ಐವಿಎಫ್ ಮೂಲಕ ಅವಳಿ ಮಕ್ಕಳ ಗರ್ಭ ಧರಿಸಿದ್ದ ಮಹಿಳೆ, ಹೆರಿಗೆ ಸಮಯದಲ್ಲಿ ಸಾವು

ಬೆಂಗಳೂರಿನಲ್ಲಿ ಐವಿಎಫ್ ಮೂಲಕ ಅವಳಿ ಮಕ್ಕಳ ಗರ್ಭ ಧರಿಸಿದ ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ಬಂದರೆ ಪ್ರಸವಪೂರ್ವ ಹೆರಿಗೆಯಾಗಿ, ನಂತರ ಮಹಿಳೆ ಸಾವಿಗೀಡಾಗಿದ್ದಾಳೆ.

Bengaluru Woman pregnant with twins through IVF but dies during childbirth sat

ಬೆಂಗಳೂರು (ಮೇ 22): ಬೆಂಗಳೂರಿನಲ್ಲಿ ಐವಿಎಫ್ ಮೂಲಕ ಅವಳಿ ಮಕ್ಕಳ ಗರ್ಭ ಧರಿಸಿದ ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ಬಂದರೆ ಪ್ರಸವಪೂರ್ವ ಹೆರಿಗೆಯಾಗಿದ್ದು, ನಂತರ ಮಹಿಳೆ ಸಾವಿಗೀಡಾಗಿದ್ದಾಳೆ.

ಹೌದು, ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದಿದ್ದ ಮಹಿಳೆ ಸಾವನ್ನಪ್ಪಿದ್ದು, ಕುಟುಂಬಸ್ಥರು ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಮಹಿಳೆ ಜನನಿ (33) ಆಗಿದ್ದಾಳೆ. ಜನನಿ ಅವಳಿ ಮಕ್ಕಳ ಹೆರಿಗೆಗೆ ಬಂದು ಸಾವನ್ನಪ್ಪಿದ್ದಾಳೆ. ಇನ್ನು ಜನನಿ ಹಾಗೂ ಕೇಶವ್ ದಂಪತಿ ಐವಿಎಫ್‌ (IVF) ಮೂಲಕ ಮಗುವನ್ನು ಪಡೆದಿದ್ದರು. ಇನ್ನು ಮಕ್ಕಳ ಗರ್ಭಧಾರಣೆಯಿಂದ ಹೆರಿಗೆವರೆಗೂ ಜವಾಬ್ದಾರಿ ನೋಡಿಕೊಳ್ಳುವುದಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಪ್ಯಾಕೇಜ್ ಮಾಡಿಸಿದ್ದರು. ಆದರೆ, ಕಳೆದ 2ರಂದು ಹೊಟ್ಟೆ ನೋವೆಂದ ಆಸ್ಪತ್ರೆಗೆ ಬಂದ ಜನನಿಗೆ ಪ್ರಸವ ಪೂರ್ವ( 7.5 ತಿಂಗಳಿಗೆ) ಹೆರಿಗೆ ಆಗಿತ್ತು.

ಮಹಿಳೆ ಜನನಿಗೆ ಅವಳಿ ಮಕ್ಕಳು ಜನಿಸಿದ್ದವು. ಆದರೆ, ಹೆರಿಗೆ ಬಳಿಕ ಜನನಿಗೆ ಜಾಂಡೀಸ್ ಇದೆ, ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡದೇ ನಿರ್ಲಕ್ಷ್ಯ ಮಾಡಿದ್ದ ವೈದ್ಯರು ಜನನಿ ಅವರಿಗೆ ತೀವ್ರ ಸಿರೀಯಸ್ ಕಂಡಿಷನ್ ಆಗುವವರೆಗೂ ತಮ್ಮ ಆಸ್ಪತ್ರೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಇನ್ನು ಪ್ರಾಣಕ್ಕೆ ಅಪಾಯವಿದೆ ಎಂದು ಅರಿತಾಗ ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ತಮ್ಮ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ಅಲ್ಲಿಗೆ ಹೋಗುಷ್ಟರಲ್ಲಾಗದೇ ಜನನಿಯ ಸ್ಥಿತಿ ಚಿಂತಾಜನಕವಾಗಿತ್ತು. ಇಂದು ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಜನನಿ ಸಾವನ್ನಪ್ಪಿದ್ದಾರೆ.

ಇನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಜನನಿ ಚಿಕಿತ್ಸೆಗೆ 30 ಲಕ್ಷ ರೂ. ಬಿಲ್‌ ಆಗಿದೆಯಂತೆ. ಎಲ್ಲ ಹಣವನ್ನು ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ, ಹೆರಿಗೆಗಾಗಿ ಪ್ಯಾಕೇಜ್ ಮಾಡಿಸಿ ಹಣವಿಲ್ಲದೇ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಈಗ ಬರಸಿಡಿಲು ಬಡಿದಂತಾಗಿದೆ. ಇಬ್ಬರು ಅವಳಿ ಮಕ್ಕಳ ಆರೈಕೆಗೆ ತಾಯಿಯೇ ಇಲ್ಲದಂತಾಗಿದೆ. ಇತ್ತ ಜನನಿಯನ್ನೂ ಕಳೆದುಕೊಂಡು, 30 ಲಕ್ಷ ರೂ. ಹಣ ಪಾವತಿ ಮಾಡಲಾಗದೇ, ಹೆರಿಗೆ ಪ್ಯಾಕೇಜ್ ಮಾಡಿಸಿದ ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ನಿಮ್ಮ ನಿರ್ಲಕ್ಷ್ಯದಿಂದಲೇ ನನ್ನ ಹೆಂಡತಿ ಜನನಿ ಸಾವನ್ನಪ್ಪಿದ್ದು, ಮಣಿಪಾಲ್ ಆಸ್ಪತ್ರೆಗೆ ಬಿಲ್ ಪಾವತಿಸಿ ಮೃತದೇಹವನ್ನಾದರೂ ಕೊಡಿಸಿ ಎಂದು ಆಗ್ರಹ ಮಾಡಿದ್ದಾರೆ.

Latest Videos
Follow Us:
Download App:
  • android
  • ios