ನಾವು ಸಾಮಾನ್ಯವಾಗಿ ಪಾದವನ್ನು ಮುಂದಕ್ಕೆ ತಿರುಗಿಸಬಲ್ಲೆವು. ಆದರೆ ಈಕೆ ಮಾತ್ರ ತನ್ನ ಪಾದವನ್ನು ಹಿಂದೆ, ಮುಂದೆ, ಎಡ, ಬಲ.. ಯಾವ ಕಡೆಗೂ ತಿರುಗಿಸಬಲ್ಲಳು. ಈಕೆಯ ಸಾಧನೆ ಸದ್ಯ ಗಿನ್ನೆಸ್ ವಿಶ್ವ ದಾಖಲೆ ಸೇರಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮೆರಿಕದ ಮಹಿಳೆಯೊಬ್ಬರು ತಮ್ಮ ಪಾದಗಳನ್ನು ಮುಂಭಾಗದಿಂದ ಹಿಂದಕ್ಕೆ ತಿರುಗಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಮಹಿಳೆಯ ಈ ಸಾಧನೆ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ. ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನ ಕೆಲ್ಸಿ ಗ್ರಬ್ ತನ್ನ ಪಾದವನ್ನು 171.4 ಡಿಗ್ರಿ ತಿರುಗಿಸಬಲ್ಲೆ ಎಂಬುದಾಗಿ ಹೇಳಿಕೊಂಡಿದ್ದಾಳೆ. 'ನಾನು ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೊಸ ವಿಶ್ವ ದಾಖಲೆಯ ಪುಸ್ತಕ ಬಂದಾಗ ನನ್ನ ಸಹೋದ್ಯೋಗಿಯೊಬ್ಬರು ಅದನ್ನು ನೋಡುತ್ತಿದ್ದರು. ನಾನು ಅದರಲ್ಲಿ ಮಹಿಳೆಯೊಬ್ಬರು ಕಾಲನ್ನು ತಿರುಗಿಸುವುದನ್ನು ನೋಡಿದೆ. ಅದನ್ನು ನಾನು ಸಹ ಅದನ್ನು ಮಾಡಬಲ್ಲೆ ಎಂದು ಅನಿಸಿತು. ಹೀಗಾಗಿ ಪಾದಗಳನ್ನು ತಿರುಗಿಸಿದೆ.' ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಹೀಗೆ ಕೆಲ್ಸಿ ಗ್ರಬ್ ತನ್ನ ಪಾದವನ್ನು 171.4 ಡಿಗ್ರಿ ತಿರುಗಿಸಿ ಹಳೆಯ ದಾಖಲೆಯನ್ನು ಮುರಿದು, ಹೊಸ ವಿಶ್ವದಾಖಲೆಯನ್ನು (Guinness World Records) ನಿರ್ಮಿಸಿದಳು. ತನ್ನ ಪಾದವನ್ನು ಸಾಧ್ಯವಾದಷ್ಟು ತಿರುಗಿಸುವುದು ಎಷ್ಟು ಅಸಹಜವಾಗಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಕೆಸ್ಲಿ ಹೇಳಿದರು. ಕೆಲ್ಸಿ ತನ್ನ ಪಾದವನ್ನು ಸಂಪೂರ್ಣವಾಗಿ ನೈಸರ್ಗಿಕವಾಗಿ (Naturally) ತಿರುಗಿಸಬಲ್ಲಳು ಮತ್ತು ಅದು ಅವಳನ್ನು ನೋಯಿಸುವುದಿಲ್ಲ. ಆದಾಗ್ಯೂ, ಅವಳು ಕೆಲವೊಮ್ಮೆ ತನ್ನ ಮೊಣಕಾಲಿನ ಸ್ವಲ್ಪ ತಿರುಗುವಿಕೆಯನ್ನು ಅನುಭವಿಸಬಹುದು ಮತ್ತು ಅವಳ ಪಾದವನ್ನು ಸ್ವಲ್ಪ ನಿಧಾನವಾಗಿ ತಿರುಗಿಸಬಹುದು. ಅನನ್ಯ ಪ್ರತಿಭೆಯು (Talent) ಕೆಸ್ಲಿಗೆ ತನ್ನ ಐಸ್ ಸ್ಕೇಟಿಂಗ್ ವೃತ್ತಿಜೀವನದಲ್ಲಿ ಸಹಾಯ ಮಾಡಿದೆ, ಏಕೆಂದರೆ ಅವಳು ತನ್ನ ಪಾದಗಳನ್ನು ಚಲಿಸದೆ ತಿರುಗಿ ಹಿಂತಿರುಗಿ ನೋಡಬಹುದು ಮತ್ತು ಅವಳ ಸುತ್ತಮುತ್ತಲಿನ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
3 ದಿನದಲ್ಲಿ 7 ಖಂಡ ಸುತ್ತಿ ಗಿನ್ನೆಸ್ ದಾಖಲೆ: ಭಾರತೀಯ ಅಲಿ ಇರಾನಿ, ಸುಜೋಯ್ ಕುಮಾರ್ ಮಿತ್ರಾ ಸಾಹಸ
ಹೀಗ್ಮಾಡಿದ್ರೂ ಸಾಧನೆನೇ ನೋಡಿ... ಮೈ ಮುರಿದೇ ವಿಶ್ವ ದಾಖಲೆ ಮಾಡಿದ ಯುವಕ...!
ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಜನಗಳಿರ್ತಾರೆ ನೋಡಿ, ಕೆಲವರು ಇರುವ ಆರೋಗ್ಯವೇ ದೊಡ್ಡ ಭಾಗ್ಯ ಎಂದು ಸುಮ್ಮನಿದ್ದರೆ ಮತ್ತೆ ಕೆಲವರು ಇನ್ನೇನು ಸಾಹಸ ಮಾಡಲು ಹೋಗಿ ಆರೋಗ್ಯ ಕಳೆದುಕೊಳ್ಳುತ್ತಾರೆ. ಸಾಧನೆ ಮಾಡುವುದಕ್ಕೋಸ್ಕರ ಏನು ಬೇಕಾದರೂ ಮಾಡಲು ಕೆಲವರು ಸಿದ್ಧರಿರ್ತಾರೆ . ಕೆಲವರು ಸಾಧನೆ ಮಾಡುವುದಕ್ಕಾಗಿ ದೇಹದ ಮೂಳೆಗಳನ್ನು ಕೂಡ ಮುರಿದುಕೊಳ್ಳುತ್ತಾರೆ ಎಂದು ಕೇಳಿದರೆ ನೀವು ದಂಗಾಗಬಹುದು. ಕೆಲವರು ರಸ್ಲಿಂಗ್‌ನಲ್ಲೂ ಅಥವಾ ಇನ್ನಾವುದೋ ಮೋಟಾರ್ ರೇಸಿಂಗ್‌ನಲ್ಲೂ ಬಿದ್ದು ಕೀಲು ಮುರಿದುಕೊಂಡು ಸಾಧನೆ ಮಾಡಿದವರು ಇದ್ದಾರೆ. ಹಾಗೆಯೇ ಇಲ್ಲೊಬ್ಬ ಗಿನ್ನೆಸ್ ಪುಸ್ತಕದಲ್ಲಿ ಹೆಸರು ಮಾಡುವುದಕ್ಕಾಗಿಯೇ ಸತತವಾಗಿ ತನ್ನ ದೇಹದಿಂದ 46 ಬಾರಿ ನಟಿಕೆ ಮುರಿದಿದ್ದಾನೆ.
ಸುಮ್ಮನೇ ಕುಳಿತಿದ್ದಾಗ ಅಥವಾ ಉದಾಸೀನವಾದಾಗ ಮೈ ಮುರಿಯುವುದು ನಿಮಗೆ ಗೊತ್ತಿರಬಹುದು. ಆದರೆ ಇದರಲ್ಲೂ ಸಾಧನೆ ಮಾಡಬಹುದು ಎಂಬುದು ನಿಮಗೆ ಗೊತ್ತಾ? . ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಪ್ರಕಾರ ಸ್ವೀಡನ್ ಮೂಲದ 23 ವರ್ಷದ ಯುವಕ ಒಲ್ಲೆ ಲುಂಡಿನ್ ಎಂಬಾತ ತನ್ನ ದೇಹದ 46 ಲಟಿಕೆ(ನಟಿಕೆ) ಸತತವಾಗಿ ಮುರಿಯುವ ಮೂಲಕ ಈ ಸಾಧನೆ ಮಾಡಿದ್ದಾನೆ. ಈ ಮೂಲಕ ಈತ ಈ ಹಿಂದೆ ಡಿಸೆಂಬರ್ 2022ರಲ್ಲಿ ನೇಪಾಳದ ಕಮಲ್ ಪೋಖ್ರೆಲ್ ಅವರು ಮಾಡಿದ ಸಾಧನೆಯನ್ನು ಬ್ರೇಕ್ ಮಾಡಿದ್ದಾರೆ. ಇವರು ಸತತವಾಗಿ 40 ನಟಿಕೆ ತೆಗೆದು ಈ ಸಾಧನೆ ಮಾಡಿದ್ದಾರೆ.
ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!
