Asianet Suvarna News Asianet Suvarna News

ಚೆಂದ ಕಾಣ್ಬೇಕು ಅಂತಾ ಮುಖ ಬದಲಿಸಿಕೊಂಡವಳಿಗೆ ಡ್ರೈವಿಂಗ್ ಲೈಸೆನ್ಸ್ ರಿನೀವಲ್ ಮಾಡಿ ಕೊಡ್ತಿಲ್ಲ!

ಪ್ಲಾಸ್ಟಿಕ್ ಸರ್ಜರಿ ಈಗ ಸಾಮಾನ್ಯ ಎನ್ನುವಂತಾಗಿದೆ. ಮಾಡಿಸಿಕೊಳ್ಳೋದು ಸುಲಭವಾದ್ರೂ ಭವಿಷ್ಯದಲ್ಲಿ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ. ಈ ಮಾಡೆಲ್ ಇದಕ್ಕೆ ಉತ್ತಮ ನಿದರ್ಶನ. ಈಗ, ಯಾಕಪ್ಪ ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೊಂಡೆ ಅಂತಾ ಪರಿತಪಿಸುವಂತಾಗಿದೆ. 

Model Denise Rocha Got Pastic Surgery Now She Cant Renew Her Driving Licence roo
Author
First Published Nov 24, 2023, 1:23 PM IST

ಜಗತ್ತಿನಲ್ಲಿರುವ ಅನೇಕ ಜನರಿಗೆ ತಮ್ಮ ಮುಖ, ತಮ್ಮ ದೇಹ ಇಷ್ಟವಾಗೋದಿಲ್ಲ. ಮೂಗು ಇನ್ನಷ್ಟು ಚೆನ್ನಾಗಿರಬೇಕಿತ್ತು, ಹಣೆ ಚಿಕ್ಕದಿರಬೇಕಾಗಿತ್ತು, ತುಟಿಯ ಸೌಂದರ್ಯ ಇನ್ನಷ್ಟು ಆಕರ್ಷಕವಾಗಿಬೇಕಿತ್ತು ಎಂದುಕೊಳ್ತಾರೆ. ಬರೀ ಮುಖ ಮಾತ್ರವಲ್ಲ ತಮ್ಮ ಸ್ತನ, ಹಿಂಭಾಗವನ್ನು ಕೂಡ ಅನೇಕರು ಇಷ್ಟಪಡೋದಿಲ್ಲ. ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬೆಳವಣಿಗೆ ಆಗಿರುವ ಕಾರಣ ಕೈನಲ್ಲಿ ಕಾಸಿರೋರು ತಮ್ಮ ಸೌಂದರ್ಯವನ್ನು ಬದಲಿಸಿಕೊಳ್ತಾರೆ. ತಮಗೆ ಬೇಕಾದ ಭಾಗದ ಸರ್ಜರಿ ಮಾಡಿ ಅದನ್ನು ತಮ್ಮಿಷ್ಟದಂತೆ ಬದಲಿಸಿಕೊಳ್ತಾರೆ. ಪ್ಲಾಸ್ಟಿಕ್ ಸರ್ಜರಿ, ಇಡೀ ದೇಹದ ಪರಿವರ್ತನೆ ಈಗಿನ ದಿನಗಳಲ್ಲಿ ಹೆಚ್ಚಾಗಿದೆ.

ಈ ಪ್ಲಾಸ್ಟಿಕ್ (Plastic) ಸರ್ಜರಿಗಳು, ಶಸ್ತ್ರಚಿಕಿತ್ಸೆಗಳು ಸಕ್ಸಸ್ ಆದ್ರೆ ಸರಿ. ಇಲ್ಲವೆಂದ್ರೆ ಪ್ರಾಣ ಹೋಗುವ ಅಪಾಯವಿರುತ್ತದೆ. ಕೆಲವರು ಪ್ರಾಣ ಉಳಿಸಿಕೊಂಡು ಹೊಸ ಮುಖದೊಂದಿಗೆ ಬಂದ್ರೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚೆಂದ ಕಾಣ್ಬೇಕು ಎನ್ನುವ ಕಾರಣಕ್ಕೆ ಮುಖ ಬದಲಿಸಿಕೊಂಡು ಬಂದ ಕೆಲವರಿಗೆ ಮೊದಲಿನಷ್ಟು ಮಾನ್ಯತೆ ಸಿಗದ ಉದಾಹರಣೆ ಇದೆ. ಆದ್ರೆ ಈ ಮಾಡೆಲ್ (Model) ಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಸರ್ಜರಿ ಮಾಡಿಸಿಕೊಂಡ ಆಕೆ ಈಗ ವಿಚಿತ್ರ ಸಮಸ್ಯೆ ಎದುರಿಸ್ತಿದ್ದಾಳೆ. ಆಕೆ ಯಾರು, ಸಮಸ್ಯೆ ಏನು ಎಂಬ ವಿವರ ಇಲ್ಲಿದೆ.

ಬ್ಯಾಕ್‌ಲೆಸ್‌ ಡ್ರೆಸ್‌ನಲ್ಲಿ ಆಲಿಯಾ ಭಟ್ ಬೋಲ್ಡ್ ಲುಕ್‌, ರಾಹಾ ಅಮ್ಮ ಸಖತ್ ಹಾಟ್ ಅಂತಿದ್ದಾರೆ ನೆಟ್ಟಿಗರು!

ಪ್ಲಾಸ್ಟಿಕ್ ಸರ್ಜರಿ (Surgery) ಗೆ ಒಳಗಾದ ಮಾಡೆಲ್ ಯಾರು? : ಬ್ರೆಜಿಲಿಯನ್ ಮಾಡೆಲ್, 39  ವರ್ಷದ ಡೆನಿಸ್ ರೋಚಾ, ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡ ಮಾಡೆಲ್. ಆಕೆ ಮೂರು, ತುಟಿ ಸೇರಿದಂತೆ ಮುಖದ ಒಂದು ಅಂಗದ ಸರ್ಜರಿ ಮಾಡಿಸಿಕೊಂಡಿಲ್ಲ. ತನ್ನ ಇಡೀ ಮುಖವನ್ನೇ ಬದಲಿಸಿಕೊಂಡಿದ್ದಾಳೆ. ಡೆನಿಸ್ ಹಿಂದೆ ವಕೀಲೆಯಾಗಿದ್ದಳು. ನಂತ್ರ ಮಾಡೆಲ್ ಆಗಿ ಜನರ ಮನಸ್ಸು ಗೆದ್ದಿದ್ದಳು.  ಡೆನಿಸ್ ಗ್ಲಾಮರ್ ವಿಷ್ಯಕ್ಕೆ ಎಲ್ಲರ ಗಮನ ಸೆಳೆದಿದ್ದಳು. ಇದೇ ಕಾರಣಕ್ಕೆ ಆಕೆಯನ್ನು ಜನರು ವಿಶ್ವದ ಹಾಟೆಸ್ಟ್ ಲಾಯರ್ ಎಂದು ಕರೆಯುತ್ತಿದ್ದರು. ಡೆನಿಸ್ ಆಗಾಗ್ಗೆ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಿದ್ದಳು. ಈಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಚರ್ಚೆಗೆ ಬಂದಿದ್ದಾಳೆ. ಈಗಿನ ಆಕೆ ಸಮಸ್ಯೆ ಸ್ವಲ್ಪ ಭಿನ್ನವಾಗಿದೆ.  

ಮಲಯಾಳಿ ನಟಿಯ ಹಾಟ್‌ ಲುಕ್‌, ದೇವ್ರು ನಿಮ್ಗೆ ಎಲ್ಲಾ ಹೆಚ್ಚೇ ಕೊಟ್ಟಿದ್ದಾನೆ ಅನ್ನೋದಾ ನೆಟ್ಟಿಗರು!

ಪ್ಲಾಸ್ಟಿಕ್ ಸರ್ಜರಿಗೆ ಡೆನಿಸ್ ಖರ್ಚು ಮಾಡಿದ ಹಣ ಎಷ್ಟು? : ತನ್ನ ಮುಖದ ಸಂಪೂರ್ಣ ನೋಟವನ್ನು ಬದಲಿಸಲು ಡೆನಿಸ್ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾಳೆ. ಇದಕ್ಕೆ ಆಕೆ  ಮೂರು ಲಕ್ಷ ಡಾಲರ್ ಅಂದರೆ ಸುಮಾರು 2.5 ಕೋಟಿ ರೂಪಾಯಿ ಖರ್ಚು ಮಾಡಿದ್ದಾಳೆ. ಮುಖ ಬದಲಿಸಿಕೊಂಡು ಸಂಪೂರ್ಣ ಭಿನ್ನವಾಗಿ ಕಾಣ್ತಿರುವ ಡೆನಿಸ್ಗೆ ಹೊಸ ಸಮಸ್ಯೆ ಶುರುವಾಗಿದೆ. 

ಡೆನಿಸ್ ಗೆ ಕಾಡ್ತಿರುವ ಸಮಸ್ಯೆ ಏನು? : ಇಷ್ಟೊಂದು ಹಣ ಖರ್ಚು ಮಾಡಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿರುವ ಡೆನಿಸ್ ಗೆ ಡ್ರೈವಿಂಗ್ ಲೈಸೆನ್ಸ್ ನವೀಕರಣವಾಗುತ್ತಿಲ್ಲ. ಡೆನಿಸ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಹೋಗಿದ್ದಳು.  ಆದರೆ ಅಧಿಕಾರಿಗಳು ಡೆನ್ನಿಸ್ ಮುಖ ಗುರುತಿಸಲು ಸಾಧ್ಯವಾಗ್ಲಿಲ್ಲ. ಡೆನ್ನಿಸ್  ಡ್ರೈವಿಂಗ್ ಲೈಸೆನ್ಸ್ ನಲ್ಲಿರುವ ಫೋಟೋ ಪ್ರಸ್ತುತ ಮುಖಕ್ಕೆ ಹೊಂದಿಕೆಯಾಗದ ಕಾರಣ ಪರವಾನಗಿಯನ್ನು ನವೀಕರಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ನಂತ್ರ ಇಂಥ ಸಮಸ್ಯೆ ಶುರುವಾಗುತ್ತೆ ಅಂತಾ ಡೆನಿಸ್ ಕನಸಿನಲ್ಲೂ ಆಲೋಚನೆ ಮಾಡಿರಲಿಲ್ಲವಂತೆ. 

ಹುಡುಗರ ವಿಷ್ಯಕ್ಕೆ ಸುದ್ದಿ ಮಾಡಿದ್ದ ಡೆನಿಸ್ : ಕೆಲ ದಿನಗಳ ಹಿಂದೆ ಹುಡುಗರ ವಿಷ್ಯಕ್ಕೆ ಡೆನಿಸ್ ಸುದ್ದಿಯಾಗಿದ್ದಳು. ಆಕೆ ಇನ್ನೂ ಒಂಟಿ. ಒಬ್ಬ ಪ್ರೇಮಿಯ ಹುಡುಕಾಟದಲ್ಲಿ ತಾನಿದ್ದೇನೆ ಎಂದಿದ್ದ ಡೆನಿಸ್, ಹುಡುಗ್ರು ನನ್ನನ್ನು ನೋಡ್ತಿದ್ದಂತೆ ಹಿಂದೆ ಸರಿಯುತ್ತಾರೆ. ನಾನು ತುಂಬಾ ಸುಂದರವಾಗಿರುವ ಕಾರಣ, ಹುಡುಗ್ರ ಜೊತೆ ಮಾತನಾಡಲ್ಲ ಎಂದು ಹುಡುಗ್ರೆ ಭಾವಿಸಿಕೊಳ್ತಾರೆಂದು ಡೆನಿಸ್ ಹೇಳಿದ್ದಳು. 

Follow Us:
Download App:
  • android
  • ios