ಮೊದಲ ಸಂಬಳ 9 ಸಾವಿರ ರೂ. ನೆನಪಿನ ಬುತ್ತಿ ಬಿಚ್ಚಿಟ್ಟ ವೈದ್ಯರ ಟ್ವೀಟ್ ವೈರಲ್

ಎಂಬಿಬಿಎಸ್ ಪೂರೈಸಿದ ತಕ್ಷಣ ಉತ್ತಮ ಸಂಬಳವಾಗಲೀ, ಒಳ್ಳೆಯ ಪೊಸಿಷನ್ ಆಗಲಿ ಲಭ್ಯವಾಗುವುದಿಲ್ಲ. ಅದಕ್ಕೂ ಪರಿಶ್ರಮ ಬೇಕು. ಹೈದರಾಬಾದಿನ ವೈದ್ಯ ಡಾ.ಸುಧೀರ್ ಕುಮಾರ್ ಎಂಬುವರು ಮಾಡಿದ ಟ್ವೀಟೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 

Tweet made by Hyderabad doctor goes viral about his first salary

ಎಂಬಿಬಿಎಸ್ ಪದವಿ ಪಡೆಯುವುದು ಸುಲಭವಲ್ಲ. ಪದವಿ ಮುಗಿಸುವಷ್ಟರಲ್ಲಿ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಕೆಲವರು ಹಲವು ಲಕ್ಷಗಳಲ್ಲಿ ಮುಗಿಸಬಹುದು. ಹೀಗಾಗಿ, ಎಷ್ಟೇ ಪ್ರತಿಭಾವಂತರಾಗಿದ್ದರೂ ಎಂಬಿಬಿಎಸ್ ಪದವಿ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಜತೆಗೆ, ಪದವಿಯೂ ಸಾಕಷ್ಟು ಕ್ಲಿಷ್ಟವಾಗಿರುತ್ತದೆ. ನಿದ್ದೆಗಟ್ಟು ಓದಬೇಕಾಗುತ್ತದೆ. ಓದು, ಪರೀಕ್ಷೆಗಳಲ್ಲೇ ಹಲವು ವರ್ಷಗಳು ಸರಿದಿದ್ದೇ ಗೊತ್ತಾಗುವುದಿಲ್ಲ. ಅದೆಷ್ಟು ಒತ್ತಡದಾಯಕ ಶಿಕ್ಷಣವೆಂದರೆ, ಹಲವರು ಈ ಹಂತದಲ್ಲಿ ಖಿನ್ನತೆಗೂ ತುತ್ತಾಗುತ್ತಾರೆ. ಇಷ್ಟೆಲ್ಲ ಕಷ್ಟಪಟ್ಟ ಮೇಲೆ ಉತ್ತಮ ಸಂಬಳ ನಿರೀಕ್ಷೆ ಮಾಡುವುದು ಅತ್ಯಂತ ಸಹಜ. ಮೊದಲಿಗೇ ಲಕ್ಷಗಟ್ಟಲೆ ಸಂಬಳ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಸಂಬಳದ ವಿಚಾರಕ್ಕೆ ಬಂದರೆ, ಯಾವ ವೈದ್ಯಕೀಯ ಸಂಸ್ಥೆಯಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ, ಯಾವ ಸಂಸ್ಥೆ ಸೇರಿಕೊಂಡಿದ್ದಾರೆ ಎನ್ನುವ ಅಂಶಗಳೆಲ್ಲ ಮುಖ್ಯವಾಗುತ್ತವೆ. ಹೈದರಾಬಾದ್ ಮೂಲದ ವೈದ್ಯರೊಬ್ಬರು ತಮ್ಮ ಮೊದಲ ಸ್ಯಾಲರಿ ಬಗ್ಗೆ ಮಾತನಾಡಿದ್ದಾರೆ. ಹೈದರಾಬಾದ್ ನ ಅಪೋಲೊ ಆಸ್ಪತ್ರೆಯಲ್ಲಿ ನ್ಯೂರಾಲಾಜಿಸ್ಟ್ ಆಗಿರುವ ಡಾ.ಸುಧೀರ್ ಕುಮಾರ್ ಟ್ವಿಟರ್ ನಲ್ಲಿ ಯುವ ವೈದ್ಯರು ಎದುರಿಸುವ ಸವಾಲು ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇವರ ಟ್ವೀಟ್ ನೆಟ್ಟಿಗರ ಗಮನ ಸೆಳೆದಿದೆ.

ಡಾ.ಸುಧೀರ್ ಕುಮಾರ್ (Dr.Sudhir Kumar) ಈಗ ಖ್ಯಾತ ವೈದ್ಯರು(Doctor). ನರರೋಗ (Neurologist) ತಜ್ಞರಾಗಿ ಹೆಸರು ಗಳಿಸಿದ್ದಾರೆ. ಆದರೆ, ವೃತ್ತಿ ಆರಂಭಿಸಿದ ಹೊಸತರಲ್ಲಿ ಅವರಿಗೆ ಖ್ಯಾತಿಯೂ ಇರಲಿಲ್ಲ, ಉತ್ತಮ ಸಂಬಳವೂ (Good Salary) ಇರಲಿಲ್ಲ. “16 ವರ್ಷಗಳ ಹಿಂದೆ ಕೇವಲ 9 ಸಾವಿರ ರೂಪಾಯಿ ಮೊದಲ ಸಂಬಳ ಪಡೆದಿದ್ದೆ’ ಎಂದು ಹೇಳಿಕೊಂಡಿದ್ದಾರೆ. 


ಇಷ್ಟು ಕಡಿಮೆ ಸಂಬಳದಲ್ಲಿ ಜೀವನ (Life) ಸಾಗಿಸುತ್ತಿದ್ದ ಬಗೆಯನ್ನೂ ಅವರು ಮನಮುಟ್ಟುವಂತೆ ತಿಳಿಸಿದ್ದಾರೆ. ತೀರ ಅಗತ್ಯ ಮೂಲ ಅಗತ್ಯಗಳನ್ನು ಮಾತ್ರ ಪೂರೈಸಿಕೊಳ್ಳುವ ಮೂಲಕ ಸರಳ (Simple) ಜೀವನಕ್ಕೆ ಅವರು ಆದ್ಯತೆ ನೀಡಿದ್ದರು. ಡಾ.ಸುಧೀರ್ ಕುಮಾರ್ ಅವರೇನೋ ಈ ಸಂಬಳದಲ್ಲಿ ಖುಷಿಯಾಗಿದ್ದರು. ಆದರೆ ಇವರ ತಾಯಿಗೆ (Mother) ಭಾರೀ ನಿರಾಶೆಯಾಗಿತ್ತು. ಮಗನಿಗೆ ಅಷ್ಟು ಕಡಿಮೆ ಸಂಬಳ ನಿಗದಿಯಾಗಿದ್ದುದಕ್ಕೆ ತೀವ್ರ ಬೇಸರ ಪಟ್ಟುಕೊಂಡಿದ್ದರು.

ಪುರುಷರಿಗೇಕೆ ಬೇಗ ಬಾಲ್ಡ್ ಆಗುತ್ತೆ? ಏನಾದ್ರೂ ಪರಿಹಾರವಿದ್ಯಾ?

12 ವರ್ಷಗಳ ಓದು (Education)
“ಕಡಿಮೆ ಸಂಬಳದಲ್ಲೂ ನಾನು ನೆಮ್ಮದಿಯಾಗಿದ್ದೆ. ಆದರೆ, ಅಮ್ಮನಿಗೆ ಬಹಳ ಬೇಸರವಾಗಿತ್ತು. ಅವರು ಅಪ್ಸೆಟ್ (Upset)ಆಗಿದ್ದರು. ಸರ್ಕಾರಿ ಕಚೇರಿಯ ಜವಾನನೊಬ್ಬ ಪಡೆಯುವ ಸಂಬಳದಷ್ಟು ಸಂಬಳ ಪಡೆಯುತ್ತಿದ್ದುದರಿಂದ ಅವರು ನೊಂದಿದ್ದರು. ನನ್ನ ತಂದೆ ಸರ್ಕಾರಿ ಕಚೇರಿಯಲ್ಲಿ (Government Office) ಕೆಲಸ ಮಾಡುತ್ತಿದ್ದರಿಂದ ಅಲ್ಲಿನ ಸಂಬಳ ಅವರಿಗೆ ತಿಳಿದಿತ್ತು. ಮಗ ವೈದ್ಯನಾಗುತ್ತಾನೆಂದು ಸಂಭ್ರಮಿಸಿದ್ದರು. ಬರೋಬ್ಬರಿ 12 ವರ್ಷಗಳ ಕಾಲ ಕಷ್ಟಪಟ್ಟು ಓದಿದ್ದುದನ್ನು ಕಂಡಿದ್ದರು. ತಾವೂ ಅದಕ್ಕಾಗಿ ಶ್ರಮ ಹಾಕಿದ್ದರು. ಎಂಬಿಬಿಎಸ್, ಎಂಡಿ ಮತ್ತು ಡಿಎಂ ಕೋರ್ಸುಗಳು ಸೇರಿ 12 ವರ್ಷಗಳ ಕಾಲ ಬರೀ ಓದಿನಲ್ಲಿ ಮುಳುಗಿದ್ದೆ. ಮಗ ಇಷ್ಟು ಕಷ್ಟಪಟ್ಟಾಗ ಕಡಿಮೆ ಸಂಬಳ ಬಂದರೆ ತಾಯಿಗಾಗುವ ನೋವು ಹಾಗೂ ಆಕೆಯ ಪ್ರೀತಿಯನ್ನು ನೀವು ಅಂದಾಜಿಸಬಹುದು’ ಎಂದು ಹೇಳಿಕೊಂಡಿದ್ದಾರೆ. 

Bollywood ನಟರ ಬಾಡಿಗಾರ್ಡ್ಸ್ ಸಂಬಳ ಕೇಳಿದ್ರೆ ತಲೆ ತಿರುಗಿ ಬೀಳ್ತೀರಿ

5 ವರ್ಷ ಮ್ಯಾನೇಜ್ ಮಾಡಿಕೊಂಡೆ
ಮತ್ತೊಂದು ಪ್ರತ್ಯೇಕ ಟ್ವೀಟ್ ನಲ್ಲಿ ಡಾ.ಸುಧೀರ್, “17 ವರ್ಷವಿರುವಾಗ ಎಂಬಿಬಿಎಸ್ (MBBS) ಸಂದರ್ಶನಕ್ಕೆಂದು ತಮಿಳುನಾಡಿನ ವೆಲ್ಲೋರ್ (Vellore) ಗೆ ಬಿಹಾರದಿಂದ ಸೆಕೆಂಡ್ ಕ್ಲಾಸ್ ಟ್ರೇನಿಗೆ ಬಂದಿದ್ದೆ. ನಮ್ಮ ಕುಟುಂಬಕ್ಕೆ ಟಿಕೆಟ್ ಭರಿಸುವ ಶಕ್ತಿ ಇರಲಿಲ್ಲ. ಮುಂದಿನ 5 ವರ್ಷಗಳ ಕಾಲ ಮನೆಯಿಂದ ಯಾರೂ ನನ್ನನ್ನು ಭೇಟಿಯಾಗಲೂ ಬಂದಿರಲಿಲ್ಲ. ಸೀಟು ಪಡೆದು, ಅಡ್ಮಿಷನ್ ಮಾಡಿಕೊಂಡು 5 ವರ್ಷಗಳವರೆಗೆ ನನ್ನ ಖರ್ಚನ್ನು ನಾನೇ ಮ್ಯಾನೇಜ್ (Manage) ಮಾಡಿಕೊಂಡೆ’ ಎಂದು ತಿಳಿಸಿದ್ದಾರೆ. ಸುಧೀರ್ ಅವರ ಕತೆ ನೆಟ್ಟಿಗರನ್ನು ಸೆಳೆದಿದ್ದು, ಹಲವು ಕಾಮೆಂಟ್ ಗಳು ಬಂದಿವೆ. 

Latest Videos
Follow Us:
Download App:
  • android
  • ios