಲ್ಲ. ಇವನೀಗ 7.5 ಕೋಟಿ ರೂಪಾಯಿಗಳ ಒಡೆಯ ಕೂಡ!   ಹಾಗಂತ ಈಗಲೂ ಭಿಕ್ಷೆ ಬೇಡುವುದನ್ನು ನಿಲ್ಲಿಸಿಲ್ಲ ಈತ.  ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಈತ ಭಿಕ್ಷೆ ಬೇಡುವುದನ್ನು ನೋಡಬಹುದು.  ಪ್ರತಿ ನಿತ್ಯ 13- 14 ಗಂಟೆ ಭಿಕ್ಷೆ ಬೇಡ್ತಾನೆ. ಈತನ ಅದೃಷ್ಟ ಹೇಗಿದೆ ಎಂದರೆ, ಇವನಿಗೆ ಈಗಲೂ ಹೆಚ್ಚೂ ಕಮ್ಮಿ ಇಷ್ಟೇ ಸಂಪಾದನೆ ಇದೆ. 

ಮಗಳಿಲ್ಲದೇ ಹುಚ್ಚಿ ಆಗಿರೋ ಸೀತಾ 'ಡೋಂಟ್​ ವರಿ ಬೇಬಿಯಮ್ಮಾ'ಗೆ ಸಕತ್​ ಸ್ಟೆಪ್​: ಕಾಲೆಳಿತಿರೋ ನೆಟ್ಟಿಗರು

ಇನ್ನು ಭರತ್ ಜೈನ್ ಕುರಿತು ಹೇಳುವುದಾದರೆ ಇವನಿಗೆ ಇಬ್ಬರು ಮಕ್ಕಳು. ದುಬಾರಿ ಇಂಗ್ಲಿಷ್​ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದಾರೆ. ಅದೇನೂ ಅಚ್ಚರಿಯ ವಿಷಯವಲ್ಲ ಬಿಡಿ. ಆದರೆ ಈ ಭಿಕ್ಷುಕ ವಾಸಿಸೋದು ಎಲ್ಲಿ ಗೊತ್ತಾ?  ಡುಪ್ಲೆಕ್ಸ್ ಮನೆಯಲ್ಲಿ. ಮಾತ್ರವಲ್ಲದೇ  ಇವನ ಹೆಸರಿನಲ್ಲಿ ಸುಮಾರು 1.2 ಕೋಟಿ ರೂಪಾಯಿ ಬೆಲೆ ಬಾಳುವ ಫ್ಲಾಟ್​ ಕೂಡ ಇದೆ.    ಡಬಲ್​ ಬೆಡ್​ರೂಮ್​ ಫ್ಲಾಟ್​ ಇದು. ಇಷ್ಟೇ ಅಲ್ಲ, ಮುಂಬೈನ ಥಾಣೆಯಲ್ಲಿ  ಇವನ ಮಾಲೀಕತ್ವದ ಎರಡು ಅಂಗಡಿಗಳಿವೆ. ಅವುಗಳ ಬಾಡಿಗೆ ತಲಾ ಮೂವತ್ತು ಸಾವಿರ ರೂಪಾಯಿಗಳು.  ಸ್ವಂತ ಸ್ಟೇಷನರಿ ಅಂಗಡಿಯೂ ಇದೆ. 
 
ಇಷ್ಟೆಲ್ಲಾ ಇದ್ದರೂ ಅವನು ಭಿಕ್ಷೆ ಬೇಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಅಷ್ಟಕ್ಕೂ ಭಿಕ್ಷಾಟನೆ ಬರಲು ಒಂದು ಕಾರಣವೂ ಇದೆ. ಅದೇನೆಂದರೆ, ಶಿಕ್ಷಣವನ್ನು ಮುಂದುವರೆಸಲು ಸುಮಾರು 40 ವರ್ಷ ಹೋರಾಟ ಮಾಡಿದ್ದನಂತೆ ಈತ. ಆದರೆ ಅದು ಸಾಧ್ಯವಾಗಿರಲಿಲ್ಲ.  ಆರ್ಥಿಕ ಸಂಕಷ್ಟದಿಂದ ತುಂಬಿದ ಬಾಲ್ಯದ ನಂತರ ಭಿಕ್ಷಾಟನೆಯನ್ನು ಆಶ್ರಯಿಸಿದ್ದ ಈತ, ಈಗ ಕೋಟ್ಯಧಿಪತಿ!  ನಾನು ಭಿಕ್ಷಾಟನೆಯನ್ನು ಆನಂದಿಸುತ್ತೇನೆ ಮತ್ತು ನಾನು ಅದನ್ನು ಬಿಟ್ಟುಕೊಡಲು ಬಯಸುವುದಿಲ್ಲ. ನಾನು ದುರಾಸೆಯವನಲ್ಲ,  ಉದಾರ ಸ್ವಭಾವದವನು. ನಾನು ದೇವಸ್ಥಾನಗಳು ಮತ್ತು ದತ್ತಿಗಳಿಗೆ ಹಣವನ್ನು ದಾನ ಮಾಡುತ್ತೇನೆ ಎಂದು ಈತ ಹೇಳಿದ್ದಾನೆ. 

ಮಸಣದ ಹೂವಿನ ಅಪರ್ಣಾ ರೀತಿಯ ಆ ಪಾತ್ರ ನನ್ನ ಜೀವನದ ಕನಸು- ಮನದಾಸೆ ತೆರೆದಿಟ್ಟ ಭಾಗ್ಯಲಕ್ಷ್ಮಿ ಕುಸುಮತ್ತೆ!
 

Latest Videos
Follow Us:
Download App:
  • android
  • ios