ದೊಡ್ಡ ತುಟಿಗಾಗಿ 4 ಬಾರಿ ಸರ್ಜರಿ ಮಾಡಿಸ್ಕೊಂಡ ಮಹಿಳೆ, ಆಮೇಲೆ ಆಗಿದ್ದೇ ಬೇರೆ!
ಇತ್ತೀಚಿಗೆ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ ಜನಸಾಮಾನ್ಯರು ಸಹ ಸೌಂದರ್ಯ ವೃದ್ಧಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ, ಫಿಲ್ಲರ್, ಇಂಪ್ಲಾಂಟ್‌ಗಳನ್ನು ಮಾಡುವುದು ಸಾಮಾನ್ಯವಾಗಿದೆ. ಹಾಗೆಯೇ ಬಲ್ಗೇರಿಯಾದ ಮಹಿಳೆಯೊಬ್ಬಳು ಇತ್ತೀಚಿಗೆ ದೊಡ್ಡ ತುಟಿಗಾಗಿ ಸರ್ಜರಿ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾಳೆ.
ಸೌಂದರ್ಯ ಅನ್ನೋದು ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ಮುಖ್ಯ ಗುರುತು ಎಂಬಂತಾಗಿದೆ. ಹೀಗಾಗಿಯೇ ಜನರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಜನರ ಇಂಥಾ ಮೆಂಟಾಲಿಟಿಯನ್ನು ಗಮನಿಸಿಕೊಂಡೇ ಉದ್ಯಮಿಗಳು ಬ್ಯೂಟಿ ಕಾನ್ಸೆಪ್ಟ್‌ನ್ನು ಬಿಸಿನೆಸ್‌ಗೆ ಬಳಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಬ್ಯೂಟಿ ಪ್ರಾಡಕ್ಟ್‌ಗಳ ಬಿಸಿನೆಸ್‌ನಿಂದ ಬಿಲಿಯನ್‌ಗಟ್ಟಲೆ ಲಾಭ ಗಳಿಸುತ್ತಾರೆ. ಜನರು ಸಹ ಬ್ಯೂಟಿಗಾಗಿ ಸಾವಿರಗಟ್ಟಲೆ, ಲಕ್ಷಗಟ್ಟಲೆ ವ್ಯಯಿಸಲು ಸಿದ್ಧರಾಗಿರುತ್ತಾರೆ. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲ ಜನಸಾಮಾನ್ಯರು ಸಹ ಸೌಂದರ್ಯ ವೃದ್ಧಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ, ಫಿಲ್ಲರ್, ಇಂಪ್ಲಾಂಟ್‌ಗಳನ್ನು ಮಾಡುವುದು ಸಾಮಾನ್ಯವಾಗಿದೆ.
ಆದರೆ ಇಂಥಾ ಸರ್ಜರಿಗಳಿಂದ ಕೆಲವೊಮ್ಮೆ ಎಡವಟ್ಟುಗಳಾಗುವುದು ಇದೆ. ಮುಖ ಊತ, ಚರ್ಮದಲ್ಲಿ ತುರಿಕೆ, ಗುಳ್ಳೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಬಲ್ಗೇರಿಯಾದ ಮಹಿಳೆಯೊಬ್ಬಳು ಇತ್ತೀಚಿಗೆ ದೊಡ್ಡ ತುಟಿಗಾಗಿ ಸರ್ಜರಿ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾಳೆ.
ಚೆಂದ ಕಾಣ್ಬೇಕು ಅಂತಾ ಮುಖ ಬದಲಿಸಿಕೊಂಡವಳಿಗೆ ಡ್ರೈವಿಂಗ್ ಲೈಸೆನ್ಸ್ ರಿನೀವಲ್ ಮಾಡಿ ಕೊಡ್ತಿಲ್ಲ!
ಬಲ್ಗೇರಿಯಾದ ಮಹಿಳೆ ಆಂಡ್ರಿಯಾ ಇವನೊವಾ ತಾನು ವಿಶ್ವದ ಅತಿದೊಡ್ಡ ತುಟಿಗಳನ್ನು ಹೊಂದಿರುವುದಾಗಿ ಇತ್ತೀಚಿಗೆ ಹೇಳಿಕೊಂಡಿದ್ದಾರೆ. ತುಟಿಗಳನ್ನು ತನ್ನ ನೈಸರ್ಗಿಕ ಗಾತ್ರಕ್ಕಿಂತ ದೊಡ್ಡದಾಗಿಸಲು ಆಂಡ್ರಿಯಾ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಪ್ರಪಂಚದಲ್ಲೇ ತನ್ನ ದೊಡ್ಡ ತುಟಿಗಳನ್ನು ಸಾಧಿಸಲು ಅವಳು ಒಂದೇ ದಿನದಲ್ಲಿ ನಾಲ್ಕು ಶಸ್ತ್ರಚಿಕಿತ್ಸೆಗಳನ್ನು ಮಾಡಿದಳು. ಆಕೆಯ ವೈದ್ಯರು ಆರಂಭದಲ್ಲಿ ಕಾರ್ಯವಿಧಾನವನ್ನು ಮಾಡಲು ನಿರಾಕರಿಸಿದರು. ನಂತರ ಆಂಡ್ರಿಯಾ ಒತ್ತಾಯದ ಮೇರೆಗೆ ಸರ್ಜರಿ ಮಾಡಲಾಯಿತು. ಈ ಪ್ರಕ್ರಿಯೆಗೆ ಬರೋಬ್ಬರಿ 21 ಲಕ್ಷ ರೂ. ವೆಚ್ಚ ತಗುಲಿದೆ.
ಆದರೆ ಆಂಡ್ರಿಯಾ ಸೌಂದರ್ಯವನ್ನು ಹೆಚ್ಚಿಸುವ ಪ್ರಯತ್ನಗಳು ಅವಳ ವೈಯಕ್ತಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು. ತನ್ನ ಜೀವನ ಸಂಗಾತಿಯನ್ನು ಹುಡುಕಲು ಆಂಡ್ರಿಯಾಗೆ ಈಗ ಕಷ್ಟವಾಗುತ್ತಿದೆ. 26 ವರ್ಷದ ಯುವತಿ ಆಂಡ್ರಿಯಾ ಸದ್ಯ ಯಾವ ಯುವಕರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಈಕೆ 20 ವರ್ಷದ ಮಗಳ ತಾಯಿನಾ ಅಲ್ಲ ಇಪ್ಪತ್ತರ ತರುಣಿನಾ? ಕಿರುತೆರೆ ನಟಿಯ ಹಾಟ್‌ಲುಕ್‌ಗೆ ಬೆರಗಾದ ನೆಟ್ಟಿಗರು!
ಹೆಚ್ಚಿನ ಅನುಯಾಯಿಗಳು ಆಂಡ್ರಿಯಾ ಬಗ್ಗೆ ತಮ್ಮ ಕಳವಳವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, 'ನೀವು ಮನಶ್ಶಾಸ್ತ್ರಜ್ಞರಿಂದ ಬೆಂಬಲವನ್ನು ಪಡೆಯಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, 'ಸೌಂದರ್ಯಕ್ಕೆ ಇಷ್ಟು ಆದ್ಯತೆ ಕೊಡಬಾರದು' ಎಂದು ಎಚ್ಚರಿಸಿದ್ದಾರೆ. ವಿಪರ್ಯಾಸವೆಂದರೆ ಹಲವಾರು ಶಸ್ತ್ರಚಿಕಿತ್ಸೆ ಮಾಡಿದರೂ ವಿಶ್ವದ ಅತಿದೊಡ್ಡ ತುಟಿಗಳನ್ನು ಹೊಂದಿರುವ ಆಂಡ್ರಿಯಾ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಲಾಗಿಲ್ಲ.
ಲಿಪ್ ಸರ್ಜರಿಯಿಂದ ಸಾಕಷ್ಟು ತೊಂದರೆಯಾಗಿದ್ದರೂ ಆಂಡ್ರಿಯಾ ಸೌಂದರ್ಯಕ್ಕಾಗಿ ಸರ್ಜರಿ ಮಾಡುವ ತಮ್ಮ ಹುಮ್ಮಸ್ಸನ್ನು ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಮೂಗಿನ ಫಿಲ್ಲರ್ ಬಳಸುವ ಮೂಲಕ ಮೂಗಿನ ಗಾತ್ರವನ್ನು ಕೃತಕವಾಗಿ ಹೆಚ್ಚಿಸಲು ನಿರ್ಧರಿಸಿದ್ದಾಳೆ.