ಪ್ರೆಗ್ನೆಂಟ್ ಮಾಡಿ 5 ಲಕ್ಷ ಗಳಿಸಿ, ಕೆಲಸದ ಹೊಸ ಜಾಹೀರಾತು ವೈರಲ್
ಮೋಸ ಹೋಗುವವರು ಹೆಚ್ಚಾದಂತೆ ಮೋಸ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಜನರು ಎಲ್ಲವನ್ನೂ ಕಣ್ಮುಚ್ಚಿ ನಂಬ್ತಿದ್ದಾರೆ. ಹಣದಾಸೆಗೆ ಯಡವಟ್ಟು ಮಾಡ್ಕೊಂಡು ಹಣ ಕಳೆದುಕೊಳ್ತಿದ್ದಾರೆ. ಅದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ.
ಹಣ (Money) ಸಿಗುತ್ತೆ ಎಂದಾದ್ರೆ ಜನರು ಯಾವ ಕೆಲಸ ಮಾಡಲೂ ಸಿದ್ಧ ಇರ್ತಾರೆ. ಈಗಿನ ಕಾಲದಲ್ಲಿ ಚಿತ್ರ ವಿಚಿತ್ರ ಜಾಬ್ ಆಫರ್ (job offer) ಗಳು ಬರ್ತಾನೆ ಇರುತ್ವೆ. ಅದ್ರಲ್ಲಿ ಯಾವ್ದು ಸತ್ಯ, ಯಾವ್ದು ಮೋಸ ಎಂಬುದನ್ನು ತಿಳಿಯೋದು ಬಹಳ ಕಷ್ಟ. ಈಗ ಬಿಹಾರ (Bihar)ದಲ್ಲೊಂದು ಕೆಲಸದ ಜಾಹೀರಾತು ಸುದ್ದಿ ಮಾಡ್ತಿದೆ. ಮಕ್ಕಳಾಗದ ಮಹಿಳೆಯನ್ನು ಪ್ರೆಗ್ನೆಂಟ್ (Pregnant) ಮಾಡಿ, ಹಣ ಗಳಿಸಿ ಅನ್ನೋದು ಕೆಲಸದ ಟ್ಯಾಗ್ ಲೈನ್. ಬಿಹಾರದ ಮೂಲೆ ಮೂಲೆಯಲ್ಲಿ ಈ ಜಾಹೀರಾತನ್ನು ನೀವು ನೋಡ್ಬಹುದು. ಮಹಿಳೆಯನ್ನು ಪ್ರೆಗ್ನೆಂಟ್ ಮಾಡುವ ಕೆಲಸಕ್ಕೆ ಜನರ ನೇಮಕ ಮಾಡಿಕೊಳ್ಳಲಾಗ್ತಿದೆ. ಕೆಲಸ ಸಕ್ಸಸ್ ಆಗಿ, ಗರ್ಭ ಧರಿಸಿದ್ರೆ ಉದ್ಯೋಗಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಲಾಗುತ್ತದೆ. ಒಂದ್ವೇಳೆ ಮಹಿಳೆ ಮಕ್ಕಳನ್ನು ಪಡೆಯಲು ವಿಫಲವಾದ್ರೂ ಉದ್ಯೋಗಿಗೆ ನಷ್ಟವಿಲ್ಲ. ಆತನಿಗೆ ಕಂಪನಿ 50 ಸಾವಿರ ನೀಡುತ್ತೆ.
ಈ ಆಫರ್ ನೋಡ್ತಿದ್ದಂತೆ ಜನರು ಫೋನ್ ಕರೆ ಮಾಡಲು ಶುರು ಮಾಡಿದ್ದಾರೆ. ಹಣ ಗಳಿಸುವ ಆಸೆಗೆ ಬಿದ್ದವರಿಗೆ ಮುಂದೇನಾಗುತ್ತೆ ಎನ್ನುವ ಕಲ್ಪನೆ ಇರಲಿಲ್ಲ. ಕೆಲಸಕ್ಕೆ ಸೇರ್ಬೇಕು ಅಂದ್ರೆ ಮೊದಲು ಅರ್ಜಿ ಭರ್ತಿ ಮಾಡ್ಬೇಕು. ಫಾರ್ಮ್ ಭರ್ತಿಗೆ ಕಂಪನಿ ಹಣ ಪಡೆದಿದೆ. ನಂತ್ರ ಕಾಲ್ ಬ್ಲಾಕ್ ಮಾಡಿದೆ. ಅನೇಕ ಜನರು ಇವರ ಮೋಸದ ಜಾಲಕ್ಕೆ ಬಿದ್ದಿದ್ದಾರೆ. ಕೆಲವರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿನ ಮೇರೆಗೆ ವಿಚಾರಣೆ ಕೈಗೊಂಡ ಪೊಲೀಸ್ ಕೈಗೆ ಖದೀಮರು ಸಿಕ್ಕಿ ಬಿದ್ದಿದ್ದಾರೆ. ಬಿಹಾರದ ಹಳ್ಳಿಯಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣ ಮಾಡುವ ಅವರ ಪ್ಲಾನ್ ನೋಡಿ ಪೊಲೀಸರು ಶಾಕ್ ಆಗಿದ್ದಾರೆ.
ಡಿಕೆ ಬ್ರದರ್ಸ್ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ
ಸೈಬರ್ ಕ್ರೈಂ ಆರೋಪದ ಅಡಿ ಇವರನ್ನು ಬಂಧಿಸಲಾಗಿದೆ. ಇವರ ಜಾಲ ಬಿಹಾರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬೇರೆ ಬೇರೆ ರಾಜ್ಯದ ಜನರಿಗೆ ಕರೆ ಮಾಡಿ, ಕೆಲಸದ ಆಫರ್ ನೀಡ್ತಿದ್ದರು. ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳನ್ನು ನೀಡೋದೇ ಉದ್ಯೋಗಿಯ ಕೆಲಸ. ಅದಕ್ಕೆ ಸಂಬಳ ನೀಡಲಾಗುವುದು ಎಂದು ಆರೋಪಿಗಳು ಜನರನ್ನು ನಂಬಿಸುತ್ತಿದ್ದರು. 5 ಲಕ್ಷದ ಆಸೆಗೆ ಜನರು ಒಪ್ಪಿಕೊಳ್ತಿದ್ದರು. ಆ ನಂತ್ರ ವ್ಯಕ್ತಿಗೆ ರಿಜಿಸ್ಟ್ರೇಷನ್ ಫಾರ್ಮ್ ನೀಡಲಾಗ್ತಿತ್ತು. ಫಾರ್ಮ್ ಭರ್ತಿ ವೇಳೆ 500 ರಿಂದ 20 ಸಾವಿರದವರೆಗೆ ಹಣವನ್ನು ಅವರು ವಸೂಲಿ ಮಾಡಿದ್ದರು. ಆನ್ಲೈನ್ ನಲ್ಲಿ ಹಣ ಟ್ರಾನ್ಸ್ಫರ್ ಆಗ್ತಿದ್ದಂತೆ ಫೋನ್ ಸ್ವಿಚ್ ಆಫ್ ಆಗ್ತಿತ್ತು. ಇವರು, ಅನೇಕ ಕಡೆ ಜಾಹೀರಾತು ಫಲಕ ಹಾಕಿದ್ದರು. ಅದನ್ನು ನೋಡಿದ ಜನರೇ ಫೋನ್ ನಂಬರ್ ಗೆ ಕರೆ ಮಾಡಿ ಮೋಸದ ಜಾಲದಲ್ಲಿ ಬಿದ್ದಿದ್ದಿದೆ.
ಕಲಬುರಗಿ: ಸಾಲ ತೀರಿಸಲು ತಂದೆ ಹೆಸರಿಗೆ ಇನ್ಶೂರೆನ್ಸ್ ಮಾಡಿಸಿ ಹತ್ಯೆಗೈದ ಮಗ!
ಪೊಲೀಸರು ಆರೋಪಿಗಳಿಂದ ಆರು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಅದ್ರಲ್ಲಿ ಸಾಕಷ್ಟು ಸಾಕ್ಷ್ಯ ಸಿಕ್ಕಿದೆ. 19, 20 ವರ್ಷದ ಆರೋಪಿಗಳು ಜನರನ್ನು ಮೋಸ ಗೊಳಿಸಿ ಹಣ ಸಂಪಾದನೆ ಮಾಡಿದ್ದಾರೆ. ಟೀಂನಲ್ಲಿದ್ದ ರಾಹುಲ್ ಕುಮಾರ್ ಗೆ 19 ವರ್ಷ ವಯಸ್ಸಾದ್ರೆ ಬೋಲಾ ಕುಮಾರ್ ಹಾಗೂ ಪಂಕಜ್ ಕುಮಾರ್ ಗೆ 20 ವರ್ಷ ವಯಸ್ಸು. ಈ ಜಾಲ ವಿಸ್ತಾರವಾಗಿದ್ದು, ಅದ್ರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.