MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಗರ್ಭಾಶಯವನ್ನು ಆರೋಗ್ಯಕರವಾಗಿಸಲು ಮಹಿಳೆಯರು ಏನು ತಿನ್ನಬೇಕು ?

ಗರ್ಭಾಶಯವನ್ನು ಆರೋಗ್ಯಕರವಾಗಿಸಲು ಮಹಿಳೆಯರು ಏನು ತಿನ್ನಬೇಕು ?

ಗರ್ಭಾಶಯವು ಮಹಿಳೆಯ ಅತ್ಯಂತ ಪ್ರಮುಖ ಭಾಗವಾಗಿದೆ. ಈ ಗರ್ಭಾಶಯದ ಸ್ನಾಯುಗಳು ದೇಹದಲ್ಲಿ ಪ್ರಬಲವಾಗಿವೆ, ಆದರೂ ನಮ್ಮ ತಪ್ಪು ಜೀವನಶೈಲಿ ಅಭ್ಯಾಸಗಳು ಅಜಾಗರೂಕತೆಯಿಂದ ಅದಕ್ಕೆ ಹಾನಿ ಮಾಡುತ್ತವೆ. ಅದರಲ್ಲೂ ಗರ್ಭ ಧರಿಸಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ತಮ್ಮ ಗರ್ಭಕೋಶ ದುರ್ಬಲವಾಗಿದೆ ಎಂಬ ಕಲ್ಪನೆಯೇ ಇರುವುದಿಲ್ಲ. ಆದ್ದರಿಂದಲೇ ಹಿಸ್ಟರೆಕ್ಟಮಿ ಮತ್ತು ಸಿ ಸೆಕ್ಷನ್ ಪ್ರಕರಣಗಳು ಹೆಚ್ಚುತ್ತಿವೆ.

3 Min read
Suvarna News | Asianet News
Published : Sep 15 2021, 07:03 PM IST
Share this Photo Gallery
  • FB
  • TW
  • Linkdin
  • Whatsapp
112

ಸ್ತ್ರೀರೋಗ ತಜ್ಞೆ ಡಾ. ಸೀಮಾ ಗುಪ್ತಾ ಅವರ ಪ್ರಕಾರ, ದುರ್ಬಲ ಗರ್ಭಾಶಯವು ಪದೇ ಪದೇ ಗರ್ಭಪಾತಕ್ಕೆ ಕಾರಣವಾಗುತ್ತದೆ, ಆದರೆ ನಿಮ್ಮ ಒಟ್ಟಾರೆ ಆರೋಗ್ಯ, ಫಲವತ್ತತೆ ಮತ್ತು ದೀರ್ಘಾಯುಷ್ಯಕ್ಕೆ ಬಲವಾದ ಗರ್ಭಾಶಯವು ಬಹಳ ಮುಖ್ಯವಾಗಿದೆ.  ಮಗುವನ್ನು ಹೊಂದಲು ಬಯಸಿದರೆ, ಈ ಸಂತಾನೋತ್ಪತ್ತಿ ಅಂಗವನ್ನು ಆರೋಗ್ಯಕರವಾಗಿಡಲು  ಸಮತೋಲಿತ ಆಹಾರ ಮತ್ತು ಸರಿಯಾದ ಆಹಾರಗಳನ್ನು ಸೇವಿಸಬೇಕು. ಆದ್ದರಿಂದ  ಗರ್ಭಾಶಯ ಮತ್ತು ಅಂಡಾಶಯಗಳ ಆರೈಕೆಗೆ ತುಂಬಾ ಉತ್ತಮವಾದ ಕೆಲವು ಆಹಾರಗಳ ಬಗ್ಗೆ ಇಲ್ಲಿನ ಮಾಹಿತಿ ತಿಳಿಯಿರಿ... 

212

ಗರ್ಭಾಶಯವು ಆರೋಗ್ಯಕರವಾಗಿರುವುದು ಏಕೆ ತುಂಬಾ ಮುಖ್ಯ
 ಗರ್ಭಾಶಯದ ಮುಖ್ಯ ಕಾರ್ಯವೆಂದರೆ ಫಲವತ್ತಾದ ಅಂಡಾಣುವನ್ನು ಪೋಷಿಸುವುದು. ಫಲವತ್ತಾದ ಅಂಡಾಣುವನ್ನು ಎಂಡೋಮೆಟ್ರಿಯಂಗೆ ಕಸಿ ಮಾಡಿದ ನಂತರ, ಅದು ಗರ್ಭಾಶಯದ ರಕ್ತನಾಳಗಳಿಂದ ಪೌಷ್ಟಿಕಾಂಶವನ್ನು ಪಡೆಯುತ್ತದೆ ಮತ್ತು ಅಂತಿಮವಾಗಿ ಭ್ರೂಣವಾಗುತ್ತದೆ. ಈ ಸಮಯದಲ್ಲಿ  ಗರ್ಭಾಶಯವು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡುವ ಅನೇಕ ವಿಷಯಗಳಿವೆ. ಇದರಲ್ಲಿ ಅನಿಯಮಿತ ಅಥವಾ ಭಾರೀ ಮುಟ್ಟಿನ ರಕ್ತಸ್ರಾವ, ಗರ್ಭಾಶಯದ ಫೈಬ್ರಾಯ್ಡ್ ಗಳು ಇತ್ಯಾದಿ ಸೇರಿವೆ. ಫಲವತ್ತತೆಯ ಭಾವನೆಗಳನ್ನು ಹೆಚ್ಚಿಸಲು ಮಹಿಳೆಯರು ಗರ್ಭಾಶಯವನ್ನು ಆರೋಗ್ಯಕರಮತ್ತು ಬಲವಾಗಿಡಬೇಕು.

312

ಬಲವಾದ ಗರ್ಭಾಶಯಕ್ಕಾಗಿ ನಟ್ಸ್ 
ಹಾರ್ಮೋನುಗಳ ಉತ್ತಮ ಉತ್ಪಾದನೆಗೆ ದೇಹಕ್ಕೆ ನಟ್ಸ್ ಗಳು ಬೇಕು. ಗೋಡಂಬಿ, ಬಾದಾಮಿ, ವಾಲ್ ನಟ್ಸ್ ಮತ್ತು ಲಿನ್ ಸೀಡ್ ನಂತಹ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಕೊಲೆಸ್ಟ್ರಾಲ್ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ಗರ್ಭಾಶಯದ ಫೈಬ್ರಾಯ್ಡ್ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ,

412

ನಟ್ಸ್ ಗಳು ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ ಸೀರಮ್ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಕಾಲಿಕ ಹೆರಿಗೆಯನ್ನೂ ತಡೆಯುತ್ತವೆ. ಆದ್ದರಿಂದ  ಆಹಾರದಲ್ಲಿ ರುಚಿಯೊಂದಿಗೆ ಪೋಷಿಸಲು ನಟ್ಸ್ ಗಳನ್ನೂ ಸೇರಿಸಿ.

512

ಡೈರಿ ಉತ್ಪನ್ನಗಳು ಗರ್ಭಾಶಯದ ಶಕ್ತಿಗೆ ಒಳ್ಳೆಯದು
ಡೈರಿ ಉತ್ಪನ್ನಗಳಾದ ಮೊಸರು, ಚೀಸ್, ಹಾಲು ಮತ್ತು ಬೆಣ್ಣೆಯಲ್ಲಿ ಬಹಳ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುತ್ತದೆ, ಇದು ಗರ್ಭಾಶಯದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆಯಾದರೂ, ಗರ್ಭಾಶಯದ ಫೈಬ್ರಾಯ್ಡ್ ಗಳನ್ನು ದೂರವಿರಿಸುವಲ್ಲಿ ವಿಟಮಿನ್ ಡಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

612

ಫೈಬ್ರಾಯ್ಡ್ ಗಳ ಚಿಕಿತ್ಸೆಗೆ ಗ್ರೀನ್ ಟೀ ಕುಡಿಯಿರಿ
ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ಧವಾದ ಗ್ರೀನ್ ಟೀ ಆರೋಗ್ಯಕರ ಗರ್ಭಧಾರಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ ಗರ್ಭಾಶಯದಲ್ಲಿರುವ ಫೈಬ್ರಾಯ್ಡ್ ಗಳ ಚಿಕಿತ್ಸೆಗೂ ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಗರ್ಭಾಶಯದ ಫೈಬ್ರಾಯ್ಡ್ ಹೊಂದಿರುವ ಮಹಿಳೆಯರು 8 ವಾರಗಳ ಕಾಲ ನಿಯಮಿತವಾಗಿ ಗ್ರೀನ್ ಟೀ ಕುಡಿಯಬೇಕು. ಇದು ಫೈಬ್ರಾಯ್ಡ್ ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

712

ದುರ್ಬಲ ಯೂಟರರ್ಸ್ ತೊಡೆದುಹಾಕಲು ನಿಂಬೆ
ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ತಾಜಾ ನಿಂಬೆ ಯನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ, ಆದರೆ  ದುರ್ಬಲ ಗರ್ಭಾಶಯವನ್ನು ಬಲಪಡಿಸಲು ನಿಂಬೆ ಹಣ್ಣು ಸಹ ತುಂಬಾ ಪ್ರಯೋಜನಕಾರಿ ಎಂದು  ತಿಳಿದಿದೆಯೇ? ವಾಸ್ತವವಾಗಿ ಲಿಂಬೆಯಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದ್ದು, ಇದು ಗರ್ಭಕೋಶದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ನಿಂಬೆ ಹಣ್ಣು  ಯಾವುದೇ ರೂಪದಲ್ಲಿ ತಿಂದರೆ ಅದು ಗರ್ಭಾಶಯವನ್ನು ಬಲಪಡಿಸುತ್ತದೆ.

812

ಆರೋಗ್ಯಕರ ಶಿಶು ದಾನಿಗಾಗಿ ತಾಜಾ ಹಣ್ಣುಗಳನ್ನು ಸೇವಿಸಿ
ಹಣ್ಣುಗಳ ಸೇವನೆಯಿಂದ  ವಿಟಮಿನ್ ಸಿ ಮತ್ತು ಬಯೋ ಫ್ಲಾವನಾಯ್ಡ್ ನಂತಹ ಅನೇಕ ಪೋಷಕಾಂಶಗಳು ಸಿಕ್ಕುತ್ತವೆ. ಇದು ಗರ್ಭಾಶಯದಲ್ಲಿ ಫೈಬ್ರಾಯ್ಡ್ ಗಳ ಬೆಳವಣಿಗೆಯನ್ನು ತಡೆಯುತ್ತದೆ. ಫ್ಲಾವನಾಯ್ಡ್ ಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಮತ್ತು ಅಂಡಾಶಯದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

912

ಹಸಿವಾದಾಗಲೆಲ್ಲಾ ಊಟದ ಮಧ್ಯದಲ್ಲಿ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿ. ಇದರಿಂದ ಜಂಕ್ ಫುಡ್ ತಿನ್ನುವುದನ್ನು ತಡೆಯಬಹುದು ಮತ್ತು ಗರ್ಭಕೋಶವನ್ನು ಆರೋಗ್ಯವಾಗಿಡಲು ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸಬಹುದು. ಆದುದರಿಂದ ಸಾಧ್ಯವಾದಷ್ಟು ಹಣ್ಣುಗಳನ್ನು ಸೇವಿಸಿ. 

1012

ಗರ್ಭಾಶಯ ಬಲವಾಗಿಸಲು ಎಲೆತರಕಾರಿ
ನಮ್ಮಲ್ಲಿ ಅನೇಕರು ಹಸಿರು ಸೊಪ್ಪುತರಕಾರಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ, ಆದರೆ ಈ ನೈಸರ್ಗಿಕ ಆಹಾರಗಳು  ಗರ್ಭಾಶಯದ ಆರೋಗ್ಯಕ್ಕೆ ವರದಾನವಾಗಿದೆ. ಇವು ಕ್ಷಾರ ಸಮತೋಲನವನ್ನು ಕಾಯ್ದುಕೊಳ್ಳುವುದಲ್ಲದೆ ಖನಿಜಗಳು ಮತ್ತು ಫೋಲಿಕ್ ಆಮ್ಲದಂತಹ ಪೋಷಕಾಂಶಗಳನ್ನು ಒದಗಿಸುತ್ತವೆ.

1112

ಗರ್ಭಧರಿಸಲು ಸಾಕಷ್ಟು ತರಕಾರಿಗಳನ್ನು ತಿನ್ನಿ
ಗರ್ಭಧರಿಸಲು ಕಷ್ಟಪಡುತ್ತಿರುವ ಮಹಿಳೆಯರು ಉತ್ತಮ ಪ್ರಮಾಣದ ತರಕಾರಿಗಳನ್ನು ತಿನ್ನಬೇಕು. ವಾಸ್ತವವಾಗಿ, ತರಕಾರಿಗಳು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಗಳ ಉತ್ತಮ ಮೂಲವಾಗಿದೆ. ಫೈಬ್ರಾಯ್ಡ್ ಗಳನ್ನು ದೂರವಿಡಲು ಪ್ರಯತ್ನಿಸಿ, ಇದರಿಂದ  ಆಹಾರದಲ್ಲಿ ತರಕಾರಿಗಳು , ದ್ವಿದಳ ಧಾನ್ಯಗಳು, ಎಲೆಕೋಸು, ಬ್ರೊಕೋಲಿಯಂತಹ ತರಕಾರಿಗಳು ಫೈಟೋಈಸ್ಟ್ರೋಜೆನ್ ಗಳನ್ನೂ ಸೇರಿಸಿ.   ಇದು  ಈಸ್ಟ್ರೋಜೆನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ,  ಗರ್ಭಾಶಯದಲ್ಲಿ ಗಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ.

1212

ಗರ್ಭಾಶಯ ಕೂಡ ದುರ್ಬಲವಾಗಿದ್ದರೆ, ಇದನ್ನು ಆರೋಗ್ಯಕರವಾಗಿಸಲು ಇಲ್ಲಿ ಹೇಳಿದ ಆಹಾರಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಪ್ರಾಥಮಿಕವಾಗಿ ಅವುಗಳನ್ನು ಸೇವಿಸಲು ಪ್ರಯತ್ನಿಸಿ. ಆದಾಗ್ಯೂ, ಯಾವುದೇ ಧನಾತ್ಮಕ ಫಲಿತಾಂಶಗಳಿಲ್ಲದಿದ್ದರೆ, ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved