- Home
- Entertainment
- Cine World
- Rashmika Wedding Saree: ರಶ್ಮಿಕಾ ಮದುವೆಯಲ್ಲಿ ಉಟ್ಟಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! ಏನಿದರ ವಿಶೇಷತೆ?
Rashmika Wedding Saree: ರಶ್ಮಿಕಾ ಮದುವೆಯಲ್ಲಿ ಉಟ್ಟಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! ಏನಿದರ ವಿಶೇಷತೆ?
ಟಾಲಿವುಡ್ ತಾರೆಯರಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ರಶ್ಮಿಕಾ ಉಟ್ಟಿದ್ದ ಸೀರೆ ಸಖತ್ ಟ್ರೆಂಡ್ ಆಗಿದೆ. ಅಂದಹಾಗೆ, ಈ ಸೀರೆಯ ಬೆಲೆ ಎಷ್ಟು ಗೊತ್ತಾ?

Rashmika Vijay
ಟಾಲಿವುಡ್ ಸ್ಟಾರ್‌ಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹ ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ದೂರಿಯಾಗಿ ನಡೆಯಿತು. ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಈ ಬಗ್ಗೆ ಇಬ್ಬರೂ ಎಂದಿಗೂ ತುಟಿ ಬಿಚ್ಚಿರಲಿಲ್ಲ.
ಗಾಸಿಪ್‌ಗಳಿಗೆ ತೆರೆ ಎಳೆದ ಸೆಲಿಬ್ರಿಟಿ ಜೋಡಿ
ಇದೀಗ ನೇರವಾಗಿ ಮದುವೆಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಮದುವೆ ಉಡುಗೆಯಲ್ಲಿ ಈ ಜೋಡಿ ತುಂಬಾ ಸುಂದರವಾಗಿ ಕಾಣುತ್ತಿದೆ ಎಂದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಹೈದರಾಬಾದ್‌ನಲ್ಲಿಂದು ಅದ್ದೂರಿ ಆರತಕ್ಷತೆ
ಉದಯಪುರದಲ್ಲಿ ವಿವಾಹ ನಡೆದಿದ್ದು, ಹೈದರಾಬಾದ್‌ನಲ್ಲಿ ಸಿನಿಮಾ ಹಾಗೂ ರಾಜಕೀಯ ಗಣ್ಯರಿಗಾಗಿ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಈ ನಡುವೆ, ವಿಜಯ್ ಮತ್ತು ರಶ್ಮಿಕಾ ಅವರ ಮದುವೆಯ ಉಡುಪುಗಳು ಮತ್ತು ಆಭರಣಗಳ ಬಗ್ಗೆ ಒಂದೊಂದೇ ಸುದ್ದಿ ಹೊರಬರುತ್ತಿದೆ.
ಎಲ್ಲರ ಗಮನ ಸೆಳೆದ ರಶ್ಮಿಕಾ ಮದುವೆ ಸೀರೆ
ರಶ್ಮಿಕಾ ತಮ್ಮ ಮದುವೆಯ ದಿನದಂದು ಭಾರಿ ಜರಿ ವರ್ಕ್ ಇರುವ ಕಿತ್ತಳೆ ಬಣ್ಣದ ಸೀರೆಯನ್ನು ಧರಿಸಿ ಎಲ್ಲರ ಗಮನ ಸೆಳೆದರು. ವರದಿಗಳ ಪ್ರಕಾರ, ಈ ಸೀರೆಯ ಬೆಲೆ ಸುಮಾರು 12 ಲಕ್ಷ ರೂಪಾಯಿ. ನೋಡಲು ಸರಳವೆನಿಸಿದರೂ, ಇದರಲ್ಲಿ ಬಹಳ ಸಂಕೀರ್ಣವಾದ ಕಸೂತಿ ಮತ್ತು ಸೀಕ್ವೆನ್ಸ್ ವರ್ಕ್ ಮಾಡಲಾಗಿದೆ.
ರಶ್ಮಿಕಾ ಮದುವೆ ಸೀರೆಯ ವಿಶೇಷ
ಈ ಸೀರೆಯು ಸಾಂಪ್ರದಾಯಿಕ ಹಾಗೂ ಟ್ರೆಂಡಿಯಾಗಿ ಕಾಣುವುದು ವಿಶೇಷ. ಇನ್ನು, ರಶ್ಮಿಕಾ ಧರಿಸಿದ್ದ ಆಭರಣಗಳ ಮೌಲ್ಯ 2 ಕೋಟಿಯಿಂದ 5.5 ಕೋಟಿ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.
ಅತಿಹೆಚ್ಚು ಗಮನ ಸೆಳೆದ ಸೆಲಿಬ್ರಿಟಿ ಮದುವೆ
ಅಷ್ಟೇ ಅಲ್ಲ, ಮದುವೆಗೂ ಮುನ್ನ ನಡೆದ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವಿವಾಹವು ಈಗಾಗಲೇ 2026ರ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಸೆಲೆಬ್ರಿಟಿ ವಿವಾಹಗಳಲ್ಲಿ ಒಂದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

