ಮದುವೆಯಾದ ಎರಡನೇ ದಿನದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಸಣ್ಣ ಹಳ್ಳಿಯೊಂದರ ನವವಿವಾಹಿತ ಮಹಿಳೆ ತನ್ನ ಮದುವೆಯಾದ ಎರಡು ದಿನಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮನೆ ಮಂದಿ ಶಾಕ್ ಆಗಿದ್ದಾರೆ.

ಮಧ್ಯಪ್ರದೇಶ: ಮದುವೆಯಾದ ಎರಡನೇ ದಿನದಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಧಾರ್‌ನ ಧಮ್ನೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣ ಹಳ್ಳಿಯೊಂದರ ನವವಿವಾಹಿತ ಮಹಿಳೆ ತನ್ನ ಮದುವೆಯಾದ ಎರಡು ದಿನಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಮನೆ ಮಂದಿ ಪ್ರಶ್ನಿಸಿದಾಗ ಈಕೆ, ಒಬ್ಬ ಆರೋಪಿ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ. ಆ ನಂತರ ತಾನು ಈಗಾಗಲೇ ಮದುವೆಯಾಗಿದ್ದೇನೆ ಮತ್ತು ಕುಟುಂಬವನ್ನು ಹೊಂದಿದ್ದೇನೆ ಎಂದು ಹೇಳಿ ಮದುವೆಯಾಗಲು ನಿರಾಕರಿಸಿ ತನಗೆ ಮೋಸ ಮಾಡಿದ ಬಗ್ಗೆ ವಿವರಿಸಿದ್ದಾಳೆ.

ವಿಷಯ ಬಯಲಿಗೆ ಬಂದ ಕೂಡಲೇ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಸರಾಯ್ ಗ್ರಾಮದ ಸುನಿಲ್ ಬಾಘೇಲ್ ಎಂದು ಗುರುತಿಸಿ ಬಂಧಿಸಿದ್ದಾರೆ.

ಐವಿಎಫ್ ಮೂಲಕ ಅವಳಿ ಮಕ್ಕಳ ಗರ್ಭ ಧರಿಸಿದ್ದ ಮಹಿಳೆ, ಹೆರಿಗೆ ಸಮಯದಲ್ಲಿ ಸಾವು

ಧಮನೋಡ್ ಪೋಲೀಸರ ಪ್ರಕಾರ, ಹುಡುಗಿ ಮೇ 20ರಂದು ಮದುವೆಯಾದಳು. ಕೇವಲ ಎರಡು ದಿನಗಳ ನಂತರ, ಮೇ 22ರ ಮುಂಜಾನೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಆಕೆಯ ಪತಿ ತಕ್ಷಣವೇ ಅವಳನ್ನು ಧಮ್ನೋಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ವೈದ್ಯರು ಹೆರಿಗೆ ಮಾಡಿಸಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅನಿರೀಕ್ಷಿತ ಘಟನೆ ವರನ ಕಡೆಯವರನ್ನು ಬೆಚ್ಚಿಬೀಳಿಸಿತು. ತಕ್ಷಣ ಮಹಿಳೆಯನ್ನು ಈ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಆಕೆ ತಿಂಗಳುಗಟ್ಟಲೆ ಮುಚ್ಚಿಟ್ಟಿದ್ದ ಅತ್ಯಾಚಾರ ಮತ್ತು ವಂಚನೆಯ ಕಥೆಯನ್ನು ಬಹಿರಂಗಪಡಿಸಿದಳು.

ಎರಡು ವರ್ಷಗಳ ಹಿಂದೆ ಸಿಮ್ರಾಲಿ ಗ್ರಾಮದ ಮದುವೆಯೊಂದರಲ್ಲಿ ಸುನೀಲ್‌ನನ್ನು ಭೇಟಿಯಾಗಿದ್ದೆ ಎಂದು ಮಹಿಳೆ ವಿವರಿಸಿದ್ದಾರೆ. ಅಲ್ಲಿ ಇಬ್ಬರೂ ಮೊಬೈಲ್‌ ನಂಬರ್‌ನ್ನು ವಿನಿಮಯ ಮಾಡಿಕೊಂಡಿದ್ದರು. ಯಾವಾಗಲೂ ಕರೆ ಮಾಡಿ ಮಾತನಾಡಿಕೊಳ್ಳುತ್ತಿದ್ದರು. ಸುನೀಲ್ ಕಚ್ವಾನಿಯಾದಲ್ಲಿ ಅವಳನ್ನು ಅನೇಕ ಬಾರಿ ಭೇಟಿ ಮಾಡಿದ್ದಾನೆ ಮತ್ತು ಸುಮಾರು ಒಂಬತ್ತು ತಿಂಗಳ ಹಿಂದೆ, ಮದುವೆಯ ಭರವಸೆ ನೀಡಿ ಹೊಲವೊಂದರಲ್ಲಿ ಅತ್ಯಾಚಾರವೆಸಗಿದನು. ಸಾಮಾಜಿಕ ಕಳಂಕಕ್ಕೆ ಹೆದರಿ, ಮಹಿಳೆ ಘಟನೆಯನ್ನು ತನ್ನ ಕುಟುಂಬದಿಂದ ಗೌಪ್ಯವಾಗಿಟ್ಟಿದ್ದಳು.

14ರ ಅಣ್ಣನಿಂದಲೇ ಅತ್ಯಾಚಾರ: 12 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್

ನಂತರದ ದಿನಗಳಲ್ಲಿ ಮಹಿಳೆ ತಾನು ಗರ್ಭಿಣಿಯಾಗಿರುವ ಬಗ್ಗೆ ಸುನಿಲ್‌ಗೆ ತಿಳಿಸಿದಳು. ಆದರೆ ಆತ ತಾನು ಈಗಾಗಲೇ ಮದುವೆಯಾಗಿದ್ದೇನೆ ಮತ್ತು ಅವಳನ್ನು ಮದುವೆಯಾಗುವುದಿಲ್ಲ ಎಂದು ಬಹಿರಂಗಪಡಿಸಿದನು. ಮಾನನಷ್ಟಕ್ಕೆ ಹೆದರಿ ಮಹಿಳೆ ಮೌನವಾಗಿದ್ದಳು. ಆಕೆಯ ಕುಟುಂಬವು ಮೇ 20ರಂದು ಅವಳ ಮದುವೆಗೆ ನಿಶ್ಚಯಿಸಿತ್ತು. 

ಮಗುವಿಗೆ ಜನ್ಮ ನೀಡಿದ ನಂತರ ಮಹಿಖೆ ಧಮ್ನೋದ್ ಪೊಲೀಸ್ ಠಾಣೆಗೆ ಬಂದು ಸುನೀಲ್ ವಿರುದ್ಧ ದೂರು ದಾಖಲಿಸಿದಳು. ಸುನೀಲ್ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.