Asianet Suvarna News Asianet Suvarna News

ಅರೆ, ಇದೆಂಥಾ ವಿಚಿತ್ರ..ಹಾರ್ಟ್ ಶೇಪ್‌ನಲ್ಲಿದೆ ಮಹಿಳೆಯ ಗರ್ಭಕೋಶ!

ಗರ್ಭಾಶಯವು ಮಹಿಳೆಯ ದೇಹದಲ್ಲಿ ಅತ್ಯಂತ ಪ್ರಮುಖ ಭಾಗವಾಗಿದೆ. ಮಹಿಳೆಯರು ಗರ್ಭ ಧರಿಸಿ ಮಗುವಿಗೆ ಜನನ ನೀಡುವ ಪ್ರಕ್ರಿಯೆ ನೆರವಾಗುತ್ತದೆ. ಆದರೆ ಇಂಥಾ ಗರ್ಭಕೋಶ ಹಾರ್ಟ್‌ ಶೇಪ್‌ನಲ್ಲಿ ಕಂಡು ಬಂದ್ರೆ ಹೇಗಿರುತ್ತೆ ? ಅರೆ ಅದ್ಹೇಗೆ ಸಾಧ್ಯ ಅನ್ಬೇಡಿ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.

Woman with heart shaped uterus gives birth to one in 500-million twins Vin
Author
First Published Jan 6, 2023, 1:18 PM IST

ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮಾನವನ ದೇಹ (Human body)ವೆಂಬುದೇ ಒಂದು ಅಚ್ಚರಿ. ಕೆಲವೊಮ್ಮೆ ಇದು ಇನ್ನೂ ವಿಭಿನ್ನತೆಗಳನ್ನು ತೋರಿಸಿ ಮತ್ತಷ್ಟು ಕೌತುಕಕ್ಕೆ ಕಾರಣವಾಗಿದೆ. ಹಾಗೆಯೇ ಇಲ್ಲೊಬ್ಬ ಮಹಿಳೆಯ (Woman) ಗರ್ಭಕೋಶ (Uterus) ಹಾರ್ಟ್‌ ಶೇಪ್‌ನಲ್ಲಿ ಕಂಡು ಬಂದಿದ್ದು, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಹೌದು 500 ಮಿಲಿಯನ್‌ ಕೇವಲ ಒಬ್ಬರಲ್ಲಿ ಇಂಥಾ ಪ್ರಕರಣ ಕಂಡು ಬರಬಹುದು ಎಂದು ತಜ್ಞರು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಅಚ್ಚರಿ ಮೂಡಿಸಿದ ಹೃದಯಾಕಾರದ ಗರ್ಭಕೋಶ
ಯುಎಸ್‌ನ ಮ್ಯಾಸಚೂಸೆಟ್ಸ್‌ನ ನಾರ್ತ್‌ಬರೋದಿಂದ ಕರೆನ್ ಟ್ರಾಯ್, 25, ಮತ್ತು ಅವರ ಪತಿ ಅವರು ಪೋಷಕರಾಗಲಿದ್ದಾರೆ ಎಂದು ತಿಳಿದಾಗ ಉತ್ಸುಕರಾಗಿದ್ದರು. ಆದರೆ ಕರೆನ್‌ ಟ್ರಾಯ್‌ ಹೃದಯಾಕಾರದ ಗರ್ಭಾಶಯವನ್ನು ಹೊಂದಿದ್ದಾರೆ ಎಂದು ವೈದ್ಯರು ಹೇಳಿದಾಗ ಅವರು ಆಘಾತಕ್ಕೊಳಗಾದರು. 1,000 ಮಹಿಳೆಯರಲ್ಲಿ ನಾಲ್ವರು ಮಾತ್ರ ಹೃದಯದ ಆಕಾರದ ಗರ್ಭಾಶಯವನ್ನು ಹೊಂದಿರುವುದರಿಂದ ಮತ್ತು ಹೃದಯದ ಆಕಾರದ ಗರ್ಭದೊಂದಿಗೆ ಅವಳಿ (Twins)ಗಳೊಂದಿಗೆ ಗರ್ಭಿಣಿಯಾಗುವ ಸಾಧ್ಯತೆಯು ಸರಿಸುಮಾರು 500 ಮಿಲಿಯನ್‌ಗೆ ಒಂದು ಆಗಿರುವುದರಿಂದ ಪರಿಸ್ಥಿತಿಯು ಅತ್ಯಂತ ಅಪರೂಪವಾಗಿದೆ.

ಗರ್ಭಾಶಯವನ್ನು ಆರೋಗ್ಯಕರವಾಗಿಸಲು ಮಹಿಳೆಯರು ಏನು ತಿನ್ನಬೇಕು ?

500 ಮಿಲಿಯನ್‌ನಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಕಂಡು ಬರುವ ಸ್ಥಿತಿ 
ಕುತೂಹಲಕಾರಿಯಾಗಿ, ಕ್ಯಾರೆನ್ ತನ್ನ ಮೊದಲ ಗರ್ಭಾವಸ್ಥೆಯಲ್ಲಿ ತನ್ನ ಗರ್ಭಾಶಯದ ಆಕಾರವನ್ನು ಕಂಡುಹಿಡಿಯಲು ಸಾಧ್ಯವಾಗಲ್ಲಿಲ್ಲ. ಯಾಕೆಂದರೆ ಇದು ಸ್ಕ್ಯಾನ್‌ಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿರಲ್ಲಿಲ್ಲ. 'ನಾನು ಅವಳಿ ಮಕ್ಕಳನ್ನು ಹೊಂದುತ್ತೇನೆ ಎಂಬ ಬಗ್ಗೆಯೇ ನಾನು ಹೆಚ್ಚು ಆತಂಕಕ್ಕೆ ಒಳಗಾಗಿದ್ದೆ. ಆದರೆ ನಾನು ಹೃದಯಾಕಾರದ ಗರ್ಭಕೋಶ ಹೊಂದಿದ್ದೇನೆಂದು ತಿಳಿದು ಮತ್ತಷ್ಟು ಆತಂಕವಾಯಿತು' ಎಂದು ಕರೆನ್ ತಿಳಿಸಿದ್ದಾರೆ.

'ನನಗೆ ಹೃದಯದ ಆಕಾರದ ಗರ್ಭಾಶಯವಿದೆ ಎಂದು ನಾನು ಮೊದಲು ನಂಬಲಿಲ್ಲ, ಆದ್ದರಿಂದ ಅದು ನಿಜವೆಂದು ಖಚಿತಪಡಿಸಿಕೊಳ್ಳಲು ನಾನು ಇನ್ನೊಂದು ಸ್ಕ್ಯಾನ್‌ ಮಾಡಿಸಿಕೊಂಡೆ. ಈ ರೀತಿಯ ಯುಟ್ರಸ್ ಶೇಪ್‌ನಿಂದ ಹೆಚ್ಚಿನ ಅಪಾಯವಿರುವ ಕಾರಣ ನನ್ನನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಯಿತು' ಎಂದು ಅವರು ಹೇಳಿದರು.

IVF Implantation Failure: ಐವಿಎಫ್ ಕೂಡ ವಿಫಲವಾಗಲು ಕಾರಣವೇನು ಗೊತ್ತಾ?

ಸಾಮಾನ್ಯವಾಗಿ ಗರ್ಭಾಶಯದ ಆಕಾರ ಹೇಗಿರುತ್ತದೆ ?
ಒಂದು ವಿಶಿಷ್ಟವಾದ ಗರ್ಭಾಶಯವು ತಲೆಕೆಳಗಾದ ಪೇರಳೆಯಂತೆ ಆಕಾರದಲ್ಲಿರುತ್ತದೆ. ಪಿಯರ್‌ನ ಅಗಲವಾದ, ದುಂಡಗಿನ ಭಾಗವು ಗರ್ಭಾಶಯದ ಮೇಲಿನ ಭಾಗವನ್ನು ಹೋಲುತ್ತದೆ (ಫಂಡಸ್ ಎಂದು ಕರೆಯಲಾಗುತ್ತದೆ). ಗರ್ಭಾಶಯವು ಬೈಕಾರ್ನ್ಯುಯೇಟ್ ಆಗಿದ್ದರೆ,  ಗರ್ಭಾಶಯದ ಮೇಲ್ಭಾಗವು ಮಧ್ಯದಲ್ಲಿ ಒಳಮುಖವಾಗಿ ಮುಳುಗುತ್ತದೆ, ಅದು ಹೃದಯದಂತೆ ಕಾಣುತ್ತದೆ. ಇದನ್ನು ಸಾಮಾನ್ಯವಾಗಿ ಹೃದಯದ ಆಕಾರದ ಗರ್ಭಾಶಯ ಎಂದು ಕರೆಯಲಾಗುತ್ತದೆ.

ಮಹಿಳೆಯರಿಗೆ ತಾಯಂದಿರದ್ದೇ ಗರ್ಭಕೋಶ ಕಸಿ
ತಮಿಳುನಾಡು ಮತ್ತು ಆಂಧ್ರಪ್ರದೇಶದ ರೋಗಿಯೊಬ್ಬರಿಗೆ ತಜ್ಞರನ್ನೊಳಗೊಂಡ ವೈದ್ಯರ ತಂಡವು ಎರಡು ಗರ್ಭಾಶಯ ಕಸಿ ಯಶಸ್ವಿಯಾಗಿ ನಡೆಸಿದೆ. ವಿಶೇಷವೆಂದರೆ ಎರಡೂ ಪ್ರಕರಣದಲ್ಲಿ, ದಾನಿಗಳು ರೋಗಿಯ ತಾಯಂದಿರು. ಹೌದು, ಅಚ್ಚರಿಯೆನಿಸಿದರೂ ಇದು ನಿಜ. ಇಬ್ಬರು ಮಹಿಳೆಯರು ತಮ್ಮ ತಾಯಂದಿರಿಂದಲೇ ಗರ್ಭಕೋಶ (uteruses) ಪಡೆದಿದ್ದಾರೆ. ಏಷ್ಯಾದ ಪ್ರಮುಖ ಬಹು ಅಂಗಾಂಗ ಕಸಿ ಕೇಂದ್ರವಾದ ಗ್ಲೆನೆಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ (ಜಿಜಿಹೆಚ್‌ಸಿ) ಈ ಕಸಿ ಮಾಡಿದೆ ಎಂದು ಆಸ್ಪತ್ರೆಯ (Hospital) ಪ್ರಕಟಣೆ  ತಿಳಿಸಿದೆ.

ಜೆಕ್ ರಿಪಬ್ಲಿಕ್ ಆಸ್ಪತ್ರೆಯ ಕ್ಲಿನಿಕಲ್ ಮತ್ತು ಪ್ರಾಯೋಗಿಕ ಔಷಧದ ಪ್ರೊಫೆಸರ್ ಡಾ.ಜಿರಿ ಫ್ರೋನೆಕ್, ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾಗಿದ್ದಾರೆ, ಗರ್ಭಾಶಯದ ಕಸಿಗಳು ಹೈಪೋಪ್ಲಾಸಿಯಾದಿಂದ ಬಳಲುತ್ತಿರುವ ಯುವತಿಯರಿಗೆ ಭರವಸೆಯನ್ನು ನೀಡುವ ಹೊಸ ವಿಧಾನವಾಗಿದೆ. ಹೈಪೋಪ್ಲಾಸಿಯಾ ಎಂದರೆ ಗರ್ಭಾಶಯವು ಅಭಿವೃದ್ಧಿಯಾಗದ ಅಥವಾ ಇಲ್ಲದಿರುವ ಸ್ಥಿತಿಯಾಗಿದೆ. ಜಿಜಿಎಚ್‌ಸಿಯ ಪ್ರಸೂತಿ, ಸ್ತ್ರೀರೋಗ ಮತ್ತು ಫಲವತ್ತತೆ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಪದ್ಮಪ್ರಿಯಾ ವಿವೇಕ್ ಈ ಬಗ್ಗೆ ವಿವರಿಸುತ್ತಾ, 'ಡಾ.ಜಿರಿ ಫ್ರೋನೆಕ್ ಅವರ ಪರಿಣತಿಯಲ್ಲಿ ನಾವು ಯುವತಿಯರಿಗೆ 2 ಅತ್ಯಂತ ಸವಾಲಿನ ಗರ್ಭಾಶಯದ ಕಸಿ ಮಾಡಿದ್ದೇವೆ' ಎಂದು ಹೇಳಿದರು.

Follow Us:
Download App:
  • android
  • ios