ತೊಡೆಗಳ ಡಾರ್ಕ್ ಬಣ್ಣ ನಿವಾರಿಸಲು ಇಲ್ಲಿದೆ ನೋಡಿ ಈಸಿ ಟಿಪ್ಸ್ !
ಸೌಂದರ್ಯ ಎಂದರೆ ದೇಹದ ಎಲ್ಲಾ ಭಾಗಗಳೂ ಮುಖ್ಯ. ನಾವು ಮುಖ, ಕೈ,ಅಂಡರ್ ಆರ್ಮ್, ಪಾದ, ಇತ್ಯಾದಿ ತೆರೆದಿರುವ ದೇಹದ ಭಾಗಗಳ ಶುಚಿತ್ವದ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಅದೇ ಮುಚ್ಚಿದ ಭಾಗಗಳ ಶುಚಿತ್ವದ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ. ವಿಶೇಷವಾಗಿ ಜನರು ತೊಡೆಯ ಭಾಗದ ಶುಚಿತ್ವದ ಬಗ್ಗೆ ಹೆಚ್ಚು ಗಮನ ಕೊಡೋದಿಲ್ಲ. ಹಾಗಾಗಿ ಕೆಲವೊಮ್ಮೆ ನೀವು ಶಾರ್ಟ್ಸ್ ಧರಿಸಲು ಹೊರಟರೆ ಕಪ್ಪು ತೊಡೆಯ ಕಾರಣದಿಂದ ಹಿಂಜರಿಯುತ್ತೀರಿ. ಆದ್ದರಿಂದ ತೊಡೆಯ ಶುಚಿತ್ವದ ಬಗ್ಗೆಯೂ ಗಮನ ಹರಿಸಲು ಪ್ರಯತ್ನಿಸಿ. ತೊಡೆಯ ಕ್ಲೀನಿಂಗ್ ಮತ್ತು ಕಪ್ಪನ್ನು ತೆಗೆದುಹಾಕಲು ವಿವಿಧ ಮನೆ ಮದ್ದುಗಳನ್ನು ಇಲ್ಲಿ ಹೇಳಲಾಗಿದೆ. ಈ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ದೇಹದ ಇತರ ಎಲ್ಲಾ ಭಾಗಗಳಂತೆ ತೊಡೆಯ ಭಾಗ ಸಹ ತಿಳಿ ಬಣ್ಣದಲ್ಲಿದ್ದರೆ ಉತ್ತಮ. ಒಂದು ವೇಳೆ ಡಾರ್ಕ್ ಆಗಿದ್ದರೆ ಮಿನಿ ಸ್ಕರ್ಟ್ (Mini Skirt), ಶಾರ್ಟ್ಸ್ (Shorts) ಧರಿಸಲು ಸಾಧ್ಯವಿರೋದಿಲ್ಲ. ಒಂದು ವೇಳೆ ನಿಮ್ಮ ತೊಡೆ ಕಪ್ಪಾಗಿದ್ದರೆ ನೀವು ಏನು ಮಾಡಬೇಕು? ಇಲ್ಲಿದೆ ಫುಲ್ ಡಿಟೇಲ್ಸ್…
ಕೊಬ್ಬರಿ ಎಣ್ಣೆ ಮತ್ತು ನಿಂಬೆ
ತೊಡೆ ಅಥವಾ ಥಾಯ್ ನ ಕಪ್ಪನ್ನು ತೆಗೆದುಹಾಕಲು ನಿಂಬೆ ಮತ್ತು ಕೊಬ್ಬರಿ ಎಣ್ಣೆ (Coconut Oil) ಸಾಕಷ್ಟು ಪರಿಣಾಮಕಾರಿ. ಇದನ್ನು ಬಳಸಲು 2 ಟೀಸ್ಪೂನ್ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. ಇದರಲ್ಲಿ ಅರ್ಧ ಟೀಚಮಚ ನಿಂಬೆಹಣ್ಣನ್ನು ಮಿಶ್ರಣ ಮಾಡಿ. ಇವೆರಡು ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿ.
ಈಗ ಆ ಮಿಶ್ರಣವನ್ನು ನಿಮ್ಮ ತೊಡೆಯ ಮೇಲೆ ಹಚ್ಚಿಕೊಳ್ಳಿ ಮತ್ತು ಸುಮಾರು 30 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಅದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ಇದು ತೊಡೆಯ ಉತ್ತಮ ಶುಚಿತ್ವಕ್ಕೆ ಕಾರಣವಾಗುತ್ತೆ. ಜೊತೆಗೆ ತೊಡೆಯ ಕಪ್ಪು ಬಣ್ಣ ಸಹ ಮಾಸಿ ಹೋಗುತ್ತದೆ.
ಸಕ್ಕರೆ ಮತ್ತು ನಿಂಬೆ
ತೊಡೆಯನ್ನು ಸ್ವಚ್ಛಗೊಳಿಸಲು ಸಕ್ಕರೆ ಮತ್ತು ನಿಂಬೆಯನ್ನು ಬಳಸಿ. ಇದನ್ನು ಬಳಸಲು, 2 ಟೀಸ್ಪೂನ್ ಸಕ್ಕರೆಯಲ್ಲಿ (Sugar) 1 ಟೀಸ್ಪೂನ್ ನಿಂಬೆಯನ್ನು ಮಿಶ್ರಣ ಮಾಡಿ. ನಿಂಬೆ ಅತ್ಯುತ್ತಮ ಸ್ಕ್ರಬರ್ ನಂತೆ ಕಾರ್ಯ ನಿರ್ವಹಿಸುತ್ತದೆ. ಇದು ಬೇಗನೆ ಕಲೆಯನ್ನು ನಿವಾರಿಸುವ ಗುಣ ಹೊಂದಿದೆ.
ಸಕ್ಕರೆ ಮತ್ತು ನಿಂಬೆ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಅದನ್ನು ನಿಮ್ಮ ತೊಡೆಗೆ ಹಚ್ಚುವ ಮೂಲಕ ಸ್ಕ್ರಬ್ ಮಾಡಿ. ಇದು ತೊಡೆಯ ಕಪ್ಪನ್ನು ಹೋಗಲಾಡಿಸಿ ಹೊಳೆಯುವ ತ್ವಚೆಯನ್ನು (shiny skin) ಪಡೆಯಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ನೀವು ವಾರಕ್ಕೆ ಎರಡು ಬಾರಿಯಾದರೂ ಟ್ರೈ ಮಾಡಬಹುದು.
ಮೊಸರು ಮತ್ತು ಓಟ್ ಮೀಲ್
ತೊಡೆಯ ಮೇಲಿರುವ ಕೊಳೆಯನ್ನು ಕ್ಲೀನ್ ಮಾಡಲು ಮೊಸರು ಮತ್ತು ಓಟ್ ಮೀಲ್ (oatmeal) ಸಾಕಷ್ಟು ಪ್ರಯೋಜನಕಾರಿ. ಮೊಸರು ಅತ್ಯುತ್ತಮ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಓಟ್ ಮೀಲ್ ಉತ್ತಮ ಸ್ಕ್ರಬರ್ ಆಗಿದೆ. ಇನ್ನು ಇದನ್ನು ಹೇಗೆ ಬಳಸೋದು ನೋಡೋಣ.
ಇದನ್ನು ಬಳಸಲು ಮೊಸರು ಮತ್ತು ಓಟ್ ಮೀಲ್ ಮಿಶ್ರಣ ಮಾಡಿ. ಈಗ ಅದನ್ನು ನಿಮ್ಮ ತೊಡೆಯ ಭಾಗಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಇದು ತೊಡೆಯನ್ನು ಆಳವಾಗಿ ಸ್ವಚ್ಛಗೊಳಿಸುವ ಮೂಲಕ ತೊಡೆಯ ಕಪ್ಪನ್ನು ತೆಗೆದುಹಾಕುತ್ತೆ. ಇನ್ನು ನೀವು ಹಿಂಜರಿಯದೆ ಯಾವುದೇ ಮಿನಿ ಡ್ರೆಸ್ ಧರಿಸಬಹುದು.