14ರ ಅಣ್ಣನಿಂದಲೇ ಅತ್ಯಾಚಾರ: 12 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್
ಸೋದರನಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ12 ವರ್ಷದ ಬಾಲಕಿಯ ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಬಾಂಬೆ ಹೈಕೋರ್ಟ್‌ನ ರಜಾ ಕಾಲದ ಪೀಠದ ನ್ಯಾಯಾಧೀಶರಾದ ಸಂದೀಪ್ ಮರ್ನೆ ಹಾಗೂ ನೀಲಾ ಗೋಖಲೆ ಅವರು ವೈದ್ಯಕೀಯ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಈ ತೀರ್ಪು ನೀಡಿದ್ದಾರೆ.
ಮುಂಬೈ: ಸೋದರನಿಂದಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ12 ವರ್ಷದ ಬಾಲಕಿಯ ಗರ್ಭಪಾತಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಬಾಂಬೆ ಹೈಕೋರ್ಟ್‌ನ ರಜಾ ಕಾಲದ ಪೀಠದ ನ್ಯಾಯಾಧೀಶರಾದ ಸಂದೀಪ್ ಮರ್ನೆ ಹಾಗೂ ನೀಲಾ ಗೋಖಲೆ ಅವರು ವೈದ್ಯಕೀಯ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಈ ತೀರ್ಪು ನೀಡಿದ್ದಾರೆ. ಬಾಲಕಿಯ ಸುರಕ್ಷತೆ ಹಾಗೂ ಯೋಗಕ್ಷೇಮವೇ ಪ್ರಮುಖ ಆದ್ಯತೆ ಎಂದು ಹೇಳಿದ ನ್ಯಾಯಾಲಯ 12 ವರ್ಷದ ಬಾಲಕಿಯ ಆರು ತಿಂಗಳ ಗರ್ಭಾವಸ್ಥೆಯನ್ನು ಅಂತ್ಯ ಮಾಡುವುದಕ್ಕೆ ಅನುಮತಿ ನೀಡಿದೆ.
ಪರಿಸ್ಥಿತಿಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಅಪ್ರಾಪ್ತ ವಯಸ್ಸಿನ ಬಾಲಕಿ ಕಲ್ಯಾಣ ಹಾಗೂ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಎಂದು ಪೀಠ ಹೇಳಿದೆ. 12 ವರ್ಷದ ಬಾಲಕಿಯನ್ನು ಆಕೆಯ 14 ವರ್ಷದ ಸೋದರನೇ ಅತ್ಯಾಚಾರ ಮಾಡಿದ್ದ, ಆತನ ವಿರುದ್ಧ ಕೇಸು ದಾಖಲಾಗಿದೆ. ಇತ್ತ ಬಾಲಕಿಯ ತಾಯಿ ಹೈಕೋರ್ಟ್‌ನಲ್ಲಿ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ತಿಂಗಳ ಆರಂಭದಲ್ಲಿ ಬಾಲಕಿ ತನಗೆ ಹೊಟ್ಟೆನೋವು ಆಗುತ್ತಿದೆ ಎಂದು ತಾಯಿಯ ಬಳಿ ಹೇಳಿಕೊಂಡಿದ್ದಳು. ಈ ವೇಳೆ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದಾಗ ಆಕೆ ಗರ್ಭ ಧರಿಸಿರುವುದು ಬೆಳಕಿಗೆ ಬಂದಿತ್ತು.
ಅತ್ಯಾಚಾರ ಸಂತ್ರಸ್ತೆ 14 ರ ಪ್ರಾಯದ ತುಂಬು ಗರ್ಭಿಣಿಗೆ ಗರ್ಭಪಾತಕ್ಕೆ ಸುಪ್ರೀಂ ಅವಕಾಶ
ಇದಾದ ನಂತರ ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ ತನ್ನ ಹಿರಿಯಣ್ಣನೇ ಮನೆಯಲ್ಲಿ ಯಾರು ಇಲ್ಲದ ವೇಳೆ ಒತ್ತಾಯಪೂರ್ವಕವಾಗಿ ತನ್ನ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದ. ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ಹೇಳಿದಲ್ಲಿ ಪರಿಸ್ಥಿತಿ ಸರಿ ಇರಲ್ಲ ಎಂದು ಬೆದರಿಸಿದ್ದ ಎಂದು ಬಾಲಕಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಅಡಿ ಬರುವ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ಪೋಸ್ಕೋದಡಿ ಬಾಲಕಿಯ ಅಣ್ಣನ ವಿರುದ್ಧ ಕೇಸು ದಾಖಲಿಸಿದ ಪೊಲೀಸರು ಆತನನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದರು.
ಈ ಬಗ್ಗೆ ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌ನ ರಜಾ ಕಾಲದ ಪೀಠದ ನ್ಯಾಯಾಧೀಶರು, ಬಾಲಕಿಗೆ ಕೊನೆಹಂತದವರೆಗೂ ತಾನು ಗರ್ಭಿಣಿ ಎಂಬ ವಿಚಾರ ತಿಳಿದಿರಲಿಲ್ಲ, ಹಾಗೆಯೇ ವೈದ್ಯಕೀಯ ಮಂಡಳಿಯೂ ಕೂಡ ಗರ್ಭಾವಸ್ಥೆ ಮುಂದುವರೆದರೆ ಬಾಲಕಿ ಗಂಭೀರವಾದ ಮಾನಸಿಕ ಹಾಗೂ ದೈಹಿಕ ನೋವನ್ನು ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಬಾಲಕಿಯ ಸುರಕ್ಷತೆಯೇ ಪ್ರಮುಖ ಆದ್ಯತೆ ಆಗಿದ್ದು, ಗರ್ಭಪಾತ ಮಾಡಬಹುದು ಎಂದು ಸೂಚಿಸಿದೆ. ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಬಾಲಕಿಗೆ ಕೌನ್ಸೆಲಿಂಗ್ ನಡೆಸಬೇಕು ಎಂದು ಸೂಚಿಸಿದೆ. ಇದರ ಜೊತೆಗೆ ನ್ಯಾಯಾಲಯವೂ ಬಾಲಕಿಯ ಭ್ರೂಣ ಮತ್ತು ಡಿಎನ್‌ಎ ಮಾದರಿಯ ಸೂಕ್ತ ಅಂಗಾಂಶದ ಮಾದರಿಯನ್ನು ಸಂರಕ್ಷಿಸಲು ಮತ್ತು ನಂತರದ ಕ್ರಿಮಿನಲ್ ವಿಚಾರಣೆಗಾಗಿ ತನಿಖಾಧಿಕಾರಿಗೆ ರವಾನಿಸಲು ಆಸ್ಪತ್ರೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಅಯ್ಯೋ ಎಂಥಾ ಆಧ್ವಾನ! ಗೊಂದಲದಿಂದ ಬೇರೆ ಗರ್ಭಿಣಿಗೆ ಗರ್ಭಪಾತ ಮಾಡಿಸಿದ ವೈದ್ಯರು!