ಗರ್ಭಿಣಿ ಎಂದು ಗೊತ್ತಾಗಿದ್ದೇ ಡೆಲಿವರಿಯ 4 ಗಂಟೆ ಮೊದಲು, ರೋಚಕ ಕತೆ ಬಿಚ್ಚಿಟ್ಟ ಮಹಿಳೆ!

ಗರ್ಭಿಣಿಯಾಗಿ 8.5 ತಿಂಗಳು ಕಳೆದಿದೆ. ಆದರೆ ಮಹಿಳೆಗೆ ಗೊತ್ತೆ ಆಗಿಲ್ಲ. ಇನ್ನೇನು ಡೆಲಿವರಿಯ ನಾಲ್ಕು ಗಂಟೆ ಮೊದಲು ತಾನು ಗರ್ಭಿಣಿ ಅನ್ನೋದು ಗೊತ್ತಾದ ಘಟನೆ ನಡೆದಿದೆ. ಇದೆಲ್ಲಾ ಹೇಗಾಯ್ತು? ಅನ್ನೋದು ಮಹಿಳೆ ಹೇಳಿದ್ದಾರೆ. ಈಕೆಯ ಮಾತು ಹಲವರ ಬದುಕಿನಲ್ಲಿ ಆಶಾಕಿರಣ ಮೂಡಿಸಬಲ್ಲದು.

Woman Realizes She is Pregnant Four Hours Before Delivery china

ಝೆಜಿಯಾಂಗ್(ಜ.09) ಮಹಿಳೆ ಗರ್ಭಿಣಿ ಅನ್ನೋದು ಆಕೆಗೆ ಗೊತ್ತಿಲ್ಲ. ಎಲ್ಲೀವರೆಗೆ ಗೊತ್ತಿಲ್ಲ ಅಂದರೆ ಡೆಲಿವರಿಯ ನಾಲ್ಕು ಗಂಟೆ ಮೊದಲು ಈ ಮಹಿಳೆಗೆ ತಾನು  8.5 ತಿಂಗಳ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಬರೋಬ್ಬರಿ 8.5 ತಿಂಗಳು ಈಕೆ ಎಲ್ಲಾ ಮಹಿಳೆಯರಂತೆ ಎಲ್ಲಾ ಕೆಲಸ ಮಾಡಿದ್ದಾಳೆ. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬೆಳಗ್ಗೆ ಹಾಗೂ ಸಂಜೆ ವ್ಯಾಯಾಮ ಮಾಡಿದ್ದಾಳೆ. ತನ್ನ ಹೊಟ್ಟೆಯಲ್ಲಿ ಕುಡಿಯೊಂದು ಬೆಳೆಯುತ್ತಿದ್ದ ಅನ್ನೋ ಸಣ್ಣ ಸೂಚನೆಯೂ ಈಕೆಗೆ ಇರಲಿಲ್ಲ. ಇದರ ಗುಣ ಲಕ್ಷಣಗಳು ಬದಲಾವಣೆಗಳೂ ಈಕೆಯಲ್ಲಿ ಇರಲಿಲ್ಲ. ಬಿಪಿ ಹೆಚ್ಚಾದ ಕಾರಣ ಆಸ್ಪತ್ರೆ ತೆರಳಿದಾಗಲೇ ತಾನು 8.5 ತಿಂಗಳ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಹೀಗಾಗಿ ವೈದ್ಯರು ಯಶಸ್ವಿ ಸರ್ಜರಿ ಮಾಡಿದ್ದಾರೆ. ಸದ್ಯ ತಾಯಿ ಮಗಳು ಆರೋಗ್ಯವಾಗಿದ್ದಾರೆ. 

ಈ ಘಟನೆ ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಆದರೆ ಈ ಮಹಿಳೆ ಹೇಳಿದ ಮಾತುಗಳು ಹಲವರ ಬದುಕಿನಲ್ಲಿ ಹೊಸ ಆಶಾವಾದ ಮೂಡಿಸಲಿದೆ. ಮಹಿಳೆ ಹೆಸರು ಗಾಂಗ್. ಮದುವೆಯಾಗಿ ಕೆಲ ವರ್ಷಗಳು ಉರುಳಿದೆ. ಪತಿ ಹಾಗೂ ಪತ್ನಿಯದ್ದೂ ಅನ್ಯೋನ್ಯ ಸಂಸಾರ. ಆದರೆ ವರ್ಷಗಳು ಉರುಳಿದರೂ ಮಕ್ಕಳು ಇರಲಿಲ್ಲ. ಆರೋಗ್ಯ ಸಮಸ್ಯೆ, ಲೈಫ್‌ಸ್ಟೈಲ್ ಸೇರಿದಂತೆ ಹಲವು ಕಾರಣಗಳನ್ನು ವೈದ್ಯರು ಪಟ್ಟಿ ಮಾಡಿದ್ದಾರೆ.ಸೂಚನೆ ಪ್ರಕಾರ ನಡೆದುಕೊಂಡರೂ ಮಕ್ಕಳ ಭಾಗ್ಯ ಸಿಗಲೇ ಇಲ್ಲ. ಹೀಗಾಗಿ IVF ಚಿಕಿತ್ಸೆ ಆರಂಭಿಸಿದ್ದಾರೆ. 

ಪ್ರೆಗ್ನೆಂಟ್ ಮಾಡಿ 5 ಲಕ್ಷ ಗಳಿಸಿ, ಕೆಲಸದ ಹೊಸ ಜಾಹೀರಾತು ವೈರಲ್

ಚಿಕಿತ್ಸೆಯ ಭಾಗವಾಗಿ ಮೊದಲು ತೂಕ ಇಳಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ವೈದ್ಯರ ಸಂಪರ್ಕಿಸಿ ಮರಳಿದ ದಂಪತಿಗಳು ತಮ್ಮ ಮಕ್ಕಳ ಪಡೆಯುವ ಆಸೆ ಕೈಬಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ಪಡೆಯಲು ತೂಕ ಇಳಿಸಿಕೊಂಡು ಚಿಕಿತ್ಸೆ ಪಡೆಯುವಾಗ ವಯಸ್ಸು ಮೀರಲಿದೆ. ಮತ್ತೆ ಬೇರೆ ಆರೋಗ್ಯ ಸಮಸ್ಸೆಗಳು ಕಾಣಿಸಿಕೊಳ್ಳಲಿದೆ ಎಂದು ದಂಪತಿಗಳು ಮಕ್ಕಳ ಪಡೆಯುವ ಆಲೋಚನೆಯಿಂದ ದೂರವಾಗಿದ್ದಾರೆ.

ಇತ್ತ ಮಹಿಳೆ ಮಕ್ಕಳ ಪಡೆಯುವ ಮಾತು ದೂರವಾಗಿದೆ. ಆದರೆ ವ್ಯಾಯಾಮ ಮಾಡಿ ತೂಕ ಇಳಿಸಿಕೊಂಡ ಬಳಿಕ ಚಿಕಿತ್ಸೆ ಮುಂದುವರಿಸುವ ಕುರಿತು ದಂಪತಿಗಳು ಮಾತನಾಡಿಕೊಂಡಿದ್ದಾರೆ. ಇದರಂತೆ ಮಹಿಳೆ ಜಿಮ್, ವಾಕಿಂಗ್, ಜಾಗಿಂಗ್ ಆರಂಭಿಸಿದ್ದಾರೆ. ಇದರ ನಡುವೆ ವೈದ್ಯರ ಸಂಪರ್ಕಿಸಿ ಬಿಪಿ, ಶುಗರ್, ಹಾರ್ಮೋನ್ ಸೇರಿದಂತೆ ಇತರ ಆರೋಗ್ಯ ತಪಾಸಣೆ ನಡೆಸಿದ್ದಾರೆ.  ಎಲ್ಲವೂ ನಾರ್ಮಲ್. ಹೀಗಾಗಿ ಇವರ ಜೀವನ ಎಂದಿನಂತೆ ಸಾಗಿದೆ. ಇದರ ನಡುವೆ ಗಾಂಗ್ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಸ್ಥಳೀಯ ಕ್ಲಿನಿಕ್ ವೈದ್ಯರ ಸಂಪರ್ಕಿಸಿದ್ದಾರೆ. ವೈದ್ಯರಿಗ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿ ಅಲ್ಟ್ರಾಸೌಂಡ್ ಮಾಡಿಸುವಂತೆ ಸೂಚಿಸಿದ್ದಾರೆ.

ಅಲ್ಟ್ರೌಸೌಂಡ್ ಪರೀಕ್ಷೆ ವೇಳೆ ಈಕೆ 8.5 ತಿಂಗಳ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಬಿಪಿ ಹೆಚ್ಚಾಗಿದ್ದ ಕಾರಣ ವೈದ್ಯರು 9 ತಿಂಗಳ ಕಾಯುವುದು ಅಪಾಯವಾಗಬಹುದು. ಮಗುವಿನ ತೂಕ 2 ಕೆಜಿ ಆಗಿತ್ತು. ಹೀಗಾಗಿ ವೈದ್ಯರು ಸರ್ಜರಿ ಮೂಲಕ ಮಗು ಹೊರತೆಗೆಯಲು ಸೂಚಿಸಿದ್ದಾರೆ. ಇದರಂತೆ ಯಶಸ್ವಿ ಸರ್ಜರಿ ಮಾಡಿದ್ದರೆ. ಇದೀಗ ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

ಈ ಘಟನೆಯನ್ನು ಬಿಚ್ಚಿಟ್ಟ ಮಹಿಳೆ, ಮಕ್ಕಳು ಇಲ್ಲದ ದಂಪತಿಗಳು ನಿರಾಶರಾಗಬೇಡಿ, ದೇವರು ನಿಮಗೆ ಮಕ್ಕಳ ಕರುಣಿಸತ್ತಾನೆ. ನಮಗೆ ಮಗುವಿನ ಜೊತೆಗೆ ಅಚ್ಚರಿಯನ್ನು ನೀಡಿದ್ದಾನೆ ಎಂದು ಮಹಿಳೆ ಗಾಂಗ್ ಹೇಳಿದ್ದಾಳೆ. ಅದೆಷ್ಟೋ ಮಂದಿ ಮಕ್ಕಳ ಪಡೆಯಲು ಚಿಕಿತ್ಸೆ ಪಡೆಯುತ್ತಾರೆ. ಬಳಿಕ ನಿರಾಸಗೊಳ್ಳುತ್ತಾರೆ. ಯಾವುದೇ ಕ್ಷಣದಲ್ಲೂ ನಿರಾಸೆಗೊಳ್ಳಬೇಡಿ. ಪ್ರಯತ್ನ ನಿಮ್ಮದಾಗಿರಲಿ ಅಷ್ಟೇ, ಇನ್ನೆಲ್ಲ ದೇವರು ನಿಮಗೆ ನೀಡುತ್ತಾನೆ ಎಂದಿದ್ದಾರೆ.

ಸತ್ತ ಪತಿ ಕನಸಿನಲ್ಲಿ ಬಂದು ಪ್ರೆಗ್ನೆಂಟ್‌ ಮಾಡ್ದ ! ವೈರಲ್‌ ವಿಡಿಯೋ ಅಸಲೀಯತ್ತೇನು?
 

Latest Videos
Follow Us:
Download App:
  • android
  • ios