ಬೆವರಿನ ವಾಸನೆ ಅಂದ್ರೆ ಸಾಕು ಎಲ್ರೂ ಮಾರ ದೂರ ಓಡ್ತಾರೆ. ಆದ್ರೆ ಈಕೆಗೆ ಮಾತ್ರ ಬೆವರಿನ ವಾಸನೆ ಅಂದ್ರೆ ತುಂಬಾ ಇಷ್ಟವಂತೆ. ಅದಕ್ಕಾಗಿಯೇ ಈಕೆ ಪರ್ಫ್ಯೂಮ್ ಕೂಡಾ ಬಳಸೋದೆ ಇಲ್ವಂತೆ. ಮಾತ್ರವಲ್ಲ ಕಂಕುಳ ಕೂದಲು ಕೂಡಾ ತೆಗೆಯಲ್ವಂತೆ.

ಮನುಷ್ಯನ ದೇಹ ಅಂದ್ರೆ ಅದೊಂಥರಾ ವಿಚಿತ್ರ. ಸ್ವಚ್ಛವಾಗಿಟ್ಟರೆ ಸುಂದರವಾದ ಪರಿಮಳ ಬರುತ್ತದೆ. ಆದ್ರೆ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ದುರ್ಗಂಧ ಬರುತ್ತದೆ. ಅದಲ್ಲದೆ ಮನುಷ್ಯನ ದೇಹದಿಂದ ಸಾಮಾನ್ಯವಾಗಿ ಬೆವರಿನ ವಾಸನೆ ಬರುವುಉ ಸಾಮಾನ್ಯ. ಹೀಗಾಗಿಯೇ ಪರ್ಫ್ಯೂಮ್, ಸುಗಂಧ ದ್ರವ್ಯ ಬಳಸೋದನ್ನು ಹೆಚ್ಚಿನವರು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಡಿಯೋಡ್ರೆಂಟ್, ಸೆಂಟ್‌ಗಳನ್ನು ಬಳಸುತ್ತಾರೆ. ಇದು ಮಾರ್ನಿಂಗ್ ಡ್ಯೂ, ಮಿಸ್ಟ್‌, ಜಾಸ್ಮಿನ್, ರೋಸ್‌, ಲ್ಯಾವೆಂಡರ್ ಎಂದು ಹಲವು ಫ್ರಾಗ್ರೆನ್ಸ್‌ಗಳಲ್ಲಿ ಲಭ್ಯವಿರುವ ಕಾರಣ ಇಷ್ಟವಿದ್ದ ಪರಿಮಳದ ಸುಗಂಧದ್ರವ್ಯ ಬಳಸಿ, ದೇಹವನ್ನು ಪರಿಮಳಭರಿತವಾಗಿ ಇಟ್ಟುಕೊಳ್ಳಬಹುದು. ಆದ್ರೆ ಇಲ್ಲೊಬ್ಬಾಕೆಯಿದ್ದಾಳೆ. ಈಕೆ ದೇಹಕ್ಕೆ ಯಾವುದೇ ರೀತಿಯ ಪರ್ಫ್ಯೂಮ್‌ ಬಳಸುವುದಿಲ್ಲ. ಅದಕ್ಕೇನು ಕಾರಣ ಅಂತ ತಿಳ್ಕೊಂಡ್ರೆ ನಿಮ್ಗೆ ಅಚ್ಚರಿಯಾಗೋದು ಖಂಡಿತ.

ಬೆವರಿನ ವಾಸನೆ ತುಂಬಾ ಇಷ್ಟ ಅಂತ ಪರ್ಫ್ಯೂಮ್ ಬಳಸಲ್ಲ !
ಇಂಗ್ಲೆಂಡ್‌ನ ಖ್ಯಾತ ರೂಪದರ್ಶಿಯೊಬ್ಬರು ಸುಗಂಧ ದ್ರವ್ಯ (Perfume) ಬಳಸದೇ ಇರೋದಕ್ಕೆ ಮುಖ್ಯ ಕಾರಣ ಈಕೆಗೆ ಬೆವರಿನ ವಾಸನೆ ಅಂದ್ರೆ ತುಂಬಾ ಇಷ್ಟವಂತೆ. ಹೀಗಾಗಿಯೇ ಈಕೆ ಪರ್ಫ್ಯೂಮ್, ಡಿಯೋ ಬಳಸೋದೆ ಇಲ್ಲ. ಮಾತ್ರವಲ್ಲ ಅಂಡರ್ ಆರ್ಮ್ ಸಹ ಶೇವ್ ಮಾಡಲ್ಲ. ಯಾಕೆಂದರೆ ಆಕೆಗೆ ದೇಹ (Body)ದಿಂದ ಬರುವ ಬೆವರಿನ ವಾಸನೆ (Sweat) ತುಂಬಾ ಇಷ್ಟವಾಗುತ್ತದೆಯಂತೆ. ಮಾತ್ರವಲ್ಲ ಜನರು ತಮ್ಮ ನೈಸರ್ಗಿಕ ವಾಸನೆಯನ್ನು ಒಪ್ಪಿಕೊಳ್ಳಬೇಕು ಎಂದು ಜನರನ್ನು ಒತ್ತಾಯಿಸಿದ್ದಾರೆ.

ತೊಡೆಗಳ ಡಾರ್ಕ್ ಬಣ್ಣ ನಿವಾರಿಸಲು ಇಲ್ಲಿದೆ ನೋಡಿ ಈಸಿ ಟಿಪ್ಸ್ !

ಯುಕೆಯ ವೋರ್ಸೆಸ್ಟರ್‌ನ ಫ್ಯಾನ್ಸ್ ಮಾಡೆಲ್ ಫೆನೆಲ್ಲಾ ಫಾಕ್ಸ್ ಅವರು ಐದು ವರ್ಷಗಳ ಹಿಂದೆ ತನ್ನ ಕಂಕುಳಿನ ಕೂದಲನ್ನು ಬೆಳೆಸಲು ಪ್ರಾರಂಭಿಸಿದಾಗ ಡಿಯೋಡ್ರೆಂಟ್‌ ಅನ್ನು ತ್ಯಜಿಸಿರುವುದಾಗಿ ಹೇಳಿದರು. ಸುಗಂಧ ದ್ರವ್ಯಗಳು ಮತ್ತು ಬಾಡಿ ಸ್ಪ್ರೇಗಳು ತನಗೆ ಉತ್ತಮ ವಾಸನೆಯನ್ನು ನೀಡುವುದಿಲ್ಲ ಎಂದು ಅವರು ಹೇಳಿದರು. ನಾನು ನನ್ನ ಕಂಕುಳಿನ ನೈಸರ್ಗಿಕ ವಾಸನೆಯನ್ನು ಪ್ರೀತಿಸುತ್ತೇನೆ. ಅಪರೂಪಕ್ಕೆ ಡಿಯೋಡ್ರೆಂಟ್‌ ಅನ್ನು ಬಳಸುತ್ತೇನೆ. ನಾವು ನೈಸರ್ಗಿಕವಾಗಿ ವಾಸನೆ ಪಡೆಯುವಲ್ಲಿ ನಮ್ಮ ಆಹಾರ ಮತ್ತು ಜೀವನಶೈಲಿಯು ದೊಡ್ಡ ಪಾತ್ರ ವಹಿಸುತ್ತದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ. ಹೆಚ್ಚು ಜನರು ತಮ್ಮ ನೈಸರ್ಗಿಕ ವಾಸನೆಯನ್ನು ಅಸ್ವಾಭಾವಿಕ ಪರಿಮಳಗಳೊಂದಿಗೆ ಮರೆಮಾಚಲು ಪ್ರಯತ್ನಿಸುತ್ತಾರೆ. ನಮ್ಮ ಸೇಹದ ಸುವಾಸನೆ ನಾವು ಇಷ್ಟಪಡಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಕಂಕುಳ ಕೂದಲಿನಿಂದ ಕೋಟ್ಯಾಂತರ ರೂ. ಗಳಿಸ್ತಾಳೆ !
ಬಹಳಷ್ಟು ಸುಗಂಧ ದ್ರವ್ಯ, ಮತ್ತು ಡಿಯೋಡರೆಂಟ್‌ಗಳು ನನಗೆ ಇಷ್ಟವಾಗದ ವಾಸನೆ ನೀಡುತ್ತವೆ. ಪುರುಷರ ನಿರೀಕ್ಷೆಗಳಿಗೆ ವಿರುದ್ಧವಾಗಿ 2017 ರಲ್ಲಿ ಫೆನೆಲ್ಲಾ ತನ್ನ ಆರ್ಮ್ಪಿಟ್‌ಗಳನ್ನು ಶೇವ್ ಮಾಡುವುದನ್ನು ನಿಲ್ಲಿಸಿದಳು. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಎರಡು ವರ್ಷಗಳಲ್ಲಿ 2,87,90,025 ಗಳಿಸುವ ಮೂಲಕ ಅವಳು ಶೀಘ್ರದಲ್ಲೇ ಅದನ್ನು ವ್ಯಾಪಾರವಾಗಿ ಪರಿವರ್ತಿಸಿದಳು.

Relationship Tips : ಹೆಂಡ್ತಿ ಮನೇಲಿ ಬ್ರಾ ಹಾಕ್ತಿಲ್ಲ, ಗಂಡನ ಸಮಸ್ಯೆಗೆ ನೆಟ್ಟಿಗರು ತಬ್ಬಿಬ್ಬು!

ನನ್ನ ಬಹಳಷ್ಟು ಅಭಿಮಾನಿಗಳು ನನ್ನ ಕಂಕುಳಿನ (Armpit) ಕೂದಲ ಉದ್ದ ಮತ್ತು ಬೆವರುವ ಕಲ್ಪನೆಯನ್ನು ಇಷ್ಟಪಡುತ್ತಾರೆ. ಅವರು ನನ್ನ ಬೆವರುವಿಕೆಯನ್ನು ನೋಡಲು ಇಷ್ಟಪಡುತ್ತಾರೆ ಎಂದು ರೂಪದರ್ಶಿ ಹೇಳಿದ್ದಾರೆ. ಜನರು ಜಿಮ್‌ನಲ್ಲಿ ಬೆವರುತ್ತಿರುವಾಗ ನಾನು ತುಂಬಾ ಆಕರ್ಷಕವಾಗಿ ಕಾಣುತ್ತೇನೆ ಎಂದರು. ನಾನು ನನ್ನ ಕಂಕುಳಿನ ಕೂದಲನ್ನು ತೆಗೆದರೆ ನನ್ನ ಬಹಳಷ್ಟು ಅಭಿಮಾನಿಗಳು ನನ್ನ ಮೇಲೆ ಸಿಟ್ಟಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.