Relationship Tips : ಹೆಂಡ್ತಿ ಮನೇಲಿ ಬ್ರಾ ಹಾಕ್ತಿಲ್ಲ, ಗಂಡನ ಸಮಸ್ಯೆಗೆ ನೆಟ್ಟಿಗರು ತಬ್ಬಿಬ್ಬು!
ಪ್ರತಿಯೊಬ್ಬರ ಆಸೆ,ಇಷ್ಟ,ಕಷ್ಟಗಳು ಬೇರೆಯಾಗಿರ್ತವೆ ನಿಜ. ಆದ್ರೆ ಒಟ್ಟಿಗೆ ಬಾಳ್ಬೇಕೆಂದ್ರೆ ಕೆಲವೊಂದು ಹೊಂದಾಣಿಕೆ ಅನಿವಾರ್ಯ. ಬೇರೆಯವರ ಬಾಯಿಗೆ ಆಹಾರವಾಗಬಾರದು ಅಂದ್ರೆ ಕೆಲ ನಿಯಮಗಳನ್ನು ಪಾಲಿಸ್ಬೇಕಾಗುತ್ತದೆ. ಇಲ್ಲಿ ಪತ್ನಿ ನಿಯಮ ಪಾಲನೆ ಮಾಡ್ತಿಲ್ಲ, ಪತಿಗೆ ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ.
ಸಂಸಾರ ಅಂದ್ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ಕೆಲವೊಂದು ಸಮಸ್ಯೆಗಳು ವಿಚಿತ್ರವಾಗಿರ್ತವೆ. ಅದನ್ನು ಬೇರೆಯವರ ಬಳಿ ಹೇಳಲೂ ಸಾಧ್ಯವಿಲ್ಲ, ಅನುಭವಿಸಲೂ ಸಾಧ್ಯವಿಲ್ಲ ಎನ್ನುವಂತಾಗುತ್ತದೆ. ಗಂಡ- ಹೆಂಡತಿ ಇಬ್ಬರೇ ಇದ್ದಾಗ ಬರುವ ಸಮಸ್ಯೆಗಳು ಬೇರೆಯಾದ್ರೆ ಒಟ್ಟು ಕುಟುಂಬದಲ್ಲಿ ವಾಸವಾಗಿರುವಾಗ ಬರುವ ಸವಾಲುಗಳು ಬೇರೆ ಬೇರೆ. ಅವಿಭಕ್ತ ಕುಟುಂಬದಲ್ಲಿ ವಾಸ ಮಾಡುವಾಗ ಸಂಬಂಧ ಮಾತ್ರವಲ್ಲ ಧರಿಸುವ ಬಟ್ಟೆಯ ಬಗ್ಗೆಯೂ ಗಮನ ನೀಡ್ಬೇಕಾಗುತ್ತದೆ. ಹಳ್ಳಿಗಳಲ್ಲಿ ಅಥವಾ ಸುತ್ತಮುತ್ತ ಮನೆಗಳಿದ್ದರೆ ಆಗ ಮತ್ತಷ್ಟು ಎಚ್ಚರಿಕೆ ಅಗತ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನೋ ಬ್ರಾ ಹ್ಯಾಶ್ಟ್ಯಾಗ್ ಅಭಿಯಾನ ನಡೆಯುತ್ತಿದೆ. ಅನೇಕ ಮಹಿಳೆಯರು ಬ್ರಾ ಧರಿಸಲು ಇಷ್ಟಪಡುವುದಿಲ್ಲ. ಕೆಲವರಿಗೆ ಕಷ್ಟವಾದ್ರೂ ಮಾನ – ಮರ್ಯಾದೆ ಹೆಸರಿನಲ್ಲಿ ಬ್ರಾ ಧರಿಸ್ತಾರೆ. ಆದ್ರೆ ಇದೇ ಬ್ರಾ ಪತಿಯೊಬ್ಬನಿಗೆ ಹಿಂಸೆ ನೀಡ್ತಿದೆ. ಪತ್ನಿಯ ಬ್ರಾ ವಿರೋಧಿ ಗುಣ ಪತಿಯನ್ನು ಮುಜುಗರಕ್ಕೆ ನೂಕಿದೆ. ಮನೆಯಲ್ಲಿ ಪತ್ನಿ ಬ್ರಾ ಧರಿಸ್ತಿಲ್ಲ ಎಂಬುದೇ ಇವನ ದೊಡ್ಡ ಸಮಸ್ಯೆ. ಈತನ ನೋವಿಗೆ ತಜ್ಞರು ಯಾವ ಪರಿಹಾರ ನೀಡಿದ್ದಾರೆ ಎಂಬುದು ಇಲ್ಲಿದೆ.
ಸುಖ ಸಂಸಾರಕ್ಕೆ ಬ್ರಾ (Bra) ಅಡ್ಡಿ : ಈತನಿಗೆ ಮದುವೆ (Marriage) ಯಾಗಿ ಮೂರು ವರ್ಷ ಕಳೆದಿದೆ. ಸಂಸಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಪತಿ – ಪತ್ನಿ ಮಧ್ಯೆ ಪ್ರೀತಿ (Love) ಯಿದೆ. ಕೊರೊನಾ ಸಂದರ್ಭದಲ್ಲಿ ಇಬ್ಬರ ಮದುವೆಯಾಗಿದೆ. ವರ್ಕ್ ಫ್ರಂ ಹೋಮ್ ಇದ್ದಿದ್ದರಿಂದ ಮದುವೆ ನಂತ್ರ ಇಬ್ಬರೂ ಮನೆಯಲ್ಲಿ ಸಮಯ ಕಳೆಯುವ ಅವಕಾಶ ಈತನಿಗೆ ಸಿಕ್ಕಿತ್ತಂತೆ. ನಂತ್ರ ಲಾಕ್ ಡೌನ್ ಹೇರಿದ್ದರಿಂದ ಪತ್ನಿ ಜೊತೆ ಈತ ಊರು ಸೇರಿದ್ದಾನೆ. ಅಲ್ಲಿ ತಂದೆ – ತಾಯಿ ಜೊತೆ ವಾಸವಾಗಿದ್ದಾನೆ. ದೇವರ ಕೃಪೆಯಿಂದ ಪತ್ನಿ ಹಾಗೂ ಅಮ್ಮನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಜೀವನ ನಡೆಸ್ತಿದ್ದಾರೆ. ಆದ್ರೆ ಪತ್ನಿಯ ಡ್ರೆಸ್ ಸೆನ್ಸ್ ಈತನನ್ನು ಉಭಯ ಸಂಕಟಕ್ಕೆ ನೂಕಿದೆ.
ಗಂಡನಿಗೆ ಸೆಕ್ಸ್‌ನಲ್ಲಿ ಅತಿಯಾದ ಆಸಕ್ತಿ, ಅದಕ್ಕಾಗಿ ತನ್ನನ್ನೇ ಹೋಲುವ ಸೆಕ್ಸ್ ಡಾಲ್ ಖರೀದಿಸಿದ ಪತ್ನಿ!
ಮನೆಯಲ್ಲಿ ಬ್ರಾ ಧರಿಸಲ್ಲ ಪತ್ನಿ : ಈತನ ಪತ್ನಿ ಮನೆಯಲ್ಲಿ ಬ್ರಾ ಧರಿಸೋದಿಲ್ಲವಂತೆ. ಇದ್ರಿಂದ ನನಗೆ ಸಮಸ್ಯೆಯೇನು ಇರಲಿಲ್ಲ. ಆದ್ರೆ ನಾವು ಇರೋದು ಅವಿಭಕ್ತ ಕುಟುಂಬದಲ್ಲಿ. ತಂದೆ ಮನೆಯಲ್ಲಿ ಇರ್ತಾರೆ. ಅಕ್ಕಪಕ್ಕದ ಮನೆಯವರು ಬಂದು ಹೋಗ್ತಿರುತ್ತಾರೆ. ಪಕ್ಕದ ಮನೆಯವರು ಬೇರೆಯವರ ಮೇಲೆ ಕಣ್ಣಿಡೋದೆ ಹೆಚ್ಚು. ಆರಂಭದಲ್ಲಿ ದುಪ್ಪಟ್ಟಾ ಹಾಕ್ತಿದ್ದ ಪತ್ನಿ ಈಗ ಬರೀ ಚೂಡಿದಾರ್ ಧರಿಸ್ತಿದ್ದಾಳೆ. ಇದು ಮುಜುಗರಕ್ಕೀಡು ಮಾಡ್ತಿದೆ ಎನ್ನುತ್ತಾನೆ ಪತಿ. ಈ ಬಗ್ಗೆ ಅನೇಕ ಬಾರಿ ಪತ್ನಿಗೆ ಹೇಳಿದ್ದೇನೆ. ಆದ್ರೆಆಕೆ ಫ್ರೀ ದ ನಿಪ್ಪಲ್ #Freethenipple ಹೆಸರಿನಲ್ಲಿ ನನ್ನ ಜೊತೆ ಜಗಳ ಮಾಡ್ತಾಳೆ. ಆಕೆಗೆ ಇದ್ರ ಬಗ್ಗೆ ಹೇಗೆ ಹೇಳಲಿ ಎಂಬುದು ತಿಳಿತಿಲ್ಲ ಎನ್ನುತ್ತಾನೆ ಈತ.
FERTILITY TIPS: ತಂದೆಯಾಗೋಕೆ ಯಾವ ವಯಸ್ಸು ಸೂಕ್ತ?
ತಜ್ಞರ ಸಲಹೆ : ಸಂಪ್ರದಾಯವಾದಿ ಸಮಾಜದಲ್ಲಿ ಮಹಿಳೆಯರು ತಮ್ಮ ನಿಪ್ಪಲ್ ತೋರಿಸೋದು ನಿಷೇಧಿತ. ಕೆಲ ಮಹಿಳೆಯರು ತಮ್ಮ ಬಟ್ಟೆ ಬಗ್ಗೆ ಗಮನ ನೀಡುವುದಿಲ್ಲ. ಆದ್ರೆ ಅವರ ಬಟ್ಟೆ ನೋಡಿ ಜನರು ಕಮೆಂಟ್ ಮಾಡ್ತಾರೆ. ಕೆಟ್ಟದಾಗಿ ಮಾತನಾಡ್ತಾರೆ. ಹಾಗಾಗಿ ಅದ್ರ ಬಗ್ಗೆ ನಿಮ್ಮ ಪತ್ನಿ ಗಮನ ನೀಡ್ಬೇಕು. ಈ ಬಗ್ಗೆ ನೀವು ಕುಳಿತು ಆಕೆಗೆ ತಿಳಿಸಬೇಕು. ಅಪ್ಪ – ಅಮ್ಮನ ಮುಂದೆ ಮುಜುಗರವಾಗುತ್ತೆ ಎಂಬುದನ್ನು ಪ್ರೀತಿಯಿಂದ ಹೇಳ್ಬೇಕು. ನೀವು ಪ್ರೀತಿಯಿಂದ ತಿಳಿಸಿದ್ರೆ ಆಕೆ ಅವರ ಮುಂದೆ ದುಪ್ಪಟ್ಟಾ ಹಾಕಿಕೊಳ್ಳಬಹುದು. ಆದ್ರೆ ಇಷ್ಟು ಸಣ್ಣ ವಿಷ್ಯಕ್ಕೆ ಜಗಳವಾಡುವುದು ಕೆಟ್ಟ ಹವ್ಯಾಸ. ಇಬ್ಬರ ಮಧ್ಯೆ ಪ್ರೀತಿಯಿರುವಾಗ ಇದೊಂದು ವಿಷ್ಯ ಸಂಬಂಧ ಹಾಳು ಮಾಡಬಾರದು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.