Woman Takes Shower Once In 10 Days: ತಿಂಗಳಿಗೆ ಕೇವಲ 3 ಬಾರಿ ಮಾತ್ರ ಸ್ನಾನ ಮಾಡುವ ಮಹಿಳೆಯೊಬ್ಬರು ಇಲ್ಲಿದ್ದಾರೆ. ಈ ವಿಚಿತ್ರ ಮಹಿಳೆ ಸದ್ಯ  ಟಿಕ್‌ಟೋಕ್‌ ಮತ್ತು ಸ್ನಾನ ಮಾಡದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. 

ನವದೆಹಲಿ (ಜು. 28): ಈ ಜಗತ್ತಿನಲ್ಲಿ ವಿಚಿತ್ರ ವ್ಯಕ್ತಿಗಳಿಗೆ ಕೊರತೆಯಿಲ್ಲ. ಇಲ್ಲಿ ನಾವು ಊಹಿಸಲೂ ಸಾಧ್ಯವಾಗದಷ್ಟು ಜನ ಇದ್ದಾರೆ. ಆರೋಗ್ಯವಾಗಿರಲು ಸ್ವಚ್ಛತೆ ಬಹಳ ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರತಿನಿತ್ಯ ಸ್ನಾನ ಮಾಡುವುದರಿಂದ ನಮಗೆ ಯಾವುದೇ ರೀತಿಯ ಕಾಯಿಲೆ ಬಾರದಂತೆ ಆರೋಗ್ಯವಾಗಿರುತ್ತೇವೆ. ಆದರೆ ತಿಂಗಳಿಗೆ 3 ಬಾರಿ ಮಾತ್ರ ಸ್ನಾನ ಮಾಡುವ ಮಹಿಳೆಯೊಬ್ಬರು ಇಲ್ಲಿದ್ದಾರೆ. ಈ ವಿಚಿತ್ರ ಮಹಿಳೆ ಸದ್ಯ ಟಿಕ್‌ಟೋಕ್‌ ನಿಂದಾಗಿ ಮತ್ತು ಸ್ನಾನ ಮಾಡದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. 

ವಾಸ್ತವವಾಗಿ ಈ ಮಹಿಳೆಗೆ 23 ವರ್ಷ ಮತ್ತು ಈಕೆಯ ಹೆಸರು ಐದನ್ ಜೇನ್ (Aydan Jane). ತಾನು ತಿಂಗಳಿಗೆ 3 ಬಾರಿ ಮಾತ್ರ ಸ್ನಾನ ಮಾಡುತ್ತೇನೆ ಎಂದು ಏಡನ್ ಜೇನ್ ಹೇಳಿಕೊಂಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಇಷ್ಟು ಸಮಯದ ನಂತರ ಸ್ನಾನ ಮಾಡುವುದರಿಂದ ಅವಳ ದೇಹದಿಂದ ದುರ್ವಾಸನೆ ಬರುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಐದನ್ ಜೇನ್ ತಿಂಗಳಿಗೆ ಮೂರು ದಿನ ಸ್ನಾನ ಮಾಡಿದರೂ ಇತರರಂತೆ ತಾಜಾತನವನ್ನು ಅನುಭವಿಸುತ್ತಿದ್ದೇನೆ ಎಂದು ಜನರಿಗೆ ಉತ್ತರಿಸಿದ್ದಾಳೆ. ಈ ದಿನಚರಿಯನ್ನು ಬಹಳ ದಿನಗಳಿಂದ ಅನುಸರಿಸುತ್ತಿದ್ದೇನೆ ಎಂದೂ ಹೇಳಿದ್ದಾಳೆ. ಆದರೆ ಇದನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತಾರಗಿದ್ದಾರೆ. 

ವಿಶ್ವದೆಲ್ಲೆಡೆ ಇರೋ ಚಿತ್ರ, ವಿಚಿತ್ರ ಲೈಂಗಿಕ ಅಭ್ಯಾಸಗಳಿವು!

ಪಿರಿಯಡ್ಸ್‌ನಲ್ಲಿ ನೀವು ಹೇಗೆ ಇರುತ್ತೀರಿ?: ಮಹಿಳೆಯ ಈ ಹೇಳಿಕೆಯನ್ನು ಕೇಳಿದ ನಂತರ ಜನರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಬರಲು ಪ್ರಾರಂಭಿಸಿವೆ. ಏಡನ್ ತಿಂಗಳಲ್ಲಿ ಮೂರು ಬಾರಿ ಸ್ನಾನ ಮಾಡುವುದಾಗಿ ಹೇಳಿಕೊಂಡ ನಂತರ, ಅನೇಕ ಬಳಕೆದಾರರು ಆಕೆ ಮುಟ್ಟಿನ ಸಮಯದಲ್ಲಿ ಏನು ಮಾಡುತ್ತಾರೆ ಎಂದು ಕೇಳಿದ್ದಾರೆ. ಇದಕ್ಕೆ ಏಡೆನ್‌ನ ಉತ್ತರವೆಂದರೆ ಪಿರಿಯಡ್ಸ್ ಸಮಯದಲ್ಲಿಯೂ ಅವಳು ತನ್ನ ಈ ದಿನಚರಿಯನ್ನು ಅನುಸರಿಸುತ್ತಾಳೆ. ಸ್ನಾನ ಮಾಡದ ನಂತರವೂ ಎಂದಿಗೂ ಅನೈರ್ಮಲ್ಯವನ್ನು ಅನುಭವಿಸಿಲ್ಲ ಎಂದು ಹೇಳಿದ್ದಾಳೆ. 

ಏಡನ್ ಸ್ನಾನ ಮಾಡದ ಸತ್ಯವನ್ನು ಬಹಿರಂಗಪಡಿಸಿದ ವೀಡಿಯೊ 3 ಮಿಲಿಯನ್ ವೀಕ್ಷಣೆಗಳನ್ನು ಸಹ ಪಡೆದುಕೊಂಡಿದೆ. 7 ದಿನಗಳಿಂದ ಸ್ನಾನ ಮಾಡದ ನಂತರ ತನ್ನ ಈ ವೀಡಿಯೊವನ್ನು ಸಹ ಶೂಟ್ ಮಾಡುತ್ತಿದ್ದೇನೆ ಎಂದು ಏಡನ್ ಹೇಳಿದ್ದಾಳೆ, ಆದರೆ ಇದನ್ನು ನೋಡಿ, ಈ ಮಹಿಳೆ ಸ್ನಾನ ಮಾಡಿಲ್ಲ ಎಂದು ಯಾರೂ ಹೇಳಲು ಸಾಧ್ಯವಾಗುವುದಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. 

ಅಯ್ಯೋ…! ಈ ದೇಶದಲ್ಲಿ ಮಹಿಳೆಯರಿಗೆ ಒಳ ಉಡುಪು ಧರಿಸುವ ಸ್ವಾತಂತ್ರ್ಯವೂ ಇಲ್ಲ!

ಈ ದಿನಚರಿಯನ್ನು ಅನುಸರಿಸಲು ಕಾರಣವೇನು?: ಈಗ ಈ ಮಹಿಳೆ ಯಾಕೆ ಹೀಗೆ ಮಾಡುತ್ತಾಳೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬೇಕು. ಈ ಬಗ್ಗೆ ಸ್ವತ ಪ್ರಸಿದ್ಧ ಟಿಕ್ಟೋಕರ್ ಏಡನ್ (Aydan Jane) ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಏಡನ್ ಕುಟುಂಬದಲ್ಲಿ ಹೆಚ್ಚಾಗಿ ಸ್ನಾನ ಮಾಡುವ ವ್ಯಕ್ತಿಯಾಗಿದ್ದಳು. ಆದರೆ ಈಗ ನೀರು, ಪರಿಸರ ಉಳಿಸಲು ತಿಂಗಳಿಗೆ ಮೂರು ದಿನ ಸ್ನಾನ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಏಡನ್ ತಿಂಗಳಿಗೆ 3 ಬಾರಿ ಮಾತ್ರ ಸ್ನಾನ ಮಾಡುತ್ತಾಳೆ. ಆದಾಗ್ಯೂ, ಮಹಿಳೆಯ ಈ ಹೇಳಿಕೆ ಎಲ್ಲೆಡೆ ಚರ್ಚೆಯ ವಿಷಯವಾಗಿ ಉಳಿದಿದೆ.