ಮೆಟ್ರೋ ಸಿಟಿಯಲ್ಲಿ ಫಸ್ಟ್ ಜಾಬ್‌ಗೆ 50 ಸಾವಿರ ಸಂಬಳ, ಸಾಲಲ್ಲ ಅಂದ ಯುವತಿಗೆ ನೆಟ್ಟಿಗರ ಕ್ಲಾಸ್!
ಬೆಂಗಳೂರಿನಂಥಾ ಮಹಾನಗರದಲ್ಲಿ ಜೀವನ ಸಾಗಿಸೋದು ಸ್ಪಲ್ಪ ಕಷ್ಟಾನೇ. ಓಡಾಟ, ಊಟ, ಶಾಪಿಂಗ್ ಅಂತ ಸಾಕಷ್ಟು ಖರ್ಚಾಗುವ ಕಾರಣ ಎಷ್ಟು ಸ್ಯಾಲರಿಯಿದ್ರೂ ಸಾಕಾಗಲ್ಲ. ಇದಲ್ಲದೆ ಆದಾಯವಿಲ್ಲದೆ ತಿನ್ನಲು ಆಹಾರವಿಲ್ಲದೆ ಒದ್ದಾಡುವವರೂ ಇದ್ದಾರೆ. ಹೀಗಿರುವಾಗ ಬೆಂಗಳೂರಿನಲ್ಲೊಬ್ಬ ಯುವತಿ ಮೊದಲ ಕೆಲಸಕ್ಕೆ ತಿಂಗಳಿಗೆ 50 ಸಾವಿರ ಸಿಕ್ಕಿದ್ರೂ ಸಾಕಾಗ್ತಿಲ್ಲ ಅಂತಿದ್ದಾಳೆ.
ಐಟಿ-ಬಿಟಿ ಸೆಕ್ಟರ್‌ನಲ್ಲಿ ಲೇಫ್ ಆಫ್ ಪದ್ಧತಿ ಹೆಚ್ಚುತ್ತಿದೆ. ಇದ್ದವರನ್ನೇ ಕೆಲಸದಿಂದ ತೆಗೆದು ಹಾಕುತ್ತಿರುವಾಗ ಹೊಸ ಕೆಲಸ ಗಿಟ್ಟಿಸುವುದೇ ಕಷ್ಟವಾಗಿದೆ. ಹೀಗಾಗಿ ಸಿಕ್ಕಿದ ಜಾಬ್ ಆಫರ್‌ಗೆ ಓಕೆ ಅನ್ನುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಮೊದಲ ಕೆಲಸ ಸಿಕ್ಕಿದ್ರೂ ಸ್ಯಾಲರಿ ಕಡಿಮೆಯಾಯ್ತು ಅಂತಿದ್ದಾರೆ. ಇವತ್ತಿನ ಕಾಲದಲ್ಲಿ ಸ್ಯಾಲರಿ ಎಷ್ಟಿದ್ರೂ ಸಾಕಾಗಲ್ಲ. ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಿರುವ ಕಾರಣ, ಜನರ ಲೈಫ್‌ಸ್ಟೈಲ್ ಸಹ ಚೇಂಜ್ ಆಗಿರುವ ಕಾರಣ ಎಷ್ಟು ಸ್ಯಾಲರಿ ಸಿಕ್ಕಿದ್ರೂ ಕಡಿಮೇನೆ. ಹೀಗಿರುವಾಗ ಬೆಂಗಳೂರಿನಲ್ಲಿ ಯುವತಿಯೊಬ್ಬಳು ತನ್ನ ಮೊದಲ ಕೆಲಸಕ್ಕೆ ಭರ್ತಿ ಕೆಲಸಕ್ಕೆ ಐವತ್ತು ಸಾವಿರ ಸಿಕ್ಕಿದ್ರೂ ಮೆಟ್ರೋ ಪಾಲಿಟನ್ ಸಿಟಿಯಲ್ಲಿ ಇಷ್ಟು ಸಂಬಳ ಇದ್ರೆ ಸಾಕಾಗಲ್ಲಪ್ಪಾ ಅಂತಿದ್ದಾಳೆ.
ಮೆಟ್ರೋ ಸಿಟಿಯಲ್ಲಿ ಮೊದಲ ಜಾಬ್‌ಗೆ 50,000 ಸ್ಯಾಲರಿ ಸಾಕಾಗಲ್ಲ!
ಉತ್ತಮ ಉದ್ಯೋಗಾವಕಾಶಗಳಿಗಾಗಿ ಜನರು ಮೆಟ್ರೋ ನಗರಗಳಿಗೆ (Metro city) ತೆರಳುತ್ತಾರೆ. ಆದರೆ ಬೆಂಗಳೂರು, ದೆಹಲಿ, ಚೆನ್ನೇ ಸೇರಿದಂತೆ ಮೆಟ್ರೋ ನಗರಗಳಲ್ಲಿ ಜೀವನ ವೆಚ್ಚವು ಅವರ ಊರುಗಳಿಗಿಂತ ಹೆಚ್ಚಾಗಿದೆ. ಮೆಟ್ರೋ ಸಿಟಿಯಲ್ಲಿ ಬದುಕಲು ಫ್ರೆಶರ್‌ಗೆ 50,000 ರೂ ಸಂಬಳ ಸಾಕಾಗುವುದಿಲ್ಲ ಎಂದು ಮಹಿಳೆ (Woman)ಯೊಬ್ಬರು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಟ್ವಿಟ್ಟರ್ ಬಳಕೆದಾರರಾದ ಮೇಧಾ ಗಂಟಿ ಎಂಬವರು 'ಫ್ರೆಶರ್ಸ್‌ಗೆ ಸಂಬಳ (Salary) ಏಕೆ ಕಡಿಮೆಯಾಗಿದೆ? ಮೆಟ್ರೋ ನಗರದಲ್ಲಿ ಯಾರಾದರೂ ಈ ಸಂಬಳದಲ್ಲಿ ಹೇಗೆ ಬದುಕಬೇಕು? ತಿಂಗಳಿಗೆ 50 ಸಾವಿರದಿಂದ ನೀವು ಯಾವುದೇ ಉಳಿತಾಯವನ್ನು (Savings) ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಕುಟುಂಬದಿಂದ ಕೇಳಿ ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಇದಕ್ಕೆ ನೆಟ್ಟಿಗರು ಸಹ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ನೀತಾ ಅಂಬಾನಿ ಮೇಕಪ್ ಆರ್ಟಿಸ್ಟ್ ಕಂಪೆನಿ ಸಿಇಒಗಳಿಗಿಂತ ಹೆಚ್ಚು ಸಂಭಾವನೆ ಪಡೀತಾರಂತೆ!
ಮಹಿಳೆಯ ಟ್ವೀಟ್‌ಗೆ ಹಿಗ್ಗಾಮುಗ್ಗಾ ಝಾಡಿಸಿದ ನೆಟ್ಟಿಗರು
ಮಹಿಳೆಯ ಈ ಟ್ವೀಟ್ ವೈರಲ್ ಆಗಿದ್ದು, 1.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು (Views) ಗಳಿಸಿದೆ. ನೆಟಿಜನ್‌ಗಳು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಹೇಳಿದರು, '50,000 ಎಂಬುದು ಕಡಿಮೆ ಸಂಬಳವಲ್ಲ. ಇದಕ್ಕಿಂತಲೂ ಕಡಿಮೆ ಸ್ಯಾಲರಿಯಲ್ಲಿ ನಗರಗಳಲ್ಲಿ ಅದೆಷ್ಟೋ ಜನರು ಬದುಕುತ್ತಾರೆ' ಎಂದು ತಿಳಿಸಿದ್ದಾರೆ. ಮತ್ತೊಬ್ಬರು 'ಸಂಬಳ ಸಾಕಾಗುವುದಿಲ್ಲ ಎಂಬುದು ನಿಮ್ಮ ಜೀವನಶೈಲಿಯ ಮೇಲೆ ಅವಲಂಬಿತವಾಗಿದೆ. ನನಗೆ 50k ಗಿಂತ ಕಡಿಮೆ ಸಂಬಳವಿದೆ. ಆದರೆ ಇನ್ನೂ ತಿಂಗಳಿಗೆ ಕನಿಷ್ಠ 8-10k ಉಳಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.
ಇನ್ನೊಬ್ಬರು ಹೀಗೆ ಬರೆದಿದ್ದಾರೆ 'ಮೆಟ್ರೋ ನಗರದಲ್ಲಿ ವಾಸಿಸಲು 50 ಸಾವಿರ ಸಾಲರಿ ಕಡಿಮೆಯಾಗುತ್ತದೆ ಎಂದು ನಾನು ಒಪ್ಪುತ್ತೇನೆ, ಆದರೆ ಇದು ಸಂಪೂರ್ಣವಾಗಿ ನಿಮ್ಮ ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ನಾನು ಬೆಂಗಳೂರಿನಲ್ಲಿ ಕೇವಲ 30 ಸಾವಿರ ಪಡೆಯುತ್ತಿದ್ದೇನೆ, ನಾನು ನನ್ನ ಕುಟುಂಬಕ್ಕೆ 10 ಸಾವಿರ ಕಳುಹಿಸುತ್ತೇನೆ. ಹೀಗಿದ್ದೂ ನನ್ನಲ್ಲಿ ಸುಮಾರು 5 ಸಾವಿರ ಉಳಿತಾಯ'ವಾಗುತ್ತದೆ ಎಂದು ತಿಳಿಸಿದ್ದಾರೆ. ಮೂರನೇ ಬಳಕೆದಾರರು, 'ಹೆಚ್ಚಿನ ಫ್ರೆಶರ್‌ಗಳಿಗೆ ತಿಂಗಳಿಗೆ 20K ಗಿಂತ ಕಡಿಮೆ ವೇತನ ನೀಡಲಾಗುತ್ತದೆ. 50 ಸಾವಿರ ಸಿಕ್ಕರೆ ಅವರು ಅತ್ಯಂತ ಹೆಚ್ಚು ಖುಷಿಪಡುತ್ತಾರೆ. ಇದು ಪದವೀಧರ ಫ್ರೆಶರ್‌ಗಳ 5% ಕ್ಕಿಂತ ಕಡಿಮೆ ಸಂಬಳವಾಗಿದೆ' ಎಂದು ಹೇಳಿದ್ದಾರೆ.
ಮೊದಲ ಸಂಬಳ 9 ಸಾವಿರ ರೂ. ನೆನಪಿನ ಬುತ್ತಿ ಬಿಚ್ಚಿಟ್ಟ ವೈದ್ಯರ ಟ್ವೀಟ್ ವೈರಲ್
ಮತ್ತೊಬ್ಬರು, ನೀವು ಹೇಳಿದಂತೆ ಫ್ರೆಶರ್‌ಗಳಿಗೆ 50 ಸಾವಿರ ಕಡಿಮೆಯೇ, ಆದರೆ ಎಲ್ಲರಿಗೂ ಅಲ್ಲ. ಫ್ರೆಶರ್ ಅಂಬಾನಿ ಅವರ ಮಗಳು ಅಥವಾ ಮಗನಂತೆ ವರ್ತಿಸಿದರೆ ಖಂಡಿತವಾಗಿಯೂ 50 ಸಾವಿರ ಕಡಿಮೆಯಾಗುತ್ತದೆ' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು 'ಅರೆ ಫ್ರೆಶರ್‌ಗೂ ಆರಂಭಿಕ ಸ್ಯಾಲರಿ ಐವತ್ತು ಸಾವಿರ ಕೊಡುತ್ತಿದ್ದಾರಾ' ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.